Home
ಸುದ್ದಿಜಾಲ

ಅಗ್ಗದ ಬೆಲೆಯಲ್ಲಿ ರಿಯಲ್‌ಮಿ 12X 5G ಲಾಂಚ್‌!..ಇದರ ಫೀಚರ್ಸ್‌ಗೆ ಫಿದಾ ಆಗ್ತೀರಾ!

ರಿಯಲ್‌ಮಿ ಮೊಬೈಲ್‌ ಸಂಸ್ಥೆಯ ಬಹುನಿರೀಕ್ಷಿತ ರಿಯಲ್‌ಮಿ 12X 5G ಸ್ಮಾರ್ಟ್‌ಫೊನ್‌ ಇಂದು ಭಾರತದಲ್ಲಿ ಅಧಿಕೃತವಾಗಿ ಲಾಂಚ್ ಆಗಿದೆ. ಈ ನೂತನ ಫೋನ್‌ ಸ್ಟೈಲಿಶ್‌ ಡಿಸೈನ್‌ ಪಡೆದಿದ್ದು, ಎಂಟ್ರಿ ಲೆವೆಲ್‌ 5G ಕಿಲ್ಲರ್‌ ನಂತಹ ಫೀಚರ್ಸ್‌ ಸೂಚಿಸಿದೆ. ಅಂದಹಾಗೆ ಈ ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಸೌಲಭ್ಯ ಪಡೆದಿದೆ.

ಹೌದು, ರಿಯಲ್‌ಮಿ ಸಂಸ್ಥೆಯು ಇಂದು ರಿಯಲ್‌ಮಿ 12X 5G ಮೊಬೈಲ್‌ ಅನ್ನು ಇಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಎಂಟ್ರಿ ಲೆವೆಲ್‌ 5G ಸ್ಮಾರ್ಟ್‌ಫೋನ್‌ ಆಗಿದ್ದು, 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌, ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್‌ AI ಕ್ಯಾಮೆರಾ ಸೆನ್ಸಾರ್‌ ಪಡೆದಿದೆ. ಅಲ್ಲದೇ 45W ಫಾಸ್ಟ್‌ ಚಾರ್ಜಿಂಗ್‌ ಇದರ ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ.

ಅಗ್ಗದ ಬೆಲೆಯಲ್ಲಿ ರಿಯಲ್‌ಮಿ 12X 5G ಲಾಂಚ್‌!..ಇದರ ಫೀಚರ್ಸ್‌ಗೆ ಫಿದಾ ಆಗ್ತೀರಾ!

ಅಲ್ಲದೇ ಈ ಫೋನ್‌ ಏರ್‌ ಗೆಸ್ಚರ್‌ ಸೌಲಭ್ಯ ಕೂಡಾ ಪಡೆದಿದ್ದು, IP54 ರೇಟಿಂಗ್‌ ಆಯ್ಕೆ ಕೂಡಾ ಪಡೆದಿದೆ. ಇದಲ್ಲದೇ ಡ್ಯುಯಲ್‌ ಸ್ಟಿರಿಯೋ ಸ್ಪೀಕರ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಇನ್ನು ಇದು ಟ್ವಿಲೈಟ್‌ ಪರ್ಪಲ್‌ ಹಾಗೂ ವುಡ್‌ಲ್ಯಾಂಡ್‌ ಗ್ರೀನ್‌ ಕಲರ್‌ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಇರಲಿದೆ. ಅಂದಹಾಗೆ ಈ ಫೋನಿನ ಆರಂಭಿಕ ಬೆಲೆ 11,999ರೂ. ಆಗಿದೆ.

ಅಗ್ಗದ ಬೆಲೆಯಲ್ಲಿ ರಿಯಲ್‌ಮಿ 12X 5G ಲಾಂಚ್‌!..ಇದರ ಫೀಚರ್ಸ್‌ಗೆ ಫಿದಾ ಆಗ್ತೀರಾ!

