Home
ಸುದ್ದಿಜಾಲ

Qubo InstaView ವಿಡಿಯೋ ಡೋರ್ ಫೋನ್ ಲಾಂಚ್‌!..ಬೆಲೆ ಎಷ್ಟು, ಫೀಚರ್ಸ್‌ ಏನಿವೆ?

ಕ್ಯುಬೋ ಸಂಸ್ಥೆಯು (Qubo) ದೇಶಿಯ ಮಾರುಕಟ್ಟೆಯಲ್ಲಿ ಕ್ಯುಬೋ ಇನ್‌ಸ್ಟಾವ್ಯೂವ್ (Qubo InstaView) ವೀಡಿಯೊ ಡೋರ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ನೂತನ ವೀಡಿಯೊ ಡೋರ್ ಫೋನ್ ಹೋಮ್ ಟ್ಯಾಬ್ ಮತ್ತು ವೀಡಿಯೊ ಡೋರ್‌ಬೆಲ್ ಪ್ರೊ ಅನ್ನು ಒಳಗೊಂಡಿದ್ದು, ಗ್ರಾಹಕರ ಹಮನ ಸೆಳೆದಿದೆ.

ಹೌದು, ಕ್ಯುಬೋ ಸಂಸ್ಥೆಯು ಹೊಸದಾಗಿ ಕ್ಯುಬೋ ಇನ್‌ಸ್ಟಾವ್ಯೂವ್ ವೀಡಿಯೊ ಡೋರ್ ಅನ್ನು ಲಾಂಚ್ ಮಾಡಿದೆ. ಈ ಡಿವೈಸ್‌ನ ಹೋಮ್ ಟ್ಯಾಬ್‌ನ ಪೋರ್ಟಬಿಲಿಟಿ ಸೌಲಭ್ಯ ಪಡೆದಿರುವುದು ಪ್ರಮುಖ ಹೈಲೈಟ್‌ಗಳಲ್ಲಿ ಒಂದಾಗಿದೆ. ಈ ಸಾಧನವನ್ನು ಬಳಕೆದಾರರು ಒಳಗೆ ಅಥವಾ ಹೊರಗೆ ಇರಿಸಬಹುದಾಗಿದೆ.

Qubo InstaView ವಿಡಿಯೋ ಡೋರ್ ಫೋನ್ ಲಾಂಚ್‌!..ಬೆಲೆ ಎಷ್ಟು, ಫೀಚರ್ಸ್‌ ಏನಿವೆ?

ನೂತನ ಕ್ಯುಬೋ ವೀಡಿಯೊ ಡೋರ್‌ ಸಂಸ್ಥೆಯ ಈ ಹಿಂದಿನ ಡೋರ್‌ಬೆಲ್‌ ಡಿವೈಸ್‌ಗಿಂತ ಸಾಕಷ್ಟು ಅಪ್‌ಡೇಟ್‌ ಕಂಡಿದೆ. ಇನ್ನು ವೀಡಿಯೊ ಡೋರ್‌ಬೆಲ್ ಪ್ರೊ ಮತ್ತು ಹೋಮ್ ಟ್ಯಾಬ್ ಈ ಎರಡು ಡಿವೈಸ್‌ಗಳನ್ನು ಕ್ಯುಬೋ ಆಪ್‌ ಮೂಲಕ ಯಾವುದೇ ಸ್ಮಾರ್ಟ್‌ಫೋನ್‌ ಮೂಲಕ ನಿರ್ವಹಿಸಬಹುದಾಗಿದೆ. ಹಾಗಾದರೇ ಕ್ಯುಬೋ ಇನ್‌ಸ್ಟಾವ್ಯೂವ್ ವಿಡಿಯೋ ಡೋರ್‌ ಫೋನ್‌ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಇತರೆ ಫೀಚರ್ಸ್‌ ಮಾಹಿತಿ

ಕ್ಯುಬೋ ಸಂಸ್ಥೆಯ ಈ ಹೊಸ ವೀಡಿಯೊ ಡೋರ್‌ಬೆಲ್ ಪ್ರೊ 2K ರೆಸಲ್ಯೂಶನ್‌ ಸೌಲಭ್ಯ ಪಡೆದಿದ್ದು, 32 ಮೆಗಾ ಪಿಕ್ಸಲ್‌ ಕ್ಯಾಮೆರಾವನ್ನು ಸಪೋರ್ಟ್‌ ಮಾಡುತ್ತದೆ. ಇದು 140 ಡಿಗ್ರಿ ಆಂಗಲ್‌ ಪಡೆದಿದ್ದು, ನೈಟ್‌ ವಿಷನ್‌ ಮತ್ತು ವ್ಯಕ್ತಿ ಪತ್ತೆ ಮಾಡುವ ಆಯ್ಕೆಗಳನ್ನು ಪಡೆದಿದೆ. ಅಲ್ಲದೇ ಇದು ಟೈಮ್ ಲ್ಯಾಪ್ಸ್ ವೀಡಿಯೊಗಳನ್ನು ಸಹ ರೆಕಾರ್ಡ್ ಮಾಡುವ ಸೌಲಭ್ಯ ಹೊಂದಿದ್ದು, ಜೊತೆಗೆ 2W ಸ್ಪೀಕರ್ ಹಾಗೂ ಸರೌಂಡ್ ಸೌಂಡ್ ಎಕೋ ಕ್ಯಾನ್ಸಲೇಶನ್ ಅನ್ನು ಪಡೆದಿದೆ.

