ಯಾವ ಸಮಯಕ್ಕೆ ರೈಲ್ವೆ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಸೂಕ್ತ!
ರೈಲು ಪ್ರಯಾಣ ಸುರಕ್ಷಿತ ಹಾಗೂ ಪ್ರಯಾಣಿಕರ ಸ್ನೇಹಿ ಆಗಿದೆ. ಈಗಂತೂ ರೈಲು ಪ್ರಯಾಣಕ್ಕಾಗಿ ಟಿಕೆಟ್ ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯ ಇಲ್ಲವೇ ಇಲ್ಲ. ಆನ್‌ಲೈನ್ ಮೂಲಕವೇ ಟಿಕೆಟ್ ಪಡೆಯಬಹುದಾಗಿದೆ. ಅಲ್ಲದೇ ಮುಂಗಡವಾಗಿ ಸೀಟು ಕಾಯ್ದಿರಿಸುವ ಆಯ್ಕೆಗಳು ಇವೆ. ಇದರೊಂದಿಗೆ ದಿಢೀರ್ ಪ್ರಯಾಣ ಮಾಡಬೇಕಾಗಿ ಬಂದರೆ, ಪ್ರಯಾಣಿಕರಿಗೆ ತತ್ಕಾಲ್ ಟಿಕೆಟ್ ಸೇವೆಯು ನೆರವಾಗುತ್ತದೆ.
ಹೌದು, ಪ್ರಯಾಣಿಕರು ಆನ್‌ಲೈನ್ ಮೂಲಕ ರೈಲು ಪ್ರಯಾಣಕ್ಕಾಗಿ ತತ್ಕಾಲ್ ಟಿಕೆಟ್ ಬುಕ್ ಮಾಡಬಹುದಾಗಿದೆ. ಆದರೆ ತತ್ಕಾಲ್ ಟಿಕೆಟ್ ಯಾವಾಗ ಬುಕ್ ಮಾಡುವುದು ಎನ್ನುವ ಬಗ್ಗೆ ಅನೇಕರಿಗೆ ಗೊಂದಲಗಳಿವೆ. ಹಾಗಾದರೆ ತತ್ಕಾಲ್ ಟಿಕೆಟ್ ಪಡೆಯುವ ಬುಕಿಂಗ್ ಸಮಯ ಯಾವುದು? ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ? ತತ್ಕಾಲ್ ಟಿಕೆಟ್ ಬುಕ್ ಮಾಡಲು ಯಾವ ಅಪ್ಲಿಕೇಶನ್‌ಗಳು ಸೂಕ್ತ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೈಲು ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ
ತತ್ಕಾಲ್ ಇ-ಟಿಕೆಟ್ ಅನ್ನು ಆಯ್ದ ರೈಲುಗಳಿಗೆ ಒಂದು ದಿನ ಮುಂಚಿತವಾಗಿ ರೈಲು ಮೂಲ ನಿಲ್ದಾಣದಿಂದ ಪ್ರಯಾಣದ ದಿನಾಂಕವನ್ನು ಹೊರತುಪಡಿಸಿ ಬುಕ್ ಮಾಡಬಹುದು. ಇದನ್ನು ಆರಂಭಿಕ ದಿನದಂದು ಮುಂಜಾನೆ 10:00 ಗಂಟೆಯಿಂದ AC ವರ್ಗಕ್ಕೆ (2A/3A/CC/EC/3E) ಮತ್ತು ಮುಂಜಾನೆ 11:00 ಗಂಟೆಗೆ ನಾನ್-AC ವರ್ಗಕ್ಕೆ (SL/FC/2S) ಬುಕ್ ಮಾಡಬಹುದು.
