Home
ಸುದ್ದಿಜಾಲ

'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!

ಒಪ್ಪೊ ಕಂಪನಿಯ ಸಬ್‌ ಬ್ಯ್ರಾಂಡ್‌ 'ರಿಯಲ್‌ ಮಿ'ಯು ಇತ್ತೀಚಿಗೆ 'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದು, ಈಗಾಗಲೇ ಹಲವು ಫ್ಲ್ಯಾಶ್‌ ಸೇಲ್‌ಗಳನ್ನು ನಡೆಸಿದೆ. ಆದರೆ ಇನ್ನೂ ಎಷ್ಟೂ ಗ್ರಾಹಕರಿಗೆ ಈ ಫೋನ್‌ ಖರೀದಿಸುವ ಮನಸ್ಸಿದ್ದರೂ, ಫ್ಲ್ಯಾಶ್‌ ಸೇಲ್‌ನಲ್ಲಿ ಖರೀದಿಗೆ ಸಿಕ್ಕಿಲ್ಲ. ಆದರೆ ಇನ್ಮುಂದೆ 'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್‌ ಖರೀದಿಸಲು 'ಫ್ಲ್ಯಾಶ್‌ ಸೇಲ್' ‌ಗಾಗಿ ಕಾಯಬೇಕಿಲ್ಲ.

'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!

ಹೌದು, ಎರಡು ತಿಂಗಳ ಹಿಂದೆ ರಿಲೀಸ್‌ ಆಗಿದ್ದ 'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನ್‌ ಇದೀಗ ಓಪೆನ್‌ ಸೇಲ್‌ ಆರಂಭವಾಗಲಿದ್ದು, ಈ ಸ್ಮಾರ್ಟ್‌ಪೋನ್‌ ಖರೀದಿಸುವ ಗ್ರಾಹಕರು ಫ್ಲ್ಯಾಶ್‌ಸೇಲ್‌ ಗಾಗಿ ಕಾಯಬೇಕಿಲ್ಲ. ಇ ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್, ಅಧಿಕೃತ ರಿಯಲ್‌ ಮಿ ವೆಬ್‌ತಾಣ ಮತ್ತು ಆಫ್‌ಲೈನ್‌ ಸ್ಟೋರ್‌ಗಳಲ್ಲಿ ಗ್ರಾಹಕರ ಖರೀದಿಗೆ 24x7 ಲಭ್ಯವಿರಲಿದೆ ಎಂದು ಕಂಪನಿಯು ತಿಳಿಸಿದೆ.

'ರಿಯಲ್‌ ಮಿ 3 ಪ್ರೊ' ಫೋನ್‌ ಖರೀದಿಸಲು ಇನ್ನು ಕಾಯಬೇಕಿಲ್ಲ!..24x7 ಲಭ್ಯ!

ಎರಡು RAM ವೇರಿಯಂಟ್‌ ಮಾದರಿಗಳಲ್ಲಿ ದೊರೆಯುವ 'ರಿಯಲ್‌ ಮಿ 3 ಪ್ರೊ' ಸ್ಮಾರ್ಟ್‌ಫೋನಿನ 4GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 13,999ರೂ. 6GB RAM ಮತ್ತು 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 15,999ರೂ. ಮತ್ತು 6GB RAM ಮತ್ತು 128GB ಸ್ಟೋರೇಜ್‌ ವೇರಿಯಂಟ್ ಬೆಲೆಯು 16,999ರೂ.ಗಳು. ಹಾಗಾದರೇ ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ಮುಂದೆ ನೋಡೋಣ.

ಡಿಸೈನ್

ಡಿಸೈನ್

3D ಸ್ಪೀಡ್‌ ವೇ ಡಿಸೈನ್‌ನಲ್ಲಿ ಆಕರ್ಷಕ ರಚನೆಯನ್ನು ಹೊಂದಿದ್ದು, ಗ್ರೇಡಿಯಂಟ್ ಕಲರ್‌ ಫೋನಿನ ಅಂದ ಹೆಚ್ಚಿಸಿದೆ. ಡಿಸ್‌ಪ್ಲೇಯ ಸುತ್ತಲೂ ಅತೀ ಕಡಿಮೆ ಅಂಚನ್ನು ನೀಡಲಾಗಿದ್ದು, ಸಂಪೂರ್ಣ ಡಿಸ್‌ಪ್ಲೇಯ ಅನುಭವ ದೊರೆಯಲಿದೆ. ಹಾಗೇ ಡಿಸ್‌ಪ್ಲೇಯ ರಕ್ಷಣೆಗಾಗಿ ಗೊರಿಲ್ಲಾ ಗ್ಲಾಸ್‌ 5 ಸಹ ನೀಡಲಾಗಿದೆ. ನಿಟ್ರೊ ಬ್ಲೂ ಮತ್ತು ಲೈಟ್‌ ಪರ್ಪಲ್ ಬಣ್ಣಗಳ ಆಯ್ಕೆಯನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

1,080 x 2,340 ಪಿಕ್ಸಲ್ ರೆಸಲ್ಯೂಶನ್‌ ನೊಂದಿಗೆ 6.3 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ರಚನೆಯ ನಡುವಿನ ರೆಶಿಯೋ ಶೇ.90.8% ಆಗಿದೆ ಹಾಗೂ ಅನುಪಾತವು 19.5:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 PPI ಆಗಿದೆ. ಸಂಪೂರ್ಣ ಅಂಚುರಹಿತ ಡಿಸ್‌ಪ್ಲೇಯ ಅನುಭವ ನೀಡಲಿದೆ.

