Qubo air purifier: ಕ್ಯುಬೋ ಸ್ಮಾರ್ಟ್ ಏರ್ ಪ್ಯೂರಿಫೈಯರ್ ಲಾಂಚ್! ಫೀಚರ್ಸ್ ಏನು? ಬೆಲೆ ಎಷ್ಟು?
ಈಗಂತೂ ಅತಿಯಾದ ವಾಹನಗಳ ಬಳಕೆ ಹಾಗೂ ಪರಿಸರ ನಾಶದಿಂದ ಎಲ್ಲಾ ಕಡೆ ಕೆಟ್ಟ ಗಾಳಿ ಸೇವನೆ ಮಾಡುವಂತೆ ಆಗಿದೆ. ಇದು ಪೀಳಿಗೆಯಿಂದ ಪೀಳಿಗೆಗೆ ಹೆಚ್ಚಾಗುತ್ತಲೇ ಇದ್ದು, ಇದು ಸಮಾಜಕ್ಕೆ ದೊಡ್ಡ ಮಾರಕವಾಗಿದೆ. ಅದರಲ್ಲೂ ಮಹಾನಗರಗಳಲ್ಲಿ ವಾಸ ಮಾಡುವ ಜನರು ಮಾತ್ರ ಕೆಟ್ಟ ಗಾಳಿ ಸೇವನೆ ಮಾಡಿ ಆಗಾಗ್ಗೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಇಂದು ಏರ್ ಪ್ಯೂರಿಫೈಯರ್ (air purifier) ಬಳಕೆ ವ್ಯಾಪಕವಾಗಿದೆ.
ಹೌದು, ಏರ್ ಪ್ಯೂರಿಫೈಯರ್ ಅನ್ನು ಈಗ ಎಲ್ಲಾ ಕಡೆ ಬಳಕೆ ಮಾಡುತ್ತಿದ್ದು, ಪರಿಣಾಮ ಮುಂದಾಗುವ ಸಮಸ್ಯೆಗಳಿಗೆ ಜನರು ಈಗಲೇ ಕಡಿವಾಣ ಹಾಕುತ್ತಿದ್ದಾರೆ. ಈ ಹೆಚ್ಚುತ್ತಿರುವ ಏರ್ ಪ್ಯೂರಿಫೈಯರ್ ಖರೀದಿ ನಡುವೆ ಕ್ಯುಬೋ (Qubo) ಒಂದೇ ಬಾರಿಗೆ ಮೂರು ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳನ್ನು ಭಾರತದಲ್ಲಿ ಲಾಂಚ್ ಮಾಡಿದೆ. ಈ ಡಿವೈಸ್‌ಗಳು ಸುಧಾರಿತ ಫೀಚರ್ಸ್ ಅನ್ನು ಪಡೆದುಕೊಂಡಿವೆ. ಹಾಗಿದ್ರೆ, ಇವುಗಳ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಇವುಗಳ ಕೊಡುಗೆ ಬೆಲೆ ಎಷ್ಟು ಅನ್ನೋದನ್ನು ನೋಡೋಣ ಬನ್ನಿ.

ಕ್ಯುಬೋ ಸ್ಮಾರ್ಟ್ ಏರ್ ಪ್ಯೂರಿಫೈಯರ್: ಹೀರೋ ಎಲೆಕ್ಟ್ರಾನಿಕ್ಸ್ ನ ಬ್ರ್ಯಾಂಡ್ ಕ್ಯುಬೋ ಡ್ಯಾಶ್‌ಕ್ಯಾಮ್‌ಗಳು ಮತ್ತು ಜಿಪಿಎಸ್ ಟ್ರ್ಯಾಕರ್ ಅನ್ನು ಲಾಂಚ್ ಮಾಡಿದ ನಂತರ ಭಾರತದಲ್ಲಿ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳ ಹೊಸ ಸರಣಿಯನ್ನೇ ಪರಿಚಯಿಸಿದೆ. ಇದರಲ್ಲಿ Q200, Q400, ಮತ್ತು Q500 ಎಂಬ ಮೂರು ವೇರಿಯಂಟ್ ಡಿವೈಸ್‌ಗಳನ್ನು ಕಾಣಬಹುದು. ಇವುಗಳನ್ನು ಮಲಗುವ ಕೋಣೆಗಳು, ಗೃಹ ಕಚೇರಿಗಳು ಮತ್ತು ದೊಡ್ಡ ಕೋಣೆಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಬಳಕೆ ಮಾಡಬಹುದಾಗಿದೆ.
ಈ ಕ್ಯುಬೋ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳು ಉನ್ನತ ದರ್ಜೆಯ 4 ಲೇಯರ್‌ನ ಶುದ್ಧೀಕರಣ ವ್ಯವಸ್ಥೆಯನ್ನು ಹೊಂದಿವೆ. HEPA H13 ಫಿಲ್ಟರ್ ಮತ್ತು ನ್ಯಾನೊ-ಸಿಲ್ವರ್ ಆಂಟಿಬ್ಯಾಕ್ಟೀರಿಯಲ್ ಲೇಯರ್, ಆಕ್ಟಿವೇಟೆಡ್ ಕಾರ್ಬನ್ ಆಯ್ಕೆ ಪಡೆದುಕೊಂಡಿದ್ದು, ಅವು 0.03 ಮೈಕ್ರಾನ್‌ನಷ್ಟು ಚಿಕ್ಕ ಕಣಗಳನ್ನು ಪರಿಣಾಮಕಾರಿಯಾಗಿ ನಿರ್ಬಂಧಿಸುವ ಸಾಮರ್ಥ್ಯ ಪಡೆದುಕೊಂಡಿವೆ. ಈ ಮೂಲಕ ಮಾಲಿನ್ಯಕಾರಕವಾದ ಧೂಳು, ಪರಾಗ, ಸಾಕುಪ್ರಾಣಿಗಳಿಂದ ಆಗುವ ಸಮಸ್ಯೆಯಿಂದ ದೂರ ಇಡುತ್ತದೆ.

