Just In
Don't Miss
- News
Aero India 2023: ಮಾಂಸ ಮಾರಾಟ ನಿಷೇಧ ಹಿಂಪಡೆದ ಬಿಬಿಎಂಪಿಯಿಂದ ತ್ಯಾಜ್ಯ ವಿಲೇವಾರಿಗೆ ಸೂಚನೆ
- Movies
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
- Sports
BGT 2023: ಆಸ್ಟ್ರೇಲಿಯಾಗೆ ಆರಂಭದಲ್ಲೇ ಆಘಾತ; ಮತ್ತೋರ್ವ ಸ್ಟಾರ್ ವೇಗಿ ಮೊದಲ ಟೆಸ್ಟ್ನಿಂದ ಔಟ್!
- Automobiles
ಪ್ರಮುಖ ಮಾದರಿಗಳಿಗೆ ಫೆಬ್ರವರಿ ತಿಂಗಳಲ್ಲಿ ಭರ್ಜರಿ ರಿಯಾಯಿತಿ ಘೋಷಿಸಿದ ಟಾಟಾ ಮೋಟಾರ್ಸ್
- Finance
LIC Jeevan Umang: ದಿನಕ್ಕೆ 150 ರೂ ಹೂಡಿಕೆ ಮಾಡಿ, 10 ಲಕ್ಷ ಪಡೆಯಿರಿ!
- Lifestyle
ವಾರ ಭವಿಷ್ಯ ಫೆ.4-11: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪಬ್‌ಜಿ ಲೈಟ್ ವರ್ಷನ್ ಪ್ರಿ ರಿಜಿಸ್ಟ್ರೇಷನ್ ಮಾಡಿ ಪಡೆಯಿರಿ ಬೆಸ್ಟ್ ರಿವಾರ್ಡ್ಸ್!
ಭಾರತ ಸೇರಿದಂತೆ ವಿಶ್ವದಾದ್ಯಂತ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿರುವ 'ಪಬ್‌ಜಿ' ಗೇಮ್ ಈಗಾಗಲೇ ಹಲವು ಅಪ್‌ಡೇಟ್ ವರ್ಷನ್‌ಗಳನ್ನು ಕಂಡಿದೆ. ಹಾಗೆಯೇ ಇತ್ತೀಚಿಗೆ ಪಬ್‌ಜಿ ಲೈಟ್ ವರ್ಷನ್ (ಪಿಸಿ) ಹಾಂಗ್‌ಕಾಂಗ್, ತೈವಾನ್, ಬ್ರೆಜಿಲ್‌ನಲ್ಲಿ ಬಿಡುಗಡೆ ಮಾಡಿದ್ದು, ಭಾರತದಲ್ಲಿಯೂ ರಿಲೀಸ್ ಮಾಡುವುದಾಗಿ ಮಾಹಿತಿ ನೀಡಿತ್ತು. ಆದರೆ ಈಗ ಪಬ್‌ಜಿ ಲೈಟ್ ವರ್ಷನ್ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಹೌದು, ಆನ್‌ಲೈನ್ ಗೇಮ್ ಪಬ್‌ಜಿ ಲೈಟ್ ವರ್ಷನ್ ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಚಾಲ್ತಿ ಇದ್ದು, ಈ ಲೈಟ್ ವರ್ಷನ್ ಅನ್ನು ಇದೇ ಜುಲೈ 11ರ ಒಳಗಾಗಿ ಭಾರತ ಮತ್ತು ಇತರೆ ದೇಶಗಳಿಗೂ ಅಧಿಕೃತವಾಗಿ ರೀಲಿಸ್ ಮಾಡಲಿದೆ. ಪಬ್‌ಜಿ ಲೈಟ್ ವರ್ಷನ್ ಗೇಮ್ ಬಿಡುಗಡೆಗೆ ಇವೆಂಟ್ ಆಯೋಜಿಸಿದ್ದು, ಅದಕ್ಕಾಗಿ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಿ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ಸಹ ಶುರುಮಾಡಿದೆ.

ಪಬ್‌ಜಿ ಲೈಟ್ ವರ್ಷನ್ ಗೇಮ್‌ಗಾಗಿ ಪ್ರಿ-ರಿಜಿಸ್ಟರ್ ಮಾಡಿದವರಿಗೆ ಇ-ಮೇಲ್ ಮೂಲಕ ಇವೆಂಟ್ ಕೋಡ್ ಕಳುಹಿಸಲಿದ್ದು, ಇದರೊಂದಿಗೆ ಪ್ರಿ-ರಿಜಿಸ್ಟರ್ ಗ್ರಾಹಕರಿಗೆ ಬೆಸ್ಟ್ ರಿವಾರ್ಡ್ಸ್ ಲಭ್ಯವಾಗಲಿದೆ ಎನ್ನಲಾಗಿದೆ. ಬಳಕೆದಾರರು ಕಂಪನಿಯ ವೆಬ್‌ಸೈಟ್ ಮೂಲಕ ಲೈಟ್ ವರ್ಷನ್ ಗೇಮ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಹಾಗಾದರೇ ಪಬ್‌ಜಿ ಲೈಟ್ ವರ್ಷನ್ ಗೇಮ್ ವಿಶೇಷತೆಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಇವೆಂಟ್ ಮತ್ತು ಗೇಮ್ ಕೋಡ್
ಕಂಪನಿಯು ಪಬ್‌ಜಿ ಲೈಟ್ ವರ್ಷನ್ ಗೇಮ್ ಅನ್ನು ರಿಲೀಸ್ ಮಾಡಲಿದ್ದು, ಅದಕ್ಕಾಗಿ 20.06.2019 (07:00:00) ~ 03.07.2019 (23:59:59) IST (UTC+5:30) ದಿನಾಂಕ ಮತ್ತು ಸಮಯ ತಿಳಿಸಿದೆ. ಹಾಗೆಯೇ ಪ್ರಿ ರಿಜಿಸ್ಟರ್ ಮಾಡಿದ ಆಟಗಾರರಿಗೆ ಅವರ ಇ-ಮೇಲ್‌ಗೆ ಇದೇ ಜುಲೈ 11ರ ಒಳಗಾಗಿ ಇವೆಂಟ್ ಕೋಡ್ ಸೆಂಡ್ ಮಾಡಲಾಗುವುದು ಎಂದು ತಿಳಿಸದೆ.

