Home
ಸುದ್ದಿಜಾಲ

ಮತ್ತೊಂದು ಅಗ್ಗದ 5G ಫೋನ್‌ ಲಾಂಚ್‌ ಮಾಡಲು ಸಜ್ಜಾದ ರಿಯಲ್‌ಮಿ!..ಫೀಚರ್ಸ್ ಏನು?

ಜನಪ್ರಿಯ ರಿಯಲ್‌ಮಿ ಮೊಬೈಲ್‌ ಬ್ರ್ಯಾಂಡ್‌ ಇದೀಗ ಬಜೆಟ್‌ ಬೆಲೆಯಲ್ಲಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್‌ ಲಾಂಚ್‌ ಮಾಡಲು ಸಕಲ ತಯಾರಿ ನಡೆಸಿದ್ದು, ಅದುವೇ ರಿಯಲ್‌ಮಿ 12X 5G (Realme 12X 5G) ಸ್ಮಾರ್ಟ್‌ಫೋನ್‌ ಆಗಿದೆ. ಬಿಡುಗಡೆಗೂ ಮುನ್ನವೇ ಈ ಫೋನ್‌ ಹೊಸ ಅಲೆ ಸೃಷ್ಠಿ ಮಾಡಿದ್ದು, ಗ್ರಾಹಕರ ಕೌತುಕ ಹೆಚ್ಚಿಸಿದೆ.

ಹೌದು, ರಿಯಲ್‌ಮಿ ಮೊಬೈಲ್‌ ಸಂಸ್ಥೆಯು ಇದೇ ಏಪ್ರಿಲ್‌ 2 ರಂದು ಅಧಿಕೃತವಾಗಿ ತನ್ನ ಹೊಸ ರಿಯಲ್‌ಮಿ 12X 5G ಫೋನ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ 45W SuperVOOC ಚಾರ್ಜಿಂಗ್‌ ಸೌಲಭ್ಯ ಪಡೆದಿರುವುದು ಬಹುತೇಕ ಖಚಿತವಾಗಿದ್ದು, ಇದರೊಂದಿಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಸೌಲಭ್ಯ ಪಡೆದುಕೊಂಡಿರಲಿದೆ.

ಮತ್ತೊಂದು ಅಗ್ಗದ 5G ಫೋನ್‌ ಲಾಂಚ್‌ ಮಾಡಲು ಸಜ್ಜಾದ ರಿಯಲ್‌ಮಿ!..ಫೀಚರ್ಸ್ ಏನು?

ಹಾಗೆಯೇ ಹಿಂಭಾಗದಲ್ಲಿ ವೃತ್ತಾಕಾರದ ಮಾದರಿಯ ಡಿಸೈನ್‌ ಇರಲಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿರಲಿದೆ. ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿರಲಿದೆ. ಅಲ್ಲದೇ ಈ ಫೋನ್‌ 120Hz ರಿಫ್ರೆಶ್‌ ರೇಟ್‌ ಪಡೆದಿರುವ ನಿರೀಕ್ಷೆಗಳು ಇವೆ. ಹಾಗಾದರೇ ರಿಯಲ್‌ಮಿ 12X 5G ಫೋನಿನ ಇತರೆ ನಿರೀಕ್ಷಿತ ಫೀಚರ್ಸ್‌ಗಳ ಬಗ್ಗೆ ಮುಂದೆ ನೊಡೋಣ ಬನ್ನಿರಿ.

