Home
ಸುದ್ದಿಜಾಲ

Realme: 6000mAh ಬ್ಯಾಟರಿ.. 50MP ಕ್ಯಾಮೆರಾ.. ಶಕ್ತಿಶಾಲಿ ಪ್ರೊಸೆಸರ್.. ಬರಲಿದೆ ಹೊಸ 5G ಫೋನ್!

ರಿಯಲ್‌ಮಿ ಕಂಪನಿ ಹೊಸ ಸರಣಿಯನ್ನು ಬಿಡುಗಡೆ ಮಾಡಲು ತಯಾರಿನ ನಡೆಸುತ್ತಿದೆ. ಇದು ರಿಯಲ್‌ಮಿ 14 5G (Realme 14 5G series) ಸರಣಿ ಆಗಿದೆ. ಇದರಲ್ಲಿ ಹೊಸ ರಿಯಲ್‌ಮಿ 14 5G (Realme 14 5G) ಮೊಬೈಲ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್‌ ಸೊಗಸಾದ ವಿನ್ಯಾಸದ ಜೊತೆಗೆ ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ. ಕಂಪನಿಯು ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಈ ಹೊಸ ಸರಣಿಯ ಟೀಸರ್ ಹಂಚಿಕೊಂಡಿದೆ. ಇದೀಗ, ಈ ಫೋನಿನ ಪ್ರೊಸೆಸರ್ ಮತ್ತು ಬ್ಯಾಟರಿ ವಿವರಗಳು ಬಹಿರಂಗವಾಗಿವೆ.

ರಿಯಲ್‌ಮಿ 14 5G ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಮುಂಬರುವ ರಿಯಲ್‌ಮಿ 14 5G ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಗೆ ಬರಲಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಲಭ್ಯವಿರುತ್ತದೆ. ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಜೊತೆಗೆ 8GB RAM, 12GB RAM ಮತ್ತು 256GB ಸ್ಟೋರೇಜ್ ಒಳಗೊಂಡಿರುತ್ತದೆ.

Realme: 6000mAh ಬ್ಯಾಟರಿ.. 50MP ಕ್ಯಾಮೆರಾ.. ಬರಲಿದೆ ಹೊಸ 5G ಫೋನ್!

ರಿಯಲ್‌ಮಿ 14 5G ಬೆಲೆ (ನಿರೀಕ್ಷಿತ)

ರಿಯಲ್‌ಮಿ 14 5G (Realme 14 5G) ಫೋನನ್ನು ರಿಯಲ್‌ಮಿ 14 5G (Realme 14 5G series) ಸರಣಿಯ ಅಡಿಯಲ್ಲಿ ಪರಿಚಯಿಸಲಾಗುವುದು. ಇದು ಮಧ್ಯಮ ಬಜೆಟ್‌ನ ಫೋನ್ ಆಗಿದೆ. ಈ ಹೊಸ ಫೋನ್ ರಿಯಲ್‌ಮಿ 14x 5G ಮತ್ತು ರಿಯಲ್‌ಮಿ 14 ಪ್ರೊ ಲೈಟ್ 5G ನಂತೆಯೇ ಬೆಲೆ ಹೊಂದಿರುತ್ತದೆ ಎಂದು ವರದಿಯಾಗಿದೆ. ಅಂದರೆ, ರಿಯಲ್‌ಮಿ 14 5G ಫೋನನ್ನು 15,000 ರೂ. ನಿಂದ 20,000 ರೂ.ಗಳ ಒಳಗಡೆ ಬಿಡುಗಡೆ ಮಾಡಬಹುದು. ನೀವು ಪಿಂಕ್, ಸಿಲ್ವರ್ ಮತ್ತು ಟೈಟಾನಿಯಂ ಬಣ್ಣಗಳ ಆಯ್ಕೆಗಳಲ್ಲಿ ಈ ರಿಯಲ್‌ಮಿ 5G ಮೊಬೈಲ್ ಅನ್ನು ಖರೀದಿಸಬಹುದು.

ರಿಯಲ್‌ಮಿ 14 5G ವೈಶಿಷ್ಟ್ಯಗಳು

ರಿಯಲ್‌ಮಿ 14 5G ಸ್ಮಾರ್ಟ್‌ಫೋನ್ 6.67 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿರುತ್ತದೆ. ಇದು ಪಂಚ್ ಹೋಲ್ ಶೈಲಿಯ ಅಮೋಲೆಡ್ ಸ್ಕ್ರೀನ್ ಆಗಿದೆ. ಈ ಫೋನ್ 120Hz ರಿಫ್ರೆಶ್ ದರ ಮತ್ತು 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲ ಪಡೆದಿದೆ. ಈ ರಿಯಲ್‌ಮಿ ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 ಜೆನ್ 4 ಆಕ್ಟಾ ಕೋರ್ ಪ್ರೊಸೆಸರ್ ಹೊಂದಿರಲಿದೆ. ಇದನ್ನು 4 ನ್ಯಾನೊಮೀಟರ್ ಫ್ಯಾಬ್ರಿಕೇಶನ್‌ಗಳ ಆಧಾರದ ಮೇಲೆ ತಯಾರಿಸಲಾಗಿದೆ.

ರಿಯಲ್‌ಮಿ 14 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಸೋರಿಕೆಯ ಪ್ರಕಾರ, ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಇದು OIS ಬೆಂಬಲದೊಂದಿಗೆ ಬರುತ್ತದೆ. ಹಾಗೆಯೇ ಸೆಕೆಂಡರಿ ಲೆನ್ಸ್ ಇರುತ್ತದೆ. ಈ ಫೋನ್ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಹೊಂದಿದೆ. ಈ ರಿಯಲ್‌ಮಿ 5G ಮೊಬೈಲ್ 8GB RAM, 12GB RAM ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಇದು ವಿಸ್ತರಿಸಬಹುದಾದ RAM ತಂತ್ರಜ್ಞಾನ ಸಹ ಹೊಂದಿದೆ. ಭೌತಿಕ RAMಗೆ ವರ್ಚುವಲ್ RAM ಸೇರಿಸುವ ಮೂಲಕ ಹೆಚ್ಚು ಬಳಸಬಹುದು. ಈ ಎರಡೂ ರೂಪಾಂತರಗಳು 256GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತವೆ.

ರಿಯಲ್‌ಮಿ 14 5G ಮೊಬೈಲ್ 6,000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಮಾರುಕಟ್ಟೆಯಲ್ಲಿ ಬಿಡುಡಗೆಯಾಗಲಿದೆ. ರಿಯಲ್‌ಮಿ 14x 5G ಫೋನಿನಲ್ಲಿಯೂ ಸಹ ಇದೇ ಬ್ಯಾಟರಿಯನ್ನು ಅಳವಡಿಸಲಾಗಿದೆ. ಸೋರಿಕೆ ಪ್ರಕಾರ, ರಿಯಲ್‌ಮಿ 14 5G ಫೋನ್ 45W ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G LTE, ವೈ-ಫೈ, ಬ್ಲೂಟೂತ್ ಮತ್ತು ಯುಎಸ್‌ಬಿ ಟೈಪ್ ಸಿ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿರಲಿದೆ.

Best Mobiles in India

English summary
realme 14 5G with Snapdragon 6 Gen 4, 6000mAh battery teased: check Expected Price, Specifications and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+