Rabbit R1: ಯಾವುದು ಈ ವಿಶೇಷ ಪುಟ್ಟ ಎಐ ಡಿವೈಸ್? ಲಾಂಚ್ ಮಾಡಿದ ಕ್ಷಣಮಾತ್ರದಲ್ಲೇ ಭರ್ಜರಿ ಸೇಲ್..
ಸ್ಮಾರ್ಟ್ ಡಿವೈಸ್ ಮಾರುಕಟ್ಟೆಯಲ್ಲಿ ಇದೀಗ ಎಐ (AI) ಎಲ್ಲಾ ಕಡೆ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಅಂದರೆ ಎಐ ಆಧಾರಿತ ಡಿವೈಸ್‌ಗಳು ಭರ್ಜರಿ ಜನಮನ್ನಣೆ ಪಡೆಯುತ್ತಿದ್ದು, ಈ ಮೂಲಕ ಹೊಸ ಹೊಸ ಡಿವೈಸ್‌ಗಳನ್ನು ಪರಿಚಯಿಸಲಾಗುತ್ತಿದೆ. ಅದರಂತೆ ಈಗ ರಾಬಿಟ್ R1 ಡಿವೈಸ್ (Rabbit R1 device) ಸ್ಮಾರ್ಟ್‌ಡಿವೈಸ್ ವಿಭಾಗದಲ್ಲಿ ಸುನಾಮಿ ಉಂಟು ಮಾಡಿದೆ.
ಹೌದು, ಎಐ ಸ್ಟಾರ್ಟ್ಅಪ್ ರಾಬಿಟ್ (AI startup Rabbit) ಬಹುಕ್ರಿಯಾತ್ಮಕ ಡಿವೈಸ್ ಆಗಿರುವ ರಾಬಿಟ್ R1 ಅನ್ನು CES 2024 ನಲ್ಲಿ ಅನಾವರಣ ಮಾಡಿದೆ. ಈ ಡಿವೈಸ್ ನೋಡಲು ಭಿನ್ನವಾಗಿದ್ದರೂ ಸಹ ಸ್ಮಾರ್ಟ್‌ಫೋನ್‌ನಂತೆಯೇ ಕೆಲಸ ಮಾಡುತ್ತದೆ. ಹಾಗಿದ್ರೆ, ನಿಮಗೆ ಈ ಡಿವೈಸ್ ಬಗ್ಗೆ ಕುತೂಹಲ ಉಂಟಾಗಿರಬೇಕಲ್ಲವೇ?, ತಡಯಾಕೆ ಬನ್ನಿ ಈ ಡಿವೈಸ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರ ತಿಳಿಯೋಣ.

ರಾಬಿಟ್ R1: CES 2024 ನಲ್ಲಿ ಪಾಕೆಟ್ ಗಾತ್ರದ ಎಐ ಡಿವೈಸ್ ರಾಬಿಟ್ R1 ಲಾಂಚ್ ಆಗಿದ್ದು, ಇದು ಲಾಂಚ್ ಆದ ಬಳಿಕ 10,000 ಯೂನಿಟ್‌ಗಳಿಗಿಂತ ಹೆಚ್ಚು ಸೇಲ್ ಆಗಿದೆ ಎಂದು ತಿಳಿದುಬಂದಿದೆ. ಈ ಡಿವೈಸ್ ಮೂಲಕ ನೀವು ಮೆಸೆಜ್ ಮಾಡಬಹುದು, ಕರೆಗಳನ್ನು ಮಾಡಬಹುದು, ಸ್ಪೋಟಿಫೈ ಮತ್ತು ಊಬರ್ ಸೇರಿದಂತೆ ಅನೇಕ ಆಪ್ ಸೇವೆಗಳನ್ನು ಈ ಮೂಲಕ ಪಡೆದುಕೊಳ್ಳಬಹುದಾಗಿದೆ.
ಮೂಲತಃ ಈ ಡಿವೈಸ್ ಮೊಬೈಲ್ ಆಪ್‌ನಂತೆಯೇ ಎಲ್ಲಾ ರೀತಿಯ ಕೆಲಸಗಳನ್ನು ಮಾಡುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ಇದನ್ನು ಬಳಕೆ ಮಾಡಬೇಕು ಎಂದರೆ ಸ್ಮಾರ್ಟ್‌ಫೋನ್ ಅಗತ್ಯವಿಲ್ಲ. ಅಂದರೆ ಸ್ವತಂತ್ರವಾಗಿ ಇದು ಕೆಲಸ ಮಾಡುತ್ತದೆ. ಅಲ್ಲದೆ ಸಿರಿ ಮತ್ತು ಅಲೆಕ್ಸಾದಂತೆಯೇ ತನ್ನದೇ ಆದ ವರ್ಚುವಲ್ ಅಸಿಸ್ಟೆಂಟ್ ಆಯ್ಕೆ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಕೆಲಸ ಮಾಡುತ್ತದೆ.