IRCTC ವೆಬ್‌ಸೈಟ್‌ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಲು ಈ ಕ್ರಮ ಅನುಸರಿಸಿ:
ಹಂತ 1 : ಅಧಿಕೃತ irctc.co.in ನ ವೆಬ್‌ಸೈಟ್ ಓಪೆನ್ ಮಾಡಿ. ಬಳಿಕ ನಿಮ್ಮ ಬಳಕೆದಾರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ಎಂಟ್ರಿ ಮಾಡುವ ಮೂಲಕ ಲಾಗ್ ಇನ್ ಆಗಿರಿ
ಹಂತ 2 : ಪ್ರಯಾಣಿಸಲು ಬಯಸುವ ರೈಲು ನಿಲ್ದಾಣಗಳನ್ನು ಎಂಟ್ರಿ ಮಾಡಿ. ನಂತರ ಪ್ರಯಾಣದ ಡೇಟ ಅನ್ನು ಆಯ್ಕೆ ಮಾಡಲು ಮುಂದುವರಿಯಿರಿ
ಹಂತ 3 : ಬಳಿಕ ಡ್ರಾಪ್‌ಡೌನ್ ಕಾಣಿಸಿಕೊಂಡಾಗ ಕೆಟಗರಿ ವಿಭಾಗದಲ್ಲಿ ತತ್ಕಾಲ್ ಆಯ್ಕೆ ಅನ್ನು ಕ್ಲಿಕ್ ಮಾಡಿರಿ.

ಹಂತ 4 : ನಂತರದಲ್ಲಿ ರೈಲು ಲಿಸ್ಟ್‌ಯೊಂದಿಗೆ ಒಂದು ಪೇಜ್ ಕಾಣಿಸಿಕೊಳ್ಳುತ್ತದೆ
ಹಂತ 5 : ಮೊದಲಿಗೆ ತತ್ಕಾಲ್ ಅನ್ನು ಆಯ್ಕೆ ಮಾಡದಿದ್ದರೆ, ರೇಡಿಯೋ ಬಟನ್ ಆಯ್ಕೆ ಕ್ಲಿಕ್ ಮಾಡುವ ಮೂಲಕ, ಅಲ್ಲಿ ಕೋಟಾವನ್ನು ತತ್ಕಾಲ್ ಎಂದು ಸೆಲೆಕ್ಟ್ ಮಾಡಿ
ಹಂತ 6 : ಪ್ರಯಾಣಿಸಲು ಇಷ್ಟಪಡುವ ರೈಲನ್ನು ಸರ್ಚ್ ಮಾಡಿ ಮತ್ತು ರೈಲು ಪಟ್ಟಿಯಲ್ಲಿರುವ ಸೀಟ್ ವಿಭಾಗದ ಮೇಲೆ ಕ್ಲಿಕ್ ಮಾಡಿ. ನಂತರದಲ್ಲಿ ಲಭ್ಯತೆ ಮಾಹಿತಿಗಳನ್ನು ತೋರಿಸುತ್ತದೆ.
ಹಂತ 7 : ಬುಕ್ ನವ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ. ಸೀಟ್ ಲಭ್ಯತೆ ಆಯ್ಕೆಯಲ್ಲಿ ಈ ಲಿಂಕ್ ಅನ್ನು ಕಾಣಬಹುದು.
ಹಂತ 8 : ಅಕಸ್ಮಾತ್ ನೀವು ಪ್ರಸ್ತುತ ರೈಲಿನ ಆಯ್ಕೆಯಿಂದ ಸರಿ ಎನಿಸದಿದ್ದಾಗ ಬೇರೆ ಯಾವುದೇ ರೈಲನ್ನು ಆಯ್ಕೆ ಮಾಡಲು ಬಯಸಿದರೆ, ಇನ್ನೊಂದು ರೈಲು ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
ಹಂತ 9 : ಈಗ, ಟಿಕೆಟ್ ಕಾಯ್ದಿರಿಸುವಿಕೆ ಪುಟ ಕಾಣಿಸಿದಾಗ, ಟ್ರೈನ್, ಟ್ರೈನ್ ನಿಲ್ದಾಣಗಳ ಹೆಸರುಗಳು, ಪ್ರಯಾಣದ ಡೇಟ, ಕೆಟಗರಿ, ಕೋಟಾ, ಹತ್ತುವ ನಿಲ್ದಾಣ ಇತ್ಯಾದಿಗಳನ್ನು ಡಿಸ್‌ಪ್ಲೇ ಮಾಡಲಾಗಿದೆಯೆ ಎಂದು ಖಾತ್ರಿ ಮಾಡಿಕೊಳ್ಳಿ.
ಹಂತ 10 : ಪ್ರಯಾಣಿಕರ ಹೆಸರು, ವಯಸ್ಸು, ಲಿಂಗ ಮತ್ತು ವಯಸ್ಸು ಮಾಹಿತಿ ಅನ್ನು ಸರಿಯಾಗಿ ಎಂಟ್ರಿ ಮಾಡಿರಿ.
ಹಂತ 11 : ಚಾರ್ಟ್ ಆದ ನಂತರ ಆಟೋಮ್ಯಾಟಿಕ್ ಕ್ಲಾಸ್ ಜನರೇಟ್ ಗಾಗಿ 'Consider for Auto Upgradation' ಆಯ್ಕೆ ಅನ್ನು ಕ್ಲಿಕ್ ಮಾಡಿರಿ.
ಹಂತ 12 : ಸ್ಕ್ರೀನ್ ಮೇಲೆ ಕಾಣಿಸಿರುವ ಕ್ಯಾಪ್ಚಾವನ್ನು ಸರಿಯಾಗಿ ಎಂಟ್ರಿ ಮಾಡಿರಿ.
ಹಂತ 13 : ಬುಕಿಂಗ್ ಮತ್ತು ಕ್ಯಾನ್ಸಲ್ ಎಸ್‌ಎಮ್‌ಎಸ್ ಪಡೆಯಲು ಪ್ರಯಾಣಿಕರ ಮೊಬೈಲ್ ಸಂಖ್ಯೆಯನ್ನು ಎಂಟ್ರಿ ಮಾಡಬೇಕು.
ಹಂತ 14 : ಆ ಬಳಿಕ, ಮುಂದಿನ ಬಟನ್ ಮೇಲೆ ಕ್ಲಿಕ್ ಮಾಡಿ. ಪೇಮೆಂಟ್ ಮಾಡುವ ಪುಟ ಕಾಣಿಸುತ್ತದೆ.
ಹಂತ 15 : ನಿಮ್ಮ ಅನುಕೂಲದ ಪೇಮೆಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ ಮತ್ತು ಹಣ ಪಾವತಿ ಮಾಡಿರಿ.
ಹಂತ 16 : ಪೇಮೆಂಟ್ ಯಶಸ್ವಿಯಾದರೆ, ಟಿಕೆಟ್ ಕನ್ಫರ್ಮ್ ಆಗಿರುವ ಪೂರ್ಣ ಮಾಹಿತಿ ಕಾಣಿಸಿಕೊಳ್ಳುತ್ತದೆ.
ಕನ್ಫರ್ಮ್ ಟಿಕೆಟ್ (ConfirmTkt) : ಆಪ್ ಕನ್ಫರ್ಮ್ ಟಿಕೆಟ್ ರೈಲ್ವೆಯ ಇಲಾಖೆಯ ಅಧಿಕೃತ IRCTC ಯ ಪಾಲುದಾರ ರೈಲು ಅಪ್ಲಿಕೇಶನ್ ಆಗಿದೆ. ಈ ಆಪ್ ಸಹ ಎಲ್ಲಾ ಅಗತ್ಯ ಫೀಚರ್ಸ್/ ಸೇವೆಗಳ ಆಯ್ಕೆ ಹೊಂದಿದೆ. ಈ ಆಪ್‌ನಲ್ಲಿ ಸುಲಭವಾಗಿ IRCTC ಟಿಕೆಟ್ ಹಾಗೂ ತತ್ಕಾಲ್ ಟಿಕೆಟ್‌ಗಳ ಸುಲಭವಾಗಿ ಸರ್ಚ್ ಮಾಡಬಹುದು. ಚಲಿಸುವ ಟ್ರೈನಿನ ಲೈವ್ ಸ್ಟೇಟಸ್ ಚೆಕ್ ಮಾಡಬಹುದಾಗಿದೆ. ಹಾಗೆಯೇ ರೈಲು ವೇಳಾಪಟ್ಟಿಯನ್ನು ತೋರಿಸುವ ಆಯ್ಕೆಯನ್ನು ಇದು ಒಳಗೊಂಡಿದೆ.


Click it and Unblock the Notifications








