Home
ಸುದ್ದಿಜಾಲ

Realme: ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್! ಫೀಚರ್ಸ್‌ ಏನು?

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಇದೀಗ ಹೆಚ್ಚು ಸೇಲ್‌ ಆಗುತ್ತಿರುವ ಹಾಗೂ ವಿಶೇಷ ಫೀಚರ್ಸ್‌ ಆಯ್ಕೆ ಇರುವ ಫೋನ್‌ಗಳಾಗಿ ಗುರುತಿಸಿಕೊಂಡಿವೆ. ಈ ನಡುವೆ 45W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಶೀಘ್ರದಲ್ಲೇ ಭಾರತದಲ್ಲಿ ಹೊಸ ಫೋನ್‌ ಲಾಂಚ್‌ ಆಗಲಿದೆ.

ಹೌದು, ಇನ್ನೇನು ಕೆಲವೇ ದಿನಗಳಲ್ಲಿ ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ (Realme 12x 5G smartphone) ಲಾಂಚ್‌ ಆಗಲಿದೆ. ಈ ಫೋನ್‌ನ ಭಾರತೀಯ ವೇರಿಯಂಟ್‌ ವೇಗದ ಚಾರ್ಜಿಂಗ್ ಮತ್ತು ಡೈನಾಮಿಕ್ ಬಟನ್‌ ಆಯ್ಕೆಯೊಂದಿಗೆ ಬರಲಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಈ ಫೋನ್ ಏನೆಲ್ಲಾ ನಿರೀಕ್ಷಿತ ಫೀಚರ್ಸ್‌ ಆಯ್ಕೆ ಪಡೆದುಕೊಂಡಿದೆ?, ಬೆಲೆ ಎಷ್ಟಿರಬಹುದು ಎಂಬ ಮಾಹಿತಿ ಇಲ್ಲಿದೆ ನೋಡಿ.

ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ ...

ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್: ಈ ಸ್ಮಾರ್ಟ್‌ಫೋನ್‌ ಸಂಬಂಧ 91ಮೊಬೈಲ್‌ ವರದಿ ಮಾಡಿದೆ. ಆ ವರದಿ ಪ್ರಕಾರ, ಭಾರತದಲ್ಲಿ ಶೀಘ್ರವೇ ಎಂಟ್ರಿ ಕೊಡಲಿದೆಯಂತೆ. ಇನ್ನು ರಿಯಲ್‌ಮಿ 12x 5G ಅನ್ನು ಈ ವಾರ ಚೀನಾದಲ್ಲಿ ರಿಯಲ್‌ 12 ಸರಣಿ ವಿಭಾಗದಲ್ಲಿ ಘೋಷಣೆ ಮಾಡಲಾಗಿದೆ. ಆದರೆ, ಭಾರತಕ್ಕೆ ಬರುತ್ತಿರುವ ಈ ಫೋನ್‌ ಕೆಲವು ಭಿನ್ನ ಫೀಚರ್ಸ್‌ ಆಯ್ಕೆ ಪಡೆಯಲಿದೆ ಎಂದು ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.

ಮುಂಬರುವ ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಭಾರತದಲ್ಲಿ 45W ಸೂಪರ್‌ವೂಕ್‌ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ ಎಂಬ ಮಾಹಿತಿ ದೃಢೀಕೃತವಾಗಿದೆ. ಚೀನಾದಲ್ಲಿ ಇದೇ ಫೋನ್ 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ನಡುವೆ ಭಾರತಕ್ಕೆ ಬರುತ್ತಿರುವ 45W ಚಾರ್ಜಿಂಗ್ ವೇಗದ ಬೆಂಬಲ ಇರುವ ಫೋನ್ 30 ನಿಮಿಷಗಳಲ್ಲಿ 50 % ಭರ್ತಿಯಾಗಲಿದೆ.

ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ ...

