ಇಂದಿನಿಂದ ರಿಯಲ್‌ಮಿ 12+ 5G ಫೋನ್ ಪ್ರಿ-ಬುಕಿಂಗ್ ಪ್ರಾರಂಭ!..ಇಲ್ಲಿದೆ ಮಾಹಿತಿ!
ಭಾರೀ ನಿರೀಕ್ಷೆ ಹುಟ್ಟುಹಾಕಿರುವ ರಿಯಲ್‌ಮಿ 12+ 5G ಫೋನ್ ಇಂದು ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದ ಮೂಲಕ ಪ್ರಿ-ಬುಕಿಂಗ್ (Pre-Booking) ಆರಂಭ ಆಗಿದೆ. ಅಂದಹಾಗೆ ಈ ಫೋನ್ ಇದೇ ಮಾರ್ಚ್ 6 ರಂದು ಅಧಿಕೃತವಾಗಿ ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಲಾಂಚ್ ಆಗಲಿದೆ. ಈ ಫೋನಿನ ಬೆಲೆಯು ಲೀಕ್ ಆಗಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಹೌದು, ಇದೇ ಮಾರ್ಚ್ 6 ರಂದು ರಿಯಲ್‌ಮಿ 12 ಫೋನ್ ಜೊತೆಗೆ ರಿಯಲ್‌ಮಿ 12+ 5G ಫೋನ್ ಕೂಡಾ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆದರೆ ಬಿಡುಗಡೆಗೂ ಮುನ್ನವೇ ರಿಯಲ್‌ಮಿ 12+ 5G ಸರಣಿಯ ಪ್ರಿ-ಬುಕಿಂಗ್ ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತಾಣದಲ್ಲಿ ಇಂದು (ಫೆಬ್ರವರಿ 29 ರಿಂದ) ಮಧ್ಯಾಹ್ನ 2 ಗಂಟೆಯಿಂದ ಶುರು ಆಗಲಿದೆ.

ಅಂದಹಾಗೆ ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಚಿಪ್‌ಸೆಟ್ ಪ್ರೊಸೆಸರ್ ಪವರ್ ಸೌಲಭ್ಯ ಇದರೊಂದಿಗೆ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಸೆನ್ಸಾರ್ ಒಳಗೊಂಡಿರುವ ಬಗ್ಗೆ ಸೂಚನೆ ನೀಡಿದೆ.
ಹಾಗೆಯೇ ರಿಯಲ್‌ಮಿ 12 ಫೋನ್ 108 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಪಡೆದಿರಲಿದೆ. ಇಲ್ಲದೇ 5000mAh ಬ್ಯಾಟರಿ ಸೌಲಭ್ಯ ಕೂಡಾ ಒಳಗೊಂಡಿರುವ ಸಾಧ್ಯತೆ ಅಧಿಕ. ಹಾಗಾದರೆ ಇನ್ನುಳಿದಂತೆ ರಿಯಲ್‌ಮಿ 12+ 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಮುಂಬರುವ ರಿಯಲ್‌ಮಿ 12+ 5G ಎರಡು ಕಲರ್ ಆಯ್ಕೆಗಳಲ್ಲಿ ಪ್ರವೇಶ ಮಾಡಲಿದೆ, ಅವುಗಳು ಕ್ರಮವಾಗಿ ಬೀಜ್ ಮತ್ತು ವೈನ್ ಗ್ರೀನ್ ಹಾಗೂ ವೆಗನ್ ಲೆದರ್ ಫಿನಿಶ್ ಕಲರ್ ಆಯ್ಕೆ ಎನ್ನಲಾಗಿದೆ. ಈ ಫೋನ್ ಫ್ಲಾಟ್-ಎಡ್ಜ್ ವಿನ್ಯಾಸವನ್ನು ಪಡೆದಿರಲಿದ್ದು, ಹಾಗೆಯೇ ಈ ಎರಡು ಫೋನ್‌ಗಳು ಹಿಂಭಾಗದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ರಿಂಗ್ ಅನ್ನು ಹಾಗೂ ಲೈಟ್ ಅನ್ನು ಪಡೆದಿರಲಿದೆ.
ರಿಯಲ್‌ಮಿ 12+ 5G ಫೋನ್ 6.67 ಇಂಚಿನ ಫ್ಲಾಟ್ AMOLED ಡಿಸ್ಪ್ಲೇ ಅನ್ನು ಪಡೆದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 1800 × 2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೋನಿ LYT-600 ಶೂಟರ್ ಹೊಂದಿರಲಿದೆ.
ಇನ್ನು ಈ ಫೋನಿನ ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾ ಪಿಕ್ಸಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 16 ಮೆಗಾ ಪಿಕ್ಸಲ್ ಫ್ರಂಟ್ ಶೂಟರ್ ಅನ್ನು ಪಡೆದಿರಲಿದೆ.
ರಿಯಲ್‌ಮಿ 12+ 5G ಫೋನ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದಲ್ಲಿ ಲಗ್ಗೆ ಇಡಲಿದ್ದು, ಇದಕ್ಕೆ ಅನುಗುಣವಾಗಿ 67W SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದಿರುವ ಸಾಧ್ಯತೆಗಳು ಇವೆ. ಇನ್ನು ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 14 ಆಧಾರಿತ Realme UI 5.0 ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ.
ರಿಯಲ್‌ಮಿ 12+ 5G ಫೋನ್ 190 ಗ್ರಾಂ ತೂಕ ಪಡೆದಿರುವ ನಿರೀಕ್ಷೆಗಳು ಅಧಕ ಇವೆ ಅಲ್ಲದೇ ಸುಮಾರು 163 × 75.5 × 7.9 ಮಿಮೀ ಸುತ್ತಳತೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಈ ಫೋನ್ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ ಎಂದು ಟಿಪ್‌ಸ್ಟರ್ ಮಾಹಿತಿಯಿಂದ ತಿಳಿದು ಬಂದಿದೆ.


Click it and Unblock the Notifications








