Realme ಪ್ರಿಯರಿಗೆ ಬೊಂಬಾಟ್ ಆಫರ್; ಈ ಫೋನ್‌ಗೆ ಒಂದು ವರ್ಷದ ಹೆಚ್ಚುವರಿ ವಾರಂಟಿ ಸೌಲಭ್ಯ!
ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದ್ದು, ಈ ನಡುವೆ ಕಂಪೆನಿ ಸಹ ವಿವಿಧ ಫೀಚರ್ಸ್ ಆಯ್ಕೆ ಇರುವ ಹೊಸ ಫೋನ್‌ಗಳನ್ನು ಅನಾವರಣ ಮಾಡಿಕೊಂಡು ಬರುತ್ತಲೇ ಇದೆ. ಇದೆಲ್ಲದರ ಜೊತೆಗೆ ಬಹಳ ವಿಶೇಷ ಎಂಬಂತೆ ಈ ಫೋನ್‌ಗೆ ಒಂದು ವರ್ಷದ ಹೆಚ್ಚುವರಿ ವಾರಂಟಿ ಸೌಲಭ್ಯ ನೀಡಲಾಗಿದೆ.
ಹೌದು, ರಿಯಲ್‌ಮಿ 11 ಪ್ರೊ (Realme 11 Pro) ಸರಣಿಯು ಈಗ ಹೊಸ ಒಂದು ವರ್ಷದ ವಾರಂಟಿ ವಿಸ್ತರಣೆ ಪ್ಲ್ಯಾನ್‌ನೊಂದಿಗೆ ಲಭ್ಯ ಇದೆ. ಈ ಮೂಲಕ ರಿಯಲ್ ಮಿ ಇತರೆ ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡಿದೆ. ಈ ಫೋನ್ ಅನ್ನು ಈ ತಿಂಗಳ ಆರಂಭದಲ್ಲಷ್ಟೇ ಅನಾವರಣ ಮಾಡಲಾಗಿತ್ತು. ಹಾಗಿದ್ರೆ, ಬನ್ನಿ ಈ ವಿಶೇಷ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಬೆಲೆ ವಿವರಗಳನ್ನು ಗಮನಿಸೋಣ.

ರಿಯಲ್‌ಮಿ 11 ಪ್ರೊ ಸರಣಿ: ಮೊದಲೇ ತಿಳಿಸಿದಂತೆ ಈ ತಿಂಗಳ ಆರಂಭದಲ್ಲಿ ಭಾರತದಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಾಗಿತ್ತು. ಈ ಸರಣಿಯಲ್ಲಿ ರಿಯಲ್‌ಮಿ 11 ಪ್ರೊ ಮತ್ತು ರಿಯಲ್‌ಮಿ 11 ಪ್ರೊ ಪ್ಲಸ್ ಅನ್ನು ಫೋನ್ ಗಳಿವೆ. ಈ ಫೋನ್‌ಗಳ ಕಡೆ ಗ್ರಾಹಕರನ್ನು ಆಕರ್ಷಿಸುವಂತೆ ಮಾಡಲು ಹೊಸ ವಾರಂಟಿ ಪ್ಲ್ಯಾನ್ ಅನ್ನು ಪ್ರಕಟಿಸಿದೆ. ಈ ಮೂಲಕ ಈ ಫೋನ್ ಖರೀದಿದಾರರಿಗೆ ಸಾಕಷ್ಟು ಪ್ರಯೋಜನ ಸಹ ಸಿಗಲಿದೆ
ಹೊಸ ವಾರಂಟಿಯ ಪ್ರಯೋಜನ ಏನು?: ರಿಯಲ್‌ಮಿಯ ಒಂದು ವರ್ಷದ ವಾರಂಟಿ ವಿಸ್ತರಣೆಯು ನಿಮಗೆ 1,299ರೂ.ಗಳನ್ನು ಹಿಂತಿರುಗಿಸುತ್ತದೆ. ಅಂದರೆ ಅನಿಯಮಿತ ಸಂಖ್ಯೆಯ ದುರಸ್ತಿ ವಿನಂತಿಗಳನ್ನು ಇದು ಒಳಗೊಂಡಿದ್ದು, ಈ ಯೋಜನೆಯೊಂದಿಗೆ ನಿಮ್ಮ ನೋಂದಾಯಿತ ಡಿವೈಸ್ ಅನ್ನು ಬದಲಿಸುವ ಆಯ್ಕೆಯನ್ನೂ ಸಹ ಪಡೆದುಕೊಳ್ಳಬಹುದು. ಇದಿಷ್ಟು ಮಾತ್ರವಲ್ಲದೆ ಆಕ್ಸಿಡೆಂಟಲ್ ವಾರಂಟಿ ಅಥವಾ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲ್ಯಾನ್ ಅನ್ನು ಸಹ ಖರೀದಿಸಬಹುದಾಗಿದ್ದು, ಯಾವುದೇ ಹಾನಿಗೂ ಪರಿಹಾರ ಸಿಗಲಿದೆ.
