ಭಾರತದಲ್ಲಿ 'ರಿಯಲ್‌ಮಿ 12 ಪ್ರೊ+ 5G' ಬಿಡುಗಡೆ!..ಇದರ ಕ್ಯಾಮೆರಾಗೆ ಗ್ರಾಹಕರು ಫಿದಾ!
ರಿಯಲ್‌ಮಿ ಸಂಸ್ಥೆಯ ಬಹುನಿರೀಕ್ಷಿತ ರಿಯಲ್‌ಮಿ 12 ಪ್ರೊ ಸರಣಿಯು ಇಂದು ಬಿಡುಗಡೆ ಆಗಿದೆ. ಈ ಸರಣಿಯು ರಿಯಲ್‌ಮಿ 11 ಪ್ರೊ ಸರಣಿಯ ಉತ್ತರಾಧಿಕಾರಿ ಆಗಿ ಗುರುತಿಸಿಕೊಂಡಿದ್ದು, ಕ್ಯಾಮೆರಾ ಹಾಗೂ ಡಿಸೈನ್ ವಿಭಾಗದಲ್ಲಿ ಸಾಕಷ್ಟು ಅಪ್‌ಗ್ರೇಡ್ ಫೀಚರ್ಸ್‌ಗಳ ಮೂಲಕ ಲಗ್ಗೆ ಇಟ್ಟಿದೆ. ಇನ್ನು ಈ ಸರಣಿಯು ರಿಯಲ್‌ಮಿ 12 ಪ್ರೊ 5G ಹಾಗೂ ರಿಯಲ್‌ಮಿ 12 ಪ್ರೊ+ 5G ಮಾಡೆಲ್‌ಗಳನ್ನು ಒಳಗೊಂಡಿದೆ.
ಹೌದು, ರಿಯಲ್‌ಮಿ ಮೊಬೈಲ್ ಸಂಸ್ಥೆಯು ರಿಯಲ್‌ಮಿ 12 ಪ್ರೊ+ 5G ಫೋನ್ ಅನ್ನು ದೇಶಿಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ಹಾಗೂ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಒಳಗೊಂಡಿದೆ. ಅಲ್ಲದೇ ಈ ಫೋನ್ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೋನಿ IMX890 ಸೆನ್ಸಾರ್ ಅನ್ನು ಪಡೆದಿದ್ದು, ಆಕರ್ಷಕ ಎನಿಸಿದೆ.

ಹಾಗೆಯೇ ರಿಯಲ್‌ಮಿ 12 ಪ್ರೊ+ 5G ಫೋನ್ ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಅನ್ನು ಪಡೆದಿದೆ. ಇದರೊಂದಿಗೆ 12GB RAM + 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಪಡೆದುಕೊಂದಿದ್ದು, ಸಬ್‌ಮರಿನ್ ಬ್ಲೂ, ನ್ಯಾವಿಗೇಟರ್ ಬೀಜ್ ಹಾಗೂ ಎಕ್ಸ್‌ಪ್ಲೋರರ್ ರೆಡ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ ರಿಯಲ್‌ಮಿ 12 ಪ್ರೊ+ 5G ಫೋನಿನ ಇತರೆ ಫೀಚರ್ಸ್ ಏನು? ಇದರ ಬೆಲೆ ಎಷ್ಟು ಎಂಬ ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 12 ಪ್ರೊ+ 5G ಫೀಚರ್ಸ್ :
ಈ ಸ್ಮಾರ್ಟ್‌ಫೋನ್ 6.7 ಇಂಚಿನ ProXDR AMOLED ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 2412×1080 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್ ಸೌಲಭ್ಯ ಪಡೆದಿದ್ದು, 1260Hz ಇನ್‌ಸ್ಟಂಟ್ ಸ್ಯಾಂಪ್ಲಿಂಗ್ ರೇಟ್ ಪಡೆದಿದೆ. ಹಾಗೆಯೇ 950 nits ಬ್ರೈಟ್ನೆಸ್ ಸೌಲಭ್ಯ ಸಹ ಪಡೆದುಕೊಂಡಿದೆ.
ಇದು ಫೋನ್ ಸ್ನ್ಯಾಪ್‌ಡ್ರಾಗನ್ 7s Gen 2 ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ UI 6.0 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಫೋನ್ 8GB / 12GB RAM ಹಾಗೂ 128GB / 256GB ಆಂತರೀಕ ಸ್ಟೋರೇಜ್ ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ.

ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಇನ್ನು ರಿಯಲ್‌ಮಿ 12 ಪ್ರೊ+ 5G ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಈ ಫೋನ್ 67W SuperVOOC ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಕೂಡಾ ಪಡೆದಿದೆ. ಇದು 5G SA/NSA, ಡ್ಯುಯಲ್ 4G VoLTE, ವೈ-ಫೈ 6 802.11 ax (2.4GHz + 5GHz), ಬ್ಲೂಟೂತ್ 5.2, ಡ್ಯುಯಲ್-ಫ್ರೀಕ್ವೆನ್ಸಿ, ಯುಎಸ್‌ಬಿ ಟೈಪ್-C ಆಯ್ಕೆಗಳನ್ನು ಪಡೆದಿದೆ.
ಬೆಲೆ ಮತ್ತು ಲಭ್ಯತೆ
ರಿಯಲ್‌ಮಿ 12 ಪ್ರೊ+ 5G ಫೋನ್ ಮೂರು ವೇರಿಯಂಟ್ ಆಯ್ಕೆಗಳನ್ನು ಪಡೆದಿದೆ. ಅವುಗಳ ಬೆಲೆ ಈ ಕೆಳಗಿನಂತೆ ಇವೆ. ಹಾಗೆಯೇ ಈ ಫೋನ್ ಇದೇ ಫೆಬ್ರುವರಿ 6 ರಿಂದ ಫ್ಲಿಪ್‌ಕಾರ್ಟ್ ತಾಣದಲ್ಲಿ ಮಾರಾಟ ಪ್ರಾರಂಭಿಸಲಿದೆ.
8GB + 128GB ವೇರಿಯಂಟ್ ಬೆಲೆ 29,999ರೂ
8GB + 256GB ವೇರಿಯಂಟ್ ಬೆಲೆ 31,999ರೂ
12GB + 256GB ವೇರಿಯಂಟ್ ಬೆಲೆ 33,999ರೂ


Click it and Unblock the Notifications








