Ram Mandir: ರಾಮ ಮಂದಿರದಲ್ಲಿ ಯಾವೆಲ್ಲಾ ತಂತ್ರಜ್ಞಾನ ಬಳಕೆ ಮಾಡಲಾಗಿದೆ ಗೊತ್ತಾ!? ಇದರಿಂದ ಏನೆಲ್ಲಾ ಅನುಕೂಲ?
ಅಯೋಧ್ಯೆ ರಾಮ ಮಂದಿರ (Ayodhya Ram Mandir) ಈಗ ಜಾಗತಿಕವಾಗಿ ಸದ್ದು ಮಾಡುತ್ತಿರುವ ವಿಷಯವಾಗಿದೆ. ದೇಶದ ಸಾಕಷ್ಟು ಭಕ್ತರು ಈಗಾಗಲೇ ರಾಮಮಂದಿರದ ಕಡೆ ಹೆಜ್ಜೆಹಾಕಿದ್ದಾರೆ. ಈ ವಿಶೇಷ ರಾಮ ಮಂದಿರವು 235 ಅಡಿ ಅಗಲ 161 ಅಡಿ ಎತ್ತರ ಮತ್ತು 360 ಅಡಿ ಉದ್ದವನ್ನು ಹೊಂದಿದ್ದು, ಭಾರತೀಯರಿಗೆ ಇನ್ಮುಂದೆ ಇದು ವಿಶೇಷ ಹಾಗೂ ಭವ್ಯ ಧಾರ್ಮಿಕ ಸ್ಥಳವಾಗಿ ಹೆಗ್ಗುರುತಾಗಲಿದೆ.
ಹೌದು, ಅಯೋಧ್ಯೆ ರಾಮ ಮಂದಿರ ಕೇವಲ ಧಾರ್ಮಿಕ ಕ್ಷೇತ್ರವಾಗಿ ಮಾತ್ರ ಗುರುತಿಸಿಕೊಳ್ಳದೆ ವಿವಿಧ ರೀತಿಯಲ್ಲಿ ಇದು ತನ್ನದೇ ಆದ ಭವ್ಯ ಇಸಿಹಾಸವನ್ನು ಸಾರಲು ಸಜ್ಜಾಗಿದೆ. ಅಂದರೆ ಮಂದಿರ ನಿರ್ಮಾಣದ ಕಾರ್ಯದಲ್ಲಿ ಭಾರತದ ಸಾಂಪ್ರದಾಯಿಕ ಶೈಲಿಯ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಹಾಗಿದ್ರೆ, ಇಷ್ಟೊಂದು ಬೃಹದಾಕಾರವಾಗಿರುವ ರಾಮಂದಿರದಲ್ಲಿ ಏನೆಲ್ಲಾ ಟೆಕ್ನಾಲಜಿ ಬಳಕೆ ಮಾಡಮಾಡಲಾಗಿದೆ? ಅದರಲ್ಲೂ ಭದ್ರತಾ ದೃಷ್ಟಿಯಲ್ಲಿ ಯಾವೆಲ್ಲಾ ತಂತ್ರಜ್ಞಾನ ಹೇಗೆ ಕೆಲಸ ಮಾಡಲಿವೆ ? ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಯೋಧ್ಯೆ ರಾಮ ಮಂದಿರ: ಅಯೋಧ್ಯೆ ನಗರದಲ್ಲಿ ಇಂದು (ಜನವರಿ 22) ರಾಮಮಂದಿರ ಉದ್ಘಾಟನೆಯಾಗುತ್ತಿದೆ. ಪ್ರಾಣ ಪ್ರತಿಷ್ಠಾ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಹರ್ಷರಾಗಿದ್ದಾರೆ. ಈ ಬೆಳವಣಿಗೆ ನಡುವೆ ಭಕ್ತಿರಿಗೆ ಹಾಗೂ ದೇವಾಲಯಕ್ಕೆ ಹೆಚ್ಚಿನ ಭದ್ರತೆ ನೀಡಲು ಹಾಗೂ ಭಕ್ತರ ಸರಳ ದೇವರ ದರ್ಶನಕ್ಕೆ ಅನುವು ಮಾಡಿಕೊಡಿವಂತೆ ವಿವಿಧ ರೀತಿಯ ಟೆಕ್ನಾಲಜಿ ಬಳಕೆ ಮಾಡಿಕೊಳ್ಳಲಾಗಿದೆ. ಅಂದರೆ ಎಐ ಕ್ಯಾಮ್‌ಗಳು, ಸ್ಕ್ಯಾನರ್‌ಗಳು, ಡ್ರೋನ್‌ಗಳು, HAZMAT ವಾಹನಗಳಂತಹ ಹೈಟೆಕ್ ಗ್ಯಾಜೆಟ್‌ಗಳು ಇಲ್ಲಿ ವಿವಿಧ ರೀತಿಯಲ್ಲಿ ರಾಮನ ಸೇವೆ ಮಾಡಲಿವೆ.
