Home
ಸುದ್ದಿಜಾಲ

ಇಂದು ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ ರಿಯಲ್‌ಮಿ 12+ 5G!..ವಾವ್‌ ಎನಿಸುವ ಫೀಚರ್ಸ್‌!

ಬಹಳ ನಿರೀಕ್ಷೆ ಮೂಡಿಸಿರುವ ರಿಯಲ್‌ಮಿ 12 5G ಹಾಗೂ ರಿಯಲ್‌ಮಿ 12+ 5G ಫೋನ್‌ಗಳು ಇಂದು ಮಾರ್ಚ್‌ 6 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿವೆ. ಬಿಡುಗಡೆಗೂ ಮುನ್ನ ಈ ಫೋನ್‌ಗಳ ಕೆಲವು ಲೀಕ್ ಫೀಚರ್ಸ್‌ ಗ್ರಾಹಕರ ಕುತೂಹಲ ಹೆಚ್ಚಿಸಿದೆ.

ಹೌದು, ರಿಯಲ್‌ಮಿ 12 5G ಹಾಗೂ ರಿಯಲ್‌ಮಿ 12+ 5G ಫೋನ್‌ಗಳು ಇಂದು ಮಧ್ಯಾಹ್ನ 12ಗಂಟೆಗೆ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿವೆ. ಫೋನ್‌ ಲಾಂಚ್‌ ಕಾರ್ಯಕ್ರಮವನ್ನು ಗ್ರಾಹಕರು ಅಧಿಕೃತ ರಿಯಲ್‌ಮಿ ತಾಣದಲ್ಲಿ ವೀಕ್ಷಿಸಬಹುದು. ಅಂದಹಾಗೆ ಈ ಎರಡು ಫೋನ್‌ಗಳು ಮೀಡ್‌ ರೇಂಜ್‌ ಪ್ರೈಸ್‌ ಟ್ಯಾಗ್‌ನಲ್ಲಿ ಕಾಣಿಸಿಕೊಳ್ಳಲಿವೆ ಎನ್ನಲಾಗಿದೆ.

ಇಂದು ಗ್ರ್ಯಾಂಡ್‌ ಎಂಟ್ರಿ ಕೊಡಲಿದೆ ರಿಯಲ್‌ಮಿ 12+ 5G!..ವಾವ್‌ ಎನಿಸುವ ಫೀಚರ್ಸ್‌

ಮಾಹಿತಿ ಪ್ರಕಾರ ರಿಯಲ್‌ಮಿ 12 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿರಲಿದೆ. ಇದರೊಂದಿಗೆ 45W SUPERVOOC ಚಾರ್ಜಿಂಗ್‌ ವ್ಯವಸ್ಥೆ ಪಡೆದಿರುವ ಸೂಚನೆಗಳಿವೆ. ಹಾಗೆಯೇ ಈ ಎರಡು ಮೊಬೈಲ್‌ಗಳು ಹಿಂಭಾಗದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ರಿಂಗ್‌ ಅನ್ನು ಹಾಗೂ ಲೈಟ್‌ ಅನ್ನು ಪಡೆದಿರಲಿದೆ.

ರಿಯಲ್‌ಮಿ 12+ 5G ಫೋನ್‌ 6.67 ಇಂಚಿನ ಫ್ಲಾಟ್ AMOLED ಡಿಸ್‌ಪ್ಲೇ ಅನ್ನು ಹೊಂದಿರಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಪಡೆದಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 1800 × 2400 ಪಿಕ್ಸೆಲ್ ರೆಸಲ್ಯೂಶನ್ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಮೂರು ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೋನಿ LYT-600 ಶೂಟರ್ ಪಡೆದಿರಲಿದೆ.

ಇನ್ನು ಈ ಮೊಬೈಲ್‌ನ ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸಲ್‌ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾ ಪಿಕ್ಸಲ್‌ ಮ್ಯಾಕ್ರೋ ಲೆನ್ಸ್ ಅನ್ನು ಪಡೆದಿರಲಿವೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ ಹಾಗೂ ವೀಡಿಯೊ ಕರೆಗಳಿಗಾಗಿ 16 ಮೆಗಾ ಪಿಕ್ಸಲ್‌ ಫ್ರಂಟ್ ಶೂಟರ್ ಸೌಲಭ್ಯ ಸಹ ಇರಲಿದೆ.

ರಿಯಲ್‌ಮಿ 12+ 5G ಫೋನ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯದಲ್ಲಿ ಲಗ್ಗೆ ಇಡಲಿದ್ದು, ಇದಕ್ಕೆ ಪೂರಕವಾಗಿ 67W SuperVOOC ಫಾಸ್ಟ್‌ ಚಾರ್ಜಿಂಗ್ ಸಪೋರ್ಟ್‌ ಕೂಡಾ ಪಡೆದಿರುವ ನಿರೀಕ್ಷೆಗಳು ಇವೆ. ಇನ್ನು ಈ ಫೋನ್‌ ಇತ್ತೀಚಿನ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5.0 ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ.

ಬರಲಿರುವ ನೂತನ ರಿಯಲ್‌ಮಿ 12+ 5G ಮೊಬೈಲ್‌ 190 ಗ್ರಾಂ ತೂಕ ಪಡೆದಿರಲಿದ್ದು, ಇದು ಸುಮಾರು 163 × 75.5 × 7.9 ಮಿಮೀ ಸುತ್ತಳತೆ ಹೊಂದಿರಲಿದೆ ಎಂದು ಹೇಳಲಾಗಿದೆ. ಹಾಗೆಯೇ ರಿಯಲ್‌ಮಿ 12+ 5G ಫೋನ್‌ 8GB RAM + 256GB ಪಯೋನೀರ್ ಗ್ರೀನ್ ಮತ್ತು ನ್ಯಾವಿಗೇಟರ್ ಬೀಜ್ ಬಣ್ಣದ ಆಯ್ಕೆ ಪಡೆದಿರಲಿದೆ. ಹಾಗೆಯೇ ರಿಯಲ್‌ಮಿ 12 ಫೋನ್‌ 8GB RAM + 128GB ವೇರಿಯಂಟ್‌ ಹಾಗೂ ವುಡ್‌ಲ್ಯಾಂಡ್ ಗ್ರೀನ್ ಮತ್ತು ಟ್ವಿಲೈಟ್ ಪರ್ಪಲ್ ಕಲರ್‌ ಆಯ್ಕೆ ಪಡೆದಿರಲಿದೆ ಎಂದು ಲೀಕ್‌ ಮಾಹಿತಿ ಯಿಂದ ತಿಳಿದು ಬಂದಿದೆ.

ರಿಯಲ್‌ಮಿ 12 5G ಫೋನ್‌ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರಲಿದ್ದು, ಇದಕ್ಕೆ ಅನುಗುಣವಾಗಿ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ ಪವರ್‌ ಸೌಲಭ್ಯ ಹೊಂದಿರಲಿದೆ. ಅಲ್ಲದೇ ಇದು 108ಎಂಪಿ ಕ್ಯಾಮೆರಾ ಪಡೆದಿರಲಿದ್ದು, 3x ಪೋಟ್ರೇಟ್‌ ಜೂಮ್‌ ಸೌಲಭ್ಯ ಸಹ ಸಪೋರ್ಟ್‌ ಮಾಡಲಿದೆ.

Best Mobiles in India

English summary
Realme 12 5G and Realme 12 Plus 5G to launch in India today: price, specifications and more details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+