ರಿಯಲ್‌ಮಿ 11 ಪ್ರೊ ಸರಣಿಯ ಪ್ರಮುಖ ಫೀಚರ್ಸ್: ರಿಯಲ್‌ಮಿ 11 ಪ್ರೊ ಫೋನ್ 120Hz ರಿಫ್ರೆಶ್ ರೇಟ್‌ನೊಂದಿಗೆ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಫೋನ್ ಡ್ಯುಯಲ್ ರಿಯಲ್ ಕ್ಯಾಮೆರಾ ಆಯ್ಕೆ ಹೊಂದಿದೆ. ಅದರಲ್ಲಿ 100 MP ಕ್ಯಾಮೆರಾ ವಿಶೇಷ ಎನಿಸಿದೆ. ಇನ್ನು 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 67W ವೇಗದ ಚಾರ್ಜಿಂಗ್‌ಗೆ ಬೆಂಬಲ ನೀಡಲಿದೆ.
ರಿಯಲ್‌ಮಿ 11 ಪ್ರೊ ಪ್ಲಸ್ ನ ಪ್ರಮುಖ ಫೀಚರ್ಸ್: ಈ ಫೋನ್ ಸಹ 120Hz ರಿಫ್ರೆಶ್ ರೇಟ್‌ನೊಂದಿಗೆ ಕರ್ವ್ಡ್ ಅಮೋಲೆಡ್ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಟ್ರಿಪಲ್ ರಿಯಲ್ ಕ್ಯಾಮರಾ ರಚನೆ ಹೊಂದಿದ್ದು, ಅದರಲ್ಲಿ 200 MP ಪ್ರಮುಖ ಎನಿಸಿದೆ. ಇನ್ನು 5,000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, 100W ವೇಗದ ಚಾರ್ಜಿಂಗ್‌ಗೆ ಬೆಂಬಲ ಪಡೆದಿದೆ.
ರಿಯಲ್‌ಮಿ 11 ಪ್ರೊ ಸರಣಿಯ ಬೆಲೆ ಹಾಗೂ ಆಫರ್: ಭಾರತದಲ್ಲಿ ರಿಯಲ್‌ಮಿ 11 ಪ್ರೊ 8GB/128GB ವೇರಿಯಂಟ್‌ಗೆ 23,999ರೂ.ಗಳ ಬೆಲೆ ಹೊಂದಿದೆ. ಜೊತೆಗೆ 8GB/256GB ಮತ್ತು 12GB/256GB ವೇರಿಯಂಟ್ ಫೋನ್‌ಗಳು ಕ್ರಮವಾಗಿ 24,999ರೂ.ಗಳು ಮತ್ತು 27,999ರೂ. ಗಳನ್ನು ಹೊಂದಿವೆ. ಇದರೊಂದಿಗೆ ರಿಯಲ್‌ಮಿ 11 ಪ್ರೊ ಪ್ಲಸ್ 5G ಬೆಲೆ ಬೇಸ್ 8GB/256GB ವೇರಿಯಂಟ್‌ಗಾಗಿ 27,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಇದರೊಂದಿಗೆ ಇತರೆ ವೇರಿಯಂಟ್‌ನಲ್ಲೂ ಸಹ ಈ ಫೋನ್ ಲಭ್ಯ ಇದ್ದು, 12GB/256GB ವೇರಿಯಂಟ್‌ನ ಫೋನ್ ಗೆ 29,999ರೂ.ಗಳನ್ನು ನಿಗದಿ ಮಾಡಲಾಗಿದೆ. ಅದಾಗ್ಯೂ ಬಳಕೆದಾರರು ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ 1,000 ರೂಪಾಯಿಗಳ ಹೆಚ್ಚುವರಿ ಫ್ಲಾಟ್ ರಿಯಾಯಿತಿಯನ್ನು ಸಹ ಪಡೆದುಕೊಳ್ಳಬಹುದಾಗಿದೆ.


Click it and Unblock the Notifications








