ಗಣೇಶ ಹಬ್ಬಕ್ಕೆ ಸಿಕ್ತು ಬಂಪರ್ ಗಿಫ್ಟ್! ಇಂದು Realme 13+ 5G ಸೇಲ್: 4,500 ಆಫರ್!
ಸ್ಮಾರ್ಟ್‌ಫೋನ್ ಪ್ರಿಯರೇ, ಇಲ್ಲಿ ಕೇಳಿ.. ಗಣೇಶ ಹಬ್ಬಕ್ಕೆ ಸಿಕ್ತು ಬಂಪರ್ ಗಿಫ್ಟ್! ಹೊಸ ರಿಯಲ್‌ಮಿ 13+ 5G (Realme 13+ 5G) ಸ್ಮಾರ್ಟ್‌ಫೋನ್ ಇಂದು (ಸೆಪ್ಟೆಂಬರ್ 6) ಫ್ಲಿಪ್‌ಕಾರ್ಟ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಮಾರಾಟ ಪ್ರಾರಂಭಿಸಲಿದೆ. ಈ ಮೊಬೈಲ್ ಈಗಾಗಲೇ, ಗ್ರಾಹಕರನ್ನು ಆಕರ್ಷಿಸಿದೆ. ಈ ಫೋನ್ ವಿಕ್ಟರಿ ಗೋಲ್ಡ್, ಸ್ಪೀಡ್ ಗ್ರೀನ್ ಮತ್ತು ಡಾರ್ಕ್ ಪರ್ಪಲ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಈ ಫೋನಿನ ಬೆಲೆ ಮತ್ತು ಆಫರ್ ತಿಳಿಯೋಣ ಬನ್ನಿ.
ನೂತನ ರಿಯಲ್‌ಮಿ 13+ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಮಾರಾಟವಾಗಲಿದೆ. ಈ ಫೋನ್ 6.67 ಇಂಚಿನ ಡಿಸ್ಲ್ಪೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಪಡೆದಿದೆ. ಇದರ ಜೊತೆಗೆ, 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಒಳಗೊಂಡಿದೆ. ಇದು 80W ವೇಗದ ಚಾರ್ಜಿಂಗ್ ಸೌಲಭ್ಯದೊಂದಿಗೆ 5000mAh ಬ್ಯಾಟರಿ ಸೇರಿದಂತೆ ಇನ್ನಿತರ ವಿಶೇಷತೆಗಳೊಂದಿಗೆ ಮಾರಾಟಕ್ಕೆ ಸಿದ್ಧವಾಗಿದೆ.

ರಿಯಲ್‌ಮಿ 13+ 5G ಫೋನಿನ ಬೆಲೆ
8GB + 128GB ಸ್ಟೋರೇಜ್ ಬೆಲೆ = 22,999 ರೂ.
8GB + 256GB ಸ್ಟೋರೇಜ್ ಬೆಲೆ = 24,999 ರೂ.
12GB + 256GB ಸ್ಟೋರೇಜ್ ಬೆಲೆ = 26,999 ರೂ.
ಕಂಪನಿಯು ರಿಯಲ್‌ಮಿ 13+ 5G ಫೋನಿನ ಮೊದಲ ಮಾರಾಟದ ಭಾಗವಾಗಿ ಕೆಲವು ಆಫರ್‌ಗಳನ್ನು ಘೋಷಿಸಿದೆ. ಈ ಫೋನ್ ಖರೀದಿ ಮೇಲೆ 1,500 ಕ್ಯಾಶ್‌ಬ್ಯಾಕ್ ಪಡೆಯಬಹುದು. 3,000 ರೂ.ಗಳ ವೆರೆಗೆ ಡಿಸ್ಕೌಂಟ್ ಲಾಭವೂ ಇದೆ. ನೀವು ಇಂದು (ಸೆಪ್ಟೆಂಬರ್ 6) ಮಧ್ಯಾಹ್ನ 12 ಗಂಟೆಯಿಂದ ಖರೀದಿಸಬಹುದು. ಫ್ಲಿಪ್‌ಕಾರ್ಟ್ ಹೊರತುಪಡಿಸಿ, ರಿಯಲ್‌ಮಿಯ ಅಧಿಕೃತ ವೆಬ್‌ಸೈಟ್ (realme.com) ಮತ್ತು ಆಫ್‌ಲೈನ್ ಸ್ಟೋರ್‌ಗಳಲ್ಲಿಯೂ ಈ ಫೋನ್ ಲಭ್ಯವಿರುತ್ತದೆ.
ರಿಯಲ್‌ಮಿ 13+ 5G ಮೊಬೈಲ್‌ನ ಫೀಚರ್ಸ್
ರಿಯಲ್‌ಮಿ 13+ 5G ಫೋನ್ 6.67 ಇಂಚಿನ ಪೂರ್ಣ HD+ AMOLED ಡಿಸ್ಲ್ಪೇಯನ್ನು ಹೊಂದಿದೆ. ಈ ಡಿಸ್ಪ್ಲೇಯು 120Hz ರಿಫ್ರೆಶ್ ರೇಟ್, 2400 × 1080 ಪಿಕ್ಸೆಲ್ ರೆಸಲ್ಯೂಶನ್ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಸಪೋರ್ಟ್ ಪಡೆದಿದೆ. ಈ ಹೊಸ ರಿಯಲ್‌ಮಿ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಪ್ರೊಸೆಸರ್ ಅನ್ನು ಹೊಂದಿದೆ. ಜೊತೆಗೆ, ಇದು ರಿಯಲ್‌ಮಿ UI 5 ಜೊತೆಗೆ Android 14 ನಲ್ಲಿ ಕೆಲಸ ನಿರ್ವಹಿಸುತ್ತದೆ.
ಈ ಸುದ್ದಿ ಓದಿದ್ದೀರಾ?: Moto S50: ಹೊಸ ಫೀಚರ್‌ನೊಂದಿಗೆ ಮೊಟೊ S50 ಬಿಡುಗಡೆ.. ಕಡಿಮೆ ಬೆಲೆ!
ಕಂಪನಿಯು ರಿಯಲ್‌ಮಿ 13+ 5G ಸ್ಮಾರ್ಟ್‌ಫೋನ್ ಅನ್ನು 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು Sony LYT-600 ಸಂವೇದಕದೊಂದಿಗೆ ಪರಿಚಯಿಸಿದೆ. ಇದು LED ಫ್ಲಾಶ್, 2 ಮೆಗಾಪಿಕ್ಸೆಲ್ ಪೋರ್ಟ್ರೇಟ್ ಕ್ಯಾಮೆರಾ ಹೊಂದಿದೆ. ಸೆಲ್ಪಿ ಮತ್ತು ವಿಡಿಯೋ ಕೆರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಈ ಫೋನ್ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸಂವೇದಕ ಹೊಂದಿದೆ. ಇದು 80W ವೇಗದ ಚಾರ್ಜಿಂಗ್ ಸೌಲಭ್ಯದೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ರಿಯಲ್‌ಮಿ 13+ 5G ಫೋನ್ ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP65 ರೇಟಿಂಗ್ ಪಡೆದಿದೆ. 161.7×74.7×7.6 ಎಂಎಂ ದಪ್ಪ ಮತ್ತು 185 ಗ್ರಾಂ ತೂಕ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 3.5 ಎಂಎಂ ಆಡಿಯೊ ಜಾಕ್, ಸ್ಟಿರಿಯೊ ಸ್ಪೀಕರ್‌ಗಳು, 5G, ಡ್ಯುಯಲ್ 4G VoLTE, Wi-Fi 6 802.11 ax (2.4GHz + 5GHz), ಬ್ಲೂಟೂತ್ 5.4, GPS, ಗೆಲಿಲಿಯೊ, ಯುಎಸ್‌ಬಿ ಟೈಪ್-ಸಿ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಒಳಗೊಂಡಿದೆ.


Click it and Unblock the Notifications








