Realme: ರಿಯಲ್‌ಮಿ 12 ಲೈಟ್ ಫೀಚರ್ಸ್ ಲೀಕ್: ಸ್ಮಾರ್ಟ್‌ಫೋನ್ ವಲಯದಲ್ಲಿ ಸುನಾಮಿ...
ರಿಯಲ್‌ಮಿ ಫೋನ್‌ಗಳು (Realme phone) ಇತ್ತೀಚೆಗಂತೂ ಸ್ಮಾರ್ಟ್‌ಫೋನ್ ವಲಯದಲ್ಲಿ ದೊಡ್ಡ ಅಲೆಯನ್ನೇ ಉಂಟು ಮಾಡುತ್ತಿವೆ. ಈ ನಡುವೆ ಶೀಘ್ರದಲ್ಲೇ ರಿಯಲ್‌ಮಿ 12 ಲೈಟ್ (Realme 12 Lite) ಸ್ಮಾರ್ಟ್‌ಫೋನ್ ಅನಾವರಣ ಆಗಲಿದೆ ಎನ್ನಲಾಗಿದ್ದು, ಈ ಫೋನ್‌ನ ಕೆಲವು ಪ್ರಮುಖ ಫೀಚರ್ಸ್ ಲೀಕ್ ಆಗಿವೆ.
ಹೌದು, ರಿಯಲ್‌ಮಿ ತನ್ನ ಜನಪ್ರಿಯ 12 ಸರಣಿಗೆ ಹೊಸ ಡಿವೈಸ್ ಅನ್ನು ಆಡ್ ಮಾಡಲು ಮುಂದಾಗಿದೆ. ಈ ಸರಣಿಯಲ್ಲಿ ರಿಯಲ್‌ಮಿ 12 ಪ್ರೊ ಮತ್ತು ಪ್ರೊ+ (Realme 12 Pro and Pro+) ಅನ್ನು ಹೊಂದಿದ್ದು, ಈ ಎರಡೂ ಫೋನ್‌ಗಳೂ ಸಹ ಆಕರ್ಷಕ ವಿನ್ಯಾಸ, ಗುಣಮಟ್ಟದ ಕರ್ವ್ಡ್ ಡಿಸ್‌ಪ್ಲೇ ಮತ್ತು ಅತ್ಯುತ್ತಮ ಕ್ಯಾಮೆರಾ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಈ ವಿಭಾಗಕ್ಕೆ ಈಗ ರಿಯಲ್‌ಮಿ 12 ಲೈಟ್ ಸಹ ಸೇರಿಕೆ ಆಗುತ್ತಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್ ಏನೆಲ್ಲಾ ಫೀಚರ್ಸ್ ಆಯ್ಕೆ ಪಡೆದಿದೆ ನೋಡೋಣ ಬನ್ನಿ.

ರಿಯಲ್‌ಮಿ 12 ಲೈಟ್: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಮಾದರಿ ಸಂಖ್ಯೆಯನ್ನು ಗಮನಿಸಿದ್ರೆ ಇದು ರಿಯಲ್‌ಮಿ C67 (Realme C67) ಗೆ ಹೋಲಿಕೆ ಆಗುತ್ತದೆ ಎಂದು ತಿಳಿದುಬಂದಿದೆ. ಈ ಲೈಟ್ ವೇರಿಯಂಟ್ ಪ್ರೀಮಿಯಂ ಫೀಚರ್ಸ್‌ಗಳಿಗೆ ಹೊಂದಾಣಿಕೆ ಆಗಲಿದ್ದು, ಸ್ಟೋರೇಜ್ ವಿಚಾರದಲ್ಲೂ ಒಂದು ಕೈ ಮುಂದೆ ಇರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಜೆಟ್ ಬೆಲೆ ವಿಭಾಗದಲ್ಲಿ ಕಮಾಲ್ ಮಾಡಲಿದೆ ಎಂದು ತೋರುತ್ತದೆ.
ಈ ಸ್ಮಾರ್ಟ್‌ಫೋನ್ ಅನ್ನು IMEI ಡೇಟಾಬೇಸ್‌ನಲ್ಲಿ RMX3890 ಮಾದರಿ ಸಂಖ್ಯೆಯೊಂದಿಗೆ ಗುರುತಿಸಲಾಗಿದೆ. ಮೊದಲೇ ತಿಳಿಸಿದಂತೆ ಈ ರಿಯಲ್‌ಮಿ 12 ಲೈಟ್ ಮೂಲಭೂತವಾಗಿ ರಿಯಲ್‌ಮಿ C67 ನ ಮರುಬ್ರಾಂಡೆಡ್ ಆವೃತ್ತಿ ಆಗಿರಬಹುದು ಅಥವಾ ಇದೇ ರೀತಿಯ ಫೀಚರ್ಸ್ ಅನ್ನು ಪಡೆದಿರಬಹುದು ಎಂದು ಹೇಳಲಾಗುತ್ತಿದೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ಒಂದೇ ರೀತಿಯ ಫೀಚರ್ಸ್ ಆಯ್ಕೆ ಹೊಂದಿರಲಿವೆ ಎಂದು ನಿರೀಕ್ಷಿಸಲಾಗಿದ್ದು, ಈ ಫೋನ್‌ನ ಲಾಂಚ್ ದಿನಾಂಕವನ್ನು ಇನ್ನೂ ಘೋಷಣೆ ಮಾಡಲಾಗಿಲ್ಲ.

ಕೆಲವು ಪ್ರಮುಖ ಲೀಕ್ ಮಾಹಿತಿಯಂತೆ ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 685 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, 33W ವೇಗದ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ರಚನೆ ಆಯ್ಕೆ ಪಡೆಯಲಿದ್ದು, ವಿಶೇಷ ಶೈಲಿಯನ್ನು ಈ ಫೋನ್ ಪಡೆದಿರಲಿದೆ ಎಂದು ತೋರುತ್ತದೆ.
ಇನ್ನು ರಿಯಲ್‌ಮಿ 12+ 5G ಹಾಗೂ ರಿಯಲ್‌ಮಿ 12 ಪ್ರೊ+ ಸ್ಮಾರ್ಟ್‌ಫೋನ್ ಅನ್ನು ಫೆಬ್ರವರಿ 29 ರಂದು ಮಲೇಷ್ಯಾದಲ್ಲಿ ಲಾಂಚ್ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ರಿಯಲ್‌ಮಿಯ ಮಲೇಷಿಯಾದ ಶಾಖೆಯು ರಿಯಲ್‌ಮಿ 12+ 5G ಯ ಫೋಟೋವನ್ನು ಈಗಾಗಲೇ ಪೋಸ್ಟ್ ಮಾಡಿದ್ದು, ಈ ಮೂಲಕ ಅದರ ವಿನ್ಯಾಸವನ್ನು ಬಹಿರಂಗಪಡಿಸಲಾಗಿದೆ.
ಜೊತೆಗೆ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ ಗಿಂತ ಭಿನ್ನವಾಗಿ, 12+ ಪ್ಲಾಟ್ ವಿನ್ಯಾಸವನ್ನು ಹೊಂದಿದ್ದು, ರಿಯರ್‌ನಲ್ಲಿ ವೃತ್ತಾಕಾರದ ಲೈಟ್ ಆಯ್ಕೆ ಪಡೆದಿದೆ. ಅಲ್ಲದೆ OIS ಹೊಂದಿರುವ ಮುಖ್ಯ ಕ್ಯಾಮೆರಾದೊಂದಿಗೆ ಮೂರು ಕ್ಯಾಮೆರಾಗಳನ್ನು ಈ ಫೋನ್ ಪಡೆದಿದ್ದು, ಇದರ ರಿಯರ್ ಪ್ಯಾನಲ್ ಆಕರ್ಷಕ ಬಣ್ಣದಿಂದ ಕಂಗೊಳಿಸಲಿದೆ.

ಈ ರಿಯಲ್‌ಮಿ 12+ 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 7050 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, 16GB RAM ನೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅದಾಗ್ಯೂ ಈ ಫೋನ್‌ನ ಹೆಚ್ಚಿನ ಫೀಚರ್ಸ್ ಬಗ್ಗೆ ಪ್ರಮುಖ ಮಾಹಿತಿಗಳು ತಿಳಿದುಬಂದಿಲ್ಲ. ನಿಮಗೆ ಈ ಫೋನ್ ಮೇಲೆ ಹೆಚ್ಚಿನ ಆಸಕ್ತಿ ಇದ್ದು, ಎಲ್ಲಾ ರೀತಿಯ ಮಾಹಿತಿ ಪಡೆಯಬೇಕು ಎಂದರೆ ಗಿಜ್‌ಬಾಟ್‌ನೊಂದಿಗೆ ಸಂಪರ್ಕದಲ್ಲಿ ಇರಿ.


Click it and Unblock the Notifications








