ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡಿ ರೈಲು ಸಂಚಾರ ಮಾಡಿದ್ರೂ ಬೀಳುತ್ತೆ ದಂಡ; IRCTC ನೀಡಿದ ಎಚ್ಚರಿಕೆ ಏನು?
ಭಾರತದಲ್ಲಿ ಬಹುಪಾಲು ಜನರು ರೈಲಿನಲ್ಲೇ ಪ್ರಯಾಣ ಬೆಳೆಸುತ್ತಾರೆ. ಅದರಲ್ಲೂ ದೂರದ ಊರುಗಳಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗಲು ರೈಲು ಉತ್ತಮವಾಗಿದೆ. ಅದೆಲ್ಲಕ್ಕಿಂತ ಮಿಗಿಲಾಗಿ ರೈಲು ಸೇವೆಗಳನ್ನು ಆನ್‌ಲೈನ್ ಮೂಲಕವೇ ಪಡೆದುಕೊಳ್ಳಬಹುದಾಗಿದ್ದು, ಈ ನಡುವೆ IRCTC ತನ್ನ ಪ್ರಯಾಣಿಕರಿಗೆ ಗಂಭೀರ ಎಚ್ಚರಿಕೆ ನೀಡಿದೆ.
ಹೌದು, ರೈಲು ಟಿಕೆಟ್ ಕಾಯ್ದಿರಿಸಲು, ವೇಳಾಪಟ್ಟಿ ಪರಿಶೀಲಿಸಲು, ದರ ಚೆಕ್ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಆನ್‌ಲೈನ್ ಮೂಲಕವೇ ಮಾಡಬಹುದಾಗಿದೆ. ಇದರಿಂದಾಗಿ ರೈಲು ಸಿಬ್ಬಂದಿಗಳಿಗೆ ಇದ್ದ ಹೊರೆ ಕಡಿಮೆ ಆದಂತಾಗಿದೆ. ಆದರೆ, ನೀವು ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿ ರೈಲಿನಲ್ಲಿ ಸಂಚಾರ ಮಾಡಿದ್ರೂ ಸಹ ದಂಡ ಪಾವತಿ ಮಾಡಬೇಕಾದ ವ್ಯವಸ್ಥೆ ನಿರ್ಮಾಣ ಆಗಿದೆ. ಹಾಗಿದ್ರೆ, ರೈಲು ಪ್ರಯಾಣಿಕರಿಗೆ ಯಾವುದು ಈ ಹೊಸ ಶಾಕಿಂಗ್ ಸುದ್ದಿ?, IRCTC ನೀಡಿದ ಎಚ್ಚರಿಕೆ ಏನು? ಎಂಬ ಬಗ್ಗೆ ತಿಳಿದುಕೊಳ್ಳಿ.

ದೇಶದಲ್ಲಿ ಸೈಬರ್ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಜನರನ್ನು ವಂಚಿಸಲು ಸೈಬರ್ ಅಪರಾಧಿಗಳು (Cybercriminals) ಪ್ರತಿದಿನ ಹೊಸ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಅದರಂತೆ IRCTC ಮೊಬೈಲ್ ಆಪ್ ಗೆ ಸಂಬಂಧಿಸಿದ ವಂಚನೆಯು ಮಿತಿ ಮೀರುತ್ತಿದೆ ಎನ್ನಲಾಗಿದೆ. ರೈಲ್ವೇ ಸೇವೆಗಳನ್ನು ಪಡೆಯಲು ಈ ಆಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಹೇಳಿ ಪ್ರಯಾಣಿಕರನ್ನು ಸೈಬರ್ ವಂಚಕರು ದಾರಿ ತಪ್ಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪರಿಣಾಮ ರೈಲ್ವೇ ಇಲಾಖೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (IRCTC) ರೈಲ್ವೆಯ ನಿರ್ವಹಣೆಯನ್ನು ನೋಡಿಕೊಳ್ಳುತ್ತಿದ್ದು, ಈ ನಡುವೆ ದುರುದ್ದೇಶಪೂರಿತ ಆಪ್ ಬಗ್ಗೆ ತುರ್ತು ಎಚ್ಚರಿಕೆಯನ್ನು ನೀಡಿದೆ. ವಂಚಕರು 'IRCTC ರೈಲ್ ಕನೆಕ್ಟ್' (IRCTC Rail Connect) ಮೊಬೈಲ್ ಆಪ್ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ನಕಲಿ ಲಿಂಕ್‌ಗಳನ್ನು ಕಳುಹಿಸುತ್ತಿದ್ದಾರೆ. ಈ ಮೂಲಕ ಸಾಮಾನ್ಯ ಜನರಿಗೆ ಮೋಸ ಮಾಡುವುದೇ ಇವರ ಮುಖ್ಯ ಉದ್ದೇಶವಾಗಿದೆ ಎಂದು IRCTC ಟ್ವೀಟ್ ಮಾಡಿದೆ.
ಈ ಆಪ್ ಮೂಲಕ ಹೇಗೆ ಮೋಸ ಮಾಡಲಾಗುತ್ತಿದೆ?: ಸ್ಕ್ಯಾಮರ್‌ಗಳು IRCTC ರೈಲ್ ಕನೆಕ್ಟ್ ಆಪ್ ಹೆಸರಿನಲ್ಲಿ ದುರುದ್ದೇಶಪೂರಿತ ಲಿಂಕ್‌ಗಳನ್ನು ಸೆಂಡ್ ಮಾಡುತ್ತಿದ್ದು, ಈ ಲಿಂಕ್ ಅನ್ನು ಕ್ಲಿಕ್ ಮಾಡುವುದರಿಂದ ಅದು ಮೂಲ ಆಪ್ ರೀತಿಯಲ್ಲೇ ಇರುವ ವಂಚನೆಯ ಆಪ್‌ಗೆ ಕರೆದೊಯ್ಯುತ್ತದೆ. ಇದರಿಂದಾಗಿ ಯಾರಿಗೇ ಆದರೂ ಸಹ ಅನುಮಾನವೇ ಬರುವುದಿಲ್ಲ. ಈ ವೇಳೆ ಆಪ್‌ನಲ್ಲಿ ಬಳಕೆದಾರರು ವೈಯಕ್ತಿಕ ಡೇಟಾ, ಪಾವತಿ ಮಾಹಿತಿ ಮತ್ತು ಲಾಗಿನ್ ರುಜುವಾತುಗಳನ್ನು ಎಂಟ್ರಿ ಮಾಡುತ್ತಾರೆ.
ಇನ್ನು ಈ ವೇಳೆ ನಕಲಿ ಟಿಕೆಟ್ ಪಡೆಯುವ ಪ್ರಯಾಣಿಕರು ಇದರೊಂದಿಗೆ ಅಗತ್ಯ ಮಾಹಿತಿಯನ್ನೂ ಸಹ ಎಂಟ್ರಿ ಮಾಡಿ ವಂಚಕರ ಬಲೆಗೆ ಬೀಳುತ್ತಾರೆ. ಇದಾದ ನಂತರ ವಂಚಕರು ಅವರು ನೀಡಿದ ಮಾಹಿತಿಗಳನ್ನು ಬಳಕೆ ಮಾಡಿಕೊಂಡು ಹಣಕಾಸಿನ ವಂಚನೆ ಮಾಡಲು ಮುಂದಾಗುತ್ತಾರೆ. ಪ್ರಮುಖ ವಿಷಯ ಏನೆಂದರೆ ಈ ನಕಲಿ ಆಪ್ ಬಳಕೆ ಮಾಡಿಕೊಂಡು ಟಿಕೆಟ್ ಬುಕ್ ಮಾಡಿ ರೈಲು ಪ್ರಯಾಣ ಮಾಡಿದರೆ ಖಂಡಿತಾ ದಂಡ ಬೀಳಲಿದೆ.
ಈ ಕಾರಣಕ್ಕೆ ಆಂಡ್ರಾಯ್ಡ್ ಬಳಕೆದಾರರು ಪ್ಲೇ ಸ್ಟೋರ್, ಐಫೋನ್ ಆಪಲ್ ಆಪ್ ಸ್ಟೋರ್ ಹೊರತುಪಡಿಸಿ ಬೇರೆ ಯಾವುದೇ ಮೂಲಗಳನ್ನು ಆಶ್ರಯಿಸದಂತೆ ಬಳಕೆದಾರರಿಗೆ ಎಚ್ಚರಿಕೆ ನೀಡಲಾಗಿದೆ. ಇದರ ಹೊರತಾಗಿ ಗ್ರಾಹಕ ಸೇವೆ ಸಂಖ್ಯೆಗಾಗಿ ಗೂಗಲ್‌ನಲ್ಲಿ ಹುಡುಕಬೇಡಿ ಎಂದು ಸಹ ತಿಳಿಸಲಾಗಿದೆ. ಇದಕ್ಕಾಗಿ IRCTC ಅಧಿಕೃತ ವೆಬ್‌ಸೈಟ್ https://irctc.co.in ಗೆ ಭೇಟಿ ನೀಡಲು ತಿಳಿಸಲಾಗಿದ್ದು, ಅದರಲ್ಲಿರುವ ಕಸ್ಟಮರ್ ಕೇರ್ ಸಂಖ್ಯೆಗಳನ್ನು ಮಾತ್ರ ಸಂಪರ್ಕಿಸಲು ಕೋರಲಾಗಿದೆ.

ರೈಲು ಮಾತ್ರವಲ್ಲದೆ ಬಸ್ ಹಾಗೂ ಇನ್ನಿತರೆ ವಾಹನಗಳನ್ನು ಬುಕಿಂಗ್ ಮಾಡುವಾಗಲೂ ನೀವು ಎಚ್ಚರಿಕೆ ವಹಿಸಬೇಕಿದೆ. ಈ ಸಮಯದಲ್ಲಿ ಬುಕಿಂಗ್ ಮಾಡಿದರೆ ದೊಡ್ಡ ರಿಯಾಯಿತಿ ನೀಡಲಾಗುತ್ತದೆ. ಹಾಗೆ ಹೀಗೆ ಎಂದು ಉಲ್ಲೇಖ ಮಾಡಿರುವ ಮೆಸೆಜ್‌ಗಳು ಹರಿದಾಡುತ್ತಿರುತ್ತವೆ. ಇವು ಕೇವಲ ಮೋಸ ಮಾಡುವ ಉದ್ದೇಶವನ್ನು ಹೊಂದಿರುತ್ತವೆಯೇ ಹೊರತು ಬೇರೇನು ಅಲ್ಲ. ಯಾಕೆಂದರೆ ಯಾವುದೇ ಅಧಿಕೃತ ಆಪ್‌ಗಳು ಸಹ ನೀವು ಹುಬ್ಬೇರಿಸುವ ಮಟ್ಟಿಗೆ ಡಿಸ್ಕೌಂಟ್ ನೀಡುವುದಿಲ್ಲ ಎಂಬುದು ಗೊತ್ತಿರಲಿ.


Click it and Unblock the Notifications








