ಭಾರತಕ್ಕೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ PUBG ಗೇಮ್; ಆರಂಭದಲ್ಲೇ ಭಾರಿ ಅಚ್ಚರಿ!

|

ಚೀನಾಗೆ ತಕ್ಕ ಪಾಠ ಕಲಿಸಲು ಭಾರತ ಸರ್ಕಾರ ಇತ್ತೀಚಿಗಷ್ಟೆ ಚೀನಾ ಮೂಲದ ಕೆಲವು ಜನಪ್ರಿಯ ಅಪ್ಲಿಕೇಶನ್‌ಗಳನ್ನು ಬ್ಯಾನ್ ಮಾಡಿತ್ತು. ಅವುಗಳಲ್ಲಿ ಯುವ ಸಮೂಹದಲ್ಲಿ ಕ್ರೇಜ್ ಮೂಡಿಸಿದ್ದ ಪಬ್‌ಜಿ ಗೇಮ್‌ ಸಹ ಒಂದಾಗಿತ್ತು. ಆದ್ರೆ ಪಬ್‌ಜಿ ಗೇಮ್‌ ಇದೀಗ ಭಾರತದಕ್ಕೆ ಮತ್ತೆ ರೀ ಎಂಟ್ರಿ ಕೊಡಲು ಸಜ್ಜಾಗುತ್ತಿದೆ. ಆರಂಭದಲ್ಲಿ ಪಬ್‌ಜಿ ಪ್ರಿಯರಿಗಾಗಿ ಪಬ್‌ಜಿ ಸ್ಪರ್ಧೆ ಏರ್ಪಡಿಸುವ ಸಾಧ್ಯತೆಗಳು ಇವೆ ಎನ್ನಲಾಗಿದೆ.

ಭಾರತಕ್ಕೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ PUBG ಗೇಮ್; ಆರಂಭದಲ್ಲೇ ಭಾರಿ ಅಚ್ಚರಿ!

ಹೌದು, ಪಬ್‌ಜಿ ಇಂಡಿಯಾ ಪ್ರೈ. ಲಿಮಿಟೆಡ್ ಹೆಸರಿನಲ್ಲಿ ನೂತನ ಸಂಸ್ಥೆ ಬೆಂಗಳೂರಿನಲ್ಲಿ ನೋಂದಣಿಯಾಗಿದೆ. ಸಂಸ್ಥೆಯು ಸಂಪೂರ್ಣ ಗೇಮಿಂಗ್ ಸರ್ವರ್ ನಿರ್ವಹಣೆ ಮತ್ತು ಬಳಕೆದಾರರ ಮಾಹಿತಿಯನ್ನು ದೇಶದಲ್ಲೇ ನಿರ್ವಹಿಸುವ ಭರವಸೆಯನ್ನು ನೀಡಿದೆ. ಪಬ್‌ಜಿ ಬಳಕೆದಾರರ ಮಾಹಿತಿ ಮತ್ತು ಡೇಟಾ ಸುರಕ್ಷತೆಯ ದೃಷ್ಠಿಯಿಂದ ದೇಶದಲ್ಲಿಯೇ ಗೇಮ್‌ ಅಭಿವೃದ್ಧಿ ಪಡಿಸಲಿದೆ ಎಂದು ಹೇಳಲಾಗಿದೆ.

ಭಾರತಕ್ಕೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ PUBG ಗೇಮ್; ಆರಂಭದಲ್ಲೇ ಭಾರಿ ಅಚ್ಚರಿ!

ಪಬ್‌ಜಿ ದೇಶದ ಗೇಮಿಂಗ್ ವಲಯಕ್ಕೆ ಮರು ಪ್ರವೇಶವನ್ನು ಘೋಷಿಸಿದೆ. PUBG ಕಾರ್ಪೊರೇಶನ್‌ನ ಭಾರತೀಯ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಹೊಸ ಕಂಪನಿಗೆ 100 ಮಿಲಿಯನ್ ಹೂಡಿಕೆ ಮಾಡುವುದಾಗಿ ಕಂಪನಿಯು ಹೇಳಿದೆ. ಆದರೆ ಅಂಗಸಂಸ್ಥೆಯಾಗಿ ಕಾರ್ಯನಿರ್ವಹಿಸುವ ಸಂಸ್ಥೆಯ ಹೆಸರನ್ನು ಬಹಿರಂಗಪಡಿಸಲಾಗಿಲ್ಲ. ಇದಕ್ಕಾಗಿ ಪೇಟಿಎಮ್‌, ಜಿಯೋ ಹಾಗ ಏರ್‌ಟೆಲ್‌ ಕಂಪನಿಗಳೊಂದಿಗೆ ಪಬ್‌ಜಿ ಕಾರ್ಪೋರೇಷನ್ ಮಾತನಾಡಲಿದೆ ಎನ್ನುವ ಸಾಧ್ಯತೆಗಳಿವೆ.

ಭಾರತಕ್ಕೆ ಮತ್ತೆ ಎಂಟ್ರಿ ಕೊಡಲು ಸಜ್ಜಾದ PUBG ಗೇಮ್; ಆರಂಭದಲ್ಲೇ ಭಾರಿ ಅಚ್ಚರಿ!

ನೂತನವಾಗಿ ಲಾಂಚ್ ಆಗಲಿರುವ ಪಬ್‌ಜಿ ಗೇಮ್, ಪಬ್‌ಜಿ ಪ್ರಿಯರಿಗೆ ಮತ್ತೊಂದು ಅಚ್ಚರಿ ನೀಡಿದೆ. ಅದೆನೇಂದರೇ ಅಲ್ಲದೆ ಸುಮಾರು 6 ಕೋಟಿ ರೂ. ವರೆಗಿನ ಬಹುಮಾನದ ಮೊತ್ತವನ್ನು ಪಬ್‌ಜಿ ಪ್ಲೇಯರ್ಸ್‌ಗೆ ನೀಡುವ ಸಾಧ್ಯತೆಯಿದೆ. ಇನ್ನು ಕೆಲವು ಆಯ್ದ ಆಂಡ್ರಾಯ್ಡ್ ಮತ್ತು ಆಪಲ್ iOS ಆವೃತ್ತಿಯ ಬಳಕೆದಾರರಿಗೆ ಈಗಾಗಲೇ ನೂತನ ಪಬ್‌ಜಿ ಗೇಮ್ ಪ್ರಿ ರಿಜಿಸ್ಟ್ರೇಶನ್ ಲಭ್ಯ ಮಾಡಿದೆ.

Best Mobiles in India

English summary
PUBG Corporation has registered its Indian subsidiary as PUBG Mobile India and that means the game is coming soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X