ನೀವು ಕಂಡರಿಯದ ಲಾಲಿಪಪ್ ಮೋಡಿ ಇದು

By Shwetha
|

ನಾವು ಮಕ್ಕಳಾಗಿರುವಾಗ ಕೂಡ ಲಾಲಿಪಪ್ ಅನ್ನು ನೆನೆದು ಖುಷಿಪಡುವುದಕ್ಕಿಂತ ಹೆಚ್ಚಾಗಿ ಡಿವೈಸ್‌ನ ಓಎಸ್ ಆಂಡ್ರಾಯ್ಡ್ ಲಾಲಿಪಪ್‌ಗೆ ಹೆಚ್ಚು ಮನಸೋಲುತ್ತಿದ್ದೇವೆ. ಕಿಟ್‌ಕ್ಯಾಟ್‌ನ ನಂತರದ ಆವೃತ್ತಿಯಾಗಿ ಹೊರಬಂದಿರುವ ಆಂಡ್ರಾಯ್ಡ್ ಲಾಲಿಪಪ್ ನಿಜಕ್ಕೂ ಅದ್ಭುತ ವಿಶೇಷತೆಗಳನ್ನು ಹೊಂದಿದೆ ಎಂದರೆ ನೀವು ನಂಬಲೇಬೇಕು.

ಇದನ್ನೂ ಓದಿ: ಖರೀದಿಸಲು ಅತ್ಯುತ್ತಮವಾಗಿರುವ ಸೂಪರ್ ಫೋನ್ಸ್

ಕಿಟ್‌ಕ್ಯಾಟ್ ಮತ್ತು ಲಾಲಿಪಪ್‌ಗಿರುವ ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳೋಣ. ಆಂಡ್ರಾಯ್ಡ್ ಕಿಟ್‌ಕ್ಯಾಟ್‌ಗಿಂತಲೂ ಲಾಲಿಪಪ್ ಏಕೆ ಅತಿ ವಿಶಿಷ್ಟ ಮತ್ತು ಕಿಟ್‌ಕ್ಯಾಟ್ ಮಾಡದೇ ಇರುವ ಕೆಲವೊಂದು ವಿಶೇಷತೆಗಳನ್ನು ಅದ್ಭುತಗಳನ್ನು ಲಾಲಿಪಪ್ ಮಾಡಲಿದೆ ಎಂಬುದು ನಿಮಗೆ ಗೊತ್ತೇ? ಹಾಗಿದ್ದರೆ ಆ ವಿಶೇಷತೆಗಳೇನು ಎಂಬುದನ್ನು ಕೆಳಗಿನ ಪಾಯಿಂಟ್‌ಗಳಲ್ಲಿ ಅರಿತುಕೊಳ್ಳೋಣ.

#1

#1

ಐಓಎಸ್ ತನ್ನ ಕಂಟ್ರೋಲ್ ಸೆಂಟರ್‌ನಲ್ಲಿ ಇಟ್ಟಿರುವಂತೆ ನಮ್ಮ ಅಧಿಸೂಚನೆಗಳಲ್ಲಿ ಫ್ಲ್ಯಾಶ್‌ಲೈಟ್ ಅನ್ನು ಅಳವಡಿಸಿಲ್ಲ ಎಂದು ಹೆಚ್ಚಿನವರು ಅಂದುಕೊಳ್ಳುತ್ತಾರೆ. ಆದರೆ ಲಾಲಿಪಪ್ ಬದಲಾವಣೆಗಳನ್ನು ತರಲಿದೆ. ಯಾವುದೇ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಅಳವಡಸದೇ, ಅಧಿಸೂಚನೆ ಪ್ಯಾನೆಲ್ ಅನ್ನು ಕೆಳಕ್ಕೆ ಎಳೆಯುವ ಮೂಲಕ ಫ್ಲ್ಯಾಶ್ ಲೈಟ್ ಅನ್ನು ಬಳಸಬಹುದಾಗಿದೆ. ನಿಮ್ಮ ಫೋನ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#2

#2

ಆಂಡ್ರಾಯ್ಡ್ ಲಾಲಿಪಪ್‌ನಲ್ಲಿ ಬ್ಯಾಟರಿಗೆ ಹೆಚ್ಚಿನ ಮಹತ್ವವವನ್ನು ಕೊಡಲಾಗಿದೆ. ಬ್ಯಾಟರಿ ದೀರ್ಘತೆಗೆ ಆಂಡ್ರಾಯ್ಡ್ ಲಾಲಿಪಪ್ ಹೆಚ್ಚಿನ ವಿಶೇಷತೆಗಳನ್ನು ಒಳಗೊಂಡಿದೆ. ಕಿಟ್‌ಕ್ಯಾಟ್ ನಲ್ಲಿ ಕೂಡ ಈ ವಿಶೇಷತೆಗಳನ್ನು ನಮಗೆ ಕಾಣುವುದು ಅತಿ ಕಷ್ಟವಾಗಿದೆ. ನಿಮ್ಮ ಫೋನ್ ಚಾರ್ಜ್ ಆಗುವುದಕ್ಕೆ ಎಷ್ಟು ಸಮಯಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಬ್ಯಾಟರಿ ವಿನಿಯೋಗದ ಮಾಹಿತಿಯನ್ನು ನೀಡಲು ಸಣ್ಣ ಗ್ರಾಫ್ ಅನ್ನು ಕೂಡ ನಮಗೆ ಕಾಣಬಹುದಾಗಿದೆ.

