ನೋಕಿಯಾದ ಹೈ-ಎಂಡ್ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ "ನೋಕಿಯಾ ಪಿ1" ಫೀಚರ್ಸ್ ಗೊತ್ತಾ?

Written By:

ಮೊಬೈಲ್ ಮಾರುಕಟ್ಟೆಯನ್ನು ತಲ್ಲಣಗೊಳಿಸುತ್ತಿರುವ ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಪೋನ್‌ಗಳು ಲೋ ಎಂಡ್‌ ಸ್ಮಾರ್ಟ್‌ಫೋನ್‌ಗಳಿಂಹ ಹಿಡಿದು ಹೈ ಎಂಡ್ ಸ್ಮಾರ್ಟ್‌ಫೋನ್‌ಗಳವರೆಗೂ ಬಿಡುಗಡೆಯಾಗುತ್ತಿದೆ. ಇತ್ತೀಚಿಗಷ್ಟೆ ಬಿಡುಗಡೆಯಾದ ನೋಕಿಯಾದ ಮೊದಲ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನೋಕಿಯಾ 6 ನಂತರ ಇದೀಗ ನೋಕಿಯಾ ತನ್ನ ಹೈ ಎಂಡ್ ಸ್ಮಾರ್ಟ್ಫೋನ್ ನೋಕಿಯಾ ಪಿ1 ಸ್ಮಾರ್ಟ್‌ಪೊನ್‌ ಬಿಡುಗಡೆ ಮಾಡುತ್ತಿದೆ ಎನ್ನುವ ಮಾಹಿತಿ ಹೊರಬಿದ್ದಿದೆ.!!

ಹೊರಬಿದ್ದಿರುವ ಮಾಹಿತಿ ಪ್ರಕಾರ ಫೆಬ್ರವರಿ ತಿಂಗಳಿನಲ್ಲಿ ನೋಕಿಯಾದ 5 ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿದ್ದು, ಸ್ಯಾಮ್‌ಸಂಗ್ 8 ಮತ್ತು ಐಫೊನ್ 8 ಸ್ಮಾರ್ಟ್‌ಫೊನ್‌ಗಿಂತಲು ಹೆಚ್ಚು ಫೀಚರ್ಸ್ ಹೊಂದಿರಬಹುದಾದ ನೋಕಿಯಾ ಪಿ1 ಸ್ಮಾರ್ಟ್‌ಫೊನ್‌ ಸಹ ಬಿಡುಗಡೆಯಾಗುತ್ತಿದೆ ಎನ್ನುವ ಮಾಹಿತಿ ಹರಿದಾಡಿದೆ.

ಸೆಂಡ್ ಆದ ಮೆಸೇಜ್‌ ಡಿಲೀಟ್ ಮಾಡುವ ಫೀಚರ್ ಹೊಂದಿದ "ಟೆಲಿಗ್ರಾಮ್‌" ಆಪ್!!

ಇನ್ನು ನೋಕಿಯಾ ಪಿ1 ಸ್ಮಾರ್ಟ್‌ಪೋನ್‌ ಇಮೇಜ್ ಮತ್ತು ಫಿಚರ್ಸ್ ಮಾಹಿತಿ ಲೀಕ್ ಆಗಿದ್ದು, 6GBRAM ಹೊಂದಿರುವ ಹೈ ಎಂಡ್ ಸ್ಮಾರ್ಟ್‌ಫೊನ್ ನೋಕಿಯಾ ಪಿ1 ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
5.3 ಇಂಚ್‌ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್ 5

5.3 ಇಂಚ್‌ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್ 5

ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯೇ ಮುಖ್ಯವಾಗಿರುವ ಪ್ರಸ್ತುತ ದಿನಗಳಲ್ಲಿ ಅತ್ಯಾಕರ್ಷಕ ಎನ್ನುವ 5.3 ಇಂಚ್‌ ಡಿಸ್‌ಪ್ಲೇ ಮತ್ತು ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದಿ ನೋಕಿಯಾ ಪಿ1 ಸ್ಮಾರ್ಟ್‌ಪೋನ್‌ ಹೊರಬರುತ್ತಿದೆ. ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಹೊಂದುತ್ತಿರುವ ಕೆಲವೇ ಸ್ಮಾರ್ಟ್‌ಫೋನ್‌ಗಳಲ್ಲಿ ಇದು ಒಂದಾಗಿದೆ.

