Home
ಸುದ್ದಿಜಾಲ

ರಿಯಲ್‌ಮಿಯ ಈ ಬಹುನಿರೀಕ್ಷಿತ ಫೋನ್‌ಗಳ ಫೀಚರ್ಸ್‌ ಲೀಕ್‌! ಅಂತಹುದ್ದೇನಿದೆ ಇವುಗಳಲ್ಲಿ?

ರಿಯಲ್‌ಮಿ (Realme) ಫೋನ್‌ಗಳು ಎಂದರೆ ಭಾರತೀಯರಿಗೆ ವಿಶೇಷವಾದ ಪ್ರೀತಿ. ಈ ಫೋನ್‌ಗಳು ಕಡಿಮೆ ದರದಲ್ಲಿ ಹೆಚ್ಚಿನ ಫೀಚರ್ಸ್‌ ಹೊಂದಿರಲಿದ್ದು, ಈ ಮೂಲಕ ಗ್ರಾಹಕರು ಭಿನ್ನ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ಈ ನಡುವೆ ರಿಯಲ್‌ಮಿ 12 ಸರಣಿಯ (Realme 12 series) ಫೋನ್‌ಗಳು ಭಾರತದಲ್ಲಿ ಲಾಂಚ್‌ ಆಗಲು ಸಜ್ಜಾಗಿದ್ದು, ಇವುಗಳ ಪ್ರಮುಖ ಮಾಹಿತಿ ಲೀಕ್ ಆಗಿದೆ.

ಹೌದು, ಯಾವುದೇ ಫೋನ್‌ಗಳಾದರೂ ಸಹ ಅವುಗಳು ಲಾಂಚ್‌ ಆಗುವ ಮುನ್ನವೇ ಲೀಕ್‌ ಫೀಚರ್ಸ್‌ ಮಾಹಿತಿ ಮೂಲಕ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕುತ್ತವೆ. ಅದರಂತೆ ರಿಯಲ್‌ಮಿ 12 ಪ್ರೊ, ರಿಯಲ್‌ಮಿ 12 ಪ್ರೊ+ (Realme 12 Pro, Realme 12 Pro+) ಸ್ಮಾರ್ಟ್‌ಫೋನ್‌ಗಳು ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೆ ಪದಾರ್ಪಣೆ ಮಾಡಲಿದ್ದು, ಈ ಮೂಲಕ ದೊಡ್ಡ ಮಟ್ಟದಲ್ಲಿ ಸೌಂಡ್‌ ಮಾಡಲಿವೆ. ಆದರೆ. ಈಗಾಗಲೇ ಈ ಫೋನ್‌ಗಳ ಪ್ರೊಸೆಸರ್‌, ಕ್ಯಾಮೆರಾ ಮತ್ತು ವಿನ್ಯಾಸದ ಬಗ್ಗೆ ಮಾಹಿತಿ ಲೀಕ್‌ ಆಗಿದೆ.

ರಿಯಲ್‌ಮಿಯ ಈ ಬಹುನಿರೀಕ್ಷಿತ ಫೋನ್‌ಗಳ ಫೀಚರ್ಸ್‌ ಲೀಕ್‌!

ರಿಯಲ್‌ಮಿ 12 ಪ್ರೊ, ಪ್ರೊ+ ಫೋನ್‌ಗಳು: ರಿಯಲ್‌ಮಿ ಭಾರತದಲ್ಲಿ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲು ಸಿದ್ಧವಾಗುತ್ತಿದೆ.ಈ ನಡುವೆ ರಿಯಲ್‌ಮಿ ಈ ಫೋನ್‌ಗಳ ಕ್ಯಾಮೆರಾವನ್ನು ಕೀಟಲೆ ಮಾಡುತ್ತಿದೆಯಾದರೂ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೂ ಸಹ ಸಾಕಷ್ಟು ಲೀಕ್‌ ಮಾಹಿತಿ ಪ್ರಕಾರ ಈ ಫೋನ್ ವಿಶೇಷ ಕ್ಯಾಮೆರಾ ಫೀಚರ್ಸ್‌ ಅನ್ನು ಪಡೆದಿರಲಿದೆ ಎಂದು ತಿಳಿದುಬಂದಿದೆ.

