Home
ಸುದ್ದಿಜಾಲ

Google Map: ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಫೀಚರ್ಸ್‌! ನಿಮಗೆ ದಂಡದ ಚಲನ್ ಬರುವುದೇ ಇಲ್ಲ.. ಯಾಕೆ ಗೊತ್ತಾ?

ಈಗಂತೂ ಪಕ್ಕದ ಏರಿಯಾಗಳಿಗೂ ಹೋಗಬೇಕಾದರೂ ಸಹ ಗೂಗಲ್‌ ಮ್ಯಾಪ್ಸ (Google Maps) ಅನಿವಾರ್ಯವಾಗಿಬಿಟ್ಟಿದೆ. ಅಷ್ಟು ಪ್ರಮಾಣದಲ್ಲಿ ನಗರ ಹಾಗೂ ಪಟ್ಟಣಗಳು ಬೆಳೆಯುತ್ತಿವೆ. ಈ ನಡುವೆ ಗೂಗಲ್ ಮ್ಯಾಪ್ಸ್ ನಲ್ಲಿ ಆಗಾಗ್ಗೆ ವಿಶೇಷವಾದ ಫೀಚರ್ಸ್‌ ಅನ್ನು ಪರಿಚಯಿಸಲಾಗುತ್ತಿದ್ದು, ಈ ನಡುವೆ ಪೊಲೀಸರ ದಂಡದಿಂದ ಪಾರಾಗುವಂತೆ ಮಾಡುವ ಮತ್ತೊಂದು ಹೊಸ ಫೀಚರ್ಸ್ ಘೋಷಣೆ ಮಾಡಲಾಗಿದೆ.

ಹೌದು, ಅಜ್ಞಾತ ಸ್ಥಳಕ್ಕೆ ಹೋಗುವವರಿಗೆ ಗೂಗಲ್ ಮ್ಯಾಪ್ಸ್ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತದೆ. ಈ ಕಾರಣಕ್ಕಾಗಿಯೇ ಗೂಗಲ್ ಮ್ಯಾಪ್ಸ್ ಆಪ್‌ಅನ್ನು ಪ್ರಪಂಚದಾದ್ಯಂತ ಹೆಚ್ಚು ಜನರು ಬಳಕೆ ಮಾಡುತ್ತಾರೆ. ಈ ನಡುಗೆ ಈ ಗೂಗಲ್ ಮ್ಯಾಪ್ಸ್ ಅನ್ನು ಯಾರೆಲ್ಲಾ ಬಳಕೆ ಮಾಡುತ್ತಾರೋ ಅವರೆಲ್ಲಾ ಸಂತಸ ಪಡುವ ಸುದ್ದಿಯೊಂದು ಹೊರಬಿದ್ದಿದೆ. ಅದರಲ್ಲೂ ಬೆಂಗಳೂರಲ್ಲಿ ಓಡಾಡುವರಿಗೆ ಇದು ಅತ್ಯಾನುಕೂಲವಾದ ಫೀಚರ್ಸ್ ಆಗಿದೆ. ಹಾಗಿದ್ರೆ, ಏನಿದು ಹೊಸ ಫೀಚರ್ಸ್‌?, ಇದನ್ನು ಆಕ್ಟಿವ್‌ ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಫೀಚರ್ಸ್‌! ನಿಮಗೆ ದಂಡದ ಚಲನ್ ಬರುವುದೇ ಇಲ್ಲ..

ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಸೌಲಭ್ಯ: ಸಾಮಾನ್ಯವಾಗಿ ಟ್ರಾಫಿಕ್‌ ಪೊಲೀಸರು (Traffic Police) ಸವಾರರನ್ನು ತಡೆದು ಅಥವಾ ಕ್ಯಾಮೆರಾ ಮೂಲಕ ಟ್ರ್ಯಾಕ್‌ ಮಾಡಿ ಅವರು ಸಂಚಾರ ನಿಯಮ ಉಲ್ಲಂಘನೆ ಮಾಡಿದ್ರೆ ಅವರಿಗೆ ದಂಡ ಪಾವತಿ ಮಾಡುವಂತೆ ಆನ್‌ಲೈನ್‌ನಲ್ಲಿ ಸಂದೇಶ ಕಳುಹಿಸುತ್ತಾರೆ. ಈ ವೇಳೆ ಹೆಲ್ಮೆಟ್ ಹಾಕದೇ ಇರುವುದು, ತಪ್ಪಾದ ರಸ್ತೆಯಲ್ಲಿ ಸಂಚಾರ ಮಾಡುವುದು ಸೇರಿದಂತೆ ವಿವಿಧ ರೀತಿಯ ಸಂಚಾರ ಉಲ್ಲಂಘನೆಯ ವಿಷಯಗಳಿಗೆ. ಇದೆಲ್ಲಕ್ಕೂ ಪ್ರಮುಖವಾಗಿ ವೇಗದ ಚಾಲನೆಗೂ (Fast driving) ಸಹ ದಂಡ ವಿಧಿಸಲಾಗುತ್ತದೆ ಎಂಬುದು ತಿಳಿದ ವಿಚಾರ.

