ರಕ್ಷಾ ಬಂಧನಕ್ಕೆ ಸಹೋದರಿಯರಿಗೆ ಈ ಗಿಫ್ಟ್‌ ನೀಡಿ!

|

ಭಾರತದಲ್ಲಿ ಆಚರಿಸುವ ಪ್ರಸಿದ್ಧ ಹಬ್ಬಗಳಲ್ಲಿ ರಕ್ಷಾ ಬಂಧನವೂ ಒಂದು. ಈ ರಕ್ಷಾಬಂಧನ ದಿನದಂದು ಅಣ್ಣ ತಮ್ಮಂದಿರಿಗೆ ರಾಖಿ ಕಟ್ಟಬೇಕು ಎನ್ನುವುದು ಸಹೋದರಿಯರು ಸಿದ್ಧರಾಗಿರುತ್ತಾರೆ. ಇನ್ನು ರಾಖಿ ಕಟ್ಟಿರುವ ಸಹೋದರಿಗೆ ಏನು ಗಿಫ್ಟ್ ನೀಡುವುದು ಎಂಬ ಬಗ್ಗೆ ಸಹೋದರರು ಯೋಚಿಸುತ್ತಿರಬಹುದು. ಹೀಗೆ ನಿಮ್ಮ ಸಹೋದರಿಯರಿಗೆ ಬಜೆಟ್‌ ಬೆಲೆಯಲ್ಲಿ ಹಲವು ಉಪಯುಕ್ತ ಗ್ಯಾಡ್ಜೆಟ್‌ ಗಿಫ್ಟ್ ನೀಡಬಹುದು. ಮುಖ್ಯವಾಗಿ ಮ್ಯೂಸಿಕ್ ಕೇಳಲು ಒಂದು ಅತ್ಯುತ್ತಮ ವಾಯರ್‌ಲೆಸ್‌ ಇಯರ್‌ಬಡ್ಸ್‌ ಬೆಸ್ಟ್‌ ಐಡಿಯಾ ಆಗಿದೆ.

ರಕ್ಷಾ ಬಂಧನ

ಹೌದು, ಒಂದು ವೇಳೆ ನೀವು ನಿಮ್ಮ ರಕ್ಷಾಬಂಧನದ ಸಂದರ್ಬದಲ್ಲಿ ನಿಮ್ಮ ತಂಗಿ ಪ್ರತಿದಿನ ಬಳಸುವ ಯಾವುದೋ ತಂತ್ರಜ್ಞಾನ ಸಂಬಂಧಿತ ವಸ್ತುವನ್ನು ಕೊಡಬೇಕು ಎಂದು ಬಯಸುತ್ತಿದ್ದೀರಾದರೆ. ವಾಯರ್‌ಲೆಸ್ ಇಯರ್‌ಬಡ್ಸ್‌ ನೀಡಬಹುದು. ಮ್ಯೂಸಿಕ್ ಕೇಳಲು ಸದಾಕಾಲ ಜೊತೆಗೆ ಇರುವ ಈ ಡಿವೈಸ್‌ ಇದ್ದೆ ಇರುತ್ತದೆ ಅವರಿಗೆ ಉಪಯುಕ್ತವು ಆಗುವುದು. ಹಾಗಾದ್ರೆ ಅತ್ಯುತ್ತಮ ವಾಯರ್‌ಲೆಸ್‌ ಹೆಡ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌

ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್‌ ಒಟ್ಟು 252 mAh ಬ್ಯಾಟರಿ ಬಾಳಿಕೆಯನ್ನು ಹೊಂದಿದ್ದು, ಉತ್ತಮ ಬ್ಯಾಕ್‌ಅಪ್ ನೀಡಲಿದೆ. ಹಾಗೆಯೇ ಇಯರ್‌ಬಡ್ಸ್‌ಗಳು 58mAh ಬ್ಯಾಟರಿ ಸಾಮರ್ಥ್ಯ ಒಳಗೊಂಡಿವೆ. ಬ್ಲೂಟೂತ್ V5.0 ಸಾಮರ್ಥ್ಯ, 2 ಮೈಕ್, ಸೌಲಭ್ಯಗಳನ್ನು ಒಳಗೊಂಡಿದೆ. ಇನ್ನು ಈ ಡಿವೈಸ್ ತೂಕವು ಕೇವಲ 6 ಗ್ರಾಂ ಆಗಿದೆ.

ಜಬ್ರಾ ಎಲೈಟ್ ಆಕ್ಟಿವ್ 75T

ಜಬ್ರಾ ಎಲೈಟ್ ಆಕ್ಟಿವ್ 75T

ಜಬ್ರಾ ಎಲೈಟ್ ಆಕ್ಟಿವ್ 75T ಇಯರ್‌ಬಡ್ಸ್‌ ಇದರ ಹಿಂದಿನ ಆವೃತ್ತಿಯಾದ ಎಲೈಟ್ ಆಕ್ಟಿವ್ 65t ಗಿಂತ 22% ಚಿಕ್ಕದಾಗಿದೆ. ಇವುಗಳ ಆಪ್ಟಿಮೈಸ್ಡ್‌ ಗ್ರಿಪ್‌ಗಾಗಿ ಉತ್ತಮ ಕೋಟಿಂಗ್‌ ಲೇಯರ್‌ ಅನ್ನು ಇವುಗಳಲ್ಲಿ ಅಳವಡಿಸಲಾಗಿದೆ. ಇದಲ್ಲದೆ ಈ ಇಯರ್‌ ಬಡ್ಸ್‌ಗಳು ಧೂಳು ಮತ್ತು ಬೆವರು ನಿರೋಧಕವಾಗಿವೆ. ಅಲ್ಲದೆ 28 ಗಂಟೆಗಳವರೆಗೆ ಬೆಂಬಲಿಸುವ ಬ್ಯಾಟರಿ ಅವಧಿಯನ್ನು ಹೊಂದಿದೆ. ಇನ್ನು ಒಂದೇ ಚಾರ್ಜ್‌ನಲ್ಲಿ ಈ ಇಯರ್‌ಬಡ್ಸ್‌ಗಳು 7.5 ಗಂಟೆಗಳ ನಿರಂತರ ಆಲಿಸುವಿಕೆಯನ್ನ ಹೊಂದಿದೆ. 14,999ರೂ. ಬೆಲೆ ಹೊಂದಿದೆ.

ಆಪಲ್‌ ಏರ್‌ಪಾಡ್ಸ್‌

ಆಪಲ್‌ ಏರ್‌ಪಾಡ್ಸ್‌

ಆಪಲ್ ಆಪಲ್‌ ಏರ್‌ಪಾಡ್ಸ್‌ ಈಗಾಗಲೇ ಹೆಚ್ಚು ಆಕರ್ಷಕ ಆಗಿವೆ. ಇಯರ್‌ಫೋನ್‌ಗಳನ್ನು ಆಪ್ಟಿಕಲ್ ಸೆನ್ಸರ್‌ಗಳು ಮತ್ತು ಆಕ್ಸಿಲರೊಮೀಟರ್ ಹೊಂದಿದೆ. ನೀವು ಎರಡೂ ಇಯರ್‌ಫೋನ್‌ಗಳನ್ನು ತೆಗೆದುಹಾಕಿದಾಗ ಇಯರ್‌ಫೋನ್‌ಗಳು ಸ್ವಯಂಚಾಲಿತವಾಗಿ ಸಂಗೀತವನ್ನು ವಿರಾಮಗೊಳಿಸುತ್ತವೆ. ಇಯರ್‌ಫೋನ್‌ಗಳು ಒಂದೇ ಚಾರ್ಜ್‌ನಲ್ಲಿ ಸುಮಾರು 5 ಗಂಟೆಗಳಿರುತ್ತವೆ ಮತ್ತು ಒಳಗೊಂಡಿರುವ ಚಾರ್ಜಿಂಗ್ ಪ್ರಕರಣವು 3 ರಿಂದ ನಾಲ್ಕು ಪೂರ್ಣ ಶುಲ್ಕಗಳನ್ನು ಒದಗಿಸುತ್ತದೆ. ಏರ್‌ಪಾಡ್‌ಗಳನ್ನು ಆನ್‌ಲೈನ್‌ನಲ್ಲಿ ಸುಮಾರು 13,500 ರೂ.ಗೆ ಖರೀದಿಸಬಹುದು.

ಬೋಟ್ ಇಯರ್‌ಪೋಡ್ 311v2

ಬೋಟ್ ಇಯರ್‌ಪೋಡ್ 311v2

ಆಡಿಯೋ ಡಿವೈಸ್‌ಗಳಲ್ಲಿ ಹೆಸರುವಾಸಿಯಾಗಿರುವ ಬೋಟ್ ಕಂಪನಿಯ ಈ ಇಯರ್‌ಬಡ್ಸ್‌(311v2) ಬ್ಲೂಟೂತ್ V5.0 ಸಾಮರ್ಥ್ಯವನ್ನು ಪಡೆದಿದ್ದು, ಆಕ್ಟಿವ್ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಹೊಂದಿದೆ. ನೀರಿನ ಮತ್ತು ಬೆವರಿನ ಪ್ರತಿರೋಧ ಸೌಲಭ್ಯ ಹೊಂದಿದ್ದು, ಜಾಗಿಂಗ್ ಮತ್ತು ಫಿಟ್ನೆಸ್‌ ಚಟುವಟಿಕೆಗಳನ್ನು ಮಾಡುವಾಗ ಕಂಫರ್ಟ್‌ ಅನಿಸಲಿದೆ. ಹೆಚ್‌ಡಿ ಆಡಿಯೊ ಕ್ವಾಲಿಟಿ ಪಡೆದಿದ್ದು, 500mAh ಬ್ಯಾಟರಿ ಪಡೆದಿದೆ. ಒಮ್ಮೆ ಪೂರ್ಣ ಚಾರ್ಜ್ ಮಾಡಿದರೇ ಸುಮಾರು 3.5ಗಂಟೆಗಳ ಬ್ಯಾಕ್‌ಅಪ್ ನೀಡುತ್ತದೆ.

ಜೆಬಿಎಲ್ ಟ್ಯೂನ್ 120TWS

ಜೆಬಿಎಲ್ ಟ್ಯೂನ್ 120TWS

ಜೆಬಿಎಲ್‌ ಸಂಸ್ಥೆಯ ಟ್ಯೂನ್ 120TWS ಇಯರ್‌ಬಡ್ಸ್ ಬ್ಲೂಟೂತ್ V4.2 ಸಾಮರ್ಥ್ಯವನ್ನು ಹೊಂದಿದ್ದು, 73ಗ್ರಾಂ ತೂಕವನ್ನು ಪಡೆದಿದೆ. 85mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಇದ್ದು, ಕೇವಲ 15 ನಿಮಿಷದ ಚಾರ್ಜ್ ಸುಮಾರು 1 ಗಂಟೆ ಬಾಳಿಕೆ ನೀಡಲಿದೆ. ಬ್ಲ್ಯಾಕ್, ಬ್ಲೂ, ಗ್ರೀನ್, ವೈಟ್, ಪಿಂಕ್, ಯೆಲ್ಲೊ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

Blaupunkt BTW01 (ಬ್ಲೂಪಂಕ್ಟ್)

Blaupunkt BTW01 (ಬ್ಲೂಪಂಕ್ಟ್)

ಬ್ಲೂಪಂಕ್ಟ್ ಇಯರ್‌ಬಡ್ ಡಿವೈಸ್ 590mAh ಬ್ಯಾಟರಿ ಲೈಫ್ ಹೊಂದಿದ್ದು, ಸುಮಾರು 6 ಗಂಟೆಗಳ ಮ್ಯೂಸಿಕ್ ಪ್ಲೇಬ್ಯಾಕ್ ಸೌಲಭ್ಯ ನೀಡಲಿದೆ. ಹೆಚ್‌ಡಿ ಆಡಿಯೋ ಬೆಂಬಲ ಪಡೆದಿರುವ ಈ ಡಿವೈಸ್ ಗೂಗಲ್ ಅಸಿಸ್ಟಂಟ್ ಹಾಗೂ ಆಪಲ್ ಸಿರಿ ವಾಯಿಸ್‌ ಅಸಿಸ್ಟಂಟ್ ಸೌಲಭ್ಯಗಳನ್ನು ಒಳಗೊಂಡಿದೆ.

ಸ್ಕಲ್‌ಕ್ಯಾಂಡಿ ಪುಶ್ ಇಯರ್‌ಬಡ್ಸ್‌

ಸ್ಕಲ್‌ಕ್ಯಾಂಡಿ ಪುಶ್ ಇಯರ್‌ಬಡ್ಸ್‌

ಈ ಇಯರ್‌ಬಡ್ಸ್‌ನ ಮುಖ್ಯ ಆಕರ್ಷಣೆ ಎಂದರೇ ಬ್ಯಾಟರಿ ಲೈಫ್ ಆಗಿದ್ದು, ಒಟ್ಟು 12 ಗಂಟೆಗಳ ಬ್ಯಾಕ್‌ಅಪ್ ಪಡೆದಿದೆ. ಫಿಟ್‌ಫಿನ್ ಇಯರ್ ಜೆಲ್ ಡಿಸೈನ್ ಹೊಂದಿರುವ ಈ ಡಿವೈಸ್ ಕಿವಿಗಳಲ್ಲಿ ಕಂಫರ್ಟ್ ಆಗಿ ಕುಳಿತುಕೊಳ್ಳುತ್ತವೆ. ಡಿವೈಸ್‌ನಲ್ಲಿ ಬಟನ್‌ಗಳ ರಚನೆಯಿದ್ದು, ಅವುಗಳು ವಾಯಿಸ್‌ ಅಸಿಸ್ಟಂಟ್ ಮತ್ತು ಸೌಂಡ್ ನಿಯಂತ್ರಿಸಲು ಅನುಕೂಲ ಒದಗಿಸುತ್ತವೆ.

Best Mobiles in India

English summary
Raksha Bandhan gift ideas 2020: These gadgets you can give to your sister.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X