Subscribe to Gizbot

ಮಾರುಕಟ್ಟೆಗೆ 700 ಸರಣಿ ಚಿಪ್ ಸೆಟ್ ಗಳನ್ನು ಬಿಡುಗಡೆ ಮಾಡಲು ಮುಂದಾದ ಕ್ವಾಲ್ಕಮ್..!

Posted By: -

ಸ್ಮಾರ್ಟ್ ಫೋನ್ ಚಿಪ್ ಸೆಟ್ ತಯಾರಕ ಕ್ವಾಲ್ಕಮ್, ಹೊಸ ಮಾದರಿಯ ಪ್ರೋಸೆಸರ್ ವೊಂದನ್ನು ಬಿಡುಗಡೆ ಮಾಡುವ ಸನಿಹದಲ್ಲಿದೆ. ಸ್ನಾಪ್ ಡ್ರಾಗನ್ 700 ಸರಣಿ ಚಿಪ್ ಸೆಟ್ ಗಳನ್ನು ಶೀಘ್ರವೇ ಬಿಡಗಡೆ ಮಾಡುವುದಾಗಿ ತಿಳಿಸಿದೆ. ಇದು ಸ್ನಾಪ್ ಡ್ರಾಗನ್ 600 ಸರಣಿ ಮತ್ತು 800 ಸರಣಿಯ ನಡುವಿನ ಗ್ಯಾಪ್ ಅನ್ನು ಕಡಿಮೆ ಮಾಡಲಿದೆ ಎನ್ನುವ ಮಾತು ಉದ್ಯಮದಲ್ಲಿ ಕೇಳಿ ಬಂದಿದೆ.

ಮಾರುಕಟ್ಟೆಗೆ 700 ಸರಣಿ ಚಿಪ್ ಸೆಟ್ ಗಳನ್ನು ಬಿಡುಗಡೆ ಮಾಡಲು ಮುಂದಾದ ಕ್ವಾಲ್ಕಮ್..

ಕ್ವಾಲ್ಕಮ್ ಸ್ನಾಪ್ ಡ್ರಾಗನ್ 700 ಸರಣಿಯ ಚಿಪ್ ಸೆಟ್ ಗಳು ಬಳಕೆದಾರರಿಗೆ ಹೊಸ ಮಾದರಿಯ ಅನುಭವನ್ನು ನೀಡಲಿದೆ. ಇದು ಟಾಪ್ ಎಂಡ್ ಸ್ಮಾರ್ಟ್ ಫೋನ್ ಗಳಿಗಿಂತ ಕೆಳಗಿನ ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಕ್ವಾಲ್ಕಮ್ ಸ್ನಾಪ್ ಡ್ರಾಗನ್ 700 ಸರಣಿ ಚಿಪ್ ಸೆಟ್ ಗಳು ಉತ್ತಮ ಕ್ಯಾಮರಾ ಚಟುವಟಿಕೆಯನ್ನು ಹೊಂದಲಿದ್ದು, ವೇಗವಾದ ಕಾರ್ಯಚರಣೆಯನ್ನು ಮಾಡಲಿವೆ. ಅಲ್ಲದೇ ಬ್ಯಾಟರಿ ಬಾಳಿಕೆಯೂ ಸಹ ಇದರಲ್ಲಿ ಉತ್ತಮವಾಗಿರಲಿದೆ. ಅಲ್ಲದೇ 600 ಸರಣಿಗಿಂತಲೂ ಉತ್ತಮವಾದ ಸೇವೆಗಳನ್ನು ಇದರಲ್ಲಿ ನಿರೀಕ್ಷಿಸಬಹುದಾಗಿದೆ.

ಮಾರುಕಟ್ಟೆಗೆ 700 ಸರಣಿ ಚಿಪ್ ಸೆಟ್ ಗಳನ್ನು ಬಿಡುಗಡೆ ಮಾಡಲು ಮುಂದಾದ ಕ್ವಾಲ್ಕಮ್..

ಓದಿರಿ: ಸೆಕೆಂಡ್ ಹಾಂಡ್ ಬೈಕ್-ಕಾರು ಖರೀದಿಸುವ ಮುನ್ನ ಅದರ ಜಾತಕ ತಿಳಿಸುವ ಆಪ್..!

ಇದಲ್ಲದೇ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 700 ಸರಣಿಯಲ್ಲಿ, ಸ್ನಾಪ್ ಡ್ರಾಗನ್ 845 ನಲ್ಲಿರುವ ಮಾದರಿಯಲ್ಲೇ ಕೃತಕ ಬುದ್ದಿಯನ್ನು ಕಾಣಬಹುದಾಗಿದ್ದು, 700 ಸರಣಿಯ ವಿಶೇಷತೆಗಳಲ್ಲಿ ಇದು ಒಂದಾಗಲಿದೆ. ಇದಲ್ಲದೇ ಇದರಲ್ಲಿ ಉತ್ತಮ ಗುಣಮಟ್ಟ GPU ಅಳವಡಿಸುವ ಕಾರ್ಯಕ್ಕೆ ಕ್ವಾಲ್ಕಮ್ ಮುಂದಾಗಿದೆ. ಇದು ಈ ವರ್ಷದ ಮಧ್ಯ ಭಾಗದಲ್ಲಿ ಮಾರುಕಟ್ಟೆಗೆ ಕಾಲಿಡಲಿದೆ.

ಸದ್ಯ ಕ್ವಾಲ್ಕಮ್ 845 ಟಾಪ್ ಎಂಡ್ ಚಿಪ್ ಸೆಟ್ ಆಗಿದ್ದು, ಮಾರುಕಟ್ಟೆಯಲ್ಲಿ ದೊರೆಯಲಿರುವ ಟಾಪ್ ಎಂಡ್ ಫೋನ್ ಗಳಲ್ಲಿ ಇದನ್ನು ಕಾಣಬಹುದಾಗಿದ್ದು, ಇದರೊಂದಿಗೆ ಹೆಚ್ಚಿನ ಸದ್ದು ಮಾಡುತ್ತಿರುವ ಸ್ನಾಪ್ ಡ್ರಾಗನ್ X24 LET ಚಿಪ್ ಸೆಟ್ ಇದು 2GBPS ವೇಗದಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಮುಂದಿನ ಎಲ್ಲಾ ಸ್ಮಾರ್ಟ್ ಫೋನ್ ಗಳಲ್ಲಿಯೂ ಇದು ಕಾಣಿಸಿಕೊಳ್ಳಲಿದೆ.

English summary
Qualcomm announces Snapdragon 700 Mobile platform series. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot