Realme: ವಿಶೇಷ ಕ್ಯಾಮೆರಾ ಫೀಚರ್ಸ್‌ನೊಂದಿಗೆ ಭಾರತಕ್ಕೆ ಎಂಟ್ರಿ ಕೊಡಲಿದೆ ರಿಯಲ್‌ಮಿ 12 ಪ್ರೊ ಸರಣಿ!
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ರಿಯಲ್‌ಮಿ (Realme) ಫೋನ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ. ಅದರಂತೆ ಈಗ ಲಾಂಚ್ ಆಗುವ ಮುನ್ನವೇ ಬಹಳ ಸದ್ದು ಮಾಡುತ್ತಿರುವ ರಿಯಲ್‌ಮಿ 12 ಪ್ರೊ ಸರಣಿ ಫೋನ್‌ಗಳು (Realme 12 Pro series phone) ಬಹಳ ನಿರೀಕ್ಷೆ ಹುಟ್ಟುಹಾಕಿವೆ.
ಹೌದು, ಭಾರತದಲ್ಲಿ ರಿಯಲ್‌ಮಿ 12 ಪ್ರೊ 5G ಸರಣಿ ಜನವರಿ 29 ರಂದು ಬಿಡುಗಡೆ ಆಗುವುದು ಪಕ್ಕಾ ಆಗಿದೆ.
ಈ ವಿಭಾಗದಲ್ಲಿ ಎರಡು ಫೋನ್‌ಗಳು ಕಾಣಿಸಿಕೊಳ್ಳಲಿದ್ದು, ಡಿಜಿಟಲ್ ಜೂಮ್ ಆಯ್ಕೆಯೊಂದಿಗೆ ವಿಶೇಷ ಕ್ಯಾಮೆರಾದ ಮೂಲಕ ಉತ್ತಮ ಎನಿಸಿಕೊಳ್ಳಲಿವೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಏನು?, ಯಾವಾಗ ಈ ಫೋನ್ ಅನಾವರಣ ಆಗಲಿದೆ ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ರಿಯಲ್‌ಮಿ 12 ಪ್ರೊ 5G ಸರಣಿ : ರಿಯಲ್‌ಮಿಯ ಈ ಬಹುನಿರೀಕ್ಷಿತ 12 ಪ್ರೊ 5G ಸರಣಿಯಲ್ಲಿ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ ಪ್ಲಸ್ (Realme 12 Pro and Realme 12 Pro Plus) ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಲಾಗುತ್ತದೆ. ಈ ಸಂಬಂಧ ರಿಯಲ್‌ಮಿಯು ಎಕ್ಸ್ ನಲ್ಲಿ ಮಾಹಿತಿ ನೀಡಿದ್ದು, ಈ ಫೋನ್‌ಗಳನ್ನು ಈ ತಿಂಗಳು ಭಾರತದಲ್ಲಿ ಆರಂಭ ಮಾಡಲಾಗುವುದು ಎಂದು ಉಲ್ಲೇಖಿಸಿದೆ. ಆದರೆ ನಿಖರವಾದ ದಿನಾಂಕವನ್ನು ಮಾತ್ರ ಘೋಷಣೆ ಮಾಡಿಲ್ಲ.
ಈ ರಿಯಲ್‌ಮಿ 12 ಪ್ರೊ ಸರಣಿಯು ಪೆರಿಸ್ಕೋಪ್ ಟೆಲಿಫೋಟೋ ಸೆನ್ಸರ್ ಹೊಂದಿರಲಿದೆ ಎಂಬ ಮಾಹಿತಿಯನ್ನು ಮಾತ್ರ ಅಧಿಕೃತವಾಗಿ ದೃಢಪಡಿಸಿದೆ. ಅಂದರೆ ಈ ಫೋನ್‌ಗಳು 120X ಡಿಜಿಟಲ್ ಜೂಮ್ ಅನ್ನು ಬೆಂಬಲಿಸುತ್ತವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ಕ್ಯಾಮೆರಾ ರಚನೆ ವಾಚ್ ಶೈಲಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದ್ದು, ಇದಕ್ಕಾಗಿ ಒಲಿವಿಯರ್ ಸವಿಯೊ ಜೊತೆಗೆ ಕೈಜೋಡಿಸಿದೆ ಎನ್ನಲಾಗಿದೆ.

