50ಎಂಪಿ ಕ್ಯಾಮೆರಾ ಇರುವ ಈ 5G ಮೊಬೈಲ್ ದರದಲ್ಲಿ ಭರ್ಜರಿ ಇಳಿಕೆ!
ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಮೊಬೈಲ್‌ಗಳಿಗೆ ಏನಾದರೊಂದು ಸ್ಪೆಷಲ್ ರಿಯಾಯಿತಿ ನೀಡುತ್ತ ಸಾಗಿದೆ. ಇನ್ನು ಯಾವುದಾದರೂ ವಿಶೇಷ ದಿನಗಳು ಬಂದಾಗ ಇನ್ನಷ್ಟು ಆಕರ್ಷಕ ಕೊಡುಗೆ ಲಭ್ಯ ಮಾಡುತ್ತದೆ. ಸದ್ಯ ರಿಯಲ್ ಕಂಪನಿಯ ರಿಯಲ್‌ಮಿ 12 ಪ್ರೊ 5G (realme 12 5G) ಮೊಬೈಲ್ ಸಖತ್ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದೆ. ಇನ್ನು ಈ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 SoC ಚಿಪ್‌ಸೆಟ್ ಪ್ರೊಸೆಸರ್‌ನಲ್ಲಿ ಕಾರ್ಯ ಮಾಡುತ್ತದೆ.
ಹೌದು, ಫ್ಲಿಪ್‌ಕಾರ್ಟ್ ಇ ಕಾಮರ್ಸ್ ತನ್ನ ವೆಬ್‌ಸೈಟ್‌ನಲ್ಲಿ ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 12 ಪ್ರೊ 5G (realme 12 5G) ಮೊಬೈಲ್ ಶೇ. 23% ರಷ್ಟು ನೇರ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನಿನ 8 GB RAM + 128 GB ವೇರಿಯಂಟ್ ಆಫರ್‌ನಲ್ಲಿ 22,999ರೂ. ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಹೆಚ್ಚುವರಿಯಾಗಿ ಗ್ರಾಹಕರಿಗೆ ಇತರೆ ಬ್ಯಾಂಕ್ ಆಫರ್ ಸಹ ಲಭ್ಯ.

ಇನ್ನು ರಿಯಲ್‌ಮಿ ಮೊಬೈಲ್ ಸಂಸ್ಥೆಯ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಹೊಂದಿದೆ. ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಸ್ನಾಪ್‌ಡ್ರಾಗನ್ 6 ಜೆನ್ 1 SoC ಪ್ರೊಸೆಸರ್ ಪವರ್ ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ 12 ಪ್ರೊ 5G ಮೊಬೈಲ್ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ 12 ಪ್ರೊ 5G - ಫೀಚರ್ಸ್
ರಿಯಲ್‌ಮಿ 12 ಪ್ರೊ 5G ಮೊಬೈಲ್ 2412 x 1080 ಪಿಕ್ಸೆಲ್ಸ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ OLED ಕರ್ವ್ಡ್ ಡಿಸ್‌ಪ್ಲೇ ಆಗಿದೆ. ಇದಲ್ಲದೆ ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್, 2160Hz PWM ಡಿಮ್ಮಿಂಗ್ ಮತ್ತು 120Hz ರಿಫ್ರೆಶ್ ರೇಟ್ ವರೆಗೆ ಸಪೋರ್ಟ್ ಒದಗಿಸಲಿದೆ.
ರಿಯಲ್‌ಮಿ 12 ಪ್ರೊ 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 1 SoC ಪ್ರೊಸೆಸರ್‌ನಲ್ಲಿ ಬಲದಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲದೊಂದಿಗೆ ಕೆಲಸ ನಿರ್ವಹಿಸುತ್ತದೆ. ಹಾಗೆಯೇ 8GB RAM + 128 GB ಹಾಗೂ 8GB RAM + 256 GB ಆಂತರೀಕ ಸ್ಟೋರೇಜ್ ಸಾಮರ್ಥ್ಯದ ಎರಡು ವೇರಿಯೆಂಟ್ ಆಯ್ಕೆ ಪಡೆದುಕೊಂಡಿದೆ.
ರಿಯಲ್‌ಮಿ 12 ಪ್ರೊ 5G ಮೊಬೈಲ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೋನಿ IMX 882 ಲೆನ್ಸ್ ಪಡೆದಿದೆ. ದ್ವಿತೀಯ ಕ್ಯಾಮೆರಾ 32ಎಂಪಿ ಸೋನಿ IMX 709 ಲೆನ್ಸ್ ಸಹ ಇದೆ. ತೃತೀಯ ಕ್ಯಾಮರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ.
ರಿಯಲ್‌ಮಿ 12 ಪ್ರೊ 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, ಇದಕ್ಕೆ ಪೂರಕವಾಗಿ 67W SUPERVOOC ಚಾರ್ಜರ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಈ ಚಾರ್ಜರ್ ಕೇವಲ 28 ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ ಅನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಸಿ ಪೋರ್ಟ್ ನಂತಹ ಆಯ್ಕೆಗಳನ್ನು ಒಳಗೊಂಡಿದೆ. ಸಬ್‌ಮರೀನ್ ಬ್ಲೂ ಮತ್ತು ನ್ಯಾವಿಗೇಟರ್ ಬೀಜ್ ಕಲರ್ ಆಯ್ಕೆಗಳಲ್ಲಿ ಈ ಫೋನ್ ಖರೀದಿಗೆ ಲಭ್ಯ.


Click it and Unblock the Notifications