ಸ್ಥಿರ ಕನೆಕ್ಟಿವಿಟಿಗಾಗಿ ಡ್ಯುಯಲ್ ಬ್ಯಾಂಡ್ ವೈ ಫೈ (2.4GHz, 5GHz) ಮತ್ತು ಎತರ್ನೆಟ್ PoE ಗೆ ಸಹ ಸಪೋರ್ಟ್‌ ನೀಡುತ್ತದೆ. ಇತರ ಫೀಚರ್ಸ್‌ನಲ್ಲಿ ವಿಸಿಟರ್ಸ್‌ ಲಾಗ್‌ಗಳು, intruder alarm, ಅಲೆಕ್ಸಾ ಸಪೋರ್ಟ್‌, 36 ಟ್ಯೂನ್‌ಗಳೊಂದಿಗೆ ವೈರ್‌ಲೆಸ್ ಚೈಮ್, ನೋಟಿಫಿಕೇಶನ್‌ LED ಲೈಟ್ ಸೇರಿದಂತೆ ಇತರೆ ಆಯ್ಕೆಗಳನ್ನು ಪಡೆದಿದೆ.

ಸ್ಮಾರ್ಟ್ ಹೋಮ್ ಟ್ಯಾಬ್‌ ಫೀಚರ್ಸ್‌

ಈ ಸ್ಮಾರ್ಟ್ ಹೋಮ್ ಟ್ಯಾಬ್‌ ಡಿವೈಸ್‌ 1200 × 800 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು ಹೆಚ್ಚಿನ ಸ್ಕ್ರೀನ್ ಟು ಬಾಡಿ ಅನುಪಾತ ಜೊತೆಗೆ 8 ಇಂಚಿನ ಟಚ್‌ಸ್ಕ್ರೀನ್ IPS ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಟ್ಯಾಬ್ಲೆಟ್ ಸ್ಫಟಿಕ ಸ್ಪಷ್ಟ ವೀಡಿಯೊ ಕ್ವಾಲಿಟಿಯನ್ನು ಹೆಡ್ ಟು ಟೋ ಗೋಚರತೆಯೊಂದಿಗೆ ಒದಗಿಸುತ್ತದೆ ಎಂದು ಹೇಳಲಾಗಿದೆ.

ಈ ಟ್ಯಾಬ್ಲೆಟ್ ಡಿವೈಸ್‌ ಟು ವೇ ಆಡಿಯೊವನ್ನು ಕೂಡಾ ಸಪೋರ್ಟ್‌ ಮಾಡುತ್ತದೆ. ಇದರೊಂದಿಗೆ ಈ ಸಾಧನವು 8 GB ಯ ಇನ್‌ಬಿಲ್ಟ್‌ ಸ್ಟೋರೇಜ್‌ ಸಪೋರ್ಟ್‌ ಪಡೆದಿದೆ. ಅಲ್ಲದೇ ಡಿಜಿಟಲ್ ಫೋಟೋ ಫ್ರೇಮ್ ಅನ್ನು ಪ್ರದರ್ಶಿಸಲು ಬಳಕೆ ಮಾಡಬಹುದು.

ಬೆಲೆ ಹಾಗೂ ಲಭ್ಯತೆಯ ಮಾಹಿತಿ
ಕ್ಯುಬೋ ಇನ್‌ಸ್ಟಾವ್ಯೂವ್‌ ( Qubo InstaView ) ವಿಡಿಯೋ ಡೋರ್ ಫೋನ್‌ ಡಿವೈಸ್‌ನ ಬೆಲೆ 14,990 ರೂ. ಗಳು ಆಗಿದೆ. ಇನ್ನು ಖರೀದಿದಾರರು ಈ ಡಿವೈಸ್‌ ಅನ್ನು ಕ್ಯುಬೋ (Qubo) ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿ ಮಾಡಬಹುದಾಗಿದೆ. ಅಂದಹಾಗೆ ಕ್ಯುಬೋ ವಿಡಿಯೋ ಡೋರ್ ಫೋನ್ ಡಿವೈಸ್‌ ಶೀಘ್ರದಲ್ಲೇ ಪ್ರಮುಖ ಇ-ಕಾಮರ್ಸ್ ವೆಬ್‌ಸೈಟ್‌ಗಳ ಮೂಲಕ ಸಹ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Qubo InstaView Video Door Phone Launched in India. check price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+