ಏನಿದು 'ಡಾರ್ಕ್‌ವೆಬ್'?..ಇದನ್ನು ಸರ್ಚ್ ಮಾಡಿದರೆ ನೀವು ಜೈಲು ಸೇರುವುದೇಕೆ?!

Dark Web, deep Web, World Wide Web, internet, google, darknets, specific software, software, online, ಅಂತರ್ಜಾಲ, ಇಂಟರ್ನೆಟ್, ಡಾರ್ಕ್ವೆಬ್, ಡೀಪ್‌ವೆಬ್, ಗೂಗಲ್‌, news

|

ನಾವು ನೀವು ನೋಡುವ ಇಂಟರ್ನೆಟ್‌ನ ಹಿಂದೆ ನಾವ್ಯಾರೂ ನೋಡದ, ಊಹಿಸಲು ಆಗದಷ್ಟು ಬೃಹದಾಕಾರವಾಗಿರುವ ಕರಾಳ (Dark Web) ಪ್ರಪಂಚವಿದೆ. ಸಾಮಾನ್ಯ ಬಳಕೆದಾರರು ಉಪಯೋಗಿಸುವ ಇಂಟರ್ನೆಟ್ ಕೇವಲ ಶೇ.4ರಷ್ಟು ಮಾತ್ರವಾದರೆ, ಅಂತರ್ಜಾಲದ ಸುಮಾರು ಶೇ.96.ಭಾಗ ಕತ್ತಲ ಪ್ರಪಂಚದಲ್ಲಿದೆ ಎಂಬುದು ಆಶ್ಚರ್ಯವಲ್ಲದೇ ಮತ್ತಿನ್ನೇನು.?

ಹೌದು, ಇದು ಒಂತರ ಕತ್ತಲ ಲೋಕ. ಡಾರ್ಕ್‌ ವೆಬ್‌ ಎಂದು ಕರೆಯಲ್ಪಡುವ ಈ ಕತ್ತಲ ಲೋಕದ ಬಗ್ಗೆ ತಿಳಿಯುತ್ತಾ ಹೋದಂತೆ ಅಚ್ಚರಿ ಮತ್ತು ಆಘಾತ ಎರಡೂ ಆಗುವ ಸಾಧ್ಯತೆಯೇ ಹೆಚ್ಚು. ಅಪರಾಧ ಲೋಕದ ದಾರಿಯಾಗಿರುವ ಇಂಥಹ ಡಾರ್ಕ್‌ವೆಬ್‌ಗಳನ್ನು ಕೆಟ್ಟ ಕುತೂಹಲದಿಂದಲೇ ನೀವೇನಾದರೂ ಜಾಲಾಡಿದರೆ ಪೊಲೀಸರು ನಿಮ್ಮ ಮನೆ ಬಾಗಿಲು ತಟ್ಟುವುದು ಖಚಿತ.

ಏನಿದು 'ಡಾರ್ಕ್‌ವೆಬ್'?..ಇದನ್ನು ಸರ್ಚ್ ಮಾಡಿದರೆ ನೀವು ಜೈಲು ಸೇರುವುದೇಕೆ?!

ಒಂದು ಅಡ್ಡದಾರಿಯ ಅಥವಾ ಗುಪ್ತ ದಾರಿಯ ಮೂಲಕ ನಮಗೆ ಬೇಕಿರುವ ಯಾವುದೇ ವಸ್ತುವನ್ನಾದರೂ ಈ ಡಾರ್ಕ್‌ ವೆಬ್‌ನಲ್ಲಿ ಖರೀದಿಸಬಹುದಾಗಿದ್ದು, ಒಂದು ಪಿಸ್ತೂಲನ್ನು ಸಹ ನೀವು ಬಹಳ ಸುಲಭವಾಗಿ ಇಲ್ಲಿ ಖರೀದಿಸಬಹುದು. ಇದೆಲ್ಲವೂ ಸಾಧ್ಯವಾಗಿಸುವ ಡಾರ್ಕ್‌ವೆಬ್‌ ಎಂಬ ಮತ್ತೊಂದು ಕರಾಳ ಮುಖದ ಬಗ್ಗೆ ನೀವು ತಿಳಿಯಲೇಬೇಕಾದ ಮಾಹಿತಿ ವಿವರ ಈ ಕೆಳಗಿದೆ.

