Home
ಸುದ್ದಿಜಾಲ

ರಿಯಲ್‌ಮಿ 12 ಪ್ರೊ+ 5G ಫೋನಿನ ಹೊಸ ಲುಕ್‌ಗೆ ನೀವು ಫಿದಾ ಆಗೋದು ಪಕ್ಕಾ!

ರಿಯಲ್‌ಮಿ ಸಂಸ್ಥೆಯು (Realme) ಇತ್ತೀಚಿಗಷ್ಟೆ ನೂತನವಾಗಿ ಬಿಡುಗಡೆ ಮಾಡಿರುವ ರಿಯಲ್‌ಮಿ 12 ಪ್ರೊ ಸ್ಮಾರ್ಟ್‌ಫೋನ್‌ ಸರಣಿ ಗ್ರಾಹಕರ ಕುತೂಹಲ ಹೆಚ್ಚಿಸದೆ. ಈ ಸರಣಿಯು ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ 5G ಮಾಡೆಲ್‌ಗಳನ್ನು ಒಳಗೊಂಡಿದೆ. ಇದೀಗ ಸಂಸ್ಥೆಯು ರಿಯಲ್‌ಮಿ 12 ಪ್ರೊ+ 5G ಟ್ರಾನ್ಸ್ಫರೆಂಟ್‌ ಬ್ಯಾಕ್‌ ಪ್ಯಾನೆಲ್‌ (Transparent Back Panel) ಮಾಡೆಲ್‌ ಅನ್ನು ಟೀಸ್ ಮಾಡಿದೆ.

ಹೌದು, ರಿಯಲ್‌ಮಿ ಸಂಸ್ಥೆಯು ರಿಯಲ್‌ಮಿ 12 ಪ್ರೊ+ 5G ಟ್ರಾನ್ಸ್ಫರೆಂಟ್‌ ಬ್ಯಾಕ್‌ ಪ್ಯಾನೆಲ್‌ ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಈ ಫೋನ್ ಬಹುತೇಕ ರಿಯಲ್‌ಮಿ 12 ಪ್ರೊ+ 5G ಫೋನಿನ ಫೀಚರ್ಸ್‌ಗಳನ್ನೇ ಒಳಗೊಂಡಿರಲಿದೆ. ರಿಯಲ್‌ಮಿ 12 ಪ್ರೊ+ 5G ಫೋನ್‌ ಮೂರು ಕಲರ್‌ ವೇರಿಯಂಟ್‌ ಆಯ್ಕೆ ಪಡೆದಿದ್ದು, ಇದೀಗ ಬರಲಿರುವ ಹೊಸ ಟ್ರಾನ್ಸ್ಫರೆಂಟ್‌ ಬ್ಯಾಕ್ ಪ್ಯಾನೆಲ್‌ ವೇರಿಯಂಟ್‌ ಸಾಕಷ್ಟು ಕುತೂಹಲ ಹುಟ್ಟುಹಾಕಿದೆ.

ರಿಯಲ್‌ಮಿ 12 ಪ್ರೊ+ 5G ಫೋನಿನ ಹೊಸ ಲುಕ್‌ಗೆ ನೀವು ಫಿದಾ ಆಗೋದು ಪಕ್ಕಾ!

ರಿಯಲ್‌ಮಿ ಯುರೋಪ್‌ ಸಿಇಓ ಫ್ರಾನ್ಸಿಸ್ ವಾಂಗ್, ಅವರು ರಿಯಲ್‌ಮಿ 12 ಪ್ರೊ+ 5G ಟ್ರಾನ್ಸ್ಫರೆಂಟ್‌ ಬ್ಯಾಕ್‌ ಪ್ಯಾನೆಲ್‌ ಲೈವ್ ಫೋಟೋವನ್ನು ಎಕ್ಸ್‌ (ಈ ಹಿಂದೆ ಟ್ವಿಟರ್) ವೆಬ್‌ಸೈಟ್ನಲ್ಲಿ ಶೇರ್ ಮಾಡಿದ್ದಾರೆ. ಈ ಫೋನ್‌ ಟ್ರಾನ್ಸ್ಫರೆಂಟ್‌ ಬ್ಯಾಕ್‌ ಪ್ಯಾನೆಲ್‌ ರಚನೆ ಜೊತೆಗೆ ಹಿಂಬದಿಯ ಕ್ಯಾಮೆರಾ ಸುತ್ತಲೂ ಗೋಲ್ಡ್‌ ಬಣ್ಣದ ರಿಂಗ್‌ ರಚನೆ ಪಡೆದುಕೊಂಡಿದೆ. ಹಾಗಾದರೇ ರಿಯಲ್‌ಮಿ 12 ಪ್ರೊ 5G+ ಫೋನಿನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 12 ಪ್ರೊ 5G ಫೋನಿನ ಫೀಚರ್ಸ್‌

ರಿಯಲ್‌ಮಿ 12 ಪ್ರೊ 5G ಮೊಬೈಲ್‌ 2412 x 1080 ಪಿಕ್ಸೆಲ್ಸ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದೆ. ಈ ಡಿಸ್‌ಪ್ಲೇ OLED ಕರ್ವ್ಡ್‌ ಡಿಸ್‌ಪ್ಲೇ ಆಗಿದೆ. ಇದಲ್ಲದೆ ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, 2160Hz PWM ಡಿಮ್ಮಿಂಗ್‌ ಮತ್ತು 120Hz ರಿಫ್ರೆಶ್ ರೇಟ್‌ ವರೆಗೆ ಸಪೋರ್ಟ್‌ ಒದಗಿಸಲಿದೆ.

ರಿಯಲ್‌ಮಿ 12 ಪ್ರೊ+ 5G ಫೋನಿನ ಹೊಸ ಲುಕ್‌ಗೆ ನೀವು ಫಿದಾ ಆಗೋದು ಪಕ್ಕಾ!

ರಿಯಲ್‌ಮಿ ಸಂಸ್ಥೆಯ ಈ ಮೊಬೈಲ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 6 ಜೆನ್‌ 1 SoC ಪ್ರೊಸೆಸರ್‌ನಲ್ಲಿ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಸಪೋರ್ಟ್‌ ಜೊತೆಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB RAM + 128GB ಹಾಗೂ 8GB RAM + 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ಎರಡು ವೇರಿಯೆಂಟ್‌ ಆಯ್ಕೆ ಪಡೆದುಕೊಂಡಿದೆ.

ಈ ಮೊಬೈಲ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಮೊದಲ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೋನಿ IMX 882 ಲೆನ್ಸ್‌ ಪಡೆದಿದೆ. ಎರಡನೇ ಕ್ಯಾಮೆರಾ 32 ಮೆಗಾ ಪಿಕ್ಸಲ್‌ ಸೋನಿ IMX 709 ಲೆನ್ಸ್‌ ಸಹ ಇದೆ. ತೃತೀಯ ಕ್ಯಾಮರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ರಿಯಲ್‌ಮಿ 12 ಪ್ರೊ 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ 8GB RAM + 128GB ವೇರಿಯಂಟ್‌ ಹಾಗೂ 8GB RAM + 256GB ವೇರಿಯಂಟ್‌ ವೇರಿಯಂಟ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ. ಈ ಫೋನ್‌ ಅನ್ನು ಗ್ರಾಹಕರು ಸಬ್‌ಮರೀನ್ ಬ್ಲೂ ಮತ್ತು ನ್ಯಾವಿಗೇಟರ್ ಬೀಜ್ ಕಲರ್‌ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Realme 12 Pro+ 5G With a Transparent Back Panel Teased. Know More Details.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+