Home
ಸುದ್ದಿಜಾಲ

ಹೊಸ Realme P3 Ultra ಬಿಡುಗಡೆ ಖಚಿತ; ಡಿಸೈನ್ ಬಹಿರಂಗ.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ ತನ್ನ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದೆ. ಹೋಳಿ ಹಬ್ಬದ ಪ್ರಯುಕ್ತ ಹೊಸ 5G ಫೋನನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಹೌದು, ರಿಯಲ್‌ಮಿ ಕಳೆದ ತಿಂಗಳು ತನ್ನ P3 ಸರಣಿಯನ್ನು ಪರಿಚಯಿಸಿತ್ತು. ಅದರಂತೆ ಭಾರತದಲ್ಲಿ ರಿಯಲ್‌ಮಿ P3x ಮತ್ತು ರಿಯಲ್‌ಮಿ P3 ಪ್ರೊ ಸ್ಮಾರ್ಟ್‌ಫೋನ್‌ಗಳನ್ನು ರಿಲೀಸ್ ಮಾಡಿತ್ತು. ಈ ಎರಡು ರಿಯಲ್‌ಮಿ 5G ಫೋನ್‌ಗಳ ನಂತರ, ಇದೀಗ ಕಂಪನಿಯು ಈ ಸರಣಿಗೆ ಹೊಸ ಮೊಬೈಲ್ ಸೇರ್ಪಡೆ ಮಾಡುತ್ತಿದೆ. ಇದು ರಿಯಲ್‌ಮಿ P3 ಅಲ್ಟ್ರಾ (realme P3 Ultra) ಹೆಸರಿನೊಂದಿಗೆ ಭಾರತದಲ್ಲಿ ಬಿಡುಗಡೆಯಾಗಲಿದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ರಿಯಲ್‌ಮಿ P3 ಅಲ್ಟ್ರಾ ಬಿಡುಗಡೆ ಬಗ್ಗೆ ಕಂಪನಿಯು ಅಧಿಕೃತವಾಗಿ ಮಾಹಿತಿ ಘೋಷಿಸಿದೆ. ಈ ಫೋನಿನ ವಿಶೇಷತೆಗಳನ್ನು ನೋಡುವುದಾದರೆ, ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 8350 ಪ್ರೊಸೆಸರ್‌ನೊಂದಿಗೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಈ ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಕ್ಯಾಮೆರಾ ಲಭ್ಯವಿರುತ್ತದೆ. ಈ ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ ಅಮೋಲೆಡ್ ಡಿಸ್ಪ್ಲೇ ಹೊಂದಿರುತ್ತದೆ. ಈ ರಿಯಲ್‌ಮಿ ಮೊಬೈಲ್ 6000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದು 12GB RAM + 256GB ಸ್ಟೋರೇಜ್ ಆಯ್ಕೆ ಒಳಗೊಂಡಿರುತ್ತದೆ.

ಹೊಸ Realme P3 Ultra ಬಿಡುಗಡೆ ಖಚಿತ; ಡಿಸೈನ್ ಬಹಿರಂಗ.. ಬೆಲೆ, ವಿಶೇಷತೆಗಳೇನು?

ರಿಯಲ್‌ಮಿ P3 ಅಲ್ಟ್ರಾ ಬಿಡುಗಡೆ ಯಾವಾಗ?