ಡೀಪ್ ವೆಬ್‌ ಮತ್ತು ಡಾರ್ಕ್‌ ವೆಬ್‌

ಡೀಪ್ ವೆಬ್‌ ಮತ್ತು ಡಾರ್ಕ್‌ ವೆಬ್‌

ಸಾಮಾನ್ಯ ಇಂಟರ್‌ನೆಟ್ ಬಳಕೆದಾರರಿಗೆ ಡೀಪ್‌ವೆಬ್‌ ಮತ್ತು ಡಾರ್ಕ್‌ವೆಬ್‌ ಎರಡು ಪದಗಳ ಅರ್ಥ ತಿಳಿದಿರುವ ಸಾಧ್ಯತೆ ಶೇ.10 ರಷ್ಟು ಮಾತ್ರ ಎನ್ನುತ್ತವೆ ವರದಿಗಳು. ಗೂಗಲ್‌ ರೀತಿಯ ಸರ್ಚ್ ಎಂಜಿನ್‌ಗಳಿಗೆ ಸಿಗಲಾರದ ಈ ಡೀಪ್‌ವೆಬ್‌ ಮತ್ತು ಡಾರ್ಕ್‌ವೆಬ್‌ ಎರಡೂ ಬೇರೆ ಬೇರೆ. ಈ ಡಾರ್ಕ್‌ ನೆಟ್‌ ಮತ್ತು ಡಾರ್ಕ್‌ವೆಬ್‌ಗ ಪ್ರವೇಶ ಪಡೆಯಲು ಟಾರ್‌ ಬ್ರೌಸರ್ ಬೇಕಿದೆ.

ಇದು ಕರಾಳ ಪ್ರಪಂಚ

ಇದು ಕರಾಳ ಪ್ರಪಂಚ

ಸಾಮಾನ್ಯವಾಗಿ ಯಾರೇ ಇಂಟರ್ನೆಟ್ ಬಳಕೆ ಮಾಡುವಾಗ ಬಳಕೆದಾರನ ಕಂಪ್ಯೂಟರ್‌ ಅಥವಾ ಮೊಬೈಲ್‌ ಒಂದು ಐಪಿ ವಿಳಾಸ ಹೊಂದಿರುತ್ತದೆ. ಇದರ ಸಹಾಯದಿಂದ ಯಾವುದೇ ಅಂತರ್ಜಾಲ ಕಾರ್ಯ ನಡೆದರೂ ಅದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಆದರೆ, ಈ ಡಾರ್ಕ್‌ ವೆಬ್‌ ಹಾಗಲ್ಲ. ಇಲ್ಲಿ ಅಂತರ್ಜಾಲ ಬಳಕೆದಾರನ ಮಾಹಿತಿ ಯಾರಿಗೂ ಸಿಕ್ಕಲ್ಲ.

ಇದರ ಕಾರ್ಯನಿರ್ವಹಣೆ ಹೇಗೆ?

ಇದರ ಕಾರ್ಯನಿರ್ವಹಣೆ ಹೇಗೆ?

ಮೊದಲೇ ಹೇಳಿದಂತೆ ಇಲ್ಲಿ ಅಂತರ್ಜಾಲ ಬಳಕೆದಾರನ ಮಾಹಿತಿ ಯಾರಿಗೂ ಸಿಕ್ಕಲ್ಲ. ಏಕೆಂದರೆ, ಅಂತರ್ಜಾಲದ ಐಪಿ ವಿಳಾಸ ಮತ್ತೊಂದು ಐಪಿ ವಿಳಾಸವನ್ನು ತಲುಪಿದರೆ ಅದರ ಮೂಲವನ್ನು ಕಂಡುಹಿಡಿಯಬಹುದು. ಆದರೆ, ಹಲವು ಪದರಗಳ ಮೂಲಕ ಹಾದು ಹೋಗುವ ಡಾರ್ಕ್‌ ವೆಬ್‌ "ಐಪಿ ಮತ್ತು ವಿಪಿಎನ್" ಎರಡನ್ನೂ ತಿಳಿಯದಂತೆ ಮಾಡುತ್ತದೆ.

ಡಾರ್ಕ್‌ ವೆಬ್‌ನಲ್ಲಿ ಏನೇನು ನಡೆಯುತ್ತೆ?

ಡಾರ್ಕ್‌ ವೆಬ್‌ನಲ್ಲಿ ಏನೇನು ನಡೆಯುತ್ತೆ?

ಆಧುನಿಕ ಕಾಲದ ಅಪರಾಧ ಲೋಕದ ರಹದಾರಿ ಎಂದು ಈ ಡಾರ್ಕ್‌ ವೆಬ್‌ ಕರೆಸಿಕೊಂಡಿದೆ. ಇಂದು ಅಂತರ್ಕಾಲದಲ್ಲಿ ನಡೆಯುತ್ತಿರುವ ಅಪರಾಧಗಳ ಶೇ. 90ಕ್ಕಿಂತ ಹೆಚ್ಚು ಚಟುವಟಿಕೆಗಳಿಗೆ ಇದು ಮಾರ್ಗವಾಗಿದೆ. ಭಯೋತ್ಪಾದಕ ಸಂಘಟನೆಗಳು, ಡ್ರಗ್ಸ್, ಅಶ್ಲೀಲ ವೀಡಿಯೋ, ಮ್ಯಾಚ್ ಫಿಕ್ಸಿಂಗ್, ಬಾಡಿಗೆ ಹಂತಕರ ಕೆಲಸಗಳು ಎಲ್ಲವೂ ಇದರ ಮೂಲಕವೇ ನಡೆಯುತ್ತದೆ.

ವಿಕೃತತೆಯ ಪರಮಾವದಿ!

ವಿಕೃತತೆಯ ಪರಮಾವದಿ!

ಮನುಷ್ಯನ ಕೆಟ್ಟ ಆಲೋಚನೆಗಳಿಗೆ ವೇದಿಕೆಯಾಗಿರುವ ಮನುಷ್ಯನ ವಿಕೃತ ಪ್ರಯೋಗಗಳು ಡಾರ್ಕ್‌ ವೆಬ್‌ನಲ್ಲಿ ನಡೆಯುತ್ತವೆ.ಅಮಾಯಕರನ್ನು ಕರೆತಂದು ಲೈಂಗಿಕ ಹಿಂಸೆ ಸೇರಿದಂತೆ ಹಲವು ದೈಹಿಕ ಮತ್ತು ಮಾನಸಿಕ ವಿಕೃತಿಯ ದೃಶ್ಯ ನೋಡೋಕೆ ಹಣದ ಹೊಳೆಯನ್ನೇ ಹರಿಸುವ ಕ್ರೂರ ವಿಕೃತ ಮನಃಸ್ಥಿತಿಗಳು ಈ ಜಾಲದಲ್ಲಿ ಬೀಡುಬಿಟ್ಟಿವೆ.

ಉಪಯೋಗಗಳು ಸಹ ಇವೆ!

ಉಪಯೋಗಗಳು ಸಹ ಇವೆ!

ಡಾರ್ಕ್‌ನೆಟ್ ಎಂಬುದು ಕಟ್ಟದ್ದಲ್ಲ. ಆದರೆ, ಅದರ ಬಳಕೆ ಅದನ್ನು ಕೆಟ್ಟದಾಗಿಸಿದೆ. ದೊಡ್ಡ ದೊಡ್ಡ ಹಗರಣಗಳನ್ನು, ಅಕ್ರಮಗಳನ್ನು ಹೊರಗೆಡವಿದವಿಕಿಲೀಕ್ಸ್ ನಂತಹ ಹಲವು ಸಂಸ್ಥೆಗಳು ಇಂತಹ ಡಾರ್ಕ್‌ನೆಟ್ ಅನ್ನು ಒಳ್ಳೆಯದಕ್ಕೆ ಉಪಯೋಗಿಸಿವೆ. ಭಯೋತ್ಪಾದಕರ ಮತ್ತು ಶತ್ರು ರಾಷ್ಟ್ರದ ಮಾಹಿತಿಯನ್ನು ಹ್ಯಾಕ್ ಮಾಡಲು ಇದು ಸಹಾಯಕವಾಗಿದೆ.

ಕೆಟ್ಟ ಕುತೋಹಲಕ್ಕೆ ಬೆಲೆ ತೆರಬೇಕಾಗುತ್ತದೆ.

ಕೆಟ್ಟ ಕುತೋಹಲಕ್ಕೆ ಬೆಲೆ ತೆರಬೇಕಾಗುತ್ತದೆ.

ಡಾರ್ಕ್ನೆಟ್ ಮೂಲಕ ಬ್ರೌಸರ್ ಬಳಸಿದರೆ, ಐಪಿ ಮತ್ತು ವಿಪಿಎನ್ ಮೂಲ ಹುಡುಕುವ ಸಂಪೂರ್ಣ ತಂತ್ರಜ್ಞಾನ ವಿಶ್ವದ ಯಾವುದೇ ಸರ್ಕಾರದ ಬಳಿ ಇಲ್ಲ. ಡಾರ್ಕ್‌ವೆಬ್‌ ಬಳಕೆದಾರರ ಜಾಡು ಹಿಡಿಯಲು ಒಂದು ಹಂತಕ್ಕೆ ಸಾಧ್ಯವಿದ್ದರೂ ಅದರ ಅವರ ತಪ್ಪಿನಿಂದ ಮಾತ್ರ. ಇಂತಹ ಅಕ್ರಮಕ್ಕೆ ಕೈ ಹಾಕಿ ನೋಡಿದ ಒಂದಷ್ಟು ಜನ ಕಂಬಿ ಹಿಂದೆ ಹೋಗಿದ್ದಾರೆ.

ಅಷ್ಟಕ್ಕೂ ಡಾರ್ಕ್‌ ನೆಟ್ ಹುಟ್ಟಿದ್ದೇಗೆ?

ಅಷ್ಟಕ್ಕೂ ಡಾರ್ಕ್‌ ನೆಟ್ ಹುಟ್ಟಿದ್ದೇಗೆ?

ಇಂತಹ ಡಾರ್ಕ್‌ನೆಟ್ ಹುಟ್ಟು ಅಮೆರಿಕಾ ಸೇನೆಯ ಕೊಡುಗೆ ಎಂದರೆ ಇದರ ಒಳಾರ್ಥಗಳನ್ನು ನೀವು ತಿಳಿಯಬಹುದು. ಯುಎಸ್‌ ನೌಕಾಪಡೆಯ ಮಾಹಿತಿ ತಂತ್ರಜ್ಞಾನ ಪ್ರಯೋಗಾಲಯ ಇದನ್ನು ಅನ್ವೇಷಣೆ ಮಾಡಿತು ಮಿಲಿಟರಿಗೆ ಸಂಬಂಧಿಸಿದ ಗುಪ್ತ ಮಾಹಿತಿ ಯಾವುದು, ಸಾಮಾನ್ಯ ವಿಚಾರಗಳು ಯಾವುವು ಎಂದು ವರ್ಗೀಕರಿಸೋದು ಕಷ್ಟ. ಹಾಗಾಗಿ ಇಲ್ಲಿ ಮಾಹಿತಿ ದುರುಪಯೋಗ ಆಗುವುದಿಲ್ಲ ಎಂದು ಅಮೇರಿಕಾದ ಸೇನೆ ಇದನ್ನು ಅನ್ವೇಷಣೆ ಮಾಡಿತ್ತು.

Best Mobiles in India

English summary
The dark web is the World Wide Web content that exists on darknets, overlay networks that use the Internet but require specific software, configurations or authorization to access.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X