ಮಾರುಕಟ್ಟೆಯಲ್ಲಿ ಅಬ್ಬರಿಸಲು ಇಂದು ಎಂಟ್ರಿ ಕೊಡಲಿದೆ 'ರಿಯಲ್‌ಮಿ 12 ಪ್ರೊ ಸರಣಿ'!
ಜನಪ್ರಿಯ ರಿಯಲ್‌ಮಿ ಕಂಪೆನಿಯ ಈಗಾಗಲೇ ಭಿನ್ನ ಶ್ರೇಣೀಯ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಸಂಸ್ಥೆಯು ಅದರ ಮುಂದುವರಿದ ಭಾಗವಾಗಿ ಇದೀಗ ರಿಯಲ್‌ಮಿ 12 ಪ್ರೊ 5G ಸರಣಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಬಹುನಿರೀಕ್ಷಿತ ಫೋನ್ ಸರಣಿಯು ಇಂದು (ಜ. 29 ರಂದು) ಅಧಿಕೃತವಾಗಿ ಮಾರುಕ್ಟೆಗೆ ಎಂಟ್ರಿ ಕೊಡಲಿದೆ.
ಹೌದು, ರಿಯಲ್‌ಮಿ ಸಂಸ್ಥೆಯು ತನ್ನ ನೂತನ ರಿಯಲ್‌ಮಿ 12 ಪ್ರೊ 5G ಸರಣಿ ಸ್ಮಾರ್ಟ್‌ಫೋನ್ ಸರಣಿಯನ್ನು ಇಂದು ಮೊಬೈಲ್ ಮಾರಕಟ್ಟೆಗೆ ಲಾಂಚ್ ಮಾಡಲಿದೆ. ಇನ್ನು ಈ ಸರಣಿಯು ರಿಯಲ್‌ಮಿ 12 ಪ್ರೊ 5G ಹಾಗೂ ರಿಯಲ್‌ಮಿ 12 ಪ್ರೊ ಪ್ಲಸ್ 5G ಮಾಡೆಲ್‌ಗಳನ್ನು ಒಳಗೊಂಡಿರುವ ಸಾಧ್ಯತೆಗಳು ಇವೆ. ಆ ಪೈಕಿ ರಿಯಲ್‌ಮಿ 12 ಪ್ರೊ 5G ಮೊಬೈಲ್ ಈಗಾಗಲೇ ಗ್ರಾಹಕರನ್ನು ಸೆಳೆದಿದೆ.

ಇನ್ನು ಈ ಫೋನ್‌ಗಳು 120X ಡಿಜಿಟಲ್ ಜೂಮ್ ಅನ್ನು ಸಪೋರ್ಟ್ ಮಾಡುವ ಸಾಮರ್ಥ್ಯವನ್ನು ಪಡೆದಿದ್ದು, ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿರಲಿದೆ ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.
ರಿಯಲ್‌ಮಿ 12 ಪ್ರೊ 5G ಸರಣಿ ಫೀಚರ್ಸ್
ರಿಯಲ್‌ಮಿ ಕಂಪನಿಯ ಈ ಬಹುನಿರೀಕ್ಷಿತ 12 ಪ್ರೊ 5G ಸರಣಿಯಲ್ಲಿ ರಿಯಲ್‌ಮಿ 12 ಪ್ರೊ ಮತ್ತು ರಿಯಲ್‌ಮಿ 12 ಪ್ರೊ ಪ್ಲಸ್ (Realme 12 Pro ಮತ್ತು Realme 12 Pro Plus) ಮಾದರಿಯ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಾಗುತ್ತದೆ. ಈ ಬಗ್ಗೆ ಫ್ಲಿಪ್‌ಕಾರ್ಟ್ ತಾಣದಲ್ಲಿ ಮಾಹಿತಿ ಕಾಣಿಸಲಾಗಿದೆ.

