Home
ಸುದ್ದಿಜಾಲ

ಅಂತೂ ಬಂದೇ ಬಿಡ್ತು ಕೋಕಾ-ಕೋಲಾ ಸ್ಮಾರ್ಟ್‌ಫೋನ್‌!..ಇದರ ಬೆಲೆ ಎಷ್ಟು?

ಬಹುನಿರೀಕ್ಷಿತ ಕೋಕಾ ಕೋಲಾ ಎಡಿಷನ್‌ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆ ಆಗಿದೆ. ರಿಯಲ್‌ಮಿ ಸಂಸ್ಥೆಯು ಈ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್ ಮಾಡಿದ್ದು, ಈ ಫೋನ್‌ ಈಗಾಗಲೇ ಮಾರುಕಟ್ಟೆಯಲ್ಲಿ ಭಾರೀ ಕುತೂಹಲ ಸೃಷ್ಠಿಸಿದೆ. ನೂತನ ಕೋಕಾ ಕೋಲಾ ಎಡಿಷನ್‌ ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ 108 ಮೆಗಾ ಪಿಕ್ಸಲ್‌ ಸೆನ್ಸಾರ್‌ ಕ್ಯಾಮೆರಾವನ್ನು ಒಳಗೊಂಡಿದ್ದು, 5,000mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದೆ.

ಅಂತೂ ಬಂದೇ ಬಿಡ್ತು ಕೋಕಾ-ಕೋಲಾ ಸ್ಮಾರ್ಟ್‌ಫೋನ್‌!..ಇದರ ಬೆಲೆ ಎಷ್ಟು?

ಹೌದು, ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ (Realme 10 Pro 5G Coca-Cola Edition) ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ಫೋನ್‌ 8GB + 128GB ಸ್ಟೋರೇಜ್‌ ಆಯ್ಕೆಯನ್ನು ಪಡೆದಿದ್ದು, ಡ್ಯುಯಲ್‌ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ 33W SuperVOOC ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಪಡೆದಿರುವುದು ಪ್ರಮುಖ ಆಕರ್ಷಣೆ ಎನಿಸಿದೆ. ಹಾಗಾದರೆ ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನಿನ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕೋಕಾ-ಕೋಲಾ ಎಡಿಷನ್‌ ಫೋನ್‌ : ಡಿಸ್‌ಪ್ಲೇ ವಿನ್ಯಾಸ

ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ 6.72 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಅನ್ನು ಪಡೆದಿದೆ. ಇದು 120Hz ರಿಫ್ರೆಶ್ ರೇಟ್, 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 93.76 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ.

ಅಂತೂ ಬಂದೇ ಬಿಡ್ತು ಕೋಕಾ-ಕೋಲಾ ಸ್ಮಾರ್ಟ್‌ಫೋನ್‌!..ಇದರ ಬೆಲೆ ಎಷ್ಟು?

ಕೋಕಾ-ಕೋಲಾ ಎಡಿಷನ್‌ ಫೋನ್‌ : ಪ್ರೊಸೆಸರ್‌ ಪವರ್

ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ 6nm ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 8 GB RAM ಮತ್ತು 128 GB ಇನ್‌ಬಿಲ್ಟ್‌ ಸ್ಟೋರೇಜ್‌ ಪಡೆದುಕೊಂಡಿದೆ. ಇದಲ್ಲದೆ RAM ಅನ್ನು 16GB ವರೆಗೆ ವಿಸ್ತರಿಸಬಹುದಾಗಿದೆ. ಇದರೊಂದಿಗೆ ಮೆಮೊರಿ ಕಾರ್ಡ್‌ ಮೂಲಕ 1 TB ವರೆಗೆ ಸ್ಟೋರೇಜ್‌ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕೋಕಾ-ಕೋಲಾ ಎಡಿಷನ್‌ ಫೋನ್‌ : ಕ್ಯಾಮೆರಾ ರಚನೆ ಮಾಹಿತಿ

ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸ್ಯಾಮ್‌ಸಂಗ್ HM6 ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಪೋರ್ಟ್ರೇಟ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಅಂತೂ ಬಂದೇ ಬಿಡ್ತು ಕೋಕಾ-ಕೋಲಾ ಸ್ಮಾರ್ಟ್‌ಫೋನ್‌!..ಇದರ ಬೆಲೆ ಎಷ್ಟು?

ಕೋಕಾ-ಕೋಲಾ ಎಡಿಷನ್‌ ಫೋನ್‌ : ಬ್ಯಾಟರಿ ಬ್ಯಾಕ್‌ಅಪ್‌

ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದ್ದು, 33W SuperVOOC ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದರಿಂದ ಕೇವಲ 20 ನಿಮಿಷಗಳಲ್ಲಿ 50% ಚಾರ್ಜ್‌ ಮಾಡಬಹುದಾಗಿದೆ.

ಕೋಕಾ-ಕೋಲಾ ಎಡಿಷನ್‌ ಫೋನ್‌ : ಬೆಲೆ ಮತ್ತು ಲಭ್ಯತೆ ಮಾಹಿತಿ

ಭಾರತದಲ್ಲಿ ರಿಯಲ್‌ಮಿ 10 ಪ್ರೊ 5G ಕೋಕಾ-ಕೋಲಾ ಎಡಿಷನ್‌ ಫೋನ್‌ 8GB RAM + 128 GB ಸ್ಟೋರೇಜ್ ರೂಪಾಂತರದ ಬೆಲೆ 20,999 ರೂ. ಆಗಿದೆ. ಅಂದಹಾಗೆ ರಿಯಲ್‌ಮಿ ಸಂಸ್ಥೆಯು 1000 ಯೂನಿಟ್‌ಗಳನ್ನು ಮಾತ್ರ ಮಾರಾಟ ಮಾಡುವುದಾಗಿ ತಿಳಿಸಿದೆ.

Best Mobiles in India

English summary
Realme 10 Pro 5G Coca-Cola Edition is powered by a Qualcomm Snapdragon 695 processor and a 5000mAh battery. know more details in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+