ರಿಯಲ್‌ಮಿ 12X 5G - ನಿರೀಕ್ಷಿತ ಫೀಚರ್ಸ್‌

ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ 6.72 ಇಂಚಿನ ಡಿಸ್‌ಪ್ಲೇ ರಚನೆ ಅನ್ನು ಪಡೆದಿರಲಿದ್ದು, ಈ ಡಿಸ್‌ಪ್ಲೇಯು ಪೂರ್ಣ HD+ ರೆಸಲ್ಯೂಶನ್‌ ಸೌಲಭ್ಯದಲ್ಲಿ ಇರಲಿದೆ. ಹಾಗೆಯೇ 120Hz ರಿಫ್ರೆಶ್‌ ರೇಟ್‌ ಪಡೆದಿರಲಿದ್ದು, 950 nits ಬ್ರೈಟ್ನೆಸ್‌ ಸಪೋರ್ಟ್‌ ಕೂಡಾ ಪಡೆದಿರಲಿದೆ.

ಅದೇ ರೀತಿ ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಪವರ್‌ ಸೌಲಭ್ಯ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಇರಲಿದೆ. ಅಲ್ಲದೇ 6GB +128GB ಹಾಗೂ 8GB + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಲ್ಲಿ ಇದು ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಹಾಗೆಯೇ ಈಗಾಗಲೇ ಹೇಳಿದಂತೆ ಇದು ಹಿಂಭಾಗದಲ್ಲಿ ವೃತ್ತಾಕಾರದ ಮಾದರಿಯ ಡಿಸೈನ್‌ ಪಡೆದಿರಲಿದ್ದು, ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಒಳಗೊಂಡಿರಲಿದೆ. ಇನ್ನು ಇದರ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿರಲಿದೆ. ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾ ಒದಗಿಸುವ ಸಾಧ್ಯತೆಗಳು ಇವೆ.

ಅಲ್ಲದೇ ರಿಯಲ್‌ಮಿ 12X 5G ಫೋನ್‌ ಸಹ ಇತ್ತೀಚಿನ ಫೋನ್‌ಗಳಂತೆ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಪಡೆದಿರುವ ನಿರೀಕ್ಷೆಗಳು ಇವೆ. ಇದಕ್ಕೆ ಪೂರಕವಾಗಿ 45W SuperVOOC ಚಾರ್ಜಿಂಗ್‌ ಸಪೋರ್ಟ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ. ಹಾಗೆಯೇ ಕನೆಕ್ಟಿವಿಟಿ ಸೌಲಬ್ಯಗಳಲ್ಲಿ ಬ್ಲೂಟೂತ್‌, ವೈ-ಫೈ, ಯುಎಸ್‌ಬಿ ಸಿ ಟೈಪ್‌ ಆಯ್ಕೆಗಳು ಇರಲಿವೆ.

ಇನ್ನು ಈ ಮೊಬೈಲ್‌ ಡ್ಯುಯಲ್ ಸ್ಪೀಕರ್‌ಗಳ ಸೌಲಭ್ಯ ಹೊಂದಿರಲಿದ್ದು, ಇದು 7.69mm ತಿಕ್ನೆಸ್‌ ರಚನೆ ಪಡೆದಿರಲಿದೆ. ಪ್ಯಾಕ್ ಮಾಡಲು ಲೇವಡಿ ಮಾಡಲಾಗಿದೆ. ಅಂದಹಾಗೆ ಇದನ್ನು ಈಗಾಗಲೇ ಎಂಟ್ರಿ ಲೆವೆಲ್‌ ವಿಭಾಗದಲ್ಲಿ 5G ಕಿಲ್ಲರ್ ಎಂದು ಫ್ಲಿಪ್‌ಕಾರ್ಟ್‌ ನಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಮಾರುಕಟ್ಟೆಯಲ್ಲಿ ಈ ಫೋನ್‌ ಸುಮಾರು 12,000ರೂ. ಗಳ ಆಸುಪಾಸಿನಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳು ಇವೆ. ಇದೇ ಏಪ್ರಿಲ್‌ 2 ರಂದು ಲಾಂಚ್‌ ಆಗಲಿದ್ದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಮೂಲಕ ಸೇಲ್‌ ಪ್ರಾರಂಭಿಸಲಿದೆ.

Best Mobiles in India

English summary
Realme 12X 5G will launch in india on April 2. check here Expected price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+