ಇಂದು ಪ್ರಾಣ ಪ್ರತಿಷ್ಠಾ ಸಮಾರಂಭ ನಡೆಯುತ್ತಿದ್ದು, ಸುಧಾರಿತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವೇಳೆ ಎಐ ಆಧಾರಿತ ಸಿಸಿಟಿವಿ ಕ್ಯಾಮೆರಾಗಳು, ಎಕ್ಸ್-ರೇ ಲಗೇಜ್ ಸ್ಕ್ಯಾನರ್‌ಗಳು ಮತ್ತು ಅಂಡರ್ ವೆಹಿಕಲ್ ಸ್ಕ್ಯಾನಿಂಗ್ ಸಿಸ್ಟಮ್‌ಗಳಂತಹ ಹೈಟೆಕ್ ಗ್ಯಾಜೆಟ್‌ಗಳನ್ನು ಭದ್ರತಾ ಸಿಬ್ಬಂದಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಡ್ರೋನ್ ವಿರೋಧಿ ತಂತ್ರಜ್ಞಾನ ಮತ್ತು ಎಕ್ಸ್-ರೇ ಬ್ಯಾಗೇಜ್ ಸ್ಕ್ಯಾನರ್‌ಗಳು ಸೇರಿದಂತೆ 11 ಸುಧಾರಿತ ಭದ್ರತಾ ಗ್ಯಾಜೆಟ್‌ಗಳು ಸಮಗ್ರ ಭದ್ರತಾ ವ್ಯವಸ್ಥೆಗಳಿಂದ ಭಕ್ತರು ಭಯಮುಕ್ತರಾಗಿ ಇಲ್ಲಿಗೆ ಭೇಟಿ ನೀಡಬಹುದಾಗಿದೆ.

ಇನ್ನು ಸ್ಥಳದಲ್ಲಿ ಅಳವಡಿಸಲಾಗಿರುವ 10,000 ಸಿಸಿಟಿವಿ ಕ್ಯಾಮೆರಾಗಳು ಭದ್ರತೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿವೆ. ಈ ಮೂಲಕ ಎಲ್ಲಾ ರೀತಿಯ ಎಲ್ಲರ ಚಲನವಲಗಳನ್ನು ಸೆರೆಹಿಡಿಯಲಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ವರ್ಧಿತ ಕಣ್ಗಾವಲುಗಾಗಿ ಎಐ ಆಧಾರಿತ ತಂತ್ರಜ್ಞಾನವನ್ನು ಈ ವೇಳೆ ಬಳಕೆ ಮಾಡಿಕೊಳ್ಳಲಾಗುತ್ತಿರುವುದು ವಿಶೇಷವೇ ಸರಿ. ಇದರೊಂದಿಗೆ ಜನಸಂದಣಿಯನ್ನು ಕಂಟ್ರೋಲ್ ಮಾಡಲು ಮತ್ತು ಜನರನ್ನು ಯಾವೆಲ್ಲಾ ಕಡೆ ಸಂಚರಿಸಲು ಸುಲಭ ಎಂಬ ಮಾರ್ಗ ತೋರಿಸಲು ಡ್ರೋನ್‌ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
ಇನ್ನು ಎಕ್ಸ್-ರೇ ಲಗೇಜ್ ಸ್ಕ್ಯಾನರ್‌ಗಳು ಮತ್ತು ಅಂಡರ್ ವೆಹಿಕಲ್ ಸ್ಕ್ಯಾನಿಂಗ್ ಸಿಸ್ಟಮ್ (UVSS) ನಂತಹ 11 ಸುಧಾರಿತ ಭದ್ರತಾ ಗ್ಯಾಜೆಟ್‌ಗಳನ್ನು ಇಲ್ಲಿ ಬಳಕೆ ಮಾಡಿಕೊಳ್ಳಲಾಗಿದ್ದು, ಈ ಅತ್ಯಾಧುನಿಕ ಡಿವೈಸ್‌ಗಳು ನಿಷೇಧಿತ ವಸ್ತುಗಳನ್ನು ಮತ್ತು ಯಾರಾದರೂ ಮರೆ ಮಾಚಿಕೊಂಡು ಬಂದಿರುವ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವ ಸಾಮರ್ಥ್ಯವನ್ನು ಪಡೆದಿವೆ. ವೆಹಾಂಟ್ ಟೆಕ್ನಾಲಜೀಸ್ ರಾಮ ಮಂದಿರಕ್ಕಾಗಿ ಈ ಹೈಟೆಕ್ ಯಂತ್ರಗಳನ್ನು ನೀಡಿದೆ.
ರಾಮಮಂದಿರದ ಕುರಿತು ಒಂದಿಷ್ಟು ಮಾಹಿತಿ: ಇಲ್ಲಿ ಬ್ಯಾಂಕ್/ಎಟಿಎಂ ಸೇವೆ ಲಭ್ಯ ಇದೆ. ಜೊತೆಗೆ ಅಗತ್ಯ ಸಾರ್ವಜನಿಕ ಉಪಯುಕ್ತತೆಗಳು (ಶೌಚಾಲಯಗಳು, ಸ್ನಾನಗೃಹ, ವಾಶ್‌ರೂಮ್ ಮತ್ತು ಇನ್ನಷ್ಟು) ಅಲ್ಲದೆ, ತುರ್ತು ವೈದ್ಯಕೀಯ ಸೌಲಭ್ಯಗಳು, ಹಿರಿಯ ನಾಗರಿಕರಿಗಾಗಿ ಲಿಫ್ಟ್‌ಗಳು, ಸೌರ ಶಕ್ತಿ ಫಲಕಗಳು ಮತ್ತು ಪವರ್ ಬ್ಯಾಕ್-ಅಪ್‌ಗಳು, ಯಾತ್ರಿಕರ ಸೌಲಭ್ಯ ಕೇಂದ್ರ, ಪಿಲ್ಗ್ರಿಮ್/ವಿಸಿಟರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಇದ್ದು, ಈ ಮೂಲಕ ಯಾಬೊಬ್ಬ ಭಕ್ತರಿಗೂ ಸಹ ಕಿಂಚಿತ್ತೂ ಸಮಸ್ಯೆ ಆಗದಂತೆ ವಿವಿಧ ಸೌಲಭ್ಯ ಕಲ್ಪಿಸಿಕೊಡಲಾಗಿದೆ.

ಇಷ್ಟೇ ಅಲ್ಲದೆ ದೇವಾಲಯವು ಒಳಗೆ ಮತ್ತು ಹೊರಗೆ ಪೆರ್ಕೋಟಾದಿಂದ ಸುರಕ್ಷಿತವಾಗಿರಲಿದ್ದು, ರಾಮಮಂದಿರದ ವಾಸ್ತುಶಿಲ್ಪದ ನಿರ್ಮಾನ ಕಾರ್ಯ ಮುಂದಿನ ಐವತ್ತು ವರ್ಷಗಳವರೆಗೆ ನಡೆಯಲಿದೆ. ಜೊತೆಗೆ ಬಿರುಗಾಳಿ ಮತ್ತು ಚಂಡಮಾರುತದಿಂದ ದೇವಾಲಯ ಮತ್ತು ಅದರ ಆವರಣವನ್ನು ರಕ್ಷಿಸಲು ವಿಶಿಷ್ಟವಾದ ಮೂರು ಹಂತದ ಮರ ನೆಡುವಿಕೆ ಕಾರ್ಯ ಸಹ ನಡೆಯುತ್ತಿದೆ. ಅಲ್ಲದೆ ಜ್ಯೋತಿಷ್ಯ ನಕ್ಷತ್ರಪುಂಜಗಳ ಆಧಾರದ ಮೇಲೆ ಹೂವಿನ ಉದ್ಯಾನ ಮತ್ತು ತೋಟ ಇಲ್ಲಿರಲಿದ್ದು, ಹುತಾತ್ಮರಿಗೆ ಗೌರವ ಸಲ್ಲಿಸಲು ಬೃಹತ್ ಸ್ಮಾರಕಗಳನ್ನೂ ಇಲ್ಲಿ ಕಾಣಬಹುದಾಗಿದೆ.


Click it and Unblock the Notifications








