Just In
Don't Miss
- News
ನಟಿ ಮೇಲೆ ಅತ್ಯಾಚಾರ ಪ್ರಕರಣ: ಶರತ್ಗೆ ಜಾಮೀನು
- Lifestyle
Today Rashi Bhavishya: ಮಂಗಳವಾರದ ದಿನ ಭವಿಷ್ಯ: ಮೇಷ, ಮಿಥುನ, ಸಿಂಹ, ವೃಶ್ಚಿಕ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಉತ್ತಮ ಸಮಯ
- Sports
DC vs PBKS: ಕೊನೆಯ ನಿಮಿಷದಲ್ಲಿ ಸ್ಟ್ರೈಕ್ ಬದಲಿಸಿ ಗೋಲ್ಡನ್ ಡಕೌಟ್ ಆದ ಡೇವಿಡ್ ವಾರ್ನರ್
- Movies
ಹೆಣ್ ಮಕ್ಕಳ ದಿಲ್ ಕದ್ದ ಅಭಿನವ್: ಹ್ಯಾಂಡ್ಸಮ್ ಹುಡುಗನ ಕಲರ್ ಫುಲ್ ಜಗತ್ತು ಹೇಗಿದೆ?
- Finance
ಮೇ 16ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಆಕರ್ಷಕ ಬೆಲೆಯಲ್ಲಿ ಅತ್ಯಧಿಕ ಮೈಲೇಜ್ ಪ್ರೇರಿತ ಡಿ15 ಇವಿ ಸ್ಕೂಟರ್ ಬಿಡುಗಡೆಗೊಳಿಸಿದ ಬಿಗೌಸ್
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡೆಬಿಟ್ ಮತ್ತು ಕ್ರೆಡಿಟ್ ಗ್ರಾಹಕರಿಗೆ ಸಿಹಿಸುದ್ದಿ ನೀಡಿದ RBI.!
ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಇನ್ನಷ್ಟು ಸುರಕ್ಷತೆಗೆ ಒದಗಿಸುವ ನಿಟ್ಟಿನಲ್ಲಿ ಭಾರತೀಯ ರೀಸರ್ವ್ ಬ್ಯಾಂಕ್(ಆರ್‌ಬಿಐ) ಇದೀಗ ಹೊಸ ಕ್ರಮಕೈಗೊಂಡಿದೆ. ಬಳಕೆದಾರರು ಅವರ ಅಗತ್ಯಕ್ಕೆ ಅನುಗುಣವಾಗಿ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಅನ್ನು ಆನ್ ಮತ್ತು ಆಫ್ ಮಾಡುವ ಸೌಲಭ್ಯವನ್ನು ನೀಡಬೇಕೆಂದು ಬ್ಯಾಂಕ್‌ಗಳಿಗೆ ಬುಧವಾರ ಆರ್‌ಬಿಐ ಸುತ್ತೋಲೆ ನೀಡಿದೆ.

ಹೌದು, ಪ್ರಸ್ತುತ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಡಿಜಿಟಲ್ ವ್ಯವಹಾರಗಳು ಹೆಚ್ಚಾಗಿ ಬಳಕೆಯಲ್ಲಿವೆ. ಹಾಗೆಯೇ ಸದ್ಯ ಡಿಜಿಟಲ್ ಹಣಕಾಸಿನ ವ್ಯವಹಾರಗಳಲ್ಲಿ ಆನ್‌ಲೈನ್ ವಂಚನೆಯ ಪ್ರಕರಣಗಳ ಸಂಖ್ಯೆ ಸಹ ಅಧಿಕವಾಗುತ್ತಿವೆ. ಈ ನಿಟ್ಟಿನಲ್ಲಿ ಸುಧಾರಣೆ ತರಲು ಮತ್ತು ಡಿಜಿಟಲ್ ವ್ಯವಹಾರಗಳಲ್ಲಿ ಹೆಚ್ಚಿನ ಸುರಕ್ಷತೆ ಒದಗಿಸುವುದಕ್ಕಾಗಿ ಆರ್‌ಬಿಐ ಈ ಕ್ರಮಕ್ಕೆ ಮುಂದಾಗಿದೆ.

ಬಳಕೆದಾರರಿಗೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಎಟಿಎಂಗಳು ಮತ್ತು ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ (ಶಾಪ್‌ಗಳಲ್ಲಿ ಕಾರ್ಡ್ ಬಳಸುವುದು) ಮಾತ್ರ ಬಳಸಲು ಅವಕಾಶ ಕೊಡುವಂತಹ ರೀತಿಯಲ್ಲಿ ಕಾರ್ಡ್‌ಗಳನ್ನು ರೂಪಿಸಬೇಕು ಎಂದೂ ಆರ್‌ಬಿಐ ತಿಳಿಸಿದೆ. ಹಾಗೆಯೇ ಚೀಪ್ ಕಾರ್ಡ್ ಅಥವಾ ಕಾಂಟ್ಯಾಕ್ಟ್‌ಲೆಸ್ ಕಾರ್ಡ್ ಆಯ್ದುಕೊಳ್ಳಲು ಗ್ರಾಹಕರಿಗೆ ಅವಕಾಶ ನೀಡಬೇಕು ಎಂದು ಸಹ ಹೇಳಿದೆ. ಇನ್ನು ಆರ್‌ಬಿಐನ ಹೊಸ ನಿಯಮ ಇದೇ ಮಾರ್ಚ್ 16ರಿಂದ ಜಾರಿಯಾಗಲಿದೆ.

ಬಳಕೆಯಲ್ಲಿರುವ ಡಿಜಿಟಲ್ ವ್ಯವಹಾರಗಳು
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ನೀಡಿ ಹಣ ವರ್ಗಾವಣೆ ಮಾಡುವುದು ಮತ್ತು ಕಾರ್ಡ್ ನೀಡದೇ (ಕಾರ್ಡ್ ನಂಬರ್ ಮತ್ತು ಪಿನ್ ನಮೂದಿಸಿ) ವ್ಯಬಹರಿಸುವ ಆಯ್ಕೆಯು ಸಹ ಸದ್ಯ ಬಳಕೆಯಲ್ಲಿವೆ. ಹಾಗೆಯೇ ಇತ್ತೀಚಿಗೆ ಕ್ಯಾಂಟ್ಯಾಕ್ಟ್‌ಲೆಸ್ ಕಾರ್ಡ್ ಬಳಕೆ ಹೆಚ್ಚಾಗಿದ್ದು, ಈ ಕಾರ್ಡ್ ಮೂಲಕ ವ್ಯವಹರಿಸಿದಾಗ ಗ್ರಾಹಕ ಯಾವುದೇ ಪಿನ್ ಎಂಟ್ರಿ ಮಾಡದೇ ಹಣ ವರ್ಗಾವಣೆಯ ಮಾಡಬಹುದಾಗಿದೆ. (ನಿರ್ದಿಷ್ಟ ಮೊತ್ತಕೆ ಮಾತ್ರ)

ಗ್ರಾಹಕರದ್ದೇ ಕೊನೆಯ ನಿರ್ಧಾರ
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ಸಕ್ರಿಯಮಾಡುವ ಅಥವಾ ಸ್ಥಗಿತಗೊಳಿಸುವ(ಆನ್/ಆಪ್), ಅವಕಾಶ ಗ್ರಾಹಕಗೆ ನೀಡಬೇಕು. ಅದೇ ರೀತಿ ಅಂತರರಾಷ್ಟ್ರೀಯ ವಹಿವಾಟುಗಳಲ್ಲಿ, ಪಿಒಎಸ್ ಯಂತ್ರಗಳಲ್ಲಿ, ಎಟಿಎಂ, ಆನ್‌ಲೈನ್, ಚಿಪ್‌ಕಾರ್ಡ್ ವಹಿವಾಟುಗಳಿಗೆ ಲಿಮಿಟ್ ನಿರ್ಧರಿಸುವ ಅವಕಾಶವನ್ನು ಸಹ ಗ್ರಾಹಕರಿಗೆ ನೀಡಬೇಕು. ಗ್ರಾಹಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲು 24x7 ಅವಕಾಶ ನೀಡಬೇಕು ಎಂದಿದೆ.

ಆರ್‌ಬಿಐ ತಿಳಿಸಿದ ಪ್ರಮುಖ ಅಂಶಗಳು
* ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚಿನ ಭದ್ರತೆ ನೀಡುವ ಉದ್ದೇಶವಿದೆ.
* ಇದೇ ಮಾರ್ಚ್ 16ರಿಂದ ನೂತನ ನಿಯಮಗಳು ಜಾರಿಗೆ ಬರಲಿವೆ
* ಹೊಸ ನಿಯಮಗಳನ್ನು ಗ್ರಾಹಕರಿಗೆ ತಿಳಿಸುವುದಕ್ಕಾಗಿ ಬ್ಯಾಂಕ್‌ಗಳು ಹೆಚ್ಚಿನ ಜಾಹಿರಾತು ನೀಡಬೇಕು
* ಕಾರ್ಡ್ ಸ್ಥಗಿತವಾದರೇ ಗ್ರಾಹಕರು ಮತ್ತೆ ಅರ್ಜಿ ಸಲ್ಲಿಸಿ ಸೇವೆಯನ್ನು ಚಾಲ್ತಿ ಮಾಡಿಕೊಳ್ಳಬಹುದು
* ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್‌ನಲ್ಲಿ ಬದಲಾವಣೆಗಳ ಆ ಬಗ್ಗೆ ಬಳಕೆದಾರರ ನೊಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್, ಇ-ಮೇಲ್ ಕಳಿಸಬೇಕು.

ಆನ್‌ಲೈನ್‌ನಲ್ಲಿ ಶಾಪ್ ಮಾಡಲು ಕ್ರೆಡಿಟ್/ಡೆಬಿಟ್ ಕಾರ್ಡ್ ಬಳಸುತ್ತಿರಾ?..ಹಾಗಾದ್ರೆ ಈ ಕೆಲಸ ಮಾಡಬೇಡಿ!
ಆನ್ ಲೈನ್ ಶಾಪಿಂಗ್ ಗೆ ನೀವು ಕ್ರೆಡಿಟ್/ ಡೆಬಿಟ್ ಕಾರ್ಡ್ ಗಳನ್ನು ಬಳಸುತ್ತೀರಾ? ಅಥವಾ ಬಿಲ್ ಪಾವತಿ ಮಾಡಲು ಇಲ್ಲವೇ ಯಾವುದೋ ಬ್ಯಾಂಕಿಂಗ್ ವ್ಯವಹಾರಕ್ಕಾಗಿ ನೆಟ್ ಬ್ಯಾಂಕಿಂಗ್ ಬಳಸುತ್ತೀರಾ? ಹೀಗೆ ಯಾವುದೇ ರೀತಿಯ ಹಣಕಾಸು ವ್ಯವಹಾರವನ್ನು ಮಾಡುವುದರಿಂದಾಗಿ ನಮ್ಮ ಕೆಲಸಗಳು ಸುಲಭವಾಗುತ್ತದೆ ಮತ್ತು ಸಮಯದ ಉಳಿತಾಯವಾಗುತ್ತದೆ ಎಂಬುದೇನೋ ನಿಜ. ಆದರೆ ಈ ಸಂದರ್ಬದಲ್ಲಿ ಹಣಕಾಸು ಮೋಸದ ಬಗ್ಗೆಯೂ ಕೂಡ ಸ್ವಲ್ಪ ಜಾಗೃತೆ ವಹಿಸಬೇಕು.
ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ಕಳ್ಳರು ಹೆಚ್ಚಾಗುತ್ತಿದ್ದಾರೆ ಮತ್ತು ಆ ಸುದ್ದಿಗಳನ್ನು ನಾವು ಕೇಳುತ್ತಲೇ ಇದ್ದೇವೆ. ಇತ್ತೀಚೆಗೆ ಒಬ್ಬ ವ್ಯಕ್ತಿ ತನ್ನ ಜಿಮೇಲ್ ಹ್ಯಾಕ್ ಆಗಿದ್ದರಿಂದ 1 ಲಕ್ಷ ರುಪಾಯಿಯನ್ನು ಕಳೆದುಕೊಂಡಿದ್ದಾನೆ. ಆದರೆ ಕೆಲವು ಸಾಮಾನ್ಯ ನಿಯಮಗಳನ್ನು ಪಾಲಿಸುವುದರಿಂದಾಗಿ ಈ ಸಮಸ್ಯೆ ಆಗದಂತೆ ತಡೆಯಬಹುದು. ನೀವು ಆನ್ ಲೈನ್ ವ್ಯವಹಾರ ನಡೆಸುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗಿರುವ 10 ಸಂಗತಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.

ಪಬ್ಲಿಕ್ ಕಂಪ್ಯೂಟರ್ ಗಳಲ್ಲಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಗಳನ್ನು ಮಾಡುವುದನ್ನು ತಡೆಯಿರಿ
ನಿಮ್ಮ ಪರ್ಸನಲ್ ಕಂಪ್ಯೂಟರ್ ಮತ್ತು ಲ್ಯಾಪ್ ಟಾಪ್ ಗಳಿಂದ ಮಾತ್ರವೇ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಿ. ಪಬ್ಲಿಕ್ ಅಥವಾ ಶೇರ್ಡ್ ಪಿಸಿ/ ಲ್ಯಾಪ್ ಟಾಪ್ ನಲ್ಲಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ಮಾಡಬೇಡಿ.

ಇಂಟರ್ನೆಟ್ ಸೆಟ್ಟಿಂಗ್ಸ್ ನಲ್ಲಿ ಆಟೋ-ಫಿಲ್ಲಿಂಗ್ ಡಾಟಾ ಅನೇಬಲ್ ಆಗಿಲ್ಲದಂತೆ ನೋಡಿಕೊಳ್ಳಿ
ಖಂಡಿತವಾಗಲೂ ಆಟೋ ಫಿಲ್ಲಿಂಗ್ ಡಾಟಾ ಸೆಟ್ಟಿಂಗ್ಸ್ ಅನೇಬಲ್ ಆಗಿರುವುದು ಎಷ್ಟೋ ಸಂದರ್ಬದಲ್ಲಿ ಸುಲಭವಾಗುತ್ತದೆ ನಿಜ. ಆನ್ ಲೈನ್ ಟಾಸ್ಕ್ ಗಳಲ್ಲಿ ಸಮಯವನ್ನು ಉಳಿಸುತ್ತದೆ ಎಂಬುದೇನೋ ನಿಜವೇ. ಆದರೆ ಯಾವತ್ತೂ ಇದನ್ನು ಅನೇಬಲ್ ಮಾಡಬೇಡಿ. ಇದರ ಅರ್ಥ ಇಷ್ಟೇ ನೀವು ನಿಮ್ಮ ಹಣಕಾಸಿಗೆ ಸಂಬಂಧಪಟ್ಟ ಡಾಟಾಗಳನ್ನು ಸೇವ್ ಮಾಡುತ್ತಿದ್ದೀರಿ ಎಂದರ್ಥ.

ಆದಷ್ಟು ಫಿಸಿಕಲ್ ಕಿಬೋರ್ಡ್ ಗಳಿಗಿಂತ ವರ್ಚುವಲ್ ಕೀಬೋರ್ಡ್ ಗಳನ್ನು ಬಳಸಿ
ಹೆಚ್ಚಿನ ಬ್ಯಾಂಕ್ ಗಳು ಇದೀಗ ವರ್ಚುವಲ್ ಕೀಬೋರ್ಡ್ ಗಳನ್ನು ಪಾಸ್ ವರ್ಡ್ ಎಂಟರ್ ಮಾಡಲು ಆಫರ್ ಮಾಡುತ್ತದೆ. ಹಾಗಾಗಿ ಆದಷ್ಟು ವರ್ಚುವಲ್ ಕೀರ್ಬೋಡ್ ಗಳನ್ನೇ ಬಳಸುವುದು ಉತ್ತಮ. ಕೀಲಾಗರ್ಸ್ ಗಳಿಂದ ರಕ್ಷಣೆ ಪಡೆಯಲು ನೀವು ಆದಷ್ಟು ಫಿಸಿಕಲ್ ಕೀಬೋರ್ಡ್ ಗಳನ್ನು ಬಳಸದೇ ಇರುವುದು ಸೂಕ್ತವಾದದ್ದು.

ನೀವು ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸುತ್ತಿರುವ ವೆಬ್ ಸೈಟ್ 'HTTPS' ಆಗಿದೆ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ
ಇದೊಂದು ಸಾಮಾನ್ಯ ವಿಚಾರ. ಯಾವಾಗಲೂ 'https' ಯುಆರ್ ಎಲ್ ನ್ನು ನೀವು ಯಾವುದೇ ಹಣಕಾಸಿನ ವ್ಯವಹಾರ ನಡೆಸುವಾಗ ಗಮನಿಸಬೇಕು.

ವಿದೇಶಕ್ಕೆ ತೆರಳದ ಸಂದರ್ಬದಲ್ಲಿ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗಳನ್ನು ಡಿಸೇಬಲ್ ಮಾಡಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2-ಫ್ಯಾಕರ್ ಟ್ರಾನ್ಸ್ಯಾಕ್ಷನ್ ನ್ನು ಡೊಮೆಸ್ಟಿಕ್ ಕ್ರೆಡಿಟ್ ಕಾರ್ಡ್ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯಗೊಳಿಸಿದೆ. ಆದರೆ ಇದು ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ಗೆ ಕಡ್ಡಾಯವಲ್ಲ. ಪಿಓಎಸ್ ಸಂದರ್ಬದಲ್ಲಿನ ಡೊಮೆಸ್ಟಿಕ್ ಟ್ರಾನ್ಸ್ಯಾಕ್ಷನ್ ಗೆ ಪಿನ್ 2FA ಆಗಿ ಆನ್ ಲೈನ್ ಟ್ರಾನ್ಸ್ಯಾಕ್ಷನ್ ನಲ್ಲಿ ಕೆಲಸ ಮಾಡುತ್ತದೆ. ಓಟಿಪಿ ಎರಡನೇ ಸೆಕ್ಯುರಿಟಿ ಲೇಯರ್ ಆಗಿರುತ್ತದೆ.
ಆದರೆ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನಲ್ಲಿ ಸೆಕೆಂಡ್ ಫ್ಯಾಕ್ಟರ್ ಅಥೆಂಟಿಕೇಷನ್ ಬೇಕಾಗುವುದಿಲ್ಲ. ನೀವು ಗಮನಿಸಬೇಕಾಗಿರುವ ಅಂಶವೇನೆಂದರೆ ಒಂದು ವೇಳೆ ನೀವು ಅಂತರಾಷ್ಟ್ರೀಯ ಕ್ರೆಡಿಟ್ ಕಾರ್ಡ್ ಹೋಲ್ಡರ್ ಆಗಿದ್ದಲ್ಲಿ, ಅಂತರಾಷ್ಟ್ರೀಯ ಬಳಕೆಯನ್ನು ಡಿಫಾಲ್ಟ್ ಆಗಿ ಅನೇಬಲ್ ಮಾಡಲಾಗಿರುತ್ತದೆ.ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ಒಂದು ವೇಳೆ ನೀವು ವಿದೇಶಕ್ಕೆ ಸಂಚರಿಸುವ ಪ್ಲಾನ್ ಇಲ್ಲದೇ ಇರುವ ಸಂದರ್ಬದಲ್ಲಿ ನೀವು ಈ ಅಂತರಾಷ್ಟ್ರೀಯ ಟ್ರಾನ್ಸ್ಯಾಕ್ಷನ್ ನ್ನು ಡಿಸೇಬಲ್ ಮಾಡಿ ಇಟ್ಟುಕೊಳ್ಳಬಹುದು.

ಕ್ರೆಡಿಟ್ / ಡೆಬಿಟ್ ಕಾರ್ಡ್ ನಲ್ಲಿ ಸಿವಿವಿ ನಂಬರ್ ನ್ನು ಸ್ಕ್ರ್ಯಾಚ್ ಮಾಡಿ ಅಥವಾ ಅಳಿಸಿ ಬಿಡಿ
ನಿಮ್ಮ ಕಾರ್ಡಿನ ಹಿಂಭಾಗದಲ್ಲಿರುವ ಕಾರ್ಡಿನ ಸಿವಿವಿ ನಂಬರ್ ನ್ನು ಅಳಿಸಿ ಬಿಡಬಹುದು. ಆದರೆ ಖಂಡಿತವಾಗಲೂ ಇದನ್ನು ಮಾಡುವುದಕ್ಕಿಂತ ಮುನ್ನ ಆ ನಂಬರ್ ನ್ನು ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಹೀಗೆ ಮಾಡುವುದರಿಂದಾಗಿ ನಿಮ್ಮ ಕಾರ್ಡ್ ನ್ನು ಅನಧಿಕೃತ ವ್ಯಕ್ತಿಗಳು ಯಾವುದೇ ಕಾರಣಕ್ಕೂ ಹಣಕಾಸು ವ್ಯವಹಾರಕ್ಕೆ ಬಳಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಡೆಬಿಟ್ ಕಾರ್ಡ್ ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
ಇತ್ತೀಚೆಗೆ ಕಳ್ಳರು ಮುಗ್ಧ ಕಾರ್ಡ್ ಮಾಲೀಕರನ್ನು ಟಾರ್ಗೆಟ್ ಮಾಡಿದ್ದು ತಮ್ಮ ಕಾರ್ಡ್ ವಿವರಗಳನ್ನು ಆನ್ ಲೈನ್ ನಲ್ಲಿ ತಿಳಿಸುವಂತೆ ಹೇಳುತ್ತಿದ್ದಾರೆ.ಯಾವುದೇ ಕಾರಣಕ್ಕೂ ಆನ್ ಲೈನ್ ನಲ್ಲಿ ನಿಮ್ಮ ಕಾರ್ಡಿನ ವಿವರಗಳನ್ನು ಫೋನ್ ಅಥವಾ ಇಮೇಲ್ ಮೂಲಕ ಯಾರೊಂದಿಗೂ ಕೂಡ ಹಂಚಿಕೊಳ್ಳಬೇಡಿ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999