ರೇಷನ್ ಕಾರ್ಡಿಗಾಗಿ ಅರ್ಜಿ ಸಲ್ಲಿಸಿದ್ದೀರಾ?..ಇಲ್ಲಿದೆ ನಿಮಗೆ ಸಿಹಿಸುದ್ದಿ!
ರಾಜ್ಯ ಸರ್ಕಾರ ಘೋಷಿಸಿದ್ದ ಪಂಚ ಗ್ಯಾರೆಂಟಿಗಳನ್ನು ಒಂದೊಂದಾಗಿ ಜಾರಿಗೊಳಿಸುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಹೊಂದಿರಬೇಕಿದೆ. ಈಗಾಗಲೇ ರೇಷನ್ ಕಾರ್ಡ್ ಹೊಂದಿರುವವರು 2,000ರೂ. ಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇನ್ನು ಹೊಸ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದು, ರೇಷನ್ ಕಾರ್ಡ್ ಯಾವಾಗ ಬರುತ್ತೆ ಎಂದು ಯೋಚಿಸುತ್ತಿದ್ದೀರಾ? ಇಲ್ಲಿದೆ ನಿಮಗೆ ಗುಡ್‌ನ್ಯೂಸ್!
ಹೌದು, ರೇಷನ್ ಕಾರ್ಡ್ ಇದ್ದವರಿಗೆ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲ ಆಗುತ್ತದೆ. ಅನ್ನಭಾಗ್ಯ ಯೋಜನೆಗೆ ಬಿಪಿಎಲ್ ಕಾರ್ಡ್ ಬೇಕು ಹಾಗೂ ಗೃಹಲಕ್ಷ್ಮಿ ಯೋಜನೆ ಪಡೆಯಲು ಸಹ ರೇಷನ್ ಕಾರ್ಡ್ ಅಗತ್ಯ. ಹೀಗಾಗಿ ಈಗಾಗಲೇ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದವರು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಬೇಕು ಎಂದುಕೊಂಡವರಿಗೆ ಸಿಹಿಸುದ್ದಿ ಇದೆ.

ಈಗಾಗಲೇ ರೇಷನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲೇ ರೇಷನ್ ಕಾರ್ಡ್ ದೊರೆಯಲಿದ್ದು, ಹಳೆ ಅರ್ಜಿ ಪ್ರಕ್ರಿಯೆ/ ವಿಲೇವಾರಿ ಮುಗಿದ ಬಳಿಕ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಈಗಾಗಲೇ 75% ಪರಿಶೀಲನೆ ಮುಗಿದಿದ್ದು, ಈ ಪ್ರಕ್ರಿಯೆ ಮುಗಿಯುತ್ತಿದಂತೆ ಅರ್ಹರಿಗೆ ಕಾರ್ಡ್ ವಿತರಣೆ ಮಾಡಲಾಗುತ್ತದೆ. ಆ ನಂತರ ಸರ್ಕಾರದ ಒಪ್ಪಿಗೆ ಪಡೆದು ಹೊಸ ರೇಷನ್ ಕಾರ್ಡ್‌ಗು ಅರ್ಜಿ ಸಲ್ಲಿಕೆ ಆರಂಭವಾಗಲಿದೆ.
ಆನ್‌ಲೈನ್ ಮೂಲಕ ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡಿಲು ಹೀಗೆ ಮಾಡಿ :
ಹಂತ 1 : ಅಧಿಕೃತ ವೆಬ್‌ಸೈಟ್ https://www.karnataka.gov.in/ ಗೆ ಭೇಟಿ ಮಾಡಿರಿ
ಹಂತ 2 : ನಂತರ ಇ-ಸ್ಟೇಟಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಹಂತ 3 : ಬಳಿಕ RC ರಿಕ್ವೆಸ್ಟ್ ಸ್ಟೇಟಸ್ ಲಿಂಕ್ ಟ್ಯಾಬ್ ಅನ್ನು ಸೆಲೆಕ್ಟ್ ಮಾಡಿರಿ
ಹಂತ 4 : ನಂತರ ಅಲ್ಲಿ ಕಾಣುವ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆ ಆಯ್ಕೆ ಮಾಡಿರಿ
ಹಂತ 5 : ಹೊಸ ಪಡಿತರ ಚೀಟಿಗೆ ಸಲ್ಲಿಸಲಾದ ಅರ್ಜಿಯ ಸ್ಥಿತಿ ಟ್ಯಾಬ್ ಅನ್ನು ಕ್ಲಿಕ್ ಮಾಡಿರಿ
ಹಂತ 6 : ಆಗ, ನಿಮಗೆ ಕಾಣಿಸುವ ಬಾಕ್ಸ್‌ನಲ್ಲಿ ಅರ್ಜಿ ಸಲ್ಲಿಕೆಯ ಸ್ವೀಕೃತಿ ಸಂಖ್ಯೆ ( Acknowledgment No ) ನಮೂದಿಸಿ
ಹಂತ 7 : ಆ ನಂತರ ಗೋ/Go ಬಟನ್ ಕ್ಲಿಕ್ ಮಾಡಿ. ನಿಮ್ಮ ಅರ್ಜಿ ಸಲ್ಲಿಕೆಯ ಸ್ಟೇಟಸ್ ಬಗ್ಗೆ ಮಾಹಿತಿ ಕಾಣಿಸುತ್ತದೆ.
ಆನ್‌ಲೈನ್‌ನಲ್ಲಿ ರೇಷನ್ ಕಾರ್ಡ್ ಅಪ್‌ಡೇಟ್ ಮಾಡಲು ಹೀಗೆ ಮಾಡಿ
ಸ್ಟೇಪ್ 1 : ಅಧಿಕೃತ https://ahara.kar.nic.in/ ಗೆ ಭೇಟಿ ನೀಡಿರಿ
ಸ್ಟೇಪ್ 2 : ಹೋಮ್ ಪೇಜ್‌ನಲ್ಲಿ ಇ-ಸರ್ವೀಸ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
ಸ್ಟೇಪ್ 3 : ಆ ನಂತರ ಬಳಿಕ ತಿದ್ದುಪಡಿ/ ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಕಾಣಿಸಲಿದೆ, ಅದನ್ನು ಸೆಲೆಕ್ಟ್ ಮಾಡಿರಿ
ಸ್ಟೇಪ್ 4 : ಆ ಬಳಿಕ ಹೊಸ ಪುಟ್ ತೆರೆದುಕೊಳ್ಳಲಿದೆ
ಸ್ಟೇಪ್ 5 : ನಿಮ್ಮ ಜಿಲ್ಲೆಗೆ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿ
ಸ್ಟೇಪ್ 6 : ಹೊಸ ಸೇರ್ಪಡೆ/ ತಿದ್ದುಪಡಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿ ಅನ್ನು ಸರಿಯಾಗಿ ಭರ್ತಿ ಮಾಡಿ
ಸ್ಟೇಪ್ 7 : ನಂತರ ತಿದ್ದುಪಡಿಗೆ ಬೇಕಾದ ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪಲೋಡ್ ಮಾಡಿ
ಸ್ಟೇಪ್ 8 : ಅಪ್ಲೋಡ್ ಮಾಡಿದ ನಂತರ ಫಾರ್ಮ್ ಅನ್ನು ಸಲ್ಲಿಸು/ submit ಮಾಡಿರಿ
ಸ್ಟೇಪ್ 9 : ಅರ್ಜಿ ಸಲ್ಲಿಕೆಯ ರಿಜಿಸ್ಟರ್ ನಂಬರ್ ಲಭ್ಯ ಆಗಲಿದೆ
ಸ್ಟೇಪ್ 10 : ಈ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಅನ್ನು ತಿಳಿಯಬಹುದಾಗಿದೆ.


Click it and Unblock the Notifications