ರಿಯಲ್‌ಮಿ ತನ್ನ ಹೊಸ P3 ಸರಣಿಯಲ್ಲಿ ಈ ಸ್ಮಾರ್ಟ್‌ಫೋನ್ ತರುತ್ತಿದೆ. ಈ ರಿಯಲ್‌ಮಿ P3 ಅಲ್ಟ್ರಾ ಫೋನನ್ನು ಈ ತಿಂಗಳು ಭಾರತದಲ್ಲಿ ಬಿಡುಗಡೆ ಮಾಡುವುದಾಗಿ ಅಧಿಕೃತವಾಗಿ ಕಂಪನಿ ಘೋಷಿಸಿದೆ. ಆದರೆ, ಕಂಪನಿಯು ಫೋನ್ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಈ ರಿಯಲ್‌ಮಿ P3 ಅಲ್ಟ್ರಾ 5G ಫೋನ್ ಹೋಳಿ ಹಬ್ಬದ ಆಸುಪಾಸಿನಲ್ಲಿ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ ಎಂದು ಹೇಳಲಾಗುತ್ತಿದೆ. ಕಂಪನಿಯು ಈ 5G ಫೋನನ್ನು 'ಅಲ್ಟ್ರಾ ಡಿಸೈನ್, ಅಲ್ಟ್ರಾ ಪರ್ಫಾರ್ಮೆನ್ಸ್, ಅಲ್ಟ್ರಾ ಕ್ಯಾಮೆರಾ' ಫೋನ್ ಎಂದು ಕರೆದಿದೆ.

ರಿಯಲ್‌ಮಿ P3 ಪ್ರೊ 5G ಬೆಲೆ

ರಿಯಲ್‌ಮಿ P3 ಪ್ರೊ 5G ಮೊಬೈಲ್ ಮೂರು ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 8GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆ 23,999 ರೂ. ಆಗಿದೆ. 8GB RAM + 256GB ಸ್ಟೋರೇಜ್ ರೂಪಾಂತರವು 24,999 ರೂ.ಗೆ ಬಿಡುಗಡೆಯಾಗಿದೆ. ಹಾಗೆಯೇ 12GB RAM + 256GB ಸ್ಟೋರೇಜ್‌ ಮಾದರಿಯು 26,999 ರೂ.ಗೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್‌ಫೋನ್ ನೆಬ್ಯುಲಾ ಗ್ಲೋ, ಗ್ಯಾಲಕ್ಸಿ ಪರ್ಪಲ್ ಮತ್ತು ಸ್ಯಾಟರ್ನ್ ಬ್ರೌನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ರಿಯಲ್‌ಮಿ P3 ಪ್ರೊ 5G ವೈಶಿಷ್ಟ್ಯಗಳು

ರಿಯಲ್‌ಮಿ P3 ಪ್ರೊ 5G ಫೋನ್ 6.83 ಇಂಚಿನ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ ಮತ್ತು 1,500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಈ ಮೊಬೈಲ್ ವೆಟ್ ಟಚ್ ತಂತ್ರಜ್ಞಾನ ಹೊಂದಿದೆ. ಈ ಮೊಬೈಲ್ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7S Gen 3 ಆಕ್ಟಾಕೋರ್ ಪ್ರೊಸೆಸರ್‌ ಹೊಂದಿದೆ. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 15 ಓಎಸ್‌ನೊಂದಿಗೆ ಕೆಲಸ ನಿರ್ವಹಿಸುತ್ತದೆ. ಈ ರಿಯಲ್‌ಮಿ 5G ಸ್ಮಾರ್ಟ್‌ಫೋನ್ 8GB RAM ಮತ್ತು 12GB RAM ಹೊಂದಿದೆ.

ರಿಯಲ್‌ಮಿ P3 ಪ್ರೊ 5G ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಜೊತೆಗೆ 2 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಹೊಂದಿದೆ. ಈ ರಿಯಲ್‌ಮಿ 5G ಮೊಬೈಲ್ 6000mAh ಸಾಮರ್ಥ್ಯದ ದೊಡ್ಡ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 80W ವೇಗದ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ನೀವು 39 ನಿಮಿಷಗಳಲ್ಲಿ ಶೇ.20 ರಿಂದ ಶೇ.100 ರಷ್ಟು ಸಂಪೂರ್ಣ ಚಾರ್ಜ್ ಮಾಡಬಹುದು.

Best Mobiles in India

English summary
Realme P3 Ultra India Launch Confirmed, Design Teased: What to Expect
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+