22.6 ಮೆಗಾಪಿಕ್ಸೆಲ್ ಕ್ಯಾಮೆರಾ!! 3,500Mah ಬ್ಯಾಟರಿ.

22.6 ಮೆಗಾಪಿಕ್ಸೆಲ್ ಕ್ಯಾಮೆರಾ!! 3,500Mah ಬ್ಯಾಟರಿ.

ನೋಕಿಯಾದ ಹೈ ಎಂಡ್ ಸ್ಮಾರ್ಟ್‌ಫೋನ್ ನೋಕಿಯಾ ಪಿ1 22.6 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಹೊಂದಿದೆ ಎನ್ನುವ ಮಾಹಿತಿ ಹೊರಬಂದಿದೆ. ಸೆಲ್ಫಿ ಕ್ಯಾಮೆರಾ ಬಗ್ಗೆ ರೂಮರ್ಸ್ ಹರಿದಾಡಿದ್ದು 13 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುತ್ತದೆ ಎನ್ನಲಾಗಿದೆ. ಇನ್ನು 3,500Mah ಬ್ಯಾಟರಿಯನ್ನು ನೋಕಿಯಾ ಪಿ1 ಹೊಂದಿರುತ್ತದೆ.

ಸ್ನಾಪ್‌ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ನ್ಯೂಗಾ 7.0

ಸ್ನಾಪ್‌ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ನ್ಯೂಗಾ 7.0

ಪ್ರಸ್ತುತ ಇರುವ ಹೈ ಎಂಡ್ ತಂತ್ರಜ್ಞಾನದ ಸ್ನಾಪ್‌ಡ್ರಾಗನ್ 835 ಪ್ರೊಸೆಸರ್ ಮತ್ತು ಆಂಡ್ರಾಯ್ಡ್ ನ್ಯೂಗಾ 7.0 ಹೊಂದಿ ನೋಕಿಯಾ ಪಿ1 ಮಾರುಕಟ್ಟೆಗೆ ಕಾಲಿಸಲಿದೆ. ಸ್ಯಾಮ್‌ಸಂಗ ಮತ್ತು ಐಫೋನ್‌ಗಳಲ್ಲಿಯೂ ಸಹ ಈ ಅಪ್‌ಡೇಟ್ಸ್ ಇನ್ನು ಸಾಧ್ಯವಾಗಿಲ್ಲ!

ನೀರು ಮತ್ತು ಧೂಳು ನಿರೋಧಕ

ನೀರು ಮತ್ತು ಧೂಳು ನಿರೋಧಕ

ನೋಕಿಯಾ ಪಿ1 ಅತ್ಯಾಧುನಿಕ ವಿನ್ಯಾಸದಲ್ಲಿ ಮೂಡಿ ಬರುತ್ತಿದ್ದು, ನೀರು ಮತ್ತು ಧೂಳು ನಿರೋಧಕವಾಗಿರಲಿದೆ ಎನ್ನುವ ಮಾತು ಎಲ್ಲೆಡೇ ಕೇಳಿಬರುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ನೋಕಿಯಾ ಪಿ1 ಲಾಂಚ್ ಆಗಲಿದ್ದು, ಸಂಪೂರ್ಣ ವಿವರ ಲಭ್ಯವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Nokia's flagship Android smartphone, the P1, could feature Qualcomm's Snapdragon 835 SoC and 6GB of RAM.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot