ಜಸ್ಟ್ 1ರೂ. ಖರ್ಚು ಮಾಡಿ!..PVRನಲ್ಲಿ 30 ನಿಮಿಷ ಟ್ರೇಲರ್ ನೋಡಿ!
ಸಿನಿಮಾ ಮನರಂಜನೆಯ ಅತೀ ದೊಡ್ಡ ಪ್ಲಾಟ್‌ಫಾರ್ಮ್ ಆಗಿದ್ದು, ಬಹುತೇಕ ಎಲ್ಲರೂ ಹೊಸ ಸಿನಿಮಾಗಳನ್ನು ಥೇಯಟರ್‌ಗಳಲ್ಲಿಯೇ ನೋಡಲು ಇಷ್ಟಪಡುತ್ತಾರೆ. ಈಗಂತೂ ಥೇಯಟರ್ ಸ್ಕ್ರೀನ್‌ಗಳಲ್ಲಿ ಸಾಕಷ್ಟು ಹೊಸತನಗಳು ಸೇರ್ಪಡೆ ಆಗಿದ್ದು, ಅತ್ಯುತ್ತಮ ಟಾಕೀಸ್‌ಗಳು ಭಾರತದಲ್ಲಿ ಇವೆ. ಅವುಗಳ ಪೈಕಿ PVR (ಪಿವಿಆರ್ ಸಿನಿಮಾಸ್) ಸಹ ಒಂದಾಗಿದ್ದು, ಇದೀಗ ಪಿವಿಆರ್ ಸಿನಿಮಾ ಪ್ರಿಯರಿಗೆ ಖುಷಿ ಸಂಗತಿ ಹೊರಹಾಕಿದೆ.
ಹೌದು, ನೀವೇನಾದರೂ ಸಿನಿಮಾ ನೋಡಲು ಯೋಚಿಸುತ್ತಿದ್ದರೆ ಅಥವಾ ಮುಂಬರುವ ವಾರಗಳಲ್ಲಿ ಬೆಳ್ಳಿ ಪರದೆ ಮೇಲೆ ಯಾವ ಹೊಸ ಸಿನಿಮಾಗಳು ಬರಲಿವೆ ಎಂದು ನೋಡುತ್ತಿದ್ದಿರಾ? ಹಾಗಿದ್ರೆ, ಈಗ ನೀವು ಕೇವಲ 1 ರೂ. ಖರ್ಚು ಮಾಡುವ ಮೂಲಕ 30 ನಿಮಿಷದಲ್ಲಿ ಸುಮಾರು 10 ಮುಂಬರುವ ಸಿನಿಮಾಗಳ ಟ್ರೇಲರ್‌ಗಳನ್ನು ದೊಡ್ಡ ಸ್ಕ್ರೀನ್ ಮೇಲೆ ನೋಡಬಹುದಾಗಿದೆ.

ಅರೇ ಇದೇನಿದು ಅಂತೀರಾ!..ಜನಪ್ರಿಯ ಪಿವಿಆರ್ (PVR) ತಮ್ಮ ಗ್ರಾಹಕರಿಗೆ 10 ಮುಂಬರುವ ಟ್ರೇಲರ್‌ಗಳನ್ನು ಒಳಗೊಂಡ 30 ನಿಮಿಷಗಳ ಸ್ಕ್ರೀನಿಂಗ್ ಪ್ರದರ್ಶನವನ್ನು ಕೇವಲ 1 ರೂ.ಗೆ ನೀಡುತ್ತದೆ. ಹೀಗಾಗಿ ಸಿನಿಮಾ ಪ್ರಿಯರು ಮುಂಬರುವ ತಮ್ಮ ನೆಚ್ಚಿನ ಸಿನಿಮಾಗಳ ಟ್ರೇಲರ್ ಅನ್ನು ಪಿವಿಆರ್ ಸ್ಕ್ರೀನ್‌ಗಳಲ್ಲಿ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮುಂಗಡವಾಗಿ ಸಿನಿಮಾ ಟಿಕೆಟ್‌ಗಳನ್ನು ಕಾಯ್ದಿರಿಸಲು ಯೋಜಿಸುತ್ತಿರುವ ಸಿನಿ ಪ್ರೇಮಿಗಳಿಗೆ ಇದು ಅತ್ಯುತ್ತಮ ಕೊಡುಗೆಯಾಗಿದೆ. ಟ್ರೈಲರ್ ಪ್ರದರ್ಶನವು ಮುಂಬರುವ ಬಾಲಿವುಡ್, ಹಾಲಿವುಡ್ ಮತ್ತು ಇತರ ಪ್ರಾದೇಶಿಕ ಸಿನಿಮಾಗಳನ್ನು ಸಹ ಒಳಗೊಂಡಿರುತ್ತದೆ. ಇನ್ನು ಗ್ರಾಹಕರು ಟ್ರೇಲರ್ ಪ್ರದರ್ಶನವನ್ನು ಆಫ್‌ಲೈನ್‌ನಲ್ಲಿ ಅಥವಾ PVR ಐನಾಕ್ಸ್ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಅನ್ನು ಬುಕ್ ಮಾಡಬಹುದು.