ಈ ಫೋನ್‌ನ ಲೀಕ್ ಮಾಹಿತಿಗಳನ್ನು ಗಮನಿಸುವುದಾದರೆ ಪ್ರಮುಖವಾಗಿ ಕ್ಯಾಮೆರಾ ಉದ್ದೇಶಕ್ಕೆ ಅಥವಾ ಕ್ಯಾಮೆರಾ ಪ್ರಿಯರನ್ನೇ ಗುರಿಯಾಗಿಸಿಕೊಂಡು ಪರಿಚಯಿಸುತ್ತಿದೆ ಎಂದು ತಿಳಿದುಬಂದಿದೆ. ಯಾಕೆಂದರೆ ಈ ಫೋನ್‌ನಲ್ಲಿ ನೀಡಲಾಗುವ ಪೆರಿಸ್ಕೋಪ್ ಸೆನ್ಸರ್ ಹೆಚ್ಚಿನ ಜೂಮ್ ಆಯ್ಕೆ ನೀಡಲಿದ್ದು, ಸ್ಪಷ್ಟ ಚಿತ್ರಗಳನ್ನು ಸೆರೆಹಿಡಿಯಲು ಸಹಕಾರಿಯಾಗಿರಲಿವೆ. ಅಲ್ಲದೆ ಭಾರತೀಯರ ಕುತೂಹಲ ಹೆಚ್ಚು ಮಾಡಲು ಭಾರತೀಯ ವೆಬ್‌ಸೈಟ್‌ನಲ್ಲಿ ಹೊಸ ಲ್ಯಾಂಡಿಂಗ್ ಪೇಜ್ ಅನ್ನೂ ಸಹ ಈ ಫೋನ್ ಸಂಬಂಧ ಪ್ರಾರಂಭಿಸಲಾಗಿದೆ.
ಇಷ್ಟೇ ಅಲ್ಲದೆ ರಿಯಲ್‌ಮಿ 12 ಪ್ರೊ ಸರಣಿಯು 71mm ಗೋಲ್ಡನ್ ಪೋಟ್ರೇಟ್ ಫೋಕಲ್ ಲೆಂಥ್ ಜೊತೆಗೆ 3X ಪೋಟ್ರೇಟ್ ಮೋಡ್ ಅನ್ನು ಹೊಂದಿರಲಿದೆ. ಜೊತೆಗೆ ಈ ಫೋನ್‌ಗಳ ಮುಖ್ಯ ಕ್ಯಾಮರಾ OIS ಮತ್ತು f/1.8 ಅಪರ್ಚರ್ ಹೊಂದಿರುವ ಸೋನಿ IMX890 1/1.56 ಇಂಚಿನ ಸೆನ್ಸಾರ್ ಆಗಿದೆ ಎಂದು ತಿಳಿದು ಬಂದಿದೆ. ಈ ಇನ್ನು ಪ್ರೊ ನ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸರ್‌ನಿಂದ ಕೂಡಿದ್ದರೆ ಪ್ರೊ ಪ್ಲಸ್ ಫೋನ್ 64 ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿರಲಿದೆ.

ಈ ಸರಣಿ ಫೋನ್‌ಗಳು ಟೀನಾ ವೆಬ್‌ಸೈಟ್‌ನಲ್ಲಿ ಕ್ರಮವಾಗಿ RMX3843 ಮತ್ತು RMX3841 ಮಾದರಿ ಸಂಖ್ಯೆಗಳೊಂದಿಗೆ ಕಾಣಿಸಿಕೊಂಡಿದ್ದು, ಸ್ನ್ಯಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ನೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಮೇಲೆ ತಿಳಿಸಿದ ಕ್ಯಾಮೆರಾ ಫೀಚರ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿವೆ ಎಂದು ಲೀಕ್ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗುತ್ತಿದೆ. ಜೊತೆಗೆ ಈ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದ್ದು, .
ಸದ್ಯ ರಿಯಲ್‌ಮಿ 12 ಪ್ರೊ ಸರಣಿ ಜನವರಿ 29 ರಂದು ಬಿಡುಗಡೆ ಆಗಲಿದೆ.


Click it and Unblock the Notifications