ಪ್ರೊಸೆಸರ್

ಪ್ರೊಸೆಸರ್

ರಿಯಲ್ ಮಿ 3 ಪ್ರೊ ಸ್ಮಾರ್ಟ್‌ಫೋನ್ ಕ್ಚಾಲ್ಕಮ್ ಚಿಪ್‌ ಸೆಟ್‌ನೊಂದಿಗೆ, ಸ್ನ್ಯಾಪ್‌ಡ್ರಾಗನ್ 710 AIE ಪ್ರೊಸೆಸರ್‌ ಹೊಂದಿದ್ದು, ಫೋನಿನ ಮಲ್ಟಿಟಾಸ್ಕ್‌ ಕಾರ್ಯವೈಖರಿಯು ವೇಗವಾಗಿರಲಿದೆ. ಹಾಗೇ ಆಂಡ್ರೆನೊ 616 GPU ಸಹ ಹೊಂದಿದ್ದು, ಇದರೊಂದಿಗೆ ಆಂಡ್ರಾಯ್ಡ್‌ 9.0 ಪೈ, ಆಧಾರಿತ ಕಲರ್‌ 6.0 ಓಎಸ್‌ ಈ ಫೋನಿನಲ್ಲಿ ಇರಲಿದೆ.

ಮೆಮೊರಿ

ಮೆಮೊರಿ

ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನ್ ನಿರೀಕ್ಷೆಯಂತೆ ಎರಡು ವೇರಿಯಂಟ್‌ಗಳಲ್ಲಿ ಲಾಂಚ್ ಆಗಿದೆ. 4GB+6GB RAM ಮತ್ತು 64GB ಸಂಗ್ರಹ ಸಾಮರ್ಥ್ಯ ಹಾಗೂ 6GB RAM + 128GB ಆಂತರಿಕ ಸಂಗ್ರಹ ಸ್ಥಳಾವಕಾಶವನ್ನು ಹೊಂದಿರುವ ವೇರಿಯಂಟ್‌ ಮಾದರಿಗಳಲ್ಲಿ ಗ್ರಾಹಕರಿಗೆ ದೊರೆಯಲಿದೆ. ಕಂಪನಿಯ ಫ್ಲ್ಯಾಗ್‌ಶಿಪ್‌ ಮಾದರಿಯ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ.

ಕ್ಯಾಮೆರಾ

ಕ್ಯಾಮೆರಾ

ಈ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ರೇರ್ ಕ್ಯಾಮೆರಾವನ್ನು ಹೊಂದಿದ್ದು, ಪ್ರಾಥಮಿಕ ರೇರ್‌ ಕ್ಯಾಮೆರಾವು 16 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, ಸೋನಿಯ IMX519 ಸೆನ್ಸಾರ್‌ ಅನ್ನು ಹೊಂದಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು 5 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದ್ದು, f/2.4 ಅಪರ್ಚರ್ ಇರಲಿದೆ. AI ಸೆನ್ಸಾರ್‌ ಪಡೆದುಕೊಂಡಿದ್ದು, ಫೋಟೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಸೆಲ್ಫಿ ಕ್ಯಾಮೆರಾ

ಸೆಲ್ಫಿ ಕ್ಯಾಮೆರಾ

ರಿಯಲ್‌ ಮಿ 3 ಪ್ರೊ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿಗಾಗಿ ಒಲವು ನೀಡಿದ್ದು, 25 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಲಾಗಿದೆ. ಈ ಕ್ಯಾಮೆರಾವು f/2.0 ಅಪರ್ಚರ್ ಅನ್ನು ಹೊಂದಿದೆ. ಹಾಗೇ ಸೆಲ್ಫಿ ಕ್ಯಾಮೆರಾ 1/2.8 ಸೆನ್ಸಾರ್‌ನಲ್ಲಿ ಕೆಲಸ ಮಾಡಲಿದೆ. ಎರಡು ವೇರಿಯಂಟ್‌ ಮಾದರಿಗಳಲ್ಲಿ ಸೆಲ್ಫಿ ಕ್ಯಾಮೆರಾ 25 ಮೆಗಾಪಿಕ್ಸಲನಲ್ಲಿರಲಿದೆ.

ಬ್ಯಾಟರಿ

ಬ್ಯಾಟರಿ

4045mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಇದರೊಂದಿಗೆ ಸ್ಮಾರ್ಟ್‌ಫೋನ್ ವೇಗದ ಚಾರ್ಜಿಂಗ್‌ಗಾಗಿ VOOC 3.0, ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಸೌಲಭ್ಯವನ್ನು ನೀಡಲಾಗಲಿದೆ. ಈ ತಂತ್ರಜ್ಞಾನದ ನೆರವಿನಿಂದ ಸ್ಮಾರ್ಟ್‌ಫೋನ್ ಕ್ವಿಕ್‌ ಆಗಿ ಚಾರ್ಜ್‌ ಪಡೆದುಕೊಳ್ಳಲಿದ್ದು, 30 ನಿಮಿಷದಲ್ಲಿ ಶೇ. 50% ಚಾರ್ಜ್‌ ಪಡೆದುಕೊಳ್ಳವ ಶಕ್ತಿಯನ್ನು ಒದಗಿಸಲಿದೆ.

Best Mobiles in India

English summary
Realme on Monday announced that its Realme 3 Pro phone will now be available for open sale. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+