Home
ಸುದ್ದಿಜಾಲ

Realme: ರಿಯಲ್‌ಮಿ 13 ಪ್ರೊ+ ನ ಭಾರತೀಯ ವೇರಿಯಂಟ್ ಫೀಚರ್ಸ್‌ ಲೀಕ್‌!

ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು (Realme smartphone) ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡಿವೆ. ಈ ಫೋನ್‌ಗಳ ಪ್ರಮುಖ ಫೀಚರ್ಸ್‌ನಿಂದಾಗಿ ಜನರು ಇವುಗಳನ್ನು ಹೆಚ್ಚು ಹೆಚ್ಚಾಗಿ ಖರೀದಿ ಮಾಡುತ್ತಾರೆ. ಈ ನಡುವೆ ರಿಯಲ್‌ಮಿ ಹೊಸ ಫೋನ್‌ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಅದುವೇ ರಿಯಲ್‌ಮಿ 13 ಪ್ರೊ+(Realme 13 Pro+). ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಲೀಕ್‌ ಆಗಿದ್ದು, ಗ್ರಾಹಕರ ಕುತೂಹಲ ಹೆಚ್ಚಾಗುವಂತೆ ಆಗಿದೆ. ಅಲ್ಲದೆ ಈ ಫೋನ್‌ ನಾಲ್ಕು ವೇರಿಯಂಟ್‌ ಹಾಗೂ ಎರಡು ಬಣ್ಣ್ ಆಯ್ಕೆಯಲ್ಲಿ ಭಾರತಕ್ಕೆ ಎಂಟ್ರಿ ಕೊಡಲಿದೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಫೋನ್‌ ಆಲ್‌ರೌಂಡರ್‌ ಫೋನ್‌ ಆಗಿಯೂ ಗುರುತಿಸಿಕೊಳ್ಳಲಿದೆ ಎಂದು ತಿಳಿದುಬಂದಿದೆ.

ಹೌದು, ರಿಯಲ್‌ಮಿ 13 ಪ್ರೊ+ ಸ್ಮಾರ್ಟ್‌ಫೋನ್‌ ಮುಂದಿನ ತಿಂಗಳು ಚೀನಾದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದ್ದು, ಹೊಸ ಫ್ಲ್ಯಾಗ್‌ಶಿಪ್ ಮೋನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಈ ಫೋನ್ 3x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮರಾವನ್ನು ಹೊಂದಿರಬಹುದು ಎನ್ನಲಾಗಿದೆ. ಹಾಗಿದ್ರೆ, ಈ ಫೋನ್‌ನ ಭಾರತೀಯ ವೇರಿಯಂಟ್‌ ಹೇಗಿರಲಿದೆ?, ಇದರ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ರಿಯಲ್‌ಮಿ 13 ಪ್ರೊ+ ನ ಭಾರತೀಯ ವೇರಿಯಂಟ್ ಫೀಚರ್ಸ್‌ ಲೀಕ್‌!

ರಿಯಲ್‌ಮಿ 13 ಪ್ರೊ+ ಸ್ಮಾರ್ಟ್‌ಫೋನ್‌: ರಿಯಲ್‌ಮಿ GT 6 ರ ಜಾಗತಿಕ ಬಿಡುಗಡೆಯ ನಂತರ, ರಿಯಲ್‌ಮಿ 13 ಪ್ರೊ+ ಅನ್ನು ಪರಿಚಯಿಸಲು ಕಂಪೆನಿ ಯೋಜಿಸುತ್ತಿದೆ ಎಂದು ಮಾಹಿತಿ ಇದೆ. ಮೊದಲೇ ತಿಳಿಸಿದಂತೆ ಈ ಮುಂಬರುವ ರಿಯಲ್‌ಮಿ 13 ಪ್ರೊ+ ನಾಲ್ಕು ಕಾನ್ಫಿಗರೇಶನ್‌ಗಳು ಮತ್ತು ಎರಡು ವಿಭಿನ್ನ ಬಣ್ಣಗಳೊಂದಿಗೆ ಭಾರತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಟಿಪ್‌ಸ್ಟರ್ @SujanTharu66, ಈ ರಿಯಲ್‌ಮಿ ಫ್ಲ್ಯಾಗ್‌ಶಿಪ್ ಒಪ್ಪೋನ ಮರುಬ್ರಾಂಡೆಡ್ ಆವೃತ್ತಿಯಾಗಿದೆ ಮತ್ತು ಜೂನ್ 2024 ರಲ್ಲಿ ಚೀನಾದಲ್ಲಿ ಬಿಡುಗಡೆಯಾಗಲಿದೆ.