ಜೊತೆಗೆ ಈ ಕ್ಯುಬೋ ಸ್ಮಾರ್ಟ್ ಏರ್ ಪ್ಯೂರಿಫೈಯರ್‌ಗಳನ್ನು ಕ್ಯುಬೋ ಆಪ್ ಮೂಲಕ ಕಂಟ್ರೋಲ್ ಮಾಡಬಹುದಾಗಿದೆ. ಇದಕ್ಕಾಗಿ ಈ ಡಿವೈಸ್‌ಗಳಲ್ಲಿ ಸ್ಮಾರ್ಟ್ ಫೀಚರ್ಸ್ ಆಯ್ಕೆ ನೀಡಲಾಗಿದೆ. ಈ ಆಪ್‌ನಲ್ಲಿ ಹೊರಾಂಗಣ ಮತ್ತು ಸುತ್ತುವರಿದ ಗಾಳಿಯ ಗುಣಮಟ್ಟದ ಎಲ್ಲಾ ರೀತಿಯ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದ್ದು, ಬಳಕೆದಾರರಿಗೆ ಉತ್ತಮ ಗಾಳಿಯ ಜೊತೆಗೆ ಸುಲಭ ಕಂಟ್ರೋಲ್‌ಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಇಷ್ಟೇ ಅಲ್ಲದೆ ಇದರಲ್ಲಿ ಎಐ ತಂತ್ರಜ್ಞಾನವನ್ನೂ ಸಹ ಬಳಕೆ ಮಾಡಿಕೊಲ್ಳಲಾಗಿದೆ. QSensAI ಸುತ್ತುವರಿದ PM2.5 ಮಟ್ಟಗಳ ಆಧಾರದ ಮೇಲೆ ಕಾರ್ಯಕ್ಷಮತೆಯನ್ನು ಸರಿಹೊಂದಿಸುವ ಕೆಲಸ ಮಾಡುತ್ತದೆ. ಈ ವಿಶಿಷ್ಟ ಫೀಚರ್ಸ್ ಶುದ್ಧ ಗಾಳಿಯನ್ನು ಖಚಿತಪಡಿಸುವುದು ಮಾತ್ರವಲ್ಲದೆ ಇಂಧನ ಉಳಿತಾಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತದೆ ಮತ್ತು ಫಿಲ್ಟರ್‌ನ ಜೀವಿತಾವಧಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ.
ಉಳಿದಂತೆ ಈ Q200, Q400, ಮತ್ತು Q500 ಡಿವೈಸ್‌ಗಳು ಕ್ರಮವಾಗಿ 200 ಚದರ ಅಡಿ, 400 ಚದರ ಅಡಿ ಮತ್ತು 500 ಚದರ ಅಡಿ ವ್ಯಾಪ್ತಿ ಪ್ರದೇಶಕ್ಕೆ ಶುದ್ಧ ಗಾಳಿ ನೀಡುತ್ತವೆ. ಇವುಗಳಲ್ಲಿ ಎಲ್ಇಡಿ ಡಿಸ್‌ಪ್ಲೇ ಆಯ್ಕೆ ಸಹ ನೀಡಲಾಗಿದ್ದು, ಈ ಮೂಲಕ ತ್ವರಿತ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗೆಯೇ ಇವುಗಳ ಶಕ್ತಿ ಕ್ರಮವಾಗಿ 38W, 35W ಮತ್ತು 45W ಆಗಿದ್ದು, ಇವುಗಳಲ್ಲಿ ಇರುವ ಫಿಲ್ಟರ್ ಬಾಳಿಕೆ 9000 ಗಂಟೆಯಾಗಿದೆ.

ಕ್ಯುಬೋ ಸ್ಮಾರ್ಟ್ ಏರ್ ಪ್ಯೂರಿಫೈಯರ್ ಬೆಲೆ ಹಾಗೂ ಲಭ್ಯತೆ: ಈ ಸ್ಮಾರ್ಟ್ ಪ್ಯೂರಿಫೈಯರ್ ಗಳನ್ನು ನೀವು ಅಮೆಜಾನ್ ಹಾಗೂ ಕ್ಯುಬೋ ದ ಅಧಿಕೃತ ಸೈಟ್ ಮೂಲಕ ಖರೀದಿ ಮಾಡಬಹುದಾಗಿದೆ. Q200 ಗೆ 12,990 ರೂ. ಸಾಮಾನ್ಯ ಬೆಲೆ ಇದ್ದು, ಲಾಂಚ್ ಆಫರ್ 4,990ರೂ.ಗಳಾಗಿದೆ. ಹಾಗೆಯೇ Q400 ಗೆ 17,990 ಸಾಮಾನ್ಯ ಬೆಲೆ ಇದ್ದು, ಲಾಂಚ್ ಆಫರ್ 6,990 ರೂ.ಆಗಿದೆ. ಇದರೊಂದಿಗೆ Q500 ಗೆ 22,990 ರೂ.ಗಳ ಬೆಲೆ ನಿಗದಿ ಪಡಿಸಲಾಗಿದ್ದು, ಲಾಂಚ್ ಆಫರ್ 8,990 ರೂ.ಗಳಾಗಿದೆ.


Click it and Unblock the Notifications








