'ರಶ್ಮಿ' ಎಂಬ ಭಾರತೀಯ ರೋಬೋ ನಿರ್ಮಾಣ..'ಸೋಫಿಯಾ'ಗೆ ಸೆಡ್ಡು!!
ವಿಶ್ವದ ಮೊದಲ ಮಾನವನಾಕೃತಿಯ ಸೆಲೆಬ್ರಿಟಿ ರೋಬೋ 'ಸೋಫಿಯಾ' ನೋಡಿ ಆಶ್ಚರ್ಯಪಟ್ಟವರಿಗೆ ಹೊಸ ಭಾರತೀಯ ರೋಬೋವೊಂದು ಆಶ್ಚರ್ಯ ನೀಡಲು ಬಂದಿದೆ. ರಾಂಚಿ ಮೂಲದ ರಂಜಿತ್ ಶ್ರೀವಾಸ್ತವ ಎಂಬ ಸಾಫ್ಟ್‌ವೇರ್ ಇಂಜಿನಿಯರರ್ ಓರ್ವರು ಮಾನವನಂತೆ ಕಾಣುವ ಹಿಂದಿ ಮಾತನಾಡುವ ನೂತನ ರೋಬೋ ಒಂದನ್ನು ಅಭಿವೃದ್ದಿ ಮಾಡಿ ಗಮನಸೆಳೆದಿದ್ದಾರೆ.
ಹೌದು, ಹಾಂಕಾಗ್ ಮೂಲದ ಹ್ಯಾನ್ಸನ್ ರೋಬೀಟಿಕ್ಸ್ ಎಂಬ ಕಂಪೆನಿಯು ಅಭಿವೃದ್ದಿಪಡಿಸಿದ್ದ 'ಸೋಫಿಯಾ'ಗೆ ಸೆಡ್ಡು ಹೊಡೆದು 'ರಶ್ಮಿ' ಎಂಬ ಭಾರತೀಯ ರೋಬೋವನ್ನು 38 ವರ್ಷದ ಸಾಫ್ಟ್‌ವೇರ್ ಇಂಜಿನಿಯರರ್ ಆಗಿರುವ ರಂಜಿತ್ ಶ್ರೀವಾಸ್ತವ ಅವರುಅಭಿವೃದ್ದಿಪಡಿಸಿದ್ದಾರೆ. ಇದು ಹಿಂದಿ ಮಾತನಾಡುವ ವಿಶ್ವದ ಮೊದಲ ರೋಬೋ ಎಂದು ರಂಜಿತ್ ಅವರು ತಿಳಿಸಿದ್ದಾರೆ.

'ಸೋಫಿಯಾ' ಕೇವಲ ಇಂಗ್ಲೀಷನ್‌ಗಲ್ಲಿ ಮಾತನಾಡಿದರೆ, ಭಾರತೀಯ 'ರಶ್ಮಿ' ರೋಬೋ ಹಿಂದಿ ಮಾತ್ರವಲ್ಲದೆ, ಇಂಗ್ಲೀಷ್, ಮರಾಠಿ, ಭೋಜ್ಪುರಿ ಭಾಷೆಗಳನ್ನು ಮಾತನಾಡುತ್ತದೆ. ಭಾಷಾ ವಿವರಣೆ ಮತ್ತು ಕೃತಕ ಬುದ್ದಿಮತ್ತೆ ಸಾಮರ್ಥ್ಯವನ್ನು ಹೊಂದಿರುವ ಈ ರೋಬೋ ಲಿಪ್ ಸಿಂಕಿಂಗ್ ಮಾಡುವ ಸಾಮರ್ಥ್ಯವನ್ನು ಸಹ ಹೊಂದಿರುವುದು ಈ ರೋಬೋವಿನ ವಿಶೇಷತೆಯಾಗಿದೆ.
ತಂತ್ರಜ್ಞಾನದ ಅಳವಡಿಕೆಯಲ್ಲಿಯೂ ಮುಂದಿರುವ ಭಾರತೀಯ 'ರಶ್ಮಿ' ರೋಬೋ ಅತ್ಯುತ್ತಮ ತಂತ್ರಜ್ಞಾನದ ಮೂಲಕ ಜನರನ್ನು ಸೆಲೆಯಲಿದೆ ಎಂದು ರಂಜಿತ್ ಅವರು ತಿಳಿಸಿದ್ದಾರೆ. ಧ್ವನಿ ಮತ್ತು ಮುಖದ ಚಹರೆಯನ್ನು ಗುರುತಿಸುವಿಕೆಯ ತಂತ್ರಜ್ಞಾನ ಒಳಗೊಂಡಿದ್ದು, ಮನುಷ್ಯನಂತೆಯೇ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಈ ರೋಬೋ ಹೊಂದಿರುವುದಾಗಿ ಹೇಳಿದ್ದಾರೆ.

ಇನ್ನು ಈ 'ರಶ್ಮಿ' ಎಂಬ ಹೆಸರಿನ ಮಾನವ ರೂಪದ ಭಾರತದ ಮೊದಲ ಹಿಂದಿ ಮಾತನಾಡುವ ರೋಬೋ ತಯಾರಿಸಲು 2 ವರ್ಷಗಳನ್ನು ತೆಗೆದುಕೊಳ್ಳಲಾಗಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ರೋಬೋ ತಯಾರಾಗಿದ್ದು, ರೋಬೋ ನಿರ್ಮಾಣಕ್ಕೆ 50 ಸಾವಿರ ರೂಪಾಯಿಗಳು ಖರ್ಚಾಗಿವೆ ಎಂದು ರಂಜಿತ್ ಅವರು ತಿಳಿಸಿದ್ದಾರೆ.
ಓದಿರಿ: ಏನಿದು 'ಡಾರ್ಕ್‌ವೆಬ್'?..ಇದನ್ನು ಸರ್ಚ್ ಮಾಡಿದರೆ ನೀವು ಜೈಲು ಸೇರುವುದೇಕೆ?!


Click it and Unblock the Notifications