ಡಿಜಿಟಲ್ ಚಾಟ್ ಸ್ಟೇಷನ್‌ನ ಸೋರಿಕೆಯ ಪ್ರಕಾರ, ರಿಯಲ್‌ಮಿ 13 ಪ್ರೊ+ ನ ಭಾರತೀಯ ಆವೃತ್ತಿಯನ್ನು RMX3921 ಮಾಡೆಲ್ ಸಂಖ್ಯೆಯಿಂದ ಗುರುತಿಸಲಾಗಿದೆ. ಇನ್ನು ಲೀಕ್ ಆದ ಮಾಹಿತಿ ಪ್ರಕಾರ ಈ ಫೋನ್‌ ನಾಲ್ಕು ಕಾನ್ಫಿಗರೇಶನ್‌ಗಳಲ್ಲಿ ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ. ಅವುಗಳೆಂದರೆ 8GB+ 128GB, 8GB+256GB, 12GB+256GB ಮತ್ತು 12GB+512GB. ಇದರೊಂದಿಗೆ ಫ್ಲ್ಯಾಗ್‌ಶಿಪ್ ಸ್ನಾಪ್‌ಡ್ರಾಗನ್ 7s ಜನ್ 3 ಚಿಪ್‌ಸೆಟ್‌ನೊಂದಿಗೆ ಸಜ್ಜುಗೊಂಡಿರಬಹುದು ಮತ್ತು ಮೊನೆಟ್ ಗೋಲ್ಡ್ ಮತ್ತು ಎಮರಾಲ್ಡ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿರಬಹುದು ಎಂಬ ಮಾಹಿತಿ ಇದೆ.

ರಿಯಲ್‌ಮಿ 13 ಪ್ರೊ+ ನ ಭಾರತೀಯ ವೇರಿಯಂಟ್ ಫೀಚರ್ಸ್‌ ಲೀಕ್‌!

ಊಹಾಪೋಹದ ಪ್ರಕಾರ ಸ್ಮಾರ್ಟ್‌ಫೋನ್ 3x ಆಪ್ಟಿಕಲ್ ಜೂಮ್‌ನೊಂದಿಗೆ 50 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿರುವ ಸಾಧ್ಯತೆಯಿದೆ. ಅಲ್ಲದೆ @SujanTharu66 ಪ್ರಕಾರ, ಈ ಫೋನ್ ಪೆರಿಸ್ಕೋಪ್ ಕ್ಯಾಮೆರಾವನ್ನು ಒಳಗೊಂಡಿರುತ್ತದೆ. ಆದರೆ ಕಂಪನಿಯಿಂದ ಇನ್ನೂ ಯಾವುದೇ ಅಧಿಕೃತ ಅಧಿಸೂಚನೆ ಹೊರಬಿದ್ದಿಲ್ಲ. ಹಿಂದಿನ ಪ್ರಮುಖ, ರಿಯಲ್‌ಮಿ 12 ಪ್ರೊ+ 3x ಆಪ್ಟಿಕಲ್ ಜೂಮ್‌ನೊಂದಿಗೆ 64 ಮೆಗಾಪಿಕ್ಸೆಲ್‌ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾವನ್ನು ಹೊಂದಿರುವುದನ್ನು ಈ ವೇಳೆ ನೆನಪು ಮಾಡಿಕೊಳ್ಳಬಹುದು.

ಭಾರತದಲ್ಲಿ ರಿಯಲ್‌ಮಿ GT 6 ಲಾಂಚ್: ಈ ನಡುವೆ GT 6T ನಂತರ ಮುಂದಿನ GT 6 ಅನ್ನು ಬಿಡುಗಡೆ ಮಾಡುವುದಾಗಿ ರಿಯಲ್‌ಮಿ ಅಧಿಕೃತವಾಗಿ ಘೋಷಿಸಿದೆ. ಮುಂಬರುವ ಡಿವೈಸ್‌ ಸುಧಾರಿತ ಎಐ ಫೀಚರ್ಸ್‌ನೊಂದಿಗೆ ಬರಲಿದೆ ಎನ್ನಲಾಗಿದ್ದು, GT 6 ಸ್ಮಾರ್ಟ್‌ಫೋನ್‌ GT ನಿಯೋ 6 ನ ರೀಬ್ರಾಂಡ್ ಆಗಿರಬಹುದು ಎಂದು ಊಹಿಸಲಾಗಿದೆ. ಟಿಪ್‌ಸ್ಟರ್ ಅಭಿಷೇಕ್ ಯಾದವ್ ಪ್ರಕಾರ, ರಿಯಲ್‌ಮಿ GT 6 ಅನ್ನು ಮುಂದಿನ ತಿಂಗಳು ಲಾಂಚ್ ಮಾಡಲಾಗುತ್ತದೆ ಎನ್ನಲಾಗಿದೆ.

Best Mobiles in India

English summary
Realme 13 Pro+ smartphone is expected to be launched in China next month and the new flagship will be available in two colors, Monet Gold and Emerald Green.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+