Home
ಸುದ್ದಿಜಾಲ

Realme 13 Pro ಸರಣಿ ಈಗ ಖರೀದಿಗೆ ಲಭ್ಯ; ಖರೀದಿದಾರರಿಗೆ ಭರ್ಜರಿ ಆಫರ್‌ ಲಭ್ಯ!

ಜನಪ್ರಿಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ (Flipkart) ತಾಣದಲ್ಲಿ ರಿಯಲ್‌ಮಿ 13 ಪ್ರೊ 5G ಮತ್ತು ರಿಯಲ್‌ಮಿ 13 ಪ್ರೊ+ 5G ಸ್ಮಾರ್ಟ್‌ಫೋನ್ಗಳ ಫಸ್ಟ್‌ ಸೇಲ್‌ ಇಂದು (ಆಗಷ್ಟ್‌ 6 ರಂದು) ಪ್ರಾರಂಭ ಆಗಿದೆ. ಸ್ಟೈಲಿಶ್‌ ಡಿಸೈನ್‌ ಹಾಗೂ ಕ್ಯಾಮೆರಾ ಫೀಚರ್ಸ್‌ನಿಂದ ಗಮನ ಸೆಳೆದಿರುವ ಈ ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 2 SoC ಪ್ರೊಸೆಸರ್‌ ಸೌಲಭ್ಯ ಪಡೆದಿವೆ. ಇನ್ನು ಈ ಎರಡು ಫೋನ್‌ಗಳು ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ ಪಡೆದಿರುವುದು ಹೈಲೈಟ್‌ ಅಂಶಗಳಲ್ಲಿ ಒಂದಾಗಿದೆ.

ಹೌದು, ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣ ಹಾಗೂ ರಿಯಲ್‌ಮಿ ವೆಬ್‌ಸೈಟ್‌ನಲ್ಲಿ ಇಂದು ರಿಯಲ್‌ಮಿ 13 ಪ್ರೊ 5G ಮತ್ತು ರಿಯಲ್‌ಮಿ 13 ಪ್ರೊ+ 5G (realme 13 Pro Series 5G First Sale) ಮೊಬೈಲ್‌ ಫಸ್ಟ್‌ ಸೇಲ್‌ ಶುರು ಆಗಿದೆ. ಈ ಎರಡು ಫೋನ್‌ಗಳ ಪ್ರಾಥಮಿಕ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ನಲ್ಲಿ ಇದೆ.

Realme 13 Pro ಸರಣಿ ಈಗ ಖರೀದಿಗೆ ಲಭ್ಯ; ಖರೀದಿದಾರರಿಗೆ ಭರ್ಜರಿ ಆಫರ್‌ ಲಭ್ಯ!

ಇನ್ನು ರಿಯಲ್‌ಮಿ 13 ಪ್ರೊ 5G ಫೋನಿನ ಆರಂಭಿಕ ವೇರಿಯಂಟ್‌ ದರವು 26,999ರೂ. ಗಳು ಆಗಿದೆ. ಹಾಗೆಯೇ ರಿಯಲ್‌ಮಿ 13 ಪ್ರೊ+ 5G ಫೋನಿನ ಆರಂಭಿಕ ಮಾಡೆಲ್‌ ಬೆಲೆಯು 32,999ರೂ. ಆಗಿದೆ. ಖರೀದಿದಾರರಿಗೆ ಭರ್ಜರಿ ಆಫರ್‌ ಸಹ ದೊರೆಯುತ್ತವೆ. ಇನ್ನುಳಿದಂತೆ ಈ ಫೋನ್‌ಗಳ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 13 ಪ್ರೊ 5G - ಫೀಚರ್ಸ್‌

ರಿಯಲ್‌ಮಿ 13 ಪ್ರೊ 5G ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, ಈ ಡಿಸ್‌ಪ್ಲೇ OLED ಮಾದರಿಯಲ್ಲಿ ಇದೆ. ಇದಲ್ಲದೆ ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, 120Hz ರಿಫ್ರೆಶ್ ರೇಟ್‌ ವರೆಗೆ ಸಪೋರ್ಟ್‌ ಒದಗಿಸಲಿದೆ. ಹಾಗೆಯೇ ಇದು 600nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ.

ರಿಯಲ್‌ಮಿ 13 ಪ್ರೊ 5G ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 2 SoC ಪ್ರೊಸೆಸರ್‌ನಲ್ಲಿ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB + 256GB ಹಾಗೂ 12GB + 256GB/512GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳನ್ನು ಇದು ಪಡೆದುಕೊಂಡಿದೆ.

ರಿಯಲ್‌ಮಿ 13 ಪ್ರೊ 5G ಫೋನಿನ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಅಲ್ಲದೇ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 45W SUPERVOOC ಚಾರ್ಜರ್ ಅನ್ನು ಬೆಂಬಲಿಸಲಿದೆ.

ರಿಯಲ್‌ಮಿ 13 ಪ್ರೊ+ 5G - ಫೀಚರ್ಸ್‌

ರಿಯಲ್‌ಮಿ 13 ಪ್ರೊ+ 5G ಮೊಬೈಲ್‌ 6.7 ಇಂಚಿನ OLED ಕರ್ವ್ಡ್‌ ಡಿಸ್‌ಪ್ಲೇ ಅನ್ನು ಹೊಂದಿದ್ದು, 2412 x 1080 ಪಿಕ್ಸಲ್‌ ರೆಸಲ್ಯೂಶನ್‌ ಸೌಲಭ್ಯ ಪಡೆದಿದೆ. ಇದಲ್ಲದೆ ಡಿಸ್‌ಪ್ಲೇಯು 240Hz ಟಚ್ ಸ್ಯಾಂಪ್ಲಿಂಗ್ ರೇಟ್‌, 120Hz ರಿಫ್ರೆಶ್ ರೇಟ್‌ ವರೆಗೆ ಸಪೋರ್ಟ್‌ ಒದಗಿಸಲಿದೆ. ಹಾಗೆಯೇ ಇದು 600nits ಬ್ರೈಟ್ನೆಸ್‌ ಸಪೋರ್ಟ್‌ ಸಹ ಪಡೆದಿದೆ.

ಈ ಮೊಬೈಲ್‌ ಸಹ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 7 ಜೆನ್‌ 2 SoC ಪ್ರೊಸೆಸರ್‌ನಲ್ಲಿ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8GB + 256GB ಹಾಗೂ 12GB + 256GB/512GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳನ್ನು ಇದು ಪಡೆದುಕೊಂಡಿದೆ.

ರಿಯಲ್‌ಮಿ 13 ಪ್ರೊ+ 5G ಮೊಬೈಲ್‌ನ ಕ್ಯಾಮೆರಾ 50 ಮೆಗಾ ಪಿಕ್ಸೆಲ್‌ ಸೋನಿ LYT-600 ಲೆನ್ಸ್‌ ಪಡೆದಿದೆ. ಇದಲ್ಲದೆ ಮುಂಭಾಗದಲ್ಲಿ 32 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒದಗಿಸಲಾಗಿದೆ. ಅಲ್ಲದೇ ಇದು 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ 80W SUPERVOOC ಚಾರ್ಜರ್ ಅನ್ನು ಬೆಂಬಲಿಸಲಿದೆ.

Best Mobiles in India

English summary
realme 13 Pro Series 5G now available on Flipkart and realme website. check out offers and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+