Realme: ಭಾರತದಲ್ಲಿ ರಿಯಲ್‌ಮಿ 12 5G ಸರಣಿ ಸ್ಮಾರ್ಟ್‌ಫೋನ್ ಲಾಂಚ್! ವಿಶೇಷ ಫೀಚರ್ಸ್
ಬಹುನಿರೀಕ್ಷಿತ ರಿಯಲ್‌ಮಿ 12 5G ಸರಣಿ (Realme 12 5G smartphone) ಸ್ಮಾರ್ಟ್‌ಫೋನ್ ಅನ್ನು ಕೊನೆಗೂ ಇಂದು ಲಾಂಚ್ ಮಾಡಲಾಗಿದೆ. ಈ ಸ್ಮಾರ್ಟ್‌ಫೋನ್ ಬಗ್ಗೆ ಈಗಾಗಲೇ ಸಾಕಷ್ಟು ಲೀಕ್ ಮಾಹಿತಿಗಳು ವರದಿಯಾಗಿದ್ದವು. ಈ ಮೂಲಕ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲನವನ್ನೇ ಉಂಟು ಮಾಡಿತ್ತು.
ಹೌದು, ಇದೀಗ ರಿಯಲ್‌ಮಿ 12 5G ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಖರೀದಿಮಾಡುವವರಿಗೆ ಲಾಂಚ್ ಮಾಡುವ ಮುನ್ನವೇ ಮುಂಗಡ-ಆರ್ಡರ್ ಮಾಡಲು ಅವಕಾಶ ನೀಡಲಾಗಿತ್ತು. ಈಗ ಯಾರೆಲ್ಲಾ ಬುಕ್ ಮಾಡಿದ್ದಾರೋ ಅವರಿಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನೂ ಸಹ ರಿಯಲ್‌ಮಿ ಘೋಷಣೆ ಮಾಡಿದೆ. ಈ ಫೋನ್ ಸರಣಿಯಲ್ಲಿ ಎರಡು ಫೋನ್‌ಗಳಿದ್ದು, ಎರಡೂ ಸಹ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಲಭ್ಯ ಇವೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ಗಳ ಪ್ರಮುಖ ಫೀಚರ್ಸ್ ಹಾಗೂ ಬೆಲೆ ವಿವರ ತಿಳಿಯೋಣ.

ರಿಯಲ್‌ಮಿ 12 5G ಸ್ಮಾರ್ಟ್‌ಫೋನ್ ಸರಣಿ: ರಿಯಲ್‌ಮಿ ತನ್ನ ಮಧ್ಯ ಶ್ರೇಣಿಯ ರಿಯಲ್‌ಮಿ 12 5G ಸರಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರಲ್ಲಿ ರಿಯಲ್‌ಮಿ 12 5G ಮತ್ತು ರಿಯಲ್‌ಮಿ 12+ ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದಾಗಿದೆ. ಅದರಲ್ಲೂ 20,000 ರೂ.ಗಳ ಬೆಲೆಯ ವಿಭಾಗದಲ್ಲಿ ಈ ಫೋನ್ ಸ್ಯಾಮ್‌ಸಂಗ್, ಮೊಟೊರೊಲಾ, ಶಿಯೋಮಿ ಸೇರಿದಂತೆ ಇತರೆ ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡಲಿದೆ.
ರಿಯಲ್‌ಮಿ 12+ 5G ಡಿಸ್‌ಪ್ಲೇ ಮಾಹಿತಿ: ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್ 6.67 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್ ಮತ್ತು 2000 ನಿಟ್ಸ್‌ನ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಇದೆಲ್ಲಕ್ಕಿಂತ ಮಿಗಿಲಾಗಿ ಈ ಸ್ಮಾರ್ಟ್‌ಫೋನ್ ರೈನ್ ವಾಟರ್ ಸ್ಮಾರ್ಟ್‌ಟಚ್ ಫೀಚರ್ಸ್‌ನೊಂದಿಗೆ ಬರುತ್ತದೆ, ಇದು ಮಳೆಯ ಸಮಯದಲ್ಲಿ ಅಥವಾ ಒದ್ದೆಯಾದ ಕೈಗಳಿಂದ ಬಳಕೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ರಿಯಲ್‌ಮಿ 12+ 5G ಪ್ರೊಸೆಸರ್ ವಿವರ: ಈ ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದು 5,50,000 ಕ್ಕಿಂತ ಹೆಚ್ಚು AnTuTu ಸ್ಕೋರ್ ಅನ್ನು ಹೊಂದಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ 8GB RAM ಮತ್ತು 256GB ಇಂಟರ್ ಸ್ಟೋರೇಜ್ ಆಯ್ಕೆಯಲ್ಲಿ ಈ ಫೋನ್ ಲಭ್ಯ ಇದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5.0 ನಲ್ಲಿ ರನ್ ಆಗಲಿದೆ.
ರಿಯಲ್‌ಮಿ 12+ 5G ಕ್ಯಾಮೆರಾ ರಚನೆ: ಇನ್ನು ಈ ಫೋನ್ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್‌ನೊಂದಿಗೆ OIS ಮತ್ತು EIS ಗೆ ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ LYT-600 ಪ್ರಾಥಮಿಕ ಸೆನ್ಸರ್ ಆಯ್ಕೆ ಪಡೆದಿದೆ. ಜೊತೆಗೆ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ ಈ ಫೋನ್ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ.
ರಿಯಲ್‌ಮಿ 12+ 5G ಬ್ಯಾಟರಿ ಸಾಮರ್ಥ್ಯ: ಇನ್ನು ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ ಇದು 67W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5,000 mAh ಸಾಮರ್ಥ್ಯದ ಬ್ಯಾಟರಿಯಿಂದ ಬೆಂಬಲಿತವಾಗಿದೆ.