#3

#3

ವಿಂಡೋಸ್‌ನಲ್ಲಿ ವಿಭಿನ್ನ ಬಳಕೆದಾರರು ಇರುವಂತೆ, ಗೆಸ್ಟ್ ಯೂಸರ್‌ಗಳನ್ನು ಸೇರಿಸುವ ಸ್ವಾತಂತ್ರ್ಯವನ್ನು ಲಾಲಿಪಪ್ ನಿಮಗೆ ನೀಡುತ್ತದೆ. ಈ ದಿಸೆಯಲ್ಲಿ, ಇತರರು ವೀಕ್ಷಿಸಬಹುದಾದ ಮಾಹಿತಿಯ ಪ್ರಮಾಣವನ್ನು ನೀವು ಸೀಮಿತಗೊಳಿಸಬಹುದು.

#4

#4

ಫ್ಲ್ಯಾಪಿ ಬರ್ಡ್‌ನ ಹಳೆಯ ಆವೃತ್ತಿ ನಿಮಗೆ ಬೇಜಾರಾಯಿತು ಎಂದಾದಲ್ಲಿ ಗೇಮ್‌ನ ಮಾರ್ಪಡಿತ ಆವೃತ್ತಿಯನ್ನು ಲಾಲಿಪಪ್ ನಿಮಗೆ ಒದಗಿಸುತ್ತದೆ.

#5

#5

ಬಳಕೆದಾರರಿಗಾಗಿ ಅಧಿಸೂಚನೆ ಪ್ಯಾನೆಲ್ ಅನ್ನು ತುಂಬಾ ಸರಳವಾಗಿಸಿದ್ದಾರೆ. ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ವಿವರವಾದ ಅಧಿಸೂಚನೆಗಳನ್ನು ವೀಕ್ಷಿಸಬಹುದಾಗಿದೆ.

#6

#6

ಲಾಲಿಪಪ್‌ನಲ್ಲಿ ಸೇರಿಸಿರುವ ಸ್ಮಾರ್ಟ್ ವಿಶೇಷತೆಯಾಗಿದೆ ವಿಶ್ವಾಸಾರ್ಹ ಸ್ಥಳಗಳು. ವಿಶ್ವಾಸಾರ್ಹ ಸ್ಥಳಗಳಲ್ಲಿ ತಮ್ಮ ಫೋನ್‌ಗಳನ್ನು ಲಾಕ್ ಮಾಡದೇ ಬಳಕೆದಾರರು ನಿಶ್ಚಿಂತರಾಗಿರಬಹುದು.

#7

#7

ಸಾಫ್ಟ್ ಕೀಯನ್ನು ಲಾಲಿಪಪ್‌ನಲ್ಲಿ ಮರುವಿನ್ಯಾಸಗೊಳಿಸಲಾಗಿದ್ದು ಇದು ನೋಡಲು ಸಣ್ಣದಾಗಿ ಮತ್ತು ಸ್ಮಾರ್ಟ್ ಆಗಿ ಕಂಡುಬಂದಿದೆ.

#8

#8

ಆಂಡ್ರಾಯ್ಡ್ ಲಾಲಿಪಪ್‌ನಲ್ಲಿ ಮಲ್ಟಿ ಟಾಸ್ಕಿಂಗ್ ಅನ್ನು ಸಂಪೂರ್ಣವಾಗಿ ಬದಲಾಯಿಸಲಾಗಿದೆ. ಅಪ್ಲಿಕೇಶನ್‌ ಅನ್ನು ಪ್ರವೇಶಿಸುವ ಮುನ್ನ ಹೆಚ್ಚಿನ ವಿವರಗಳನ್ನು ನಿಮಗೆ ಪ್ರವೇಶಿಸಲು ಸಾಧ್ಯ.

#9

#9

ನಿಮ್ಮ ಫೋನ್‌ನಲ್ಲಿ ಅಪ್ಲಿಕೇಶನ್‌ಗಳು ಅಧಿಸೂಚನೆಗಳು ಭರ್ತಿಯಾಗಿದೆ ಎಂದಾದಲ್ಲಿ ನಿಮ್ಮ ಅಪ್ಲಿಕೇಶನ್‌ಗಳನ್ನು ನಿಮಗೆ ಆದ್ಯತೆಗೆ ಅನುಸಾರವಾಗಿ ಕನಿಷ್ಟಗೊಳಿಸಬಹುದಾಗಿದೆ.

#10

#10

ನಿಮ್ಮ ಫೋನ್‌ಗೆ ಲಾಲಿಪಪ್ ಅನ್ನು ನೀವು ಅಳವಡಿಸಿದ್ದೀರಿ ಎಂದಾದಲ್ಲಿ ಯಾವುದೇ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ನೀವು ಇನ್‌ಸ್ಟಾಲ್ ಮಾಡಬೇಕಾಗಿಲ್ಲ. ಡಾಂಗಲ್‌ಗಳಿಂದ ಮೀಡಿಯಾವನ್ನು ಸ್ಟ್ರೀಮ್ ಮಾಡಬೇಕು ಎಂದು ಬಯಸುವವರಿಗೆ, ಅಧಿಸೂಚನೆ ಪ್ಯಾನಲ್‌ಗೆ ಹೋಗುವುದು ಮತ್ತು ಕಾಸ್ಟ್ ಸ್ಕ್ರೀನ್‌ಗೆ ತಟ್ಟುವುದು ಅತಿ ಸರಳವಾಗಿದೆ.

Best Mobiles in India

English summary
This article tells about Android 5.0 Lollipop: 10 exciting new features you won’t find on KitKat.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X