ಇತ್ತೀಚಿಗೆ ಲಾಂಚ್ ಆಗಿರುವ ಈ 5G ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!
ರಿಯಲ್ಮಿ ಮೊಬೈಲ್ ಸಂಸ್ಥೆಯ ಕೆಲವು ಆಕರ್ಷಕ ಫೋನ್ಗಳನ್ನು ಪರಿಚಯಿಸಿದೆ. ಆ ಪೈಕಿ ಇತ್ತೀಚಿನ ರಿಯಲ್ಮಿ 14x 5G ಮೊಬೈಲ್ ಈಗಾಗಲೇ ಮಾರುಕಟ್ಟೆಯಲ್ಲಿ ಖರೀದಿದಾರರ ಗಮನ ಸೆಳದಿದ್ದು, ಈ ಮೊಬೈಲ್ ಬಜೆಟ್ ವಿಭಾಗದಲ್ಲಿ ಕಾಣಿಸಿಕೊಂಡಿದೆ. ಸದ್ಯ ರಿಯಲ್ಮಿ 14x 5G (realme 14x 5G) ಫೋನ್ ಫ್ಲಿಪ್ಕಾರ್ಟ್ ತಾಣದಲ್ಲಿ ಭಾರೀ ಡಿಸ್ಕೌಂಟ್ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ.
ಹೌದು, ಫ್ಲಿಪ್ಕಾರ್ಟ್ ತಾಣದಲ್ಲಿ ರಿಯಲ್ಮಿ 14x 5G (realme 14x 5G) ಫೋನ್ ಆಕರ್ಷಕ ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದೆ. ಈ ಮೊಬೈಲ್ನ 6 GB RAM + 128 GB ಸ್ಟೋರೇಜ್ ವೇರಿಯಂಟ್ ಅನ್ನು ಗ್ರಾಹಕರು 16,999ರೂ. ಗಳ ಕೊಡುಗೆಯ ಬೆಲೆಯಲ್ಲಿ ಖರೀದಿ ಮಾಡಬಹುದು. ಅಲ್ಲದೇ ಹೆಚ್ಚುವರಿ ಯಾಗಿ ಆಯ್ದ ಬ್ಯಾಂಕ್ಗಳ ಆಫರ್ ಪಡೆದುಕೊಂಡರೆ, ಮತ್ತಷ್ಟು ರಿಯಾಯಿತಿ ಬೆಲೆಯಲ್ಲಿ ಖರೀದಿಸಲು ಚಾನ್ಸ್ ಸಹ ಇದೆ.

ಈ ಬಜೆಟ್ ದರದ ಫೋನ್ ಬ್ಲ್ಯಾಕ್, ಗೋಲ್ಡನ್ ಗ್ಲೋವ್ ಮತ್ತು ರೆಡ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ದೊರೆಯುತ್ತದೆ. ಹಾಗೆಯೇ ಈ ಮೊಬೈಲ್ನ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್ಸೆಟ್ ಪ್ರೊಸೆಸರ್ ಸೌಲಭ್ಯವನ್ನು ಹೊಂದಿದೆ. ಇನ್ನುಳಿದಂತೆ ರಿಯಲ್ಮಿ 14x 5G (realme 14x 5G) ಫೋನಿನ ಇತರೆ ಫೀಚರ್ಸ್ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ರಿಯಲ್ಮಿ 14x 5G - ಫೀಚರ್ಸ್
ರಿಯಲ್ಮಿ 14x 5G ಮೊಬೈಲ್ 6.67 ಇಂಚಿನ ಫುಲ್ ಹೆಚ್ಡಿ+ IPS LCD ಡಿಸ್ಪ್ಲೇ ಅನ್ನು ಪಡೆದುಕೊಂಡಿದ್ದು, ಇದು ಉತ್ತಮ ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ. ಅಲ್ಲದೇ 120Hz ರಿಫ್ರೆಶ್ ರೇಟ್ ಆಯ್ಕೆ ಒಳಗೊಂಡಿದೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್ಸೆಟ್ ಪ್ರೊಸೆಸರ್ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್ 14 ಓಎಸ್ ಬೆಂಬಲ ಕೂಡಾ ಪಡೆದಿದೆ.
ಹಾಗೆಯೇ ಈ ಮೊಬೈಲ್ 8GB ಯ RAM ಮತ್ತು 128 GB ಸ್ಟೋರೇಜ್ ಆಯ್ಕೆ ಒಳಗೊಂಡಿವೆ. ಅಲ್ಲದೇ 10GB ವರೆಗಿನ ವರ್ಚುವಲ್ RAM ಸೌಲಭ್ಯ ಇದೆ. ಇದು ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಇದರ ಮೊದಲ ಕ್ಯಾಮೆರಾವು 50 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್ ಸೆನ್ಸಾರ್ ಕ್ಯಾಮೆರಾ ಇದೆ.
ರಿಯಲ್ಮಿ 14x 5G ಮೊಬೈಲ್ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ಅಪ್ ಸೌಲಭ್ಯ ಸಹ ಪಡೆದಿದ್ದು, ಇದಕ್ಕೆ ಅನುಗುಣವಾಗಿ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಇದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್ ಡ್ಯುಯಲ್ 4G VoLTE, ವೈ - ಫೈ 6, ಜಿಪಿಎಸ್, ಯುಎಸ್ಬಿ ಟೈಪ್ - ಸಿ, ಸೈಡ್ ಮೌಂಟ್ ಫಿಂಗರ್ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿದೆ.


Click it and Unblock the Notifications





