Home
ಸುದ್ದಿಜಾಲ

ನಾಳೆ ಎಂಟ್ರಿ ಕೊಡಲಿದೆ ಈ ಸ್ಟೈಲಿಶ್‌ ಫೋನ್‌; ಬಜೆಟ್‌ ಬೆಲೆ, ಬಿಗ್‌ ಬ್ಯಾಟರಿ!

ಮೊಬೈಲ್‌ ಪ್ರಿಯರು ಕಾತುರದಿಂದ ಎದುರು ನೋಡುತ್ತಿರುವ ರಿಯಲ್‌ಮಿ 14x 5G (Realme 14x 5G) ಸ್ಮಾರ್ಟ್‌ಫೋನ್‌ ನಾಳೆ (ಡಿಸೆಂಬರ್‌ 18 ರಂದು) ಭಾರತೀಯ ಮಾರುಕಟ್ಟೆಗೆ ಅಧಿಕೃತವಾಗಿ ಎಂಟ್ರಿ ಕೊಡಲಿದೆ. ರಿಯಲ್‌ಮಿ ಕಂಪನಿಯ ಈ ಮೊಬೈಲ್‌ ಬಜೆಟ್‌ ಬೆಲೆಯಲ್ಲಿ ಎಂಟ್ರಿ ಕೊಡುವ ಸೂಚನೆಗಳಿದ್ದು, ಮಾರುಕಟ್ಟೆಯಲ್ಲಿ ಸದ್ದು ಮಾಡುವ ಲಕ್ಷಣಗಳನ್ನು ಹೊರಹಾಕಿದೆ. ಇನ್ನು ಈ ಫೋನ್‌ 6000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿರುವುದು ಬಹುತೇಕ ಖಚಿತ ಎನ್ನಲಾಗಿದೆ.

ಹೌದು, ರಿಯಲ್‌ಮಿ ಸಂಸ್ಥೆಯ ರಿಯಲ್‌ಮಿ 14x 5G (Realme 14x 5G) ಫೋನ್‌ ದೇಶಿಯ ಮೊಬೈಲ್‌ ಮಾರುಕಟ್ಟೆಯಲ್ಲಿ ನಾಳೆ ಬಿಡುಗಡೆ ಆಗಲಿದೆ. ಈ ಮೊಬೈಲ್‌ ಬಿಡುಗಡೆಯ ಕುರಿತು ದೈತ್ಯ ಇ ಕಾಮರ್ಸ್‌ ಫ್ಲಿಪ್‌ಕಾರ್ಟ್‌ ಪ್ಲಾಟ್‌ಫಾರ್ಮ್ ಮೈಕ್ರೋ ಸೈಟ್‌ ಕೂಡಾ ಓಪೆನ್‌ ಮಾಡಿದೆ. ಸ್ಟೈಲಿಶ್‌ ಲುಕ್‌ ಜೊತೆಗೆ ಆಕರ್ಷಕ ಕಲರ್‌ ಆಯ್ಕೆಗಳನ್ನು ಪಡೆದಿರಲಿದ್ದು, ಈ ಫೋನ್‌ 50 ಮೆಗಾ ಪಿಕ್ಸಲ್‌ ಸೆನ್ಸಾರ್‌ನ ಸೋನಿ AI ಕ್ಯಾಮೆರಾ ರಚನೆ ಪಡೆದಿರುವ ಸಾಧ್ಯತೆಗಳು ಇವೆ.

ನಾಳೆ ಎಂಟ್ರಿ ಕೊಡಲಿದೆ ಈ ಸ್ಟೈಲಿಶ್‌ ಫೋನ್‌; ಬಜೆಟ್‌ ಬೆಲೆ, ಬಿಗ್‌ ಬ್ಯಾಟರಿ!

ಹಾಗೆಯೇ ರಿಯಲ್‌ಮಿ 14x 5G ಫೋನ್‌ ಮೂರು ಕಲರ್‌ ಆಯ್ಕೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಮಾಡಲಿದ್ದು, ಅವುಗಳು ಕ್ರಮವಾಗಿ ಬ್ಲ್ಯಾಕ್‌, ರೆಡ್‌ ಹಾಗೂ ವೈಟ್‌ ಮಾದರಿಯ ಶೇಡ್‌ ಕಲರ್‌ ಆಯ್ಕೆ ಆಗಿರಲಿವೆ. ಹಾಗೆಯೇ IP69 ರೇಟಿಂಗ್ ಸೌಲಭ್ಯ ಪಡೆದಿರುವುದು ಬಹುತೇಕ ನಿಕ್ಕಿ ಎನ್ನಲಾಗಿದೆ. ಅಂದಹಾಗೆ ಈ ಫೋನ್‌ 15000ರೂ. ಗಳ ಆಸುಪಾಸಿನಲ್ಲಿ ಲಗ್ಗೆ ಇಡಲಿದೆ ಎಂದು ಹೇಳಲಾಗುತ್ತಿದೆ. ಇನ್ನುಳಿದಂತೆ ರಿಯಲ್‌ಮಿ 14x 5G (Realme 14x 5G) ಫೋನಿನ ಇತರೆ ನಿರೀಕ್ಷಿತ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 14x 5G - ನಿರೀಕ್ಷಿತ ಫೀಚರ್ಸ್‌

