ರಿಯಲ್‌ ಮಿ 5i ಮತ್ತು ರಿಯಲ್ ಮಿ 6 ಫೋನ್‌ಗಳ ಬೆಲೆ ಏರಿಕೆ!

|

ರಿಯಲ್‌ ಮಿ ಕಂಪನಿಯು ಹಲವು ಶ್ರೇಣಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಇತ್ತೀಚಿಗಿನ ರಿಯಲ್‌ ಮಿ 5i ಮತ್ತು ರಿಯಲ್ ಮಿ 6 ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ಏರಿಕೆ ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಒಮ್ಮೆ ಬೆಲೆ ಹೆಚ್ಚಳ ಕಂಡಿವೆ. ಈಗ ಜಿಎಸ್‌ಟಿ ಹೆಚ್ಚಳದಿಂದಾಗಿ ಕಂಪನಿಯು ಮತ್ತೆ ಪ್ರೈಸ್‌ಟ್ಯಾಗ್‌ನಲ್ಲಿ ಏರಿಕೆ ಮಾಡಿದೆ.

ರಿಯಲ್‌ ಮಿ

ದೇಶದಲ್ಲಿ ರಿಯಲ್‌ ಮಿ 5i ಮತ್ತು ರಿಯಲ್ ಮಿ 6 ಫೋನ್‌ಗಳ ಬೆಲೆಯಲ್ಲಿ 1000ರೂ. ಏರಿಕೆ ಆಗಿದೆ. ರಿಯಲ್‌ ಮಿ 5i ಜನವರಿಯಲ್ಲಿ ಲಾಂಚ್ ಆಗಿದ್ದು, ಈ ಫೋನಿನ 4GB RAM ಮತ್ತು 64GB ವೇರಿಯಂಟ್ ಬೆಲೆಯು ಈಗ 10,999ರೂ. ಆಗಿದೆ. ಗಾ್ಎಯೇ ರಿಯಲ್‌ ಮಿ 5i 128GB ಸ್ಟೋರೇಜ್ ವೇರಿಯಂಟ್ ಬೆಲೆಯು 11,999ರೂ.ಗಳಾಗಿದೆ. ಇನ್ನು ರಿಯಲ್‌ ಮಿ 6 ಸ್ಮಾರ್ಟ್‌ಫೋನ್ ಬೇಸ್‌ (4GB+64GB) ವೇರಿಯಂಟ್ 14,999ರೂ. ಪ್ರೈಸ್‌ಟ್ಯಾಗ್ ಹೊಂದಿದೆ. 8GB + 128GB ವೇರಿಯಂಟ್ ಬೆಲೆಯು 17,999ರೂ. ಆಗಿದೆ. ಇನ್ನು ಈ ಫೋನ್‌ಗಳ ಫೀಚರ್ಸ್‌ಗಳು ಹೇಗಿವೆ ಎಂಬುವುದನ್ನು ತಿಳಿಯಲು ಮುಂದೆ ಓದಿರಿ.

ರಿಯಲ್‌ ಮಿ 5i ಡಿಸ್‌ಪ್ಲೇ

ರಿಯಲ್‌ ಮಿ 5i ಡಿಸ್‌ಪ್ಲೇ

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 720x1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು 480 nits ಬ್ರೈಟ್ನೆಸ್‌ ಹೊಂದಿದ್ದು, ಮಿನಿ ವಾಟರ್ ಡ್ರಾಪ್ ನಾಚ್ ಮಾದರಿಯನ್ನು ಪಡೆದಿದೆ.

ರಿಯಲ್‌ ಮಿ 5i ಪ್ರೊಸೆಸರ್

ರಿಯಲ್‌ ಮಿ 5i ಪ್ರೊಸೆಸರ್

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್ ಅನ್ನು ಒಳಗೊಂಡಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 9 ಪೈ ಹಾಗೂ ಕಲರ್ ಓಎಸ್‌ 6.1 ಕೆಲಸ ಮಾಡುತ್ತವೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ.

ರಿಯಲ್‌ ಮಿ 5i ಕ್ಯಾಮೆರಾ

ರಿಯಲ್‌ ಮಿ 5i ಕ್ಯಾಮೆರಾ

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು f/1.8 ಅಪರ್ಚರ್ನೊಂದಿಗೆ 12ಎಂಪಿ ಸೆನ್ಸಾರ್ ನಲ್ಲಿರಲಿದೆ. ಇನ್ನು ಸೆಕೆಂಡರಿ ಕ್ಯಾಮೆರಾವು f/2.25 ಅಪರ್ಚರ್ನೊಂದಿಗೆ 8ಎಂಪಿ ಸೆನ್ಸಾರ್‌ನ ಅಲ್ಟ್ರಾ ವೈಲ್ಡ್ ಆಂಗಲ್ ಲೆನ್ಸ್‌ ಹಾಗೂ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್‌ನ ಡೆಪ್ತ್ ಹಾಗೂ ಮೈಕ್ರೋ ಲೆನ್ಸ್‌ ಸಾಮರ್ಥ್ಯದಲ್ಲಿರಲಿವೆ. 13ಎಂಪಿಯ ಸೆಲ್ಫಿ ಕ್ಯಾಮೆರಾ ಇರಲಿದೆ.

ರಿಯಲ್‌ ಮಿ 5i ಬ್ಯಾಟರಿ

ರಿಯಲ್‌ ಮಿ 5i ಬ್ಯಾಟರಿ

ರಿಯಲ್‌ ಮಿ 5i ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 10W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿರಲಿದೆ.

ರಿಯಲ್‌ ಮಿ 6 ಫೀಚರ್ಸ್‌

ರಿಯಲ್‌ ಮಿ 6 ಫೀಚರ್ಸ್‌

ರಿಯಲ್‌ ಮಿ 6 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಹೊಂದಿದೆ. ಇದರೊಂದಿಗೆ ಮೀಡಿಯಾ ಟೆಕ್ ಹಿಲಿಯೊ 90T ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 10 ಓಎಸ್‌ ಒಳಗೊಂಡಿದೆ. ಕ್ವಾಡ್‌ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 64MP+8MP+2MP+2MP ಸೆನ್ಸಾರ್‌ ಸಾಮರ್ಥ್ಯ ಪಡೆದಿವೆ. ಇನ್ನು ಬ್ಯಾಟರಿಯು 4300mAh ಸಾಮರ್ಥ್ಯದಲ್ಲಿದೆ.

Best Mobiles in India

English summary
Realme was 5i originally launched with just one variant - 4GB + 64GB – and a second variant with 128GB storage came in March.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X