Home
ಸುದ್ದಿಜಾಲ

ಹೊಸ ಮೊಬೈಲ್ ಪ್ರೊಸೆಸರ್ ಬಿಡುಗಡೆ; 320MP ಕ್ಯಾಮೆರಾ ಬಳಕೆ, ವಿದ್ಯುತ್ ಕೂಡ ಉಳಿತಾಯ!

ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವರಿಗೆ ಸಂತಸದ ಸುದ್ದಿ ಇದೆ. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಬಹುನಿರೀಕ್ಷಿತ ಮೊಬೈಲ್‌ಗಳಲ್ಲಿ ಹೊಸ ಚಿಪ್‌ಸೆಟ್‌ ಲಭ್ಯವಿರಲಿದೆ. ಹೌದು, ಕ್ವಾಲ್ಕಾಮ್ (Qualcomm) ಹೊಸ ಚಿಪ್‌ಸೆಟ್ (ಪ್ರೊಸೆಸರ್) ಪರಿಚಯಿಸಿದೆ. ಇಂದು (ಅ.22) ಹವಾಯಿಯಲ್ಲಿ ನಡೆದ ಸ್ನಾಪ್‌ಡ್ರಾಗನ್ ಶೃಂಗಸಭೆಯಲ್ಲಿ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ (Snapdragon 8 Elite) ಅನ್ನು ಬಿಡುಗಡೆ ಮಾಡಲಾಯಿತು. ಮುಂಬರುವ ದಿನಗಳಲ್ಲಿ ಬಿಡುಗಡೆಯಾಗುವ ಸ್ಮಾರ್ಟ್‌ಫೋನ್‌ಗಳು ಮೊದಲ ಬಾರಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ ಅನ್ನು ಹೊಂದಿರಲಿವೆ. ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ವಿಶೇಷತೆಗಳ ಬಗ್ಗೆ ಇಲ್ಲಿದೆ ಮಾಹಿತಿ.

ಹೌದು, ಸ್ನಾಪ್‌ಡ್ರಾಗನ್ 8 ಎಲೈಟ್ ಹೊಸ ಮೊಬೈಲ್ ಚಿಪ್‌ಸೆಟ್ ಆಗಿದೆ. ಈ ಪ್ರೊಸೆಸರ್ ಕ್ವಾಲ್‌ಕಾಮ್‌ನ ಮುಂದಿನ ಜೆನ್ ಕಸ್ಟಮ್ ಓರಿಯನ್ ಸಿಪಿಯುನಿಂದ ಚಾಲಿತವಾಗಿದೆ. ಕ್ವಾಲ್ಕಾಮ್‌ನ ಹೊಸ ಮೊಬೈಲ್ ಪ್ರೊಸೆಸರ್ ಆನ್ ಡಿವೈಸ್ ಜನರೇಟಿವ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಮತ್ತು ಮಲ್ಟಿ ಮೋಡಲ್ ಎಐ ಸಾಮರ್ಥ್ಯಗಳು, ಎನ್‌ಪಿಯು (NPU) ಮತ್ತು ಎರಡನೇ ತಲೆಮಾರಿನ ಕಸ್ಟಮ್‌ಗಳಂತಹ ನವೀಕರಣಗಳೊಂದಿಗೆ ಉನ್ನತ ಕಾರ್ಯಕ್ಷಮತೆ ಒದಗಿಸುವ ಗುರಿಯನ್ನು ಹೊಂದಿದೆ. ಸ್ನಾಪ್‌ಡ್ರಾಗನ್ 8 ಜೆನ್ 3 ಚಿಪ್‌ಸೆಟ್‌ಗಿಂದ ಸ್ನಾಪ್‌ಡ್ರಾಗನ್ 8 ಎಲೈಟ್ ಬೃಹತ್ ಕಾರ್ಯಕ್ಷಮತೆ ನೀಡುತ್ತದೆ.

ಹೊಸ ಮೊಬೈಲ್ ಪ್ರೊಸೆಸರ್ ಬಿಡುಗಡೆ; 320MP ಕ್ಯಾಮೆರಾ ಬಳಕೆ, ವಿದ್ಯುತ್ ಸಹ ಉಳಿತಾಯ!