ರಿಯಲ್‌ಮಿ 14x 5G ಮೊಬೈಲ್‌ 6.67 ಇಂಚಿನ ಫುಲ್‌ ಹೆಚ್‌ಡಿ+ IPS LCD ಡಿಸ್‌ಪ್ಲೇ ಅನ್ನು ಪಡೆದುಕೊಂಡಿರಲಿದ್ದು, ಇದು ಉತ್ತಮ ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿರುವ ಸಾಧ್ಯತೆ ಇದೆ. ಅಲ್ಲದೇ 120Hz ರಿಫ್ರೆಶ್ ರೇಟ್‌ ಆಯ್ಕೆ ಒಳಗೊಂಡಿರುವ ಸಾಧ್ಯತೆಗಳು ಇವೆ. ಇನ್ನು ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್‌ ಪ್ರೊಸೆಸರ್‌ ಬಲದಲ್ಲಿ ಕೆಲಸ ನಿರ್ವಹಿಸಲಿದ್ದು. ಇತ್ತೀಚಿನ ಆಂಡ್ರಾಯ್ಡ್‌ 14 ಓಎಸ್‌ ಬೆಂಬಲ ಕೂಡಾ ಪಡೆದಿರಲಿದೆ.

ಹಾಗೆಯೇ ಈ ಫೋನ್‌ 8GB ಯ RAM ಮತ್ತು 128GB ಸ್ಟೋರೇಜ್‌ ಆಯ್ಕೆ ಒಳಗೊಂಡಿರುವ ನಿರೀಕ್ಷೆಗಳು ಇವೆ. ಅಲ್ಲದೇ 10GB ವರೆಗಿನ ವರ್ಚುವಲ್ RAM ಸೌಲಭ್ಯ ಸಾಧ್ಯತೆ ಇದೆ. ಇದು ಡ್ಯುಯಲ್‌ ಕ್ಯಾಮೆರಾ ರಚನೆ ಪಡೆದಿರಲಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇರಲಿದೆ. ಹಾಗೆಯೇ ಈ ಫೋನಿನ ಎರಡನೇ ಕ್ಯಾಮೆರಾವು 2 ಮೆಗಾ ಪಿಕ್ಸೆಲ್‌ ಡೆಪ್ತ್ ಸೆನ್ಸರ್ ಸೌಲಭ್ಯ ಪಡೆದಿರಲಿದೆ. ಮುಂಭಾಗದಲ್ಲಿ ಇದರ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಕ್ಯಾಮೆರಾ ನಿರೀಕ್ಷೆ ಇದೆ.

ರಿಯಲ್‌ಮಿ 14x 5G ಮೊಬೈಲ್‌ 6000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಸೌಲಭ್ಯ ಸಹ ಪಡೆದಿರುವ ನಿರೀಕ್ಷೆಗಳು ಹೆಚ್ಚಿದ್ದು, ಇದಕ್ಕೆ ಅನುಗುಣವಾಗಿ 45W ಫಾಸ್ಟ್ ಚಾರ್ಜಿಂಗ್ ಸಪೋರ್ಟ್‌ ಸಹ ಇರಲಿದೆ ಎಂದು ಹೇಳಲಾಗಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಡ್ಯುಯಲ್ 4G VoLTE, ವೈ-ಫೈ 6, ಜಿಪಿಎಸ್‌, ಯುಎಸ್‌ಬಿ ಟೈಪ್-ಸಿ, ಸೈಡ್‌ ಮೌಂಟ್‌ ಫಿಂಗರ್‌ಫ್ರಿಂಟ್ ಸೆನ್ಸಾರ್ ಆಯ್ಕೆಗಳನ್ನು ಒಳಗೊಂಡಿರಲಿದೆ.

Best Mobiles in India

English summary
Realme 14x 5G to Debut on December 18 with Exciting Specifications. know about price and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+