ಹಾಗೆಯೇ ರಿಯಲ್‌ಮಿ 12 ಸ್ಮಾರ್ಟ್‌ಫೋನ್‌ನಂತೆ ಈ ಫೋನ್ 'ಡೈನಾಮಿಕ್ ಬಟನ್' ಆಯ್ಕೆ ಪಡೆದಿರಲಿದ್ದು, ರಿಯಲ್‌ಮಿ 12+ ನಲ್ಲಿ, ಡಿಎನ್‌ಡಿ ಮತ್ತು ಏರ್‌ಪ್ಲೇನ್ ಮೋಡ್, ಸ್ಟ್ರೀಟ್ ಫೋಟೋಗ್ರಫಿ ಮತ್ತು ಗೂಗಲ್ ಸ್ಮಾರ್ಟ್ ಲೆನ್ಸ್‌ನಂತಹ ಕ್ಯಾಮೆರಾ ಮೋಡ್‌ಗಳನ್ನು ಆಕ್ಟಿವ್‌ ಮಾಡಲು ಡೈನಾಮಿಕ್ ಬಟನ್ ಅವಕಾಶ ನೀಡಲಿದೆ. ನಿಮ್ಮ ಆದ್ಯತೆಗೆ ತಕ್ಕಂತೆ ನೀವು ಹೊಂದಾಣಿಕೆ ಮಾಡಬಹುದಾಗಿದೆ.

ಇನ್ನು ಈ ರಿಯಲ್‌ಮಿ 12x 5G ಅನ್ನು ಈಗಾಗಲೇ BIS ಪ್ರಮಾಣೀಕರಣ ವೆಬ್‌ಸೈಟ್‌ನಲ್ಲಿ ಗುರುತಿಸಲಾಗಿದ್ದು, ಚೀನಾದಲ್ಲಿ ರಿಯಲ್‌ಮಿ 12x 5G 12GB+256GB ವೇರಿಯಂಟ್‌ಗೆ RMB 1,399 (ಭಾರತದಲ್ಲಿ 16,300 ರೂ.ಗಳು) ಮತ್ತು 12GB+512GB ವೇರಿಯಂಟ್‌ಗೆ RMB 1,599 (ಭಾರತದಲ್ಲಿ 18,700 ರೂ.ಗಳು) ಬೆಲೆ ನಿಗದಿ ಮಾಡಲಾಗಿದ್ದು, ಇದೇ ಬೆಲೆಯಲ್ಲಿ ಭಾರತದಲ್ಲೂ ಇದು ಕಾಣಿಸಿಕೊಳ್ಳಬಹುದು ಎನ್ನಲಾಗಿದೆ.

ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ರಿಯಲ್‌ಮಿ 12x 5G ಸ್ಮಾರ್ಟ್‌ಫೋನ್ ...

Realme 12x 5G ಫೀಚರ್ಸ್‌: ಈ ಫೋನ್‌ ಅನ್ನು ಈಗಾಗಲೇ ಚೀನಾದಲ್ಲಿ ಲಾಂಚ್‌ ಮಾಡಲಾಗಿದ್ದು, 6.67 ಇಂಚಿನ FHD+ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಮತ್ತು 625 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಮೀಡಿಯಾಟೆಕ್ ಡೈಮೆನ್ಸಿಟಿ 6100+ ಪ್ರೊಸೆಸರ್‌ನಿಂದ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸಲಿದ್ದು, ಮಾಲಿ G57 ಜಿಪಿಯು ಬಲ ಪಡೆದುಕೊಂಡಿದೆ.

ಹಾಗೆಯೇ ಈ ಫೋನ್‌ 12GB RAM ಮತ್ತು 512GB ಸ್ಟೋರೇಜ್‌ ಆಯ್ಕೆಯ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇಂಟರ್‌ ಸ್ಟೋರೇಜ್‌ ವಿಸ್ತರಣೆಗೂ ಅವಕಾಶ ನೀಡಿದೆ. ಉಳಿದಂತೆ ಈ ಫೋನ್ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮರಾವನ್ನು ಹೊಂದಿದ್ದು, 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಆದರೆ 15W ಚಾರ್ಜಿಂಗ್ ಗೆ ಮಾತ್ರ ಬೆಂಬಲ ಪಡೆದಿದೆ.

Best Mobiles in India

English summary
Realme 12x 5G smartphone will be launched. It is known that the Indian variant of this phone will come with fast charging and dynamic button option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+