ಇದರೊಂದಿಗೆ ಈ ಸ್ಮಾರ್ಟ್ ಡಿವೈಸ್ ಮ್ಯೂಸಿಕ್ ಅನ್ನು ಕಂಟ್ರೋಲ್ ಮಾಡುತ್ತದೆ, ದಿನಸಿಗಾಗಿ ಶಾಪಿಂಗ್ ಮಾಡುತ್ತದೆ. ಈ ಮೂಲಕ ಎಲ್ಲಾ ರೀತಿಯ ಸ್ಮಾರ್ಟ್‌ಫೋನ್ ಮಾಡಬಹುದಾದ ಕೆಲಸಗಳನ್ನು ಇದು ಮಾಡುವ ಸಾಮರ್ಥ್ಯ ಪಡೆದುಕೊಂಡಿದೆ. ಈ ಮೂಲಕ ಎಲ್ಲಾ ಕೆಲಸಗಳನ್ನು ಏಕೀಕೃತ ಇಂಟರ್ಫೇಸ್‌ನಲ್ಲಿ ಮಾಡಬಹುದು. ಇದರಿಂದಾಗಿ ನೀವು ಬಹು ಆಪ್‌ಗಳು ಮತ್ತು ಲಾಗಿನ್‌ಗಳನ್ನು ಬಳಕೆ ಮಾಡುವ ಅಗತ್ಯ ಇರುವುದಿಲ್ಲ.
ಈ ಡಿವೈಸ್ 2.3GHz ಮೀಡಿಯಾಟೆಕ್ ಹಿಲಿಯೋ P35 ಪ್ರೊಸೆಸರ್ ಬಲ ಪಡೆದಿದ್ದು, 4 GB RAM ಮತ್ತು 128 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದೆ. ಜೊತೆಗೆ ಯುಎಸ್‌ಬಿ ಟೈಪ್-ಸಿ ಕನೆಕ್ಟಿವಿಟಿ ಸೌಲಭ್ಯ ಪಡೆದಿದ್ದು, ಒಂದು ಪೂರ್ಣ ಚಾರ್ಜಿಂಗ್‌ನಲ್ಲಿ ಒಂದು ದಿನ ಬಳಕೆ ಮಾಡಬಹುದಾಗಿದೆ. ಅಲ್ಲದೆ ಈ ಡಿವೈಸ್ ರೊಟೇಟಿಂಗ್ ಕ್ಯಾಮೆರಾವನ್ನು ಹೊಂದಿದ್ದು ಉತ್ತಮವಾದ ಫೋಟೋಗಳನ್ನು ಕ್ಲಿಕ್ ಮಾಡಲು ಮತ್ತು ವಿಡಿಯೋಗಳನ್ನು ರೆಕಾರ್ಡ್ ಮಾಡಲು ಅನುಮತಿಸುತ್ತದೆ. ಇದರೊಂದಿಗೆ ಡಿವೈಸ್ ಜೊತೆಗೆ ಸಂವಹನ ಮಾಡಲು ಸ್ಕ್ರಾಲ್ ಬಟನ್ ಆಯ್ಕೆ ಸಹ ಇದೆ.
ರಾಬಿಟ್ R1 ಬೆಲೆ ಹಾಗೂ ಲಭ್ಯತೆ: ಈ ಪುಟ್ಟ ಡಿವೈಸ್ ಬೆಲೆ $199. ಅಂದರೆ ಭಾರತದಲ್ಲಿ ಅಂದಾಜು 16,500 ರೂ.ಗಳಾಗಿದೆ. ಇದಕ್ಕೆ ನೀವು ಯಾವುದೇ ಚಂದಾದಾರಿಕೆಯ ಪಡೆಯುವ ಅಗತ್ಯ ಇಲ್ಲ. ಅಂದರೆ ಸ್ಮಾರ್ಟ್‌ಫೋನ್ ಬಳಕೆ ಮಾಡಿದ ರೀತಿಯಲ್ಲೇ ಇದನ್ನು ಬಳಕೆ ಮಾಡಬಹುದು. ಸದ್ಯಕ್ಕೆ ಯುಎಸ್ ನಲ್ಲಿ ಮಾತ್ರ ಖರೀದಿಗೆ ಮಾತ್ರ ಲಭ್ಯವಿದ್ದು, ಭಾರತೀಯ ಗ್ರಾಹಕರಿಗೆ ಯಾವಾಗ ಲಭ್ಯವಿರುತ್ತದೆ ಅನ್ನೋದನ್ನು ಕಾದುನೋಡಬೇಕಿದೆ.

CES 2024: ವರ್ಷದ ಬಹು ನಿರೀಕ್ಷಿತ CES 2024 ಕಾರ್ಯಕ್ರಮ ಲಾಸ್ ವೇಗಾಸ್ ನಲ್ಲಿ ಜರುಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಎಐ ಆಧಾರಿತ ಡಿವೈಸ್‌ಗಳು ಸೇರಿದಂತೆ ಭಿನ್ನ ಫೀಚರ್ಸ್ ಇರುವ ಹಾಗೂ ಅಚ್ಚರಿ ಉಂಟು ಮಾಡುದ ಹೊಸ ಹೊಸ ಡಿವೈಸ್‌ಗಳನ್ನು ಅನಾವರಣ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ಎಲ್‌ಜಿ ಹಾಗೂ ಸ್ಯಾಮ್‌ಸಂಗ್ ಒಂದಕ್ಕೊಂದು ಪೈಪೋಟಿಯಲ್ಲಿ ಟ್ರಾನ್ಪರೆಂಟ್ ಆಯ್ಕೆಯ ಸ್ಮಾರ್ಟ್‌ಟಿವಿಗಳು ಹಾಗೂ ಇನ್ನಿತರೆ ಸ್ಮಾರ್ಟ್ ಡಿವೈಸ್‌ಗಳನ್ನು ಅನಾವರಣ ಮಾಡಿವೆ.


Click it and Unblock the Notifications