ರಿಯಲ್‌ಮಿ ಶೀಘ್ರದಲ್ಲೇ ಭಾರತದಲ್ಲಿ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡುತ್ತಿದೆ ಎಂದು ಲೇವಡಿ ಮಾಡಿದ್ದು, ಈ ಫೋನ್‌ ಪೆರಿಸ್ಕೋಪ್ ಕ್ಯಾಮೆರಾವನ್ನು ಹೊಂದಿರುತ್ತದೆ ಎಂದು ತಿಳಿಸಿದೆ. ಇದರೊಂದಿಗೆ ಮತ್ತೊಂದು ಟೀಸರ್‌ನಲ್ಲಿ ಈ ಸ್ಮಾರ್ಟ್‌ಫೋನ್ 200 ಮೆಗಾಪಿಕ್ಸೆಲ್‌ಗೂ ಅಧಿಕ ಕ್ಯಾಮೆರಾ ಹೊಂದಿರಲಿದೆ ಎಂದು ಉಲ್ಲೇಖ ಮಾಡುತ್ತಿದೆ. ಆದರೂ ವಾಸ್ತವವಾಗಿ, ಅದು ಯಾವ ಸ್ಮಾರ್ಟ್‌ಫೋನ್ ಬಗ್ಗೆ ಮಾಹಿತಿ ನೀಡುತ್ತಿದೆ ಅನ್ನೋದು ಮಾತ್ರ ಬಹಿರಂಗವಾಗಿಲ್ಲ. ಆದರೆ, ಬಲ್ಲ ಮೂಲಗಳ ಪ್ರಕಾರ ಈ ಸೌಲಭ್ಯ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ ನಲ್ಲೇ ಇರಲಿದೆ ಎನ್ನಲಾಗಿದೆ.

ರಿಯಲ್‌ಮಿಯ ಈ ಬಹುನಿರೀಕ್ಷಿತ ಫೋನ್‌ಗಳ ಫೀಚರ್ಸ್‌ ಲೀಕ್‌!

ಹಾಗೆಯೇ ಮುಂಬರುವ ರಿಯಲ್‌ಮಿ 12 ಪ್ರೊ+ ಭಾರತದಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ ಹೊಂದಿರಬಹುದು ಎಂದು ಹೇಳಲಾಗಿದೆ. ಇದಕ್ಕೆ ಇಂಬು ನೀಡುವಂತೆ ಎಕ್ಸ್‌ ನಲ್ಲಿ ಲೀಕ್‌ಸ್ಟರ್ ಇಶಾನ್ ಅಗರ್ವಾಲ್ ಅವರು ಒಂದು ಪೋಸ್ಟ್‌ ಶೇರ್‌ ಮಾಡಿದ್ದಾರೆ. ಅದರಲ್ಲಿ ಚೀನೀ ಪ್ರಮಾಣೀಕರಣ ವೆಬ್‌ಸೈಟ್ ಟೀನಾ ನಲ್ಲಿ ಕಾಣಿಸಿಕೊಂಡ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ+ ನ ಲೈವ್ ಫೋಟೋಗಳನ್ನು ಕಾಣಬಹುದಾಗಿದೆ.

ಹಾಗೆಯೇ ಲೀಕ್‌ ಆದ ಫೋಟೋವನ್ನು ಗಮನಿಸಿದ್ರೆ ಹಿಂಭಾಗದಲ್ಲಿ ವೃತ್ತಾಕಾರದ ಕ್ಯಾಮೆರಾ ವಿನ್ಯಾಸದೊಂದಿಗೆ ಈ ಫೋನ್‌ಗಳು ಕಾಣಿಸಿಕೊಳ್ಳಬಹುದು ಎಂದು ತಿಳಿದುಬಂದಿದೆ. ಕ್ಯಾಮೆರಾ ಮಾಡ್ಯೂಲ್ ಫೋನ್‌ನ ಹಿಂಭಾಗದ ಮೇಲ್ಭಾಗದ ಮಧ್ಯದಲ್ಲಿ ಇರಲಿದೆ ಅನ್ನೋದನ್ನು ಈ ಫೋಟೋ ಒತ್ತಿ ಹೇಳಿದೆ. ಜೊತೆಗೆ ನಾಲ್ಕು ಕ್ಯಾಮೆರಾಗಳು ಮತ್ತು ಎಲ್ಇಡಿ ಫ್ಲ್ಯಾಶ್‌ ಹೊಂದಿರುವ ಮಾಡ್ಯೂಲ್ ಅನ್ನು ಇಲ್ಲಿ ಕಾಣಬಹುದಾಗಿದೆ.

