Home
ಸುದ್ದಿಜಾಲ

ನಿಮ್ಮದು ಲಾಲಿಪಪ್ ಫೋನಾ ಹಾಗಿದ್ರೆ ಚಿಂತೇನೇ ಬೇಡ

By Shwetha

ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಗೂಗಲ್ ಇತ್ತೀಚೆಗೆ ತಾನೇ ಭದ್ರತಾ ಫೀಚರ್‌ಗಳನ್ನು ಅಳವಡಿಸಿದ್ದು ಇದು ಆಂಡ್ರಾಯ್ಡ್‌ಗೆ ಇನ್ನಷ್ಟು ಭದ್ರ ಕೈಗಳಂತೆ ಕಾರ್ಯನಿರ್ವಹಿಸಲಿದೆ. ಭದ್ರತೆ ಆಂಡ್ರಾಯ್ಡ್‌ಗೆ ಹೆಚ್ಚು ಮುಖ್ಯವಾಗಿರುವ ಅಂಶವಾಗಿದ್ದು ಲಾಲಿಪಪ್‌ನಂತಹ ಆಧುನಿಕ ಓಎಸ್‌ನಲ್ಲಿ ಗೂಗಲ್ ಭದ್ರತೆಗೆ ಹೆಚ್ಚು ಒತ್ತು ನೀಡಿದೆ.

ಇದನ್ನೂ ಓದಿ: ನೀವು ಕಂಡರಿಯದ ಲಾಲಿಪಪ್ ಮೋಡಿ ಇದು

ಇಂದಿನ ಲೇಖನದಲ್ಲಿ ಗೂಗಲ್ ಲಾಲಿಪಪ್‌ಗೆ ಒದಗಿಸಿರುವ ಟಾಪ್ ಭದ್ರತಾ ಫೀಚರ್‌ಗಳನ್ನು ಕುರಿತು ತಿಳಿದುಕೊಳ್ಳೋಣ. ಈ ಫೀಚರ್‌ಗಳು ಲಾಲಿಪಪ್‌ಗೆ ಇನ್ನಷ್ಟು ಸವಾಲುಗಳನ್ನು ಎದುರಿಸುವ ಸಾಮರ್ಥ್ಯವನ್ನು ನೀಡಲಿವೆ.

 ಸ್ಮಾರ್ಟ್ ಲಾಕ್

ಸ್ಮಾರ್ಟ್ ಲಾಕ್

ಸ್ಮಾರ್ಟ್‌ಲಾಕ್ ಹೋಮ್‌ಸ್ಕ್ರೀನ್‌ನಲ್ಲಿ ತೆರೆದಲ್ಲಿಂದ ನಿಮ್ಮ ಫೋನ್‌ಗೆ ಭದ್ರತೆಯನ್ನು ಒದಗಿಸುತ್ತದೆ. ಬ್ಲ್ಯೂಟೂತ್ ಪೇರಿಂಗ್ ಅಥವಾ ಎನ್‌ಎಫ್‌ಸಿಯನ್ನು ಬಳಸಿ ಫೋನ್ ಅನ್‌ಲಾಕ್ ಮಾಡುವ ವಿಧಾನವನ್ನು ಇದು ನಿಮಗೆ ತಿಳಿಸಿಕೊಡುತ್ತದೆ. ಲಾಕ್‌ ಸ್ಕ್ರೀನ್‌ನಲ್ಲಿಯೇ ಕೆಲವೊಂದು ಅಧಿಸೂಚನೆಗಳನ್ನು ಪ್ರವೇಶಿಸುವ ವಿಧಾನವನ್ನು ಇದು ತಿಳಿಸಿಕೊಡುತ್ತದೆ.

ಫೇಸ್‌ ಅನ್‌ಲಾಕ್

ಫೇಸ್‌ ಅನ್‌ಲಾಕ್

ಬಳಕೆದಾರರ ಚಿತ್ರವನ್ನು ಅವಲೋಕಿಸುವ ಸಾಮರ್ಥ್ಯವನ್ನು ಈ ಫೀಚರ್ ಹೊಂದಿದೆ. ನಿಮ್ಮ ಫೋನ್ ಅನ್ನು ಬಳಸುತ್ತಿರುವ ವ್ಯಕ್ತಿ ಬೇರೊಬ್ಬನಾದಲ್ಲಿ ಫೋನ್ ಅನ್ನು ಲಾಕ್ ಮಾಡಿಬಿಡುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ರಕ್ಷಿಸಲು ಈ ಫೀಚರ್ ಅತೀ ಅಗತ್ಯವಾಗಿದೆ.

ಎನ್‌ಕ್ರಿಪ್ಶನ್

ಎನ್‌ಕ್ರಿಪ್ಶನ್

ಆಂಡ್ರಾಯ್ಡ್ 5.0 ಲಾಲಿಪಪ್ ಪೂರ್ಣ ಎನ್‌ಕ್ರಿಪ್ಶನ್‌ನೊಂದಿಗೆ ಬಂದಿದ್ದು ನಿಮ್ಮ ಸೆಟ್ಟಿಂಗ್‌ಗಳಲ್ಲಿ ಹಸ್ತಚಾಲಿತವಾಗಿ ನೀವಿದನ್ನು ಆನ್ ಮಾಡಬೇಕಾಗುತ್ತದೆ. ಪೂರ್ಣ ಎನ್‌ಕ್ರಿಪ್ಶನ್ ಪ್ರಥಮ ಬೂಟ್‌ನಲ್ಲಿಯೇ ಕಂಡುಬರುತ್ತದೆ.