ಅಂದಹಾಗೆ ರಿಯಲ್‌ಮಿ 12 ಪ್ರೊ ಸರಣಿಯು ಪೆರಿಸ್ಕೋಪ್ ಟೆಲಿಫೋಟೋ ಸೆನ್ಸರ್ ಹೊಂದಿರಲಿದೆ ಎಂಬ ಮಾಹಿತಿಯನ್ನು ಮಾತ್ರ ಅಧಿಕೃತವಾಗಿ ದೃಢಪಡಿಸಿದೆ. ಅಂದರೆ ಈ ಮೊಬೈಲ್‌ಗಳು 120X ಡಿಜಿಟಲ್ ಜೂಮ್ ಅನ್ನು ಸಪೋರ್ಟ್ ಮಾಡಲಿವೆ ಎನ್ನಲಾಗಿದೆ. ಅಷ್ಟೇ ಅಲ್ಲದೆ ಈ ಕ್ಯಾಮೆರಾ ರಚನೆ ವಾಚ್ ಶೈಲಿಯಲ್ಲಿ ಕಾಣಿಸಿಕೊಳ್ಳಲಿದೆ ಎಂದು ತಿಳಿದುಬಂದಿದ್ದು, ಇದಕ್ಕಾಗಿ ಒಲಿವಿಯರ್ ಸವಿಯೊ ಜೊತೆಗೆ ಕೈಜೋಡಿಸಿದೆ ಎಂದು ತಿಳಿದು ಬಂದಿದೆ.
ಈ ಫೋನ್‌ನ ಲೀಕ್ ಮಾಹಿತಿಗಳನ್ನು ನೋಡುದಾಗ ಇದು ಸರಣಿಯು ಕ್ಯಾಮೆರಾ ಪ್ರಿಯರನ್ನೇ ಸೆಳೆಯಲು ಪರಿಚಯಿಸುತ್ತಿದೆ ಎಂದು ತಿಳಿದುಬರುತ್ತದೆ. ಯಾಕೆಂದರೆ ಈ ಫೋನ್‌ನಲ್ಲಿ ನೀಡಲಾಗುವ ಪೆರಿಸ್ಕೋಪ್ ಸೆನ್ಸರ್ ಹೆಚ್ಚಿನ ಜೂಮ್ ಆಯ್ಕೆ ನೀಡಲಿದ್ದು, ಸ್ಪಷ್ಟ ಫೋಟೋಗಳನ್ನು ಸೆರೆಹಿಡಿಯಲು ಸಹಕಾರಿಯಾಗಿರಲಿವೆ.
ಹಾಗೆಯೇ ಈ ರಿಯಲ್‌ಮಿ 12 ಪ್ರೊ ಸರಣಿಯು 71mm ಗೋಲ್ಡನ್ ಪೋಟ್ರೇಟ್ ಫೋಕಲ್ ಲೆಂಥ್ ಜೊತೆಗೆ 3X ಪೋಟ್ರೇಟ್ ಮೋಡ್ ಅನ್ನು ಪಡೆದಿರುವ ಸಾಧ್ಯತೆ ಇವೆ. ಇದರ ಜೊತೆಗೆ ಈ ಫೋನ್‌ಗಳ ಮುಖ್ಯ ಕ್ಯಾಮರಾ OIS ಮತ್ತು f/1.8 ಅಪರ್ಚರ್ ಹೊಂದಿರುವ ಸೋನಿ IMX890 1/1.56 ಇಂಚಿನ ಸೆನ್ಸಾರ್ ಆಗಿದೆ ಎಂದು ತಿಳಿದು ಬಂದಿದೆ. ಈ ಇನ್ನು ರಿಯಲ್‌ಮಿ 12 ಪ್ರೊ ಫೋನಿನ ನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸರ್‌ನಿಂದ ಕೂಡಿದ್ದರೆ ಪ್ರೊ ಪ್ಲಸ್ ಫೋನ್ 64 ಮೆಗಾ ಪಿಕ್ಸೆಲ್ ಸೆನ್ಸರ್ ಹೊಂದಿರಲಿದೆ.
ಈ ಸರಣಿ ಫೋನ್‌ಗಳು ಸ್ನ್ಯಾಪ್‌ಡ್ರಾಗನ್ 7s ಜನ್ 2 ಪ್ರೊಸೆಸರ್‌ನೊಂದಿಗೆ ಎಂಟ್ರಿ ನೀಡಲಿವೆ ಎಂದು ತಿಳಿದುಬಂದಿದೆ. ಅಲ್ಲದೆ ಮೂರು ರಿಯರ್ ಕ್ಯಾಮೆರಾ ಆಯ್ಕೆ ಪಡೆದಿರಲಿವೆ ಎಂದು ಲೀಕ್ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗುತ್ತಿದೆ. ಇನ್ನು ಈ ಫೋನ್‌ಗಳು 5,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿರುವ ಸಾಧ್ಯತೆಗಳು ಇವೆ.


Click it and Unblock the Notifications