ಅಂದರೆ ವಾಹನಗಳಲ್ಲಿ ಪ್ರಯಾಣಿಸುವ ಜನರ ಸುರಕ್ಷತೆಗಾಗಿ ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಹಾಗೂ ರಸ್ತೆಗಳಲ್ಲಿ ವಿವಿಧ ರೀತಿಯ ವೇಗದ ಮಿತಿಗಳನ್ನು ವಿಧಿಸಲಾಗಿದೆ. ಪರಿಣಾಮ ವಾಹನಗಳು ನಿಗದಿತ ವೇಗದ ಮಿತಿ ಮೀರಿದಾಗ ದಂಡವನ್ನು ಪಾವತಿ ಮಾಡಲೇಬೇಕು. ಈ ರೀತಿಯ ಅದೆಷ್ಟೋ ದಂಡದ ಚೀಟಿಗಳು ನಿಮ್ಮ ಮನೆಗೆ ಬಂದಿರಬಹುದೇನೋ. ಆದರೆ, ಇನ್ಮುಂದೆ ಈ ಸಮಸ್ಯೆ ಇರುವುದಿಲ್ಲ. ಯಾಕೆಂದರೆ ಆ ರಸ್ತೆಯಲ್ಲಿ ಎಷ್ಟು ವೇಗವಾಗಿ ಸಂಚಾರ ಮಾಡಬೇಕು ಅನ್ನೋದನ್ನು ತಿಳಿಸಲಿದೆ. ಹಾಗಿದ್ರೆ, ಗೂಗಲ್ ಮ್ಯಾಪ್ಸ್ ನಲ್ಲಿ ಈ ಸೌಲಭ್ಯವನ್ನು ಬಳಕೆ ಮಾಡುವುದು ಹೇಗೆ ಅನ್ನೋದನ್ನು ನೋಡಿ.

ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಫೀಚರ್ಸ್‌! ನಿಮಗೆ ದಂಡದ ಚಲನ್ ಬರುವುದೇ ಇಲ್ಲ..

ಹಂತ 1: ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇರುವ ಗೂಗಲ್ ಮ್ಯಾಪ್ಸ್ ಅನ್ನು ಓಪನ್‌ ಮಾಡಿ, ನಂತರ ಗೂಗಲ್ ಮ್ಯಾಪ್ಸ್ ನಲ್ಲಿ ಕಾಣಿಸಿಕೊಳ್ಳುವ ಖಾತೆ ಸೆಟ್ಟಿಂಗ್‌ ವಿಭಾಗದ ಮೇಲೆ ಕ್ಲಿಕ್‌ ಮಾಡಿ. ನಂತರದಲ್ಲಿ ನ್ಯಾವಿಗೇಷನ್ ಸೆಟ್ಟಿಂಗ್ಸ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ. ಇದಾದ ಬಳಿಕ ಡ್ರೈವಿಂಗ್ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.

ಹಂತ 2: ಇದನ್ನು ಮಾಡಿದ ಮೇಲೆ ನಿಮಗೆ ಡ್ರೈವಿಂಗ್ ಆಯ್ಕೆಯಲ್ಲಿ ಸ್ಪೀಡೋಮೀಟರ್ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಈ ಸ್ಪೀಡೋಮೀಟರ್ ಅನ್ನು ಕ್ಲಿಕ್ ಮಾಡಿದ ನಂತರದಲ್ಲಿ ಗೂಗಲ್ ಮ್ಯಾಪ್ಸ್ ನೊಂದಿಗೆ ನ್ಯಾವಿಗೇಟ್ ಮಾಡುವಾಗ ಜಿಪಿಎಸ್‌ ವೇಗವನ್ನು ತೋರಿಸುತ್ತದೆ. ಈ ಫೀಚರ್ಸ್‌ ವಾಹನದ ವೇಗ ಹೆಚ್ಚಾದಂತೆ ಎಚ್ಚರಿಕೆಯ ಮೆಸೆಜ್‌ ಅನ್ನು ವಿಶೇಷ ರೀತಿಯಲ್ಲಿ ತೋರಿಸುತ್ತದೆ.

ಗೂಗಲ್ ಮ್ಯಾಪ್ಸ್ ನಲ್ಲಿ ಹೊಸ ಫೀಚರ್ಸ್‌! ನಿಮಗೆ ದಂಡದ ಚಲನ್ ಬರುವುದೇ ಇಲ್ಲ..

ಇದು ಹೇಗೆ ಕೆಲಸ ಮಾಡಲಿದೆ?: ಗೂಗಲ್ ಮ್ಯಾಪ್ಸ್ ಪೂರ್ಣ ವೇಗದ ಮಿತಿ ಎಚ್ಚರಿಕೆಗಳನ್ನು ನೀಡಲು ಎಐ ತಂತ್ರಜ್ಞಾನ ಬಳಕೆ ಮಾಡುತ್ತದೆ. ಅದರಲ್ಲಿ ಗಲ್ಲಿ ವೀಕ್ಷಣೆ ಚಿತ್ರಗಳು ಮತ್ತು ಮೂರನೇ ವ್ಯಕ್ತಿಯ ಚಿತ್ರಗಳನ್ನು ಸಹ ಈ ವೇಳೆ ಬಳಕೆ ಮಾಡುತ್ತದಂತೆ. ಪ್ರಪಂಚದಾದ್ಯಂತ ನೂರಕ್ಕೂ ಹೆಚ್ಚು ಗುರುತಿನ ಸಂಕೇತಗಳಲ್ಲಿ ಇದನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಗೂಗಲ್ ಮ್ಯಾಪ್ಸ್ ನಲ್ಲಿ ಎಐ ಮಾದರಿಯು ಎಚ್ಚರಿಕೆಯ ಕೋಡ್ ಅನ್ನು ಪತ್ತೆಹಚ್ಚಿದರೆ, ಅದು ಜಿಪಿಎಸ್‌ ವಿವರಗಳೊಂದಿಗೆ ಹೋಲಿಕೆಯನ್ನು ಮಾಡಿ ಅದಕ್ಕೆ ಅನುಗುಣವಾಗಿ ವೇಗ ನಿಯಂತ್ರಣ ನಿಯಮಗಳನ್ನು ನವೀಕರಿಸುತ್ತದಂತೆ.

Best Mobiles in India

English summary
New features have been introduced in Google Maps, through which traffic violations can be reduced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+