ಅದರಲ್ಲೂ ಈ ಕ್ಯಾಮೆರಾ ಮಾಡ್ಯೂಲ್ ಅನ್ನು ಲೋಹದ ರಿಂಗ್‌ನಲ್ಲಿ ಸುತ್ತುವರಿಯಲಾಗಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ನ ವಿನ್ಯಾಸಕ್ಕೆ ಪ್ರೀಮಿಯಂ ಟಚ್‌ ನೀಡಲಾಗಿರುವುದನ್ನು ಗಮನಿಸಬಹುದು. ಇದರೊಂದಿಗೆ ಫೋನ್‌ನ ಹಿಂಭಾಗದ ಮಧ್ಯದಲ್ಲಿ ಸ್ಮಾರ್ಟ್‌ಫೋನ್‌ನ ಬೆನ್ನುಮೂಳೆಯಂತೆ ಕಾಣುವ ಒಂದು ಲೈನ್‌ ಅನ್ನು ನೋಡಬಹುದಾಗಿದೆ. ಹಾಗೆಯೇ ಕೆಳಗಿನ ಎಡಭಾಗದಲ್ಲಿ ರಿಯಲ್‌ಮಿ ಲೋಗೋ ಕಾಣಸಿಗುತ್ತದೆ. ಜೊತೆಗೆ ಈ ಎರಡೂ ಫೋನ್‌ಗಳು ಕೆಂಪು ಮತ್ತು ಬೂದು ಬಣ್ಣದ ವೇರಿಯಂಟ್‌ನಲ್ಲಿ ಲಭ್ಯ ಇರುತ್ತವೆ ಅನ್ನೋದನ್ನು ಈ ಚಿತ್ರದ ಮೂಲಕ ತಿಳಿಯಬಹುದಾಗಿದೆ.

ರಿಯಲ್‌ಮಿಯ ಈ ಬಹುನಿರೀಕ್ಷಿತ ಫೋನ್‌ಗಳ ಫೀಚರ್ಸ್‌ ಲೀಕ್‌!

ಇದರೊಂದಿಗೆ ಈ ಎರಡೂ ಫೋನ್‌ಗಳು ಸಹ 20X ಝೂಮ್ ಅನ್ನು ಹೊಂದಿರುತ್ತದೆ ಎಂದು ಪ್ರಮಾಣೀಕರಣ ಚಿತ್ರಗಳು ತೋರಿಸುತ್ತವೆ. ನಾಲ್ಕು ಕ್ಯಾಮೆರಾಗಳ ಮಧ್ಯದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ಇದು ಏನಾದರೂ ನಿಜವಾದರೆ ಈ ಸೆನ್ಸರ್‌ಗಳು 20 ಪಟ್ಟು ದೊಡ್ಡದಾದ ಚಿತ್ರವನ್ನು ವರ್ಧಿಸಲು ಕೆಲಸ ಮಾಡುತ್ತವೆ. ಅದರಂತೆ ಈ ಎಲ್ಲಾ ಲೀಕ್‌ ಮಾಹಿತಿ ಮತ್ತು ಟೀಸರ್ ಅನ್ನು ಗಮನಿಸಿದ್ರೆ, ಈ ಫೋನ್‌ಗಳು ಫೆಬ್ರವರಿ 2024 ರ ವೇಳೆಗೆ ಭಾರತೀಯ ಮಾರುಕಟ್ಟೆಗೆ ಬರಲಿದೆ ಎಂದು ನಿರೀಕ್ಷಿಸಬಹುದಾಗಿದೆ.

Best Mobiles in India

English summary
Realme 12 Pro, Realme 12 Pro+ smartphone will be launched in India soon. Some information about these phones has already been leaked.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+