320MP ಕ್ಯಾಮೆರಾ ಬಳಸಬಹುದು!

ಸ್ನಾಪ್‌ಡ್ರಾಗನ್ 8 ಎಲೈಟ್ ಪ್ರೊಸೆಸರ್ ಹೊಂದಿರುವ ಫೋನ್‌ಗಳಲ್ಲಿ 320 ಮೆಗಾಪಿಕ್ಸೆಲ್ ಕ್ಯಾಮೆರಾ ಲೆನ್ಸ್ ಬಳಸಬಹುದು. ಈ ಚಿಪ್‌ಸೆಟ್ ಟ್ರಿಪಲ್ 18 ಬಿಟ್ ಸ್ಪೆಕ್ಟ್ರಾ ಎಐ ಐಎಸ್‌ಪಿ ಸೆಟಪ್ ಒಳಗೊಂಡಿರುತ್ತದೆ. ಎಐ (AI) ಆಧಾರಿತ ಸ್ವಯಂ ಎಕ್ಸ್‌ಪೋಸರ್, ಸ್ವಯಂ ಫೋಕಸ್, ಫೇಸ್ ಡಿಟೆಕ್ಷನ್ (Face detection) ಮತ್ತು ಇತರೆ ವೈಶಿಷ್ಟ್ಯಗಳನ್ನು ಹೊಂದಿದೆ. ಇದು ಪ್ರತಿ ಸೆಕೆಂಡಿಗೆ 60 ಫ್ರೇಮ್‌ಗಳಲ್ಲಿ (fps) 8K ರೆಸಲ್ಯೂಶನ್‌ನಲ್ಲಿ ವಿಡಿಯೋ ಕ್ಯಾಪ್ಚರ್ ಬೆಂಬಲಿಸುತ್ತದೆ. ಹೊಸ ಕ್ವಾಲ್ಕಾಮ್ ಎಐ ಐಎಸ್‌ಪಿ (AI ISP) ಅನ್ನು ಎನ್‌ಪಿಯುನೊಂದಿಗೆ ಬೆಸೆಯುತ್ತದೆ.

ಶೇ.27 ವಿದ್ಯುತ್ ಉಳಿತಾಯ, 8 ವರ್ಷಗಳ ಆಂಡ್ರಾಯ್ಡ್‌ ನವೀಕರಣ!

ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು TSMCಯ 3nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಪ್ರಧಾನ ಕೋರ್‌ ಓರಿಯನ್ ಸಿಪಿಯು ಆರ್ಕಿಟೆಕ್ಚರ್ 4.32 GHz ಮತ್ತು 3.53 GHz ನಲ್ಲಿ ಕಾರ್ಯಕ್ಷಮತೆಯ ಕೋರ್‌ಗಳನ್ನು ಹೊಂದಿದೆ. ಗರಿಷ್ಠ ಸಿಪಿಯು ವೇಗ 4.32 GHz ಆಗಿದೆ. ಇದು ಅತ್ಯಂತ ವೇಗದ ಮೊಬೈಲ್ ಚಿಪ್‌ಸೆಟ್ ಆಗಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 9400 ಚಿಪ್‌ಸೆಟ್‌ಗಿಂತ ಹೆಚ್ಚಾಗಿದೆ. ಸಿಪಿಯು ಕಾರ್ಯಕ್ಷಮತೆಯಲ್ಲಿ ಶೇ.44 ವರ್ಧಕ, ಶೇ.44 ಸುಧಾರಿತ ವಿದ್ಯುತ್ ದಕ್ಷತೆ ಮತ್ತು ಶೇ.27 ವಿದ್ಯುತ್ ಉಳಿತಾಯ ಮಾಡುತ್ತದೆ. ಇದರೊಂದಿಗೆ, 8 ವರ್ಷಗಳ ಆಂಡ್ರಾಯ್ಡ್‌ ನವೀಕರಣ ಲಭ್ಯವಿದೆ ಎಂದು ಕ್ವಾಲ್ಕಾಮ್ ಹೇಳಿದೆ.