ರಿಯಲ್‌ಮಿ 12 5G ಡಿಸ್‌ಪ್ಲೇ ಮಾಹಿತಿ: ರಿಯಲ್‌ಮಿ 12 ಸ್ಮಾರ್ಟ್‌ಫೋನ್ 6.72 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, 120Hz ರಿಫ್ರೆಶ್ ರೇಟ್, 180Hz ಟಚ್ ಸ್ಯಾಂಪ್ಲಿಂಗ್ ರೇಟ್ ಮತ್ತು 950 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ.
ರಿಯಲ್‌ಮಿ 12 5G ಪ್ರೊಸೆಸರ್ ಮಾಹಿತಿ: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಮಾಲಿ G57 ಜಿಪಿಯು ಬಲದೊಂದಿಗೆ ಲಭ್ಯ ಇದೆ. ಹಾಗೆಯೇ ಈ ಫೋನ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 5.0 ಅನ್ನು ರನ್ ಮಾಡಲಿದ್ದು, ಮೂರು ವರ್ಷಗಳ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಎರಡು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯುತ್ತದೆ.
ರಿಯಲ್‌ಮಿ 12 5G ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ರಿಯಲ್‌ಮಿ 12 5G ಬ್ಯಾಟರಿ ಸಾಮರ್ಥ್ಯ: ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 45W ಸೂಪರ್‌ವೂಕ್ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನ್‌ನ ಸೈಡ್ ಪ್ಯಾನೆಲ್‌ನಲ್ಲಿ ಡೈನಾಮಿಕ್ ಬಟನ್ ಅನ್ನು ಸಹ ಹೊಂದಿದ್ದು, ಸೌಂಡ್ ಮೋಡ್, ಡಿಎನ್‌ಡಿ ಮೋಡ್, ಸೈಕ್ಲಿಂಗ್ ಮೋಡ್, ಏರ್‌ಪ್ಲೇನ್ ಮೋಡ್ ಮತ್ತು ಕ್ಯಾಮೆರಾ ಶಟರ್‌ನಂತಹ ವಿಭಿನ್ನ ಕಾರ್ಯಗಳಿಗಾಗಿ ಇದನ್ನು ಬಳಕೆ ಮಾಡಬಹುದಾಗಿದೆ.
ರಿಯಲ್‌ಮಿ 12 5G, ರಿಯಲ್‌ಮಿ 12+ 5G ಬೆಲೆ: ರಿಯಲ್‌ಮಿ 12 5G ಸ್ಮಾರ್ಟ್‌ಫೋನ್‌ನ 6GB RAM/128GB ಸ್ಟೋರೇಜ್‌ಗೆ 16,999 ಬೆಲೆ ಇದ್ದು, 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 17,999 ರೂ.ಗಳ ಬೆಲೆ ಇದೆ. ಈ ಫೋನ್‌ಗಳು ವುಡ್‌ಲ್ಯಾಂಡ್ ಗ್ರೀನ್ ಮತ್ತು ಟ್ವಿಲೈಟ್ ಪರ್ಪಲ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.
ಇದರ ಜೊತೆಗೆ ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್‌ನ 8GB RAM/128GB ಸ್ಟೋರೇಜ್ ವೇರಿಯಂಟ್‌ಗೆ 20,999 ರೂ.ಗಳು ಹಾಗೂ 8GB RAM/256GB ಸ್ಟೋರೇಜ್ ವೇರಿಯಂಟ್‌ಗೆ 21,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಈ ಫೋನ್ ನ್ಯಾವಿಗೇಟರ್ ಬೀಜ್ ಮತ್ತು ಪಯೋನೀರ್ ಗ್ರೀನ್ ಬಣ್ಣದ ಆಯ್ಕೆಯಲ್ಲಿ ಲಭ್ಯ ಇದೆ.


Click it and Unblock the Notifications








