ರಿಯಲ್‌ಮಿ 12+ 5G ಫೋನ್ ಇಲ್ಲಿ ಎಂಟ್ರಿ ಕೊಡಲಿದೆ!..ಫೀಚರ್ಸ್‌ಗೆ ಗ್ರಾಹಕರು ಫಿದಾ!
ರಿಯಲ್‌ಮಿ ಮೊಬೈಲ್ ಸಂಸ್ಥೆಯು ರಿಯಲ್‌ಮಿ 12+ 5G (Realme 12+ 5G) ಫೋನ್ ಅನ್ನು ಬಿಡುಗಡೆ ಮಾಡಲು ಸಕಲ ಸಜ್ಜಾಗಿದೆ. ಸಂಸ್ಥೆಯು ಈ ಫೋನ್ ಅನ್ನು ಇದೇ ಫೆಬ್ರವರಿ 29 ರಂದು ಮಲೇಷ್ಯಾದಲ್ಲಿ ಜಾಗತಿಕವಾಗಿ ಲಾಂಚ್ ಮಾಡಲಿದೆ. ಸಂಸ್ಥೆಯು ರಿಯಲ್‌ಮಿ 12+ 5G ಫೋನಿನ ಜೊತೆಗೆ ರಿಯಲ್‌ಮಿ 12 ಪ್ರೊ+ 5G ಫೋನ್ ಅನ್ನು ಸಹ ಪರಿಚಯಿಸಲಿದೆ.
ಹೌದು, ರಿಯಲ್‌ಮಿ ಸಂಸ್ಥೆಯು ತನ್ನ ಬಹುನಿರೀಕ್ಷಿತ ರಿಯಲ್‌ಮಿ 12+ 5G ಹಾಗೂ ರಿಯಲ್‌ಮಿ 12 ಪ್ರೊ+ 5G ಫೋನ್‌ಗಳನ್ನು ಫೆ. 29 ರಂದು ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಆದರೆ ಬಿಡುಗಡೆಗೂ ಮುನ್ನ ಸಂಸ್ಥೆಯು ಸಾಮಾಜಿಕ ಜಾಲತಾಣಗಳಲ್ಲಿ ಮುಂಬರುವ ಈ ಫೋನ್‌ಗಳಿಗಳ ಲಾಂಚ್ ಟೀಸರ್‌ಗಳನ್ನು ಬಿಡಲು ಪ್ರಾರಂಭಿಸಿದೆ. ಈ ಫೋನ್‌ಗಳು ವೃತ್ತಾಕಾರದ ಕ್ಯಾಮೆರಾ ವಿನ್ಯಾಸ ಪಡೆದಿವೆ. ಇನ್ನುಳಿದಂತೆ ಈ ಫೋನ್‌ಗಳ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸಂಸ್ಥೆಯ ರಿಯಲ್‌ಮಿ 12+ 5G ಎರಡು ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದ್ದು, ಅವುಗಳು ಕ್ರಮವಾಗಿ ಬೀಜ್ ಮತ್ತು ವೈನ್ ಗ್ರೀನ್ ಹಾಗೂ ವೆಗನ್ ಲೆದರ್ ಫಿನಿಶ್ ಕಲರ್ ಆಯ್ಕೆ ಆಗಿರಲಿವೆ. ಈ ಫೋನ್ ಫ್ಲಾಟ್-ಎಡ್ಜ್ ವಿನ್ಯಾಸವನ್ನು ಪಡೆದಿರಲಿದ್ದು, ಹಾಗೆಯೇ ಈ ಎರಡು ಫೋನ್‌ಗಳು ಹಿಂಭಾಗದಲ್ಲಿ ದೊಡ್ಡ ವೃತ್ತಾಕಾರದ ಕ್ಯಾಮೆರಾ ರಿಂಗ್ ಅನ್ನು ಹಾಗೂ ಲೈಟ್ ಅನ್ನು ಹೊಂದಿರುತ್ತವೆ.
ಟಿಪ್‌ಸ್ಟರ್ ಮಾಹಿತಿ ಪ್ರಕಾರ, ರಿಯಲ್‌ಮಿ 12+ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 7050 SoC ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದೆ. ಅಂದಹಾಗೆ ಸಂಸ್ಥೆಯು ರಿಯಲ್‌ಮಿ 11 ಪ್ರೊ ಸರಣಿ, ಒಪ್ಪೋ ರೆನೋ 11, ಲಾವಾ ಅಗ್ನಿ 2 ಮತ್ತು ಇತರೆ ಕೆಲವು ಫೋನ್‌ಗಳು ಸಹ ಇದೇ ಪ್ರೊಸೆಸರ್ ಅನ್ನು ಪಡೆದಿವೆ.

ರಿಯಲ್‌ಮಿ 12+ 5G ಫೋನ್ 6.67 ಇಂಚಿನ ಫ್ಲಾಟ್ AMOLED ಡಿಸ್ಪ್ಲೇ ಅನ್ನು ಪಡೆದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿರಲಿದೆ. ಅಲ್ಲದೇ ಇದರ ಡಿಸ್‌ಪ್ಲೇಯು 1800 × 2400 ಪಿಕ್ಸೆಲ್ ರೆಸಲ್ಯೂಶನ್ ಹೊಂದಿರಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೋನಿ LYT-600 ಶೂಟರ್ ಪಡೆದಿರಲಿದೆ.
ಇನ್ನು ಈ ಫೋನಿನ ಇನ್ನುಳಿದ ಎರಡು ಕ್ಯಾಮೆರಾಗಳು ಕ್ರಮವಾಗಿ 8 ಮೆಗಾ ಪಿಕ್ಸಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2 ಮೆಗಾ ಪಿಕ್ಸಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ ಮತ್ತು ವೀಡಿಯೊ ಕರೆಗಳಿಗಾಗಿ 16 ಮೆಗಾ ಪಿಕ್ಸಲ್ ಫ್ರಂಟ್ ಶೂಟರ್ ಅನ್ನು ಅವಲಂಬಿಸಿರಲಿದೆ.
ರಿಯಲ್‌ಮಿ 12+ 5G ಫೋನ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯದಲ್ಲಿ ಲಗ್ಗೆ ಇಡಲಿದ್ದು, ಇದಕ್ಕೆ ಅನುಗುಣವಾಗಿ 67W SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದಿರಲಿದೆ. ಇನ್ನು ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 14 ಆಧಾರಿತ Realme UI 5.0 ಸಪೋರ್ಟ್‌ನಲ್ಲಿ ಕೆಲಸ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇನ್ನು ಈ ಫೋನ್ 190 ಗ್ರಾಂ ತೂಕ ಪಡೆದಿರುವ ಸಾಧ್ಯತೆಗಳು ಇವೆ ಅಲ್ಲದೇ ಸುಮಾರು 163 × 75.5 × 7.9 ಮಿಮೀ ಸುತ್ತಳತೆ ಪಡೆದಿರಲಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಈ ಫೋನ್ 12GB + 256GB ಸ್ಟೋರೇಜ್ ವೇರಿಯಂಟ್ ಆಯ್ಕೆ ಪಡೆದಿರಲಿದೆ ಎಂದು ಟಿಪ್‌ಸ್ಟರ್ ಮಾಹಿತಿಯಿಂದ ತಿಳಿದುಬಂದಿದೆ.


Click it and Unblock the Notifications