ಈ ಸುದ್ದಿ ಓದಿದ್ದಿರಾ?: ದೀಪಾವಳಿ ಆಫರ್: 10,999 ಸಾಕು! Realme 5G ಫೋನ್.. ಖರೀದಿ ಎಲ್ಲಿ?

ಯಾವ ಮೊಬೈಲ್‌ನಲ್ಲಿ ಹೊಸ ಚಿಪ್‌ಸೆಟ್ ಲಭ್ಯ?

ಮುಂಬರುವ ವಾರಗಳಲ್ಲಿ ಬಿಡುಗಡೆಯಾಗುವ ಪ್ರಸಿದ್ಧ ಕಂಪನಿಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್‌ನಲ್ಲಿ ಕೆಲಸ ಮಾಡಲಿವೆ ಎಂದು ಕ್ವಾಲ್ಕಾಮ್ ಹೇಳಿದೆ. ಈಗಾಗಲೇ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳ ಪಟ್ಟಿಯನ್ನು ಖಚಿತಪಡಿಸಿದೆ. ಶಿಯೋಮಿ 15 (Xiaomi 15) ಸರಣಿ, ಹಾನರ್ ಮ್ಯಾಜಿಕ್ 7 (Honor Magic 7) ಸರಣಿ, ರಿಯಲ್‌ಮಿ GT 7 ಪ್ರೊ (Realme GT 7 Pro) ಸೇರಿದಂತೆ ಹಲವು ಫೋನ್‌ಗಳು ಮೊದಲ ಸ್ನಾಪ್‌ಡ್ರಾಗನ್ 8 ಎಲೈಟ್ ಚಾಲಿತ ಫೋನ್‌ಗಳಾಗಿ ಲಾಂಚ್ ಆಗಲಿವೆ.

ಹೊಸ ಮೊಬೈಲ್ ಪ್ರೊಸೆಸರ್ ಬಿಡುಗಡೆ; 320MP ಕ್ಯಾಮೆರಾ ಬಳಕೆ, ವಿದ್ಯುತ್ ಸಹ ಉಳಿತಾಯ!

ಹೊಸ ಚಿಪ್‌ಸೆಟ್ ಹೊಂದಿರುವ ಸ್ಮಾರ್ಟ್‌ಫೋನ್ ಕಂಪನಿಗಳು

  1. ಆಸುಸ್‌ (ASUS)
  2. ಹಾನರ್ (Honor)
  3. ಐಕ್ಯೂ (iQOO)
  4. ಒನ್‌ಪ್ಲಸ್ (OnePlus)
  5. ಒಪ್ಪೋ (Oppo)
  6. ರಿಯಲ್‌ಮಿ (Realme)
  7. ಸ್ಯಾಮ್‌ಸಂಗ್ (Samsung)
  8. ವಿವೋ (Vivo)
  9. ಶಿಯೋಮಿ (Xiaomi)

ಈ ಮೇಲಿನ ಸ್ಮಾರ್ಟ್‌ಫೋನ್‌ ಕಂಪನಿಗಳು ಸೇರಿದಂತೆ ಜಾಗತಿಕ ಮೂಲ ಉಪಕರಣ ತಯಾರಕರು (OEM) ಪ್ರಮುಖ ಸಾಧನಗಳಿಗೆ ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್ ಅನ್ನು ಬಳಸಲಿವೆ (ಅಳವಡಿಸಿಕೊಳ್ಳಲಿವೆ) ಎಂದು ಕ್ವಾಲ್ಕಾಮ್ ಮಾಹಿತಿ ನೀಡಿದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಚಿಪ್‌ಸೆಟ್, ಡ್ಯುಯಲ್ ಚಾನೆಲ್ LP-DDR5x ಮೆಮೊರಿ, 5.3GHz ವರೆಗೆ, UFS 4.0 ಸ್ಟೋರೇಜ್‌ ಮತ್ತು 24GB RAM ವರೆಗೆ ಬೆಂಬಲಿಸುತ್ತದೆ ಎಂದು ತಿಳಿಸಿದೆ.

Best Mobiles in India

English summary
Qualcomm Snapdragon 8 Elite chipset with Oryon CPU launched: know specs, list of smartphone brands
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+