ರಿಯಲ್‌ಮಿ 12X 5G - ಫೀಚರ್ಸ್‌ ಹೀಗಿವೆ

ರಿಯಲ್‌ಮಿ 12X 5G ಮೊಬೈಲ್‌ 6.72 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ರಚನೆ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1080x2400 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಅಲ್ಲದೇ ಇದು 120Hz ರಿಫ್ರೆಶ್‌ ರೇಟ್‌ ಆಯ್ಕೆ ಒಳಗೊಂಡಿದ್ದು, 91.40% ಅನುಪಾತವನ್ನು ಕೂಡಾ ಪಡೆದಿದೆ. ಹಾಗೆಯೇ ಈ ಫೋನ್ 950 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ.

ಅಗ್ಗದ ಬೆಲೆಯಲ್ಲಿ ರಿಯಲ್‌ಮಿ 12X 5G ಲಾಂಚ್‌!..ಇದರ ಫೀಚರ್ಸ್‌ಗೆ ಫಿದಾ ಆಗ್ತೀರಾ!

ಅದೇ ರೀತಿ ರಿಯಲ್‌ಮಿ 12X 5G ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಪ್ರೊಸೆಸರ್‌ ಬಲವನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಸಪೋರ್ಟ್‌ ಸಹ ಪಡೆದಿದೆ. ಅಲ್ಲದೇ 4GB/6GB/8GB RAM ವೇರಿಯಂಟ್‌ ಆಯ್ಕೆಗಳಲ್ಲಿ ಇದು ಲಭ್ಯ. ಇದರೊಂದಿಗೆ 8GB ಡೈನಾಮಿಕ್ RAM ಸೌಲಭ್ಯ ಸಹ ಸಿಗಲಿದೆ.

ಹಾಗೆಯೇಈ ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇನ್ನು ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ಆಗಿದೆ. ಸೆಕೆಂಡರಿ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ರಚನೆ ಪಡೆದಿದೆ. ಇನ್ನು ಮುಂಭಾಗದಲ್ಲಿ ಈ ಫೋನ್‌ 8 ಮೆಗಾ ಪಿಕ್ಸಲ್‌ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ. 1080P@30fps ಸಪೋರ್ಟ್‌ನಲ್ಲಿ ವಿಡಿಯೋ ರೆಕಾರ್ಡಿಂಗ್‌ ಮಾಡಬಹುದು.

ರಿಯಲ್‌ಮಿ 12X 5G ಫೋನ್‌ 5000 mAh ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ 45W SuperVOOC ಚಾರ್ಜಿಂಗ್‌ ಸಪೋರ್ಟ್‌ ಪಡೆದಿದೆ. ಹಾಗೆಯೇ ಏರ್‌ ಗೆಸ್ಚರ್‌ ಸೌಲಭ್ಯ, IP54 ರೇಟಿಂಗ್‌ ಆಯ್ಕೆ ಹಾಗೂ ಡ್ಯುಯಲ್‌ ಸ್ಟಿರಿಯೋ ಸ್ಪೀಕರ್‌ ಸೌಲಭ್ಯದ ಆಯ್ಕೆಗಳು ಇವೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಬ್ಲೂಟೂತ್‌, ವೈ-ಫೈ, ಯುಎಸ್‌ಬಿ ಸಿ ಟೈಪ್‌ ಆಯ್ಕೆಗಳು ಇದೆ.

ಇನ್ನು ಆರಂಭಿಕ 4GB+128GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 11,999ರೂ. ಆಗಿದೆ. 6GB+128GB ವೇರಿಯಂಟ್‌ ದರವು 13,499ರೂ. ಆಗಿದ್ದು, 8GB+128GB ವೇರಿಯಂಟ್‌ ಬೆಲೆಯು 14,999ರೂ. ಗಳು ಆಗಿದೆ. ಈ ಫೋನ್‌ ಟ್ವಿಲೈಟ್‌ ಪರ್ಪಲ್‌ ಹಾಗೂ ವುಡ್‌ಲ್ಯಾಂಡ್‌ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಲಭ್ಯ ಇದ್ದು, Early Bird ಸೇಲ್‌ ಇಂದು ಸಂಜೆ 6 ಗಂಟೆಗೆ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭ.

Best Mobiles in India

English summary
Realme 12x 5G with 45W SUPERVOOC charging launched in India: Price, Specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+