ಇಂದು ರಿಯಲ್‌ಮಿ 12X 5G ಫಸ್ಟ್ ಸೇಲ್!..ಸಸ್ತಾ ಬೆಲೆಗೆ ಲಭ್ಯ, ಆಫರ್ ಕೂಡಾ ಇದೆ!
ರಿಯಲ್‌ಮಿ ಮೊಬೈಲ್ ಸಂಸ್ಥೆಯ ಹೊಸದಾಗಿ ಬಿಡುಗಡೆ ಮಾಡಿರುವ ರಿಯಲ್‌ಮಿ 12X 5G ಮೊಬೈಲ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಏಪ್ರಿಲ್ 5 ರಂದು) ಜನಪ್ರಿಯ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್ ಹಾಗೂ ಅಧಿಕೃತ ರಿಯಲ್‌ಮಿ ಆನ್‌ಲೈನ್ ಸ್ಟೋರ್ ಮೂಲಕ ಫಸ್ಟ್ ಸೇಲ್ ಪ್ರಾರಂಭ ಮಾಡಲಿದೆ.
ಹೌದು, ಒಪ್ಪೋ ಕಂಪನಿಯ ರಿಯಲ್‌ಮಿ 12X 5G ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ಶುರುವಾಗಿದೆ. ಈ ಫೋನ್ 4GB/6GB/8GB RAM ವೇರಿಯಂಟ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇದ್ದು, ಹಾಗೆಯೇ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇನ್ನು ಈ ಫೋನಿನ ಆರಂಭಿಕ ಬೆಲೆಯು 11,999ರೂ. ಗಳು ಆಗಿದೆ.

ಈ ಮೊಬೈಲ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸಾಮರ್ಥ್ಯ ಸೌಲಭ್ಯವನ್ನು ಪಡೆದಿದ್ದು, ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದು ಟ್ವಿಲೈಟ್ ಪರ್ಪಲ್ ಹಾಗೂ ವುಡ್‌ಲ್ಯಾಂಡ್ ಗ್ರೀನ್ ಕಲರ್ ಆಯ್ಕೆ ಪಡೆದಿದೆ. ಇನ್ನುಳಿದಂತೆ ರಿಯಲ್‌ಮಿ 12X 5G ಸ್ಮಾರ್ಟ್‌ಫೋನಿನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಡಿಸ್‌ಪ್ಲೇ ರಚನೆ
ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಸೆಟ್‌ಅಪ್ ಪಡೆದಿದ್ದು, ಹಾಗೆಯೇ 1080x2400 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಇದು 120Hz ರಿಫ್ರೆಶ್ ರೇಟ್ ಆಯ್ಕೆ ಒಳಗೊಂಡಿದ್ದು, 91.40% ಅನುಪಾತವನ್ನು ಕೂಡಾ ಪಡೆದಿದೆ. ಹಾಗೆಯೇ ಈ ಫೋನ್ 950 nits ಬ್ರೈಟ್ನೆಸ್ ಸಪೋರ್ಟ್ ಪಡೆದಿದೆ.
ಪ್ರೊಸೆಸರ್ ಸಾಮರ್ಥ್ಯ
ರಿಯಲ್‌ಮಿ 12X 5G ಮೊಬೈಲ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್ ಸಾಮರ್ಥ್ಯವನ್ನು ಇದು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಬೆಂಬಲ ಕೂಡಾ ಪಡೆದಿದೆ. ಅಲ್ಲದೇ 4GB/6GB/8GB RAM ವೇರಿಯಂಟ್ ಆಯ್ಕೆಗಳಲ್ಲಿ ಇದು ಲಭ್ಯ. ಇದರೊಂದಿಗೆ 8GB ಡೈನಾಮಿಕ್ RAM ಸೌಲಭ್ಯ ಸಹ ಸಿಗಲಿದೆ.

ಕ್ಯಾಮೆರಾ ಸೆನ್ಸಾರ್
ರಿಯಲ್‌ಮಿ 12X 5G ಫೋನ್ ಈ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಆಗಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ರಚನೆ ಪಡೆದಿದೆ. ಇನ್ನು ಮುಂಭಾಗದಲ್ಲಿ ಈ ಫೋನ್ 8 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ಪಡೆದುಕೊಂಡಿದೆ. ಅಲ್ಲದೇ 1080P@30fps ಸಪೋರ್ಟ್‌ನಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಬಹುದು.
ಬ್ಯಾಟರಿ ಪವರ್
ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ 5000 mAh ಬ್ಯಾಟರಿ ಬ್ಯಾಕ್‌ಅಪ್ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 45W SuperVOOC ಚಾರ್ಜಿಂಗ್ ಸಪೋರ್ಟ್ ಪಡೆದಿದೆ. ಹಾಗೆಯೇ ಏರ್ ಗೆಸ್ಚರ್ ಸೌಲಭ್ಯ, IP54 ರೇಟಿಂಗ್ ಆಯ್ಕೆ ಹಾಗೂ ಡ್ಯುಯಲ್ ಸ್ಟಿರಿಯೋ ಸ್ಪೀಕರ್ ಸೌಲಭ್ಯದ ಆಯ್ಕೆಗಳು ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್, ವೈ-ಫೈ, ಯುಎಸ್‌ಬಿ ಸಿ ಟೈಪ್ ಆಯ್ಕೆಗಳು ಇದೆ.
ಬೆಲೆ ಮತ್ತು ಲಭ್ಯತೆ
4GB+128GB ವೇರಿಯಂಟ್ ಬೆಲೆಯು 11,999ರೂ.
6GB+128GB ವೇರಿಯಂಟ್ ಬೆಲೆಯು 13,499ರೂ.
8GB+128GB ವೇರಿಯಂಟ್ ಬೆಲೆಯು 14,999ರೂ.
ಇನ್ನು ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್ ಡಿಸ್ಕೌಂಟ್ ಇದ್ದು, 1000ರೂ. ರಿಯಾಯಿತಿ ಸಿಗಲಿದೆ. ಈ ಫೋನ್ ಟ್ವಿಲೈಟ್ ಪರ್ಪಲ್ ಹಾಗೂ ವುಡ್‌ಲ್ಯಾಂಡ್ ಗ್ರೀನ್ ಕಲರ್ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬಹುದು.


Click it and Unblock the Notifications