SELinux

SELinux

ಮಾಲ್‌ವೇರ್ ದಾಳಿಗಳಿಂದ ನಿಮ್ಮ ಫೋನ್ ಅನ್ನು ರಕ್ಷಿಸುವುದಕ್ಕಾಗಿಯೇ ಆಂಡ್ರಾಯ್ಡ್ ಭದ್ರವಾದ ಅಪ್ಲಿಕೇಶನ್ ಅನ್ನು ಹೊಂದಿದೆ. ಸೆಕ್ಯುರಿಟಿ ಎನ್‌ಹ್ಯಾನ್ಸ್ಡ್ ಲೀನಕ್ಸ್ (SELinux) ಫೋನ್‌ಗೆ ಅತಿ ಸುಭದ್ರವಾದ ಭದ್ರತಾ ಸೌಲಭ್ಯವನ್ನು ಒದಗಿಸುತ್ತದೆ.

ಉತ್ತಮ ಇಂಟಿಗ್ರೇಶನ್

ಉತ್ತಮ ಇಂಟಿಗ್ರೇಶನ್

ಆಂಡ್ರಾಯ್ಡ್ ವೇರ್ ಸ್ಮಾರ್ಟ್‌ವಾಚ್ ಅಥವಾ ಸ್ಮಾರ್ಟ್ ಟಿವಿಯೊಂದಿಗೆ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನೀವು ಪೇರ್ ಮಾಡಿದಾಗ ಡೀಫಾಲ್ಟ್ ಆಗಿ ನಿಮ್ಮ ಫೋನ್ ಲಾಕ್ ಆಗುತ್ತದೆ.

ಸೆಟ್ಟಿಂಗ್‌ಗಳಿಗೆ ತ್ವರಿತ ಸ್ವೈಪ್

ಸೆಟ್ಟಿಂಗ್‌ಗಳಿಗೆ ತ್ವರಿತ ಸ್ವೈಪ್

ಡಿಸ್‌ಪ್ಲೇ ಹೊಳಪನ್ನು ಹೆಚ್ಚಿಸುವ, ವೈಫೈ ಮತ್ತು ಬ್ಲ್ಯೂಟೂತ್ ಸಂಪರ್ಕಗಳಿಗಾಗಿ ನಿಮ್ಮ ಡಿವೈಸ್‌ನ ಮೇಲ್ಭಾಗದಲ್ಲಿ ಎರಡು ಬಾರಿ ಸ್ವೈಪ್ ಮಾಡುವುದರಿಂದ ಇವುಗಳನ್ನು ಸಕ್ರಿಯಗೊಳಿಸಬಹುದಾಗಿದೆ.

ಬ್ಯಾಟರಿ ಬಳಕೆ

ಬ್ಯಾಟರಿ ಬಳಕೆ

ನಿಮ್ಮ ಲಾಲಿಪಪ್ ಇರುವ ಫೋನ್‌ನಲ್ಲಿ ಬ್ಯಾಟರಿ ಬಳಕೆಯನ್ನು ಗಮನಿಸಲು ನ್ಯೂ ಬ್ಯಾಟರಿ ಸೇವರ್ ಮೋಡ್ ಅನ್ನು ನೀವು ಹೊಂದಿಸಬೇಕಾಗುತ್ತದೆ.

ಗೆಸ್ಟ್ ಮೋಡ್‌ನಲ್ಲಿ ಡಿವೈಸ್ ಹಂಚುವುದು

ಗೆಸ್ಟ್ ಮೋಡ್‌ನಲ್ಲಿ ಡಿವೈಸ್ ಹಂಚುವುದು

ನಿಮ್ಮ ಫೋನ್ ಪರದೆಯ ಮೇಲ್ಭಾಗದಿಂದ ಕೆಳಕ್ಕೆ ಎರಡು ಬಾರಿ ಸ್ವೈಪ್ ಮಾಡಿ ನಂತರ ತ್ವರಿತ ಸೆಟ್ಟಿಂಗ್ಸ್ ಪ್ಯಾನೆಲ್‌ಗೆ ಹೋಗಿ. ಪರದೆಯ ಬಲ ಮೇಲ್ಭಾಗ ಮೂಲೆಯಲ್ಲಿ "ಗೆಸ್ಟ್ ಸೇರಿಸಿ" ಆಯ್ಕೆಮಾಡಿ.

ಸೆಟ್ಟಿಂಗ್ಸ್ ಪ್ರವೇಶಿಸಲು

ಸೆಟ್ಟಿಂಗ್ಸ್ ಪ್ರವೇಶಿಸಲು

ಎರಡು ಬೆರಳುಗಳನ್ನು ಬಳಸಿ ಕೆಳಕ್ಕೆ ಸ್ವೈಪ್ ಮಾಡಿ ಸುಲಭವಾಗಿ ಸೆಟ್ಟಿಂಗ್ಸ್ ಪ್ರವೇಶಿಸಬಹುದು

ಡಿವೈಸ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸುವುದು

ಡಿವೈಸ್ ಅನ್ನು ಸೈಲೆಂಟ್ ಮೋಡ್‌ನಲ್ಲಿರಿಸುವುದು

ಸೆಟ್ಟಿಂಗ್ಸ್ > ಸೌಂಡ್ ಏಂಡ್ ನೋಟಿಫಿಕೇಶನ್ಸ್ > ಆಪ್ ನೋಟಿಫಿಕೇಶನ್ಸ್

Best Mobiles in India

English summary
Google recently released better and best security features to its lollipop os. Now smartphone users put an end to their mobile security problems. Here are the security tips for lollipop users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+