ಮೋದಿ ಮತ್ತು ಡಿಜಿಟಲ್‌ ಇಂಡಿಯಾ ಹೆಸರಿನಲ್ಲಿ ನಡೆಯುತ್ತಿದೆ ಆನ್‌ಲೈನ್ ಮೋಸ!! ನೀವು ಹುಷಾರು.

Written By:

ಶರವೇಗದಲ್ಲಿ ಬೆಳೆಯುತ್ತಿರುವ ತಂತ್ರಜ್ಞಾದ ಮೂಲಕ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಜಿಟಲ್‌ ಇಂಡಿಯಾ ರೂಪಿಸಲು ಸಾಕಷ್ಟು ಯೋಜನೆಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಮತ್ತು ಡಿಜಿಟಲ್‌ ಇಂಡಿಯಾ ಯೋಜನೆಯನ್ನೆ ಬಂಡವಾಳ ಮಾಡಿಕೊಂಡಿರುವ ಹಲವರು ಜನರನ್ನು ವಂಚಿಸುವಲ್ಲಿ ಸಫಲವಾಗುತ್ತಿದ್ದಾರೆ.!

ಹೌದು, ನರೇಂದ್ರ ಮೋದಿ ಅವರ ನೂತನ ಡಿಜಿಟಲ್‌ ಇಂಡಿಯಾ ಯೋಜನೆ ಮೂಲಕ ಯಾವುದೇ ಬಂಡವಾಳವಿಲ್ಲದೇ ಸಾವಿರಾರು ರೂಪಾಯಿಗಳನ್ನು ಗಳಿಸಿ ಎನ್ನುವ ಜಾಹಿರಾತುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜನರನ್ನು ವ್ಯವಸ್ಥಿತವಾಗಿ ವಂಚಿಸುತ್ತಿರುವ ಹಲವು ಜಾಲಗಳು ಸಕ್ರಿಯವಾಗಿವೆ.!!

ಮೋದಿ ಮತ್ತು ಡಿಜಿಟಲ್‌ ಇಂಡಿಯಾ ಹೆಸರಿನಲ್ಲಿ ನಡೆಯುತ್ತಿದೆ ಆನ್‌ಲೈನ್ ಮೋಸ!!

ನೋಕಿಯಾದ ಹೈ-ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ "ನೋಕಿಯಾ ಪಿ1" ಫೀಚರ್ಸ್ ಗೊತ್ತಾ?

ಡಿಜಿಟಲ್‌ ಇಂಡಿಯಾ ಎಂದರೆ ನಾವು ಮಾಡುತ್ತಿರುವ ಕಾರ್ಯ ಎಂದು ಮುಗ್ದ ಜನರನ್ನು ವಂಚಿಸುತ್ತಿರುವ ಇವರು, ಯಾವುದೇ ಬಂಡವಾಳವಿಲ್ಲದೆ ತಿಂಗಳಿಗೆ 50,000 ದಿಂದ ಲಕ್ಷ ರೂಪಾಯಿವರೆಗೂ ಹಣಗಳಿಸಲು ನಮ್ಮನ್ನು ಸಂಪರ್ಕಿಸಿ ಎಂದು ಜಾಹಿರಾತು ನೀಡಿ ಜನರನ್ನು ವಂಚಿಸುತ್ತಿದ್ದಾರೆ. ಏನು ತಿಳಿಯದ ಮುಗ್ದಜನರನ್ನು ನಗರಗಳಿಗೆ ಕರೆತಂದು ಅಲೆಮಾರಿಯಂತೆ ಮಾಡುವ ಇಂತಹ ಜನರ ವಿರುದ್ದ ಎಚ್ಚರಿಕೆಯನ್ನು ಎಲ್ಲರೂ ವಹಿಸಬೇಕಿದೆ.

ಮೋದಿ ಮತ್ತು ಡಿಜಿಟಲ್‌ ಇಂಡಿಯಾ ಹೆಸರಿನಲ್ಲಿ ನಡೆಯುತ್ತಿದೆ ಆನ್‌ಲೈನ್ ಮೋಸ!!

ಕೇವಲ ಫೇಸ್‌ಬುಕ್ ಮತ್ತು ವಾಟ್ಸ್ಆಪ್‌ನ ಮೂಲಕ ನೀವು ಹಣಗಳಿಸಬಹುದು ಎಂದು ಹೇಳಿ ಜನರನ್ನು ಯಾಮಾರಿಸುತ್ತಿದ್ದರೂ. ಪೊಲೀಸ್‌ ಇಲಾಖೆ ಸಹ ಕಣ್ಣುಮುಚ್ಚಿ ಕುಳಿತಿದೆ. ಹಾಗಾಗಿ, ಇಂತಹ ಅವ್ಯವಹಾರಗಳಿಗೆ ಇನ್ನಾದರೂ ಕಡಿವಾಣ ಹಾಕುವ ಕೆಲಸ ಆಗಬೇಕಿದೆ.

English summary
PM Modi Digital india New project. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot