ಅಬ್ಬಾ..ಸೋನಿಯ ಈ ಪ್ರೊಜೆಕ್ಟರ್ ಬೆಲೆ 1,10,000ರೂ!!..ಅಂತಹದ್ದೇನಿದೆ?

ಅಯ್ಯೋ ಒಂದು ಪ್ರೊಜೆಕ್ಟರ್ ಬೆಲೆ ಅಷ್ಟೊಂದ ಎಂದು ಮೂಗುಮುರಿಯಬೇಡಿ.!! 1,10,000 ರೂಪಾಯಿಗಳ ಸೋನಿಯಾ "ಎಕ್ಸ್‌ಪೀರಿಯಾ ಟಚ್" ಪ್ರೊಜೆಕ್ಟರ್ ಹೇಗಿದೆ ಎಂದು ತಿಳಿಯಿರಿ.!!

|

ಗುಣಮಟ್ಟದ ಎಲೆಕ್ಟ್ರಾನಿಕ್ ಉತ್ಪನ್ನಗಳ ತಯಾರಿಕಾ ಸಂಸ್ಥೆ ಸೋನಿ ಹೊಸ ಹೊಸ ಅವಿಷ್ಕಾರಗಳನ್ನು ಹುಟ್ಟುಹಾಕುವುದರಲ್ಲಿ ಯಾವಾಗಲೂ ಮುಂದಿದೆ ಎನ್ನಬಹುದು. ಸೋನಿ ಹೊಸದಾಗಿ ಯಾವುದೇ ಡಿವೈಸ್ ಬಿಡುಗಡೆ ಮಾಡಿದರೂ ಸಹ ಅದರ ಬೆಲೆ ಮತ್ತು ವಿಶೇಷತೆಗಳು ಹೆಚ್ಚಿರುತ್ತವೆ ಎಂಬ ಮಾತಿದೆ.!!

ಅಂತಹುಗಳ ಸಾಲಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಒಂದು ಡಿವೈಸ್ ಎಂದರೆ ₹1,10,000 ರೂಪಾಯಿಗಳ ಒಂದು ಪ್ರೊಜೆಕ್ಟರ್!!.ಅಯ್ಯೋ ಒಂದು ಪ್ರೊಜೆಕ್ಟರ್ ಬೆಲೆ ಅಷ್ಟೊಂದ ಎಂದು ಮೂಗುಮುರಿಯಬೇಡಿ.!! 1,10,000 ರೂಪಾಯಿಗಳ ಸೋನಿಯಾ "ಎಕ್ಸ್‌ಪೀರಿಯಾ ಟಚ್" ಪ್ರೊಜೆಕ್ಟರ್ ಹೇಗಿದೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇದು ಮಾಮೂಲಿ ಪ್ರೊಜೆಕ್ಟರ್ ಅಲ್ಲ!!

ಇದು ಮಾಮೂಲಿ ಪ್ರೊಜೆಕ್ಟರ್ ಅಲ್ಲ!!

ಮೊಬೈಲ್‌ ಮೂಲಕ ದೊಡ್ಡಪರದೆಯಲ್ಲಿ ಸಿನಿಮಾನೂಡಲು ಸಾವಿರ ರೂಪಾಯಿಗಳಿಂದಲೇ ಪ್ರೊಜೆಕ್ಟರ್‌ಗಳು ಲಭ್ಯವಿವೆ. ಆದರೆ, ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಚಿರಪರಿಚಿತವಾಗಿರುವ ಸೋನಿ ತಯಾರಿಸಿರುವ ಈ "ಎಕ್ಸ್‌ಪೀರಿಯಾ ಟಚ್‌"ಪ್ರೊಜೆಕ್ಟರ್ ಅತ್ಯಾಧುನಿಕ ಫೀಚರ್ಸ್ ಹೊಂದಿದ್ದು, ಅವುಗಳು ಈ ಕೆಳಕಂಡಂತಿವೆ.!!

ಪ್ರತಿಸ್ಪಂದನಾತ್ಮಕ ಪ್ರೊಜೆಕ್ಟರ್!!

ಪ್ರತಿಸ್ಪಂದನಾತ್ಮಕ ಪ್ರೊಜೆಕ್ಟರ್!!

ಈ ಪ್ರೊಜೆಕ್ಟರ್ ಪರೆದೆಯ ಮೇಲೆ ಮೂಡಿಸುವ ಚಿತ್ರಗಳು ಪ್ರತಿಸ್ಪಂದನಾತ್ಮಕವಾಗಿರುತ್ತವೆ.ಅಂದರೆ, ಪ್ರೊಜೆಕ್ಟರ್‌ನಿಂದ ನೀವು ಯಾವುದೇ ಗೋಡೆ ಅಥವಾ ಪರದೆಯ ಮೇಲೆ ಮೂಡಿ ಬಂದ ಚಿತ್ರದ ಮೇಲೆ ನೀವು ಬೆರಳಿಟ್ಟರೆ ಸಾಕು ಟಚ್‌ಸ್ಕ್ರೀನ್ ಮೊಬೈಲ್‌ನಂತೆ ಅದು ಯಾವುದಾದರೂ ಕೆಲಸ ಮಾಡಬಹುದು.!!

80 ಇಂಚ್ ಸ್ಕ್ರೀನ್ ಪ್ರೊಜೆಕ್ಷನ್!!

80 ಇಂಚ್ ಸ್ಕ್ರೀನ್ ಪ್ರೊಜೆಕ್ಷನ್!!

ಎಕ್ಸ್‌ಪೀರಿಯಾ ಟಚ್" ಪ್ರೊಜೆಕ್ಟರ್ 80 ಇಂಚ್ ಸ್ಕ್ರೀನ್ ಪ್ರೊಜೆಕ್ಷನ್ ಆಯ್ಕೆಯನ್ನು ಹೊಂದಿದ್ದು, ಅತ್ಯುತ್ತಮ ಗುಣಮಟ್ಟದಲ್ಲಿ ಕಾರ್ಯನಿರ್ವಹಣೆ ನೀಡಲಿದೆ. ಇನ್ನು ಟು-ಸ್ಟಿರೀಯೋ ಸ್ಪೀಕರ್, ಹಾಗೂ ಪ್ರಸೆನ್ಸ್ ಸೆನ್ಸಾರ್ ಈ ಪ್ರೊಜೆಕ್ಟರ್‌ನಲ್ಲಿ ಅಡಕವಾಗಿದೆ.!!

ಸ್ವಯಂಚಾಲಿತ ಕಾರ್ಯನಿರ್ವಹಣೆ!!

ಸ್ವಯಂಚಾಲಿತ ಕಾರ್ಯನಿರ್ವಹಣೆ!!

ಸುಮ್ಮನೆ ಕುಳಿತ ಈ ಪ್ರೊಜೆಕ್ಟರ್ ಮುಂದೆ ನೀವು ನಡೆದು ಬಂದರೆ ನೀವು ಮನೆಗೆ ಬಂದಿದ್ದೀರಿ ಎಂದು ಅದಕ್ಕೆ ಗೊತ್ತಾಗಿ ಅದು ಎಚ್ಚರಗೊಂಡು ಗೋಡೆಯ ಮೇಲೆ ನಿಮಗೆ ಅತೀ ಅಗತ್ಯ ಮಾಹಿತಿಗಳನ್ನು ಮೂಡಿಸುತ್ತದೆ.!! ಮೇಜಿನ ಮೇಲೆ ಆಟದ ಚಿತ್ರ ಮೂಡಿಸಿ ಆ ಚಿತ್ರದ ಮೇಲೆ ಬೆರಳಿಟ್ಟು ನೀವು ಮಕ್ಕಳ ಜೊತೆ ಆಟ ಆಡಬಹುದಾಗಿದೆ.!!

ಪ್ರೊಜೆಕ್ಟರ್ ಮಾತ್ರವಲ್ಲ.!!

ಪ್ರೊಜೆಕ್ಟರ್ ಮಾತ್ರವಲ್ಲ.!!

ಇಂದಿನ ದಿನಚರಿ, ಇಮೇಲ್, ಹವಾಮಾನ ವರದಿ, ಕರೆ ಮತ್ತು ಸಂದೇಶ ಹೀಗೆ ಯಾವುದೇ ಒಂದು ಲ್ಯಾಪ್‌ಟಾಪ್ ಮೂಲಕ ಮಾಡಬಹುದಾದ ಎಲ್ಲಾ ಕಾರ್ಯಗಳನ್ನು ಸೋನಿಯ ಈ ಪ್ರೊಜೆಕ್ಟರ್ ಮೂಲಕ ಮಾಡಬಹುದು. ಈ ಪ್ರೊಜೆಕ್ಟರ್ ಆಂಡ್ರಾಯ್ಡ್ ಕಾರ್ಯಾಚರಣ ವ್ಯವಸ್ಥೆ ಹೊಂದಿರುವ ಒಂದು ಡಿವೈಸ್ ಆಗಿದೆ.!!

Best Mobiles in India

English summary
It’s called the Xperia Touch, is powered by Android, and projector cost around $1,600.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X