ರಿಯಲ್‌ಮಿ 2 ಪ್ರೊ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ: ಬೊಂಬಾಟ್ ಡಿಸ್ಕೌಂಟ್
ಸ್ಮಾರ್ಟ್‌ಫೋನ್ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಅದರಲ್ಲೂ ಅತ್ಯುತ್ತಮ ಕಂಪೆನಿಯ ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿ ಮಾಡಬೇಕು ಎಂದುಕೊಂಡಿರುವವರಿಗೆ ಇದು ಉತ್ತಮ ಸಮಯ. ಯಾಕೆಂದರೆ ಈ ರಿಯಲ್‌ಮಿ ಸ್ಮಾರ್ಟ್‌ಫೋನ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಈ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಇರುವ ಫೋನ್ ಆಗಿ ಗುರುತಿಸಿಕೊಂಡಿದೆ.
ಹೌದು, ರಿಯಲ್‌ಮಿ 2 ಪ್ರೊ (Realme 2 Pro) ಸ್ಮಾರ್ಟ್‌ಫೋನ್ ಇದೀಗ ಬೊಂಬಾಟ್ ಡಿಸ್ಕೌಂಟ್ ಪಡೆದುಕೊಂಡಿದೆ. ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 660 MSM8956 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 6GB RAM ಆಯ್ಕೆ ಪಡೆದುಕೊಂಡಿದೆ. ಹಾಗಿದ್ರೆ, ಈ ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಭಾರತದಲ್ಲಿ ಈ ಸ್ಮಾರ್ಟ್‌ಫೋನ್‌ನ ಆಫರ್ ಬೆಲೆ ಏನು ಎಂಬ ಬಗ್ಗೆ ತಿಳಿದುಕೊಳ್ಳಿ.

ರಿಯಲ್‌ಮಿ 2 ಪ್ರೊ ಡಿಸ್‌ಪ್ಲೇ ವಿವರ: ಈ ಫೋನ್ ಅನ್ನು ಅಗ್ಗದ ದರದಲ್ಲಿ ಖರೀದಿ ಮಾಡುವ ಮೊದಲು ಇದು ಯಾವೆಲ್ಲಾ ಪ್ರಮುಖ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ ಎಂಬುದನ್ನು ಗಮನಿಸಬೇಕಿದೆ. ಅದರಂತೆ 6.3 ಇಂಚಿನ IPS LCD ಡಿಸ್‌ಪ್ಲೇ ಹೊಂದಿದ್ದು, ಈ ಮೂಲಕ ನೀವು ವಿಶೇಷ ವೀಕ್ಷಣೆಯ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 1,080 x 2,340 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಮತ್ತು 409ppi ಪಿಕ್ಸೆಲ್ ಸಾಂದ್ರತೆ ಹೊಂದಿದೆ.
ರಿಯಲ್‌ಮಿ 2 ಪ್ರೊ ಪ್ರೊಸೆಸರ್ ಯಾವುದು?: ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 660 MSM8956 ಪ್ರೊಸೆಸರ್‌ನಲ್ಲಿ ಕೆಲಸ ಮಾಡಲಿದ್ದು, ಈ ಮೂಲಕ ಉತ್ತಮ ಕಾರ್ಯಕ್ಷಮತೆ ಲಭ್ಯವಾಗಲಿದೆ. ಜೊತೆಗೆ ಗ್ರಾಫಿಕ್ಸ್ ಅಡ್ರಿನೊ 512 GPU ಬಲವನ್ನು ಪಡೆದುಕೊಂಡಿದೆ. ಇನ್ನು 6GB RAM ಹಾಗೂ 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದನ್ನು 256GB ವರೆಗೂ ವಿಸ್ತರಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ರಿಯಲ್‌ಮಿ 2 ಪ್ರೊ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ 16MP + 2MP ಲೆನ್ಸ್‌ಗಳೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಹೊಂದಿದ್ದು, ಆಕರ್ಷಕ ಚಿತ್ರದ ಗುಣಮಟ್ಟದೊಂದಿಗೆ ಬಳಕೆದಾರರನ್ನು ವಿಸ್ಮಯಗೊಳಿಸುತ್ತದೆ. ಜೊತೆಗೆ 16MP ಲೆನ್ಸ್‌ನೊಂದಿಗೆ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ವಿಡಿಯೋ ಕರೆಗಳಲ್ಲಿ ಹಾಗೂ ಅತ್ಯುತ್ತಮ ಸೆಲ್ಫಿ ಫೋಟೋಗಳನ್ನು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ.

ರಿಯಲ್‌ಮಿ 2 ಪ್ರೊ ಬ್ಯಾಟರಿ ಹಾಗೂ ಇತರೆ: ಈ ಫೋನ್‌ನ ಬ್ಯಾಟರಿ ವಿಚಾರಕ್ಕೆ ಬಂದರೆ ಸ್ವಲ್ಪ ಕಡಿಮೆ ಸಾಮರ್ಥ್ಯ ಹೊಂದಿದೆ ಎಂದೇ ಹೇಳಬಹುದು. ಯಾಕೆಂದರೆ ಈ ಫೋನ್ 3,500mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್ ಆಗಿದ್ದು, ಇದು 10w ಚಾರ್ಜಿಂಗ್ ಬೆಂಬಲ ನೀಡಲಿದೆ. ಇನ್ನು ರಿಯರ್ ಮೌಂಟೆಡ್ ವಿಭಾಗದಲ್ಲಿ ಪಿಂಗರ್‌ಫ್ರಿಂಟ್ ಆಯ್ಕೆ ಇದ್ದು, ವೈ ಫೈ, ಬ್ಲೂಟೂತ್ ಸೇರಿದಂತೆ ಅಗತ್ಯ ಕನೆಕ್ಟಿವಿಟಿ ಸೌಲಭ್ಯ ಪಡೆದುಕೊಂಡಿದೆ.
ರಿಯಲ್‌ಮಿ 2 ಪ್ರೊ ಆಫರ್ ಬೆಲೆ ವಿವರ: ಈ ಸ್ಮಾರ್ಟ್‌ಫೋನ್ ಪ್ರಮುಖ ವಿಷಯಕ್ಕೆ ಬರುವುದಾದರೆ ಇದು 16,999ರೂ.ಗಳ ಸಾಮಾನ್ಯ ದರ ಹೊಂದಿದೆ. ಆದರೆ ನೀವು 10,990ರೂ.ಗಳ ಬೆಲೆಯಲ್ಲಿ ಖರೀದಿ ಮಾಡಬಹುದು. ಅಂದರೆ ಈ ಫೋನ್ ಮೇಲೆ 35%ಡಿಸ್ಕೌಂಟ್ ಘೋಷಣೆ ಮಾಡಲಾಗಿದೆ. ಇದನ್ನು ನೀವು ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿ ಮಾಡಬಹುದು. ಇನ್ನು ಈ ಫೋನ್ ಕಪ್ಪು, ಕಡು ನೀಲಿ, ಸಾಮಾನ್ಯ ನೀಲಿ ಬಣ್ಣದಲ್ಲಿ ಈ ಫೋನ್ ಕಾಣಿಸಿಕೊಂಡಿದೆ.


Click it and Unblock the Notifications