ಲೈಟ್ ವರ್ಷನ್ ಎಂಟ್ರಿ
ಪಬ್‌ಜಿ ಆನ್‌ಲೈನ್ ಗೇಮ್ ಆಗಿರುವುದರಿಂದ ಸಹಜವಾಗಿಯೇ ಹೆಚ್ಚಿನ ಡೇಟಾವನ್ನು ಅದು ಕಬಳಿಸುತ್ತದೆ. ಅದಕ್ಕಾಗಿ ಲೈಟ್ ವರ್ಷನ್ ಅನ್ನು ಕಂಪನಿಯು ಹುಟ್ಟುಹಾಕಿದ್ದು, ಈಗಾಗಲೇ ಹಾಂಗ್‌ಕಾಂಗ್, ತೈವಾನ್, ಬ್ರೆಜಿಲ್ ಮತ್ತು ಬಾಂಗ್ಲಾದೇಶಗಳಲ್ಲಿ ಪಬ್‌ಜಿ ಲೈಟ್ ವರ್ಷನ್ ಲಭ್ಯವಿದೆ. ಅದರ ಮುಂದುವರಿದ ಭಾಗವಾಗಿ ಈಗ ಭಾರತಕ್ಕೂ ಪಬ್‌ಜಿ ಲೈಟ್ ವರ್ಷನ್ ಬಿಡುಗಡೆ ಮಾಡಲು ಕಂಪನಿ ಸಿದ್ಧವಾಗಿದೆ.

ಹೈ ಎಂಡ್ ಪಿಸಿ ಬೇಕಿಲ್ಲ
ಇನ್ಮುಂದೆ ಪಬ್‌ಜಿ ಆಡಲು ಹೈ ಎಂಡ್ ಹಾರ್ಡವೇರ್ ಸಾಮರ್ಥ್ಯವನ್ನು ಹೊಂದಿರುವ ಪಿಸಿ ಬೇಕಿಲ್ಲ. ಲೋವರ್ ಎಂಡ್ ಹಾರ್ಡ್‌ವೇರ್ ಫೀಚರ್ಸ್‌ಗಳನ್ನು ಹೊಂದಿರುವ ಪಿಸಿಗಳಲ್ಲಿಯೂ ಪಬ್‌ಜಿ ಆಡಬಹುದಾಗಿದ್ದು, ಅದಕ್ಕಾಗಿ ಪಬ್‌ಜಿ ಲೈಟ್ ವರ್ಷನ್ ಬಿಡುಗಡೆ ಆಗಲಿದೆ. ಇದರಿಂದ ಪಬ್‌ಜಿ ಕ್ರೇಜ್ ಇನ್ನಷ್ಟು ವಿಸ್ತರಿಸಿಕೊಳ್ಳಲಿದೆ.

ಪಬ್‌ಜಿ ಗೇಮ್ ಆಡಲು ಈ ಕೆಳಗಿನ ಫೀಚರ್ಸ್‌ಗಳು ಅಗತ್ಯವಾಗಿ ಇರಬೇಕು.
- OS ; ವಿಂಡೊಸ್ 7,8,10 64Bit
- CPU: ಕೋರ್ i3 @ 2.4Ghz
- RAM : 4GB
- GPU: ಇಂಟೆಲ್ HD4000
- HDD: 4GB

ಅತ್ಯುತ್ತಮ ಬೆಂಬಲಕ್ಕೆ ಈ ಫೀಚರ್ಸ್‌ಗಳು ಅಗತ್ಯ
- OS: Windows 7,8,10 64Bit
- CPU: Core i5 @2.8Ghz
- RAM: 8GB
- GPU: Nvidia GTX 660 ಅಥವಾ AMD ರೆಡಾನ್ HD 7870
- HDD: 4GB

ಪ್ರಿ ರಿಜಿಸ್ಟ್ರೇಷನ್ ರಿವಾರ್ಡ್ಸ್
ಪಬ್‌ಜಿ ಗೇಮ್ ಪಿಸಿ ಲೈಟ್ ವರ್ಷನ್ ರಿಲೀಸ್‌ಗೆ ಸಜ್ಜಾಗಿದ್ದು, ಅದಕ್ಕಾಗಿ ಪ್ರಿ ರಿಜಿಸ್ಟ್ರೇಷನ್ ಪ್ರಕ್ರಿಯೆ ಆರಂಭಿಸಿದೆ. ಭಾರತೀಯ ಪಬ್‌ಜಿ ಪ್ರಿಯರು ಕಂಪನಿಯ ವೆಬ್‌ಸೈಟ್ ಲಿಂಕ್ ಮೂಲಕ ಪ್ರಿ ರಿಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಪ್ರಿ ರಿಜಿಸ್ಟರ್ ಮಾಡಿದವರಿಗೆ ಉಚಿತವಾಗಿ skins ಮತ್ತು cosmetics ರಿವಾರ್ಡ್ಸ್‌ಗಳನ್ನು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470