Home
ಸುದ್ದಿಜಾಲ

ಇಂದು ರಿಯಲ್‌ಮಿ 12X 5G ಫೋನಿನ ವಿಶೇಷ ಸೇಲ್‌!..ಆಫರ್‌ ಏನು ಗೊತ್ತಾ?

ಜನಪ್ರಿಯ ರಿಯಲ್‌ಮಿ ಮೊಬೈಲ್ ಸಂಸ್ಥೆ ಇತ್ತೀಚಿಗಷ್ಟೇ ಲಾಂಚ್ ಮಾಡಿರುವ ರಿಯಲ್‌ಮಿ 12X 5G ಫೋನ್‌ ಈಗಾಗಲೇ ಮೊದಲ ಮಾರಾಟ ಕಂಡಿದೆ. ಇದೀಗ ಮತ್ತೆ ಈ ಮೊಬೈಲ್ ಇಂದು (ಏಪ್ರಿಲ್‌ 8 ರಂದು) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಆನ್‌ಲೈನ್‌ ತಾಣದ ಮೂಲಕ ವಿಶೇಷ ಸೇಲ್‌ ಪ್ರಾರಂಭ ಮಾಡಲಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್ ತಾಣವು ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 12X 5G ಸ್ಮಾರ್ಟ್‌ಫೋನಿನ ಸ್ಪೆಷಲ್‌ ಸೇಲ್‌ ಇಂದು ಪ್ರಾರಂಭಿಸಲಿದೆ. ಇನ್ನು ಈ ಫೋನ್‌ ಮೂರು ಭಿನ್ನ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಅಂದಹಾಗೆ ಈ ಫೋನಿನ ಆರಂಭಿಕ ಬೆಲೆಯು 11,999ರೂ. ಗಳು ಆಗಿದೆ.

ಇಂದು ರಿಯಲ್‌ಮಿ 12X 5G ಫೋನಿನ ವಿಶೇಷ ಸೇಲ್‌!..ಆಫರ್‌ ಏನು ಗೊತ್ತಾ?

ಈ ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಸಾಮರ್ಥ್ಯ ಪಡೆದಿದ್ದು, ಹಾಗೆಯೇ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಸೌಲಭ್ಯವನ್ನು ಒಳಗೊಂಡಿದೆ. ಇನ್ನು ಈ ಫೋನ್‌ ಟ್ವಿಲೈಟ್‌ ಪರ್ಪಲ್‌ ಹಾಗೂ ವುಡ್‌ಲ್ಯಾಂಡ್‌ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಲಭ್ಯ. ಹಾಗಾದರೇ ರಿಯಲ್‌ಮಿ 12X 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ರಿಯಲ್‌ಮಿ 12X 5G - ಫೀಚರ್ಸ್‌

ರಿಯಲ್‌ಮಿ 12X 5G ಮೊಬೈಲ್‌ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, ಹಾಗೆಯೇ 1080x2400 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಇದು 120Hz ರಿಫ್ರೆಶ್‌ ರೇಟ್‌ ಆಯ್ಕೆ ಒಳಗೊಂಡಿದ್ದು, 91.40% ಅನುಪಾತವನ್ನು ಕೂಡಾ ಪಡೆದಿದೆ. ಹಾಗೆಯೇ ಈ ಫೋನ್ 950 nits ಬ್ರೈಟ್ನೆಸ್‌ ಸಪೋರ್ಟ್‌ ಹೊಂದಿದೆ.

ರಿಯಲ್‌ಮಿ 12X 5G ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಪವರ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಸಹ ಪಡೆದಿದೆ. ಅಲ್ಲದೇ 4GB/6GB/8GB RAM ವೇರಿಯಂಟ್‌ ಆಯ್ಕೆಗಳಲ್ಲಿ ಇದು ಲಭ್ಯ. ಇದರೊಂದಿಗೆ 8GB ಡೈನಾಮಿಕ್ RAM ಸೌಲಭ್ಯ ಸಹ ಲಭ್ಯ.

ರಿಯಲ್‌ಮಿ 12X 5G ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಇನ್ನು ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆಯಲ್ಲಿ ಇದೆ. ಇನ್ನು ಮುಂಭಾಗದಲ್ಲಿ ಈ ಫೋನ್‌ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಸೌಲಭ್ಯವನ್ನು ನೀಡಲಾಗಿದೆ. ಅಲ್ಲದೇ 1080P@30fps ಸಪೋರ್ಟ್‌ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಸೌಲಭ್ಯ ಸಹ ಇದೆ.

ರಿಯಲ್‌ಮಿ 12X 5G ಮೊಬೈಲ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿದ್ದು, ಇದಕ್ಕೆ ಪೂರಕವಾಗಿ 45W SuperVOOC ಚಾರ್ಜಿಂಗ್‌ ಸಪೋರ್ಟ್‌ ಒಳಗೊಂಡಿದೆ. ಹಾಗೆಯೇ ಏರ್‌ ಗೆಸ್ಚರ್‌ ಸೌಲಭ್ಯ, IP54 ರೇಟಿಂಗ್‌ ಆಯ್ಕೆ ಹಾಗೂ ಡ್ಯುಯಲ್‌ ಸ್ಟಿರಿಯೋ ಸ್ಪೀಕರ್‌ ಸೌಲಭ್ಯದ ಆಯ್ಕೆಗಳು ಇವೆ. ಅದೇ ರೀತಿ ಕನೆಕ್ಟಿವಿಟಿ ಸೌಲಭ್ಯಗಳನ್ನು ಬ್ಲೂಟೂತ್‌, ವೈ-ಫೈ, ಯುಎಸ್‌ಬಿ ಸಿ ಟೈಪ್‌ ಆಯ್ಕೆಗಳನ್ನು ಕಾಣಬಹುದಾಗಿದೆ.

ಇನ್ನು ಈ ಫೋನ್‌ 4GB + 128GB ವೇರಿಯಂಟ್‌, 6GB + 128GB ವೇರಿಯಂಟ್‌ ಹಾಗೂ 8GB+128GB ವೇರಿಯಂಟ್‌ ಆಯ್ಕೆಗಳಲ್ಲಿ ಲಭ್ಯ ಇದೆ. ಅಲ್ಲದೇ ಈ ಫೋನ್‌ ಟ್ವಿಲೈಟ್‌ ಪರ್ಪಲ್‌ ಹಾಗೂ ವುಡ್‌ಲ್ಯಾಂಡ್‌ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಗ್ರಾಹಕರು ಖರೀದಿಸಬಹುದು.

Best Mobiles in India

English summary
realme 12x 5G Special sale today in India via Flipkart. price, specifications and offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+