ಬಿಗ್ ಸ್ಕ್ರೀನ್ ಅನುಭವಕ್ಕಾಗಿ ಜನರ ಉತ್ಸಾಹವನ್ನು ಪುನರುಜ್ಜೀವನಗೊಳಿಸುವ ಗುರಿಯೊಂದಿಗೆ ಮತ್ತು ಪ್ರಮುಖ ಬೇಸಿಗೆ ಕಾಲದಲ್ಲಿ ಬಿಡುಗಡೆಯಾಗುವ ಚಲನಚಿತ್ರಗಳಿಗೆ ಮುಂಗಡ ಬುಕಿಂಗ್‌ಗಳನ್ನು ಹೆಚ್ಚಿಸುವ ಗುರಿಯೊಂದಿಗೆ, ಈ ವಿಶೇಷ ಕೊಡುಗೆಯು ಬಳಕೆದಾರರಿಗೆ ಕಿರು ಸಿನಿಮೀಯ ಅನುಭವವನ್ನು ನೀಡುವುದು ಮಾತ್ರವಲ್ಲದೆ ಅವರ ಮುಂಬರುವ ಸಿನಿಮಾದ ದಿನಾಂಕವನ್ನು ಪ್ಲ್ಯಾನ್ ಮಾಡುವಂತೆ ಮಾಡುತ್ತದೆ.

ಈ ಟ್ರೈಲರ್ ಶೋಗಳನ್ನು ಎಲ್ಲಾ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರೈಮ್ ಟೈಮ್ ಸ್ಲಾಟ್‌ಗಳಲ್ಲಿ ಪ್ರದರ್ಶಿಸಲಾಗುತ್ತದೆ. ಟಿಕೆಟ್‌ಗಳನ್ನು ಬಾಕ್ಸ್ ಆಫೀಸ್‌ನಲ್ಲಿ ಅಥವಾ ಪಿವಿಆರ್ ಮತ್ತು ಇನಾಕ್ಸ್ ವೆಬ್‌ಸೈಟ್ ಅಥವಾ ಆಪ್ ಮೂಲಕ ಆನ್‌ಲೈನ್‌ನಲ್ಲಿ ಖರೀದಿಸಬಹುದು.
ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಲು-
* ಪಿವಿಆರ್ ಅಥವಾ ಇನಾಕ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅವರ ಆಪ್ ಅನ್ನು ಡೌನ್‌ಲೋಡ್ ಮಾಡಿ.
* ನೀವು ಹಾಜರಾಗಲು ಬಯಸುವ ಸಿನಿಮಾ ಮತ್ತು ಶೋ ಸಮಯವನ್ನು ಆಯ್ಕೆ ಮಾಡಿ.
* ಆಸನ ಚಾರ್ಟ್‌ನಿಂದ ನಿಮ್ಮ ಆದ್ಯತೆಯ ಸೀಟ್ ಆಯ್ಕೆ ಮಾಡಿರಿ.
* ನಿಮ್ಮ ವೈಯಕ್ತಿಕ ಮತ್ತು ಪಾವತಿ ಮಾಹಿತಿಯನ್ನು ನಮೂದಿಸಿ.
* ಪಾವತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಟಿಕೆಟ್ ದೃಢೀಕರಣವನ್ನು ಸ್ವೀಕರಿಸಿ.
* ಟ್ರೇಲರ್ ಶೋಗೆ ಪ್ರವೇಶ ಪಡೆಯಲು, ನಂತರ ನಿಮ್ಮ ಟಿಕೆಟ್ ದೃಢೀಕರಣವನ್ನು ಟಾಕೀಸ್‌ಗಳಲ್ಲಿ ಪ್ರಸ್ತುತಪಡಿಸಬಹುದು.
* ಅಥವಾ ನೀವು ಪಿವಿಆರ್ ಐನಾಕ್ಸ್‌ನ ಟಿಕೆಟ್ ವಿಂಡೋದಿಂದ ನೇರವಾಗಿ ಟಿಕೆಟ್ ಖರೀದಿಸಬಹುದು.

ಪಿವಿಆರ್ (PVR) : PVR ಸಿನಿಮಾಗಳು ಭಾರತೀಯರಲ್ಲಿ ಹಾಟ್ ಫೇವರಿಟ್ ಆಗಿದ್ದು, ಪ್ರಮುಖ ಊರುಗಳ ವಿವಿಧ ಮಾಲ್‌ಗಳಲ್ಲಿ ಪಿವಿಆರ್ ಸಿನಿಮಾ ಇವೆ. ಸಿನಿ ಪ್ರಿಯರು PVRನಲ್ಲಿ ಸಿನಿಮಾ ವೀಕ್ಷಿಸಲು ಟಿಕೆಟ್ ಬುಕ್ ಮಾಡಬಹುದಾಗಿದೆ. ಇನ್ನು ಹೆಚ್ಚುವರಿಯಾಗಿ, PVR ವೆಬ್‌ಸೈಟ್ ಮಾಸಿಕ ಆನ್‌ಲೈನ್ ನಿಯತಕಾಲಿಕೆಗಳನ್ನು ಹೊಂದಿದೆ. ಅದರಲ್ಲಿ ಸಿನಿಮಾ ಉದ್ಯಮದಲ್ಲಿನ ಇತ್ತೀಚಿನ ಅಪ್‌ಡೇಟ್‌ಗಳು ಹಾಗೂ ಮುಂಬರುವ ಬಿಡುಗಡೆಗಳ ಮಾಹಿತಿಯನ್ನು ಒಳಗೊಂಡಿರುತ್ತದೆ. ಇವುಗಳನ್ನು ಆನ್‌ಲೈನ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಬಹುದು ಅಥವಾ ಓದಬಹುದು.


Click it